For Quick Alerts
ALLOW NOTIFICATIONS  
For Daily Alerts

ಒಂದೇ ತಿಂಗಳಲ್ಲಿ ನಾಲ್ಕು ಕೇಜಿ ತೂಕ ಕಳೆದುಕೊಳ್ಳಲು ನೆರವಾಗಲಿದೆ ಈ ಸುಲಭ ಮನೆಮದ್ದು

|

ಒಂದು ವೇಳೆ ನೀವು ನಿಮ್ಮ ಸ್ಥೂಲಕಾಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿದ್ದರೆ ಅಥವಾ ತೂಕ ಕೆಳೆದುಕೊಳ್ಳುವ ಪ್ರಯತ್ನದಲ್ಲಿರುವವರಿಗೆ ನೆರವು ನೀಡಬಯಸಿದರೆ, ಈ ಕಾರ್ಯ ಎಷ್ಟು ಕಷ್ಟಸಾಧ್ಯವೆಂದು ನಿಮಗೆ ಈಗಾಗಲೇ ಅರಿವಾಗಿರಬಹುದು. ತೂಕ ಇಳಿಸಲು ಯತ್ನಿಸುವವರು ಸಾಮಾನ್ಯವಾಗಿ ತಮ್ಮ ಲೆಕ್ಕಾಚಾರ ಯಾವಾಗ ನಡೆಯುವುದಿಲ್ಲವೆಂದು ಅರಿವಾಯ್ತೋ, ಆಗ ಇತರರ ಸಲಹೆ ಪಡೆಯಲು ಪ್ರಾರಂಭಿಸುತ್ತಾರೆ ಹಾಗೂ ಕುಟುಂಬ ವರ್ಗ, ಸ್ನೇಹಿತರ, ಪತ್ರಿಕೆಗಳು ಹಾಗೂ ಬ್ಲಾಗ್ ಗಳನ್ನು ಓದಿ ಅದರಲ್ಲಿ ನೀಡಿರುವ ವಿಧಾನಗಳನ್ನು ಪ್ರಯತ್ನಿಸಲು ಆರಂಭಿಸುತ್ತಾರೆ. ಈ ಮಾಹಿತಿಗಳು ಆರೋಗ್ಯದ ಮಟ್ಟಿಗೆ ಎಷ್ಟು ಫಲಕಾರಿ ಎಂಬ ಬಗ್ಗೆ ಹೆಚ್ಚು ಯೋಚಿಸದೇ ಪ್ರಯತ್ನಗಳನ್ನು ಮುಂದುವರೆಸುತ್ತಾರೆ.

ಕೆಲವು ವಿಧಾನಗಳು ನಿಜವಾಗಿಯೂ ಯಾವುದೇ ಅಡ್ಡಪರಿಣಾಮವಿಲ್ಲದೇ, ಆರೋಗ್ಯವನ್ನೂ ಬಾಧಿಸದೇ ತೂಕವನ್ನು ಇಳಿಸಲು ನೆರವಾಗುತ್ತವೆ. ಆದರೆ ವಾಸ್ತವದಲ್ಲಿ ಈ ವಿಧಾನಗಳು ತುಂಬಾ ನಿಧಾನವಾಗಿದ್ದು ಅಪಾರ ತಾಳ್ಮೆಯ ಅಗತ್ಯವಿದೆ. ಉಳಿದಂತೆ ಹೆಚ್ಚಿನವು ಶೀಘ್ರವೇ, ಥಟ್ಟನೇ ತೂಕ ಇಳಿಸುವ ನಿಟ್ಟಿನಲ್ಲಿ ಫಲಕಾರಿಯಾದಂತೆ ಕಂಡುಬಂದರೂ ದೀರ್ಘಾವಧಿಯಲ್ಲಿ ಈ ವಿಧಾನಗಳು ಆರೋಗ್ಯವನ್ನು ಬಾಧಿಸಬಹುದು. ಉದಾಹರಣೆಗೆ, ಆರೋಗ್ಯಕರ, ಸಂತುಲಿತ ಆಹಾರಸೇವನೆಯ ಜೊತೆಗೇ ಅಗತ್ಯ ವ್ಯಾಯಾಮಗಳನ್ನೂ ಮಾಡುವ ಮೂಲಕ ಯಾವುದೇ ತೊಂದರೆಯಿಲ್ಲದೇ ತೂಕವನ್ನು ಇಳಿಸಿಕೊಳ್ಳಬಹುದು.

ಬದಲಿಗೆ ಘಾತುಕ ಯತ್ನಗಳಾದ ದಿನವಿಡೀ ಹಸಿವಿನಿಂದಿರುವುದು, ದೇಹ ಜೀರ್ಣಿಸಿಕೊಳ್ಳಲಾಗದ ಆಹಾರ ಸೇವಿಸುವುದು, ಸ್ಲಿಮ್ಮಿಂಗ್ ಟೀ ಅಥವಾ ಆಹಾರ ಜೀರ್ಣವಾಗುವ ಮುನ್ನವೇ ಬಲವಂತವಾಗಿ ದೇಹದಿಂದ ಹೊರಹಾಕುವಂತೆ ಮಾಡುವುದು ಮೊದಲಾದ ವಿಧಾನಗಳಿಂದ ಆರೋಗ್ಯಕ್ಕೆ ಭಾರೀ ಅಪಾಯವಿದೆ ಹಾಗೂ ಜೀವ ರಾಸಾಯನಿಕ ಕ್ರಿಯೆಯನ್ನೇ ಬಾಧೆಗೊಳಿಸಿ ತೂಕ ಇಳಿದ ಕೆಲವೇ ದಿನಗಳಲ್ಲಿ ಕಳೆದುಕೊಂಡಿದ್ದಕ್ಕೂ ದುಪ್ಪಟ್ಟು ತೂಕವನ್ನು ಏರಿಸಿ ಸೇಡು ತೀರಿಸಿಕೊಳ್ಳುತ್ತದೆ.

weight loss

ಆದ್ದರಿಂದ ಇಂದು ನಿಮಗೆ ತಿಳಿದಿರುವ ತೂಕ ಇಳಿಕಾ ವಿಧಾನಗಳು ಎಷ್ಟು ಮಟ್ಟಿಗೆ ಫಲಕಾರಿ ಹಾಗೂ ಆರೋಗ್ಯಕಾರಿ ಎಂಬುದನ್ನು ಪರಿಗಣಿಸಿಯೇ ಈ ವಿಧಾನವನ್ನು ಅನುಸರಿಸಬೇಕಾಗಿರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸುಲಭವಾದ ಮನೆಮದ್ದೊಂದು ಲಭ್ಯವಿದ್ದು ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರದೇ ಕೇವಲ ಒಂದೇ ತಿಂಗಳಲ್ಲಿ ನಾಲ್ಕು ಕೇಜಿಗಳಷ್ಟು ತೂಕವನ್ನು ಕಳೆದುಕೊಳ್ಳಲು ನೆರವಾಗಲಿದೆ, ಬನ್ನಿ, ನೋಡೋಣ...

ದೇಹದಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾದರೆ ಇದರಿಂದೇನು ತೊಂದರೆ?
ದೇಹಕ್ಕೆ ಕೊಬ್ಬು ಅಗತ್ಯ ನಿಜ. ಆದರೆ ಅಗತ್ಯಕ್ಕೂ ಹೆಚ್ಚು ಸಂಗ್ರಹಗೊಂಡರೆ ಇದು ದೇಹದ ಎತ್ತರಕ್ಕೆ ತಕ್ಕ ಸೂಕ್ತವಾದ ಭಾರದ ಕೋಷ್ಟಕ (ಬಿ ಎಂ ಐ ಅಥವಾ ಬಾಡಿ ಮಾಸ್ ಇಂಡೆಕ್ಸ್) ನಲ್ಲಿ ನೀಡಿದ ಅನುಪಾತಕ್ಕೂ ಮೀರಿ ಸ್ಥೂಲಕಾಯದ ರೂಪವನ್ನು ಪಡೆಯುತ್ತದೆ. ಸ್ಥೂಲದೇಹಿ ವ್ಯಕ್ತಿ ಸಮಾಜದಲ್ಲಿ ಇತರರ ಅವಗಣನೆ, ಗೇಲಿಗೆ ಗುರಿಯಾಗುವ ಮೂಲಕ ತನ್ನ ಆತ್ಮವಿಶ್ವಾಸವನ್ನೇ ಕಳೆದುಕೊಂಡರೆ ತಾವು ನಾಲಾಯಕ್ಕು ಹಾಗೂ ಆಕರ್ಷಕ ವ್ಯಕ್ತಿತ್ವ ಪಡೆದಿಲ್ಲ ಎಂಬ ಕೀಳರಿಮೆ ಹೊಂದಲೂ ಕಾರಣವಾಬಹುದು. ಅಲ್ಲದೇ ದೈಹಿಕವಾಗಿಯೂ ಹಲವಾರು ಕಾಯಿಲೆಗಳು ಆವರಿಸಲು ಸ್ಥೂಲದೇಹ ಪ್ರಮುಖ ಕಾರಣವಾಗಿದೆ.

ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಅಧಿಕ ಮಾನಸಿಕ ಒತ್ತಡ, ಹೃದಯ ಸಂಬಂಧಿ ತೊಂದರೆಗಳು, ಮೂಳೆಗಳ ಸಂಧುಗಳಲ್ಲಿ ನೋವು, ಜೀರ್ಣಕ್ರಿಯೆಯ ತೊಂದರೆಗಳು, ಖಿನ್ನತೆ, ನಪುಂಸಕತ್ವ ಮೊದಲಾದವು ಸ್ಥೂಲದೇಹಿಗಳು ಎದುರಿಸುವ ಸಾಮಾನ್ಯ ಆರೋಗ್ಯ ತೊಂದರೆಗಳಾಗಿವೆ. ಆದ್ದರಿಂದ ಬಿಎಂಐ ಕೋಷ್ಟಕಕ್ಕೆ ಅನುಗುಣವಾಗುವಂತೆ ನಿಮ್ಮ ತೂಕವನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಇದನ್ನು ಸಾಧ್ಯವಾಗಿಸಲು ಆರೋಗ್ಯಕರ ಆಹಾರಗಳತ್ತ ಮಾತ್ರವೇ ಒಲವು, ಅನಾರೋಗ್ಯಕರ ಆಹಾರಗಳ ಆಕರ್ಷಣೆಯನ್ನು ನಿರ್ಲಕ್ಷಿಸುವ ದೃಢಮನೋಭಾವ, ಆರೋಗ್ಯಕರ ಮತ್ತು ಸಂತುಲಿತ ಆಹಾರಕ್ರಮ, ನಿಯಮಿತ ವ್ಯಾಯಾಮ ಎಲ್ಲವೂ ಅಗತ್ಯವಾಗಿದೆ.

ಇದರೊಂದಿಗೆ ಸ್ಥೂಲಕಾಯಕ್ಕೆ ಬೇರೇನಾದರೂ ಕಾರಣವಿರಬಹುದೇ ಎಂಬುದನ್ನು ಕಂಡುಕೊಳ್ಳಲು ವೈದ್ಯಕೀಯ ಪರೀಕ್ಷೆಯೊಂದನ್ನು ಮಾಡಿಸಿಕೊಳ್ಳುವುದೂ ಉತ್ತಮ. ಕೆಲವೊಮ್ಮೆ ರಸದೂತಗಳ ಪ್ರಭಾವದಿಂದ ಸ್ಥೂಲಕಾಯ ಎದುರಾಗುತ್ತದೆ. ಇದೇ ಕಾರಣಕ್ಕೆ ಹೆರಿಗೆಯ ಬಳಿಕ ಮಹಿಳೆಯರ ತೂಕ ಅಪಾರವಾಗಿ ಏರುತ್ತದೆ. ಅಲ್ಲದೇ ಸೋಮಾರಿತನ ಹಾಗೂ ಚಟುವಟಿಕೆಯಿಲ್ಲದ ಜೀವನಕ್ರಮವೂ ಸ್ಥೂಲಕಾಯಕ್ಕೆ ಕಾರಣವಾಗಿರಬಹುದು.

ಈ ಎಲ್ಲಾ ಪ್ರಯತ್ನಗಳ ಜೊತೆಗೇ, ಕೆಲವು ಸುಲಭ ಮನೆಮದ್ದುಗಳನ್ನು ನಿತ್ಯವೂ ಸೇವಿಸುವ ಮೂಲಕ ತೂಕ ಇಳಿಸಲು ಹೆಚ್ಚಿನ ನೆರವು ದೊರಕುತ್ತದೆ. ಆದರೆ ಕೇವಲ ಈ ಮನೆಮದ್ದು ಮಾತ್ರವೇ ಸೇವಿಸಿ ಉಳಿದ ಅಭ್ಯಾಸಗಳನ್ನು ಮುಂದುವರೆಸಿದರೆ ಫಲ ಸಿಕ್ಕದು, ಬದಲಿಗೆ ಸಮತೋಲನದ ಆಹಾರ, ನಿಯಮಿತ ವ್ಯಾಯಾಮವೂ ಅಗತ್ಯವಾಗಿದೆ. ತೂಕ ಇಳಿಸಲು ನೆರವಾಗಲು ಈ ಕೆಳಗೆ ವಿವರಿಸಿದ ಮನೆಮದ್ದು ಹೆಚ್ಚಿನ ಉಪಯೋಗ ನೀಡಲಿದೆ. ವಾಸ್ತವವಾಗಿ, ಈ ಸಲಹೆಯನ್ನು ಒಂದು ವೈಜ್ಞಾನಿಕ ಅಧ್ಯಯನದ ಬಳಿಕ ಸಿದ್ಧಪಡಿಸಲಾಗಿದ್ದು ಇದು ಅತ್ಯಂತ ಸುರಕ್ಷಿತ ಹಾಗೂ ಫಲಪ್ರದವೂ ಆಗಿದೆ. ಬನ್ನಿ, ಇದನ್ನು ತಯಾರಿಸುವ ಮತ್ತು ಉಪಯೋಗಿಸುವ ವಿಧಾನವನ್ನು ನೋಡೋಣ:

ಅಗತ್ಯವಿರುವ ಸಾಮಾಗ್ರಿಗಳು
* ಅರಿಶಿನ ಪುಡಿ - ಒಂದು ದೊಡ್ಡ ಚಮಚ
* ಅಪ್ಪಟ ಜೇನು - ಒಂದು ದೊಡ್ಡ ಚಮಚ
* ಜೀರಿಗೆ ಪುಡಿ - ಒಂದು ದೊಡ್ಡ ಚಮಚ

ಈ ವಿಧಾನ ಸುರಕ್ಷಿತವಾಗಿದೆ ಹಾಗೂ ನಿತ್ಯವೂ ತೆಗೆದುಕೊಳ್ಳಬಹುದು. ಆದರೂ, ಈ ವಿಧಾನವನ್ನು ಅನುಸರಿಸುವ ಮುನ್ನ ನಿಮ್ಮ ಕುಟುಂಬ ವೈದ್ಯರ ಸಲಹೆಯನ್ನು ಪಡೆದೇ ಮುಂದುವರೆಯುವುದು ಸೂಕ್ತ. ಆದರೆ ಈ ವಿಧಾನ ಗರ್ಭವತಿಯರಿಗೆ ಸೂಕ್ತವಲ್ಲ! ಶೀಘ್ರ ತೂಕವಿಳಿಕೆಗೆ ಸಮತೋಲನದ ಆಹಾರ ಮತ್ತು ವ್ಯಾಯಾಮವೂ ಅಗತ್ಯ.

ಈ ವಿಧಾನ ತೂಕವಿಳಿಸಲು ಹೇಗೆ ನೆರವಾಗುತ್ತದೆ?
ಅರಿಶಿನ ಪುಡಿಯಲ್ಲಿರುವ ಕೆಲವು ಸಂಯುಕ್ತಗಳು ಜೀರ್ಣಿಸಿಕೊಳ್ಳಲು ಕಷ್ಟಕರವಾಗಿದ್ದು ಇದಕ್ಕಾಗಿ ದೇಹ ಅನಿವಾರ್ಯವಾಗಿ ಸಂಗ್ರಹಗೊಂಡಿದ್ದ ಕೊಬ್ಬನ್ನು ಬಳಸಲೇಬೇಕಾಗಿ ಬರುತ್ತದೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕೊಬ್ಬಿನ ಕಣಗಳು ಬಳಕೆಯಾಗುತ್ತವೆ. ಇದರೊಂದಿಗೆ, ಜೇನಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಜೀವರಾಸಾಯನಿಕ ಕ್ರಿಯೆಯನ್ನು ಚುರುಕೊಗೊಳಿಸುತ್ತವೆ ಹಾಗೂ ವ್ಯಾಯಾಮದ ಮೂಲಕ ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳಲು ನೆರವಾಗುತ್ತವೆ. ಜೀರಿಗೆಪುಡಿಯಲ್ಲಿರುವ ಪೊಟ್ಯಾಶಿಯಂ ಮತ್ತು ವಿಟಮಿನ್ ಬಿ ಸಹಾ ದೇಹದಲ್ಲಿರುವ ಕೊಬ್ಬನ್ನು ಬಳಸಿಕೊಳ್ಳುವ ಮೂಲಕ ತೂಕ ಇಳಿಕೆಗೆ ನೆರವಾಗುತ್ತವೆ.

ತಯಾರಿಕಾ ವಿಧಾನ
* ಮೊದಲು ಕೊಂಚ ನೀರನ್ನು ಕುದಿಸಿ ಒಂದು ಲೋಟದಲ್ಲಿ ಸಂಗ್ರಹಿಸಿ
* ಈ ಮೂರೂ ಸಾಮಾಗ್ರಿಗಳನ್ನು ಸಮಪ್ರಮಾಣದಲ್ಲಿ ನೀರಿನಲ್ಲಿ ಬೆರೆಸಿ ಚೆನ್ನಾಗಿ ಕಲಕಿ
* ಈ ದ್ರವಾಹಾರವನ್ನು, ಪ್ರತಿದಿನ ಮುಂಜಾನೆ, ಪ್ರಥಮ ಆಹಾರದ ರೂಪದಲ್ಲಿ ಸೇವಿಸಿ. ಸುಮಾರು ಮುಕ್ಕಾಲು ಗಂಟೆಯ ಬಳಿಕ ಉಪಾಹಾರ ಸೇವಿಸಿ.
* ಒಂದು ತಿಂಗಳ ಬಳಿಕವೂ ಈ ವಿಧಾನವನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ಇನ್ನಷ್ಟು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು.

English summary

Home Remedy Can Help You Lose 4 Kilos In 1 Month

it is very important to know which of the many weight loss advice out there today are healthy and apt for us and then take measures to follow them. So, here is a simple home remedy which can help you lose up to 4 kilos in just a month
X
Desktop Bottom Promotion