For Quick Alerts
ALLOW NOTIFICATIONS  
For Daily Alerts

ಶುಂಠಿ ನೀರು-ತೂಕ ಇಳಿಸಲು, ಬೊಜ್ಜು ಕರಗಿಸಲು ಪರ್ಫೆಕ್ಟ್ ಮನೆಮದ್ದು

|

ನಮ್ಮ ಅಡುಗೆಯ ರುಚಿ ಹೆಚ್ಚಿಸುವ ಹಸಿಶುಂಠಿ ನಮ್ಮ ಏಶಿಯಾದ ಮೂಲದ್ದಾಗಿದ್ದು ಸಾವಿರಾರು ವರ್ಷಗಳಿಂದ ಭಾರತದಲ್ಲಿಯೂ ರುಚಿಕಾರಕ ಹಾಗೂ ಔಷಧೀಯ ರೂಪದಲ್ಲಿ ಬಳಸಲ್ಪಡುತ್ತಿದೆ. ಜಿಂಜಿಬಾರ್ ಒಫಿಸಿನೇಲ್ ಎಂಬ ಸಸ್ಯವರ್ಗಕ್ಕೆ ಸೇರಿರುವ ಶುಂಠಿಯ ಗಡ್ಡೆಯಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ. ಶುಂಠಿಯ ನೀರು ಅಥವಾ ಶುಂಠಿಯ ಟೀ ತಯಾರಿಸಲು ಹಸಿಶುಂಠಿಯನ್ನು ಚಿಕ್ಕದಾಗಿ ಹೆಚ್ಚಿ ಕೊಂಚ ನೀರಿನಲ್ಲಿ ಕೊಂಚ ಹೊತ್ತು ಕುದಿಸಿ ಬಳಿಕ ಉರಿ ಆರಿಸಿ ತಣಿಯಲು ಬಿಡಬೇಕು. ತಣಿದ ಬಳಿಕ ಈ ನೀರನ್ನು ಸೋಸಿ ಕುಡಿಯಬೇಕು. ಸಾಮಾನ್ಯವಾಗಿ ಜೀರ್ಣಕ್ರಿಯೆಯ ತೊಂದರೆಗೆ ಔಷಧಿಯ ರೂಪದಲ್ಲಿ ಸೇವಿಲಾಗುವ ಈ ನೀರನ್ನು ಕೊಬ್ಬು ಕರಗಿಸಲೂ ಬಳಸಬಹುದು.

ಡೊಳ್ಳು ಹೊಟ್ಟೆ ಕರಗಿಸಲು-ಬಾಳೆ ಹಣ್ಣು+ಶುಂಠಿ ಸಾಕು!

ತೂಕ ಇಳಿಸುವ ಬಗ್ಗೆ ನೀವು ಈಗಾಗಲೇ ಹಲವಾರು ವಿಧಾನಗಳ ಬಗ್ಗೆ ತಿಳಿದುಕೊಂಡಿರಬಹುದು ಹಾಗೂ ತೂಕ ಇಳಿಸುವ ಆಹಾರಗಳನ್ನು ಸಹಾ ಪ್ರಯತ್ನಿಸಿರಬಹುದು. ಅವುಗಳಲ್ಲೆಲ್ಲಾ ಈ ಶುಂಠಿ ನೀರೇ ಆರೋಗ್ಯ ಹೆಚ್ಚಿಸುವ ಮತ್ತು ತೂಕ ಇಳಿಸುವ ಅತ್ಯುತ್ತಮ ಪೇಯವಾಗಿದೆ. ಸೊಂಟ, ತೊಡೆ ಮತ್ತು ನಿತಂಬಗಳ ಕೊಬ್ಬನ್ನು ಕರಗಿಸುವ ಹೊರತಾಗಿ ಈ ಪೇಯ ಆರೋಗ್ಯವನ್ನೂ ಹಲವಾರು ವಿಧಗಳಲ್ಲಿ ವೃದ್ಧಿಸುತ್ತದೆ...

ಶುಂಠಿ ನೀರನ್ನು ತಯಾರಿಸುವ ವಿಧಾನ

ಶುಂಠಿ ನೀರನ್ನು ತಯಾರಿಸುವ ವಿಧಾನ

ಒಂದು ಪಾತ್ರೆಯಲ್ಲಿ ಸುಮಾರು ಒಂದೂವರೆ ಲೀಟರ್ ನೀರನ್ನು ಹಾಕಿ ಇದರಲ್ಲಿ ಸುಮಾರು ನೂರು ಗ್ರಾಂ ನಷ್ಟು ಹಸಿಶುಂಠಿಯನ್ನು ಚಿಕ್ಕದಾಗಿ ತುರಿದು ಈ ನೀರಿನಲ್ಲಿ ಬೆರೆಸಿ ಕುದಿಸಿ. ಕುದಿಯಲು ಆರಂಭವಾದ ಬಳಿಕ ಉರಿಯನ್ನು ಕನಿಷ್ಟವಾಗಿಸಿ ಸುಮಾರು ಹದಿನೈದು ನಿಮಿಷಗಳ ಕಾಲ ಕುದಿಸುವುದನ್ನು ಮುಂದುವರೆಸಿ. ಬಳಿಕ ಉರಿಯನ್ನು ಆರಿಸಿ ತಣಿಯಲು ಬಿಡಿ. ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಈ ನೀರನ್ನು ಸೋಸಿ ಸಂಗ್ರಹಿಸಿ. ತಣಿದ ಬಳಿಕ ಈ ನೀರು ಸುಮಾರು ಒಂದು ಲೀಟರ್ ಆಗಬೇಕು.

ಈ ನೀರಿನ ಬಳಕೆ ಹೇಗೆ?

ಈ ನೀರಿನ ಬಳಕೆ ಹೇಗೆ?

ಈ ನೀರನ್ನು ಚಿಕ್ಕ ಚಿಕ್ಕ ಪ್ರಮಾಣದಲ್ಲಿ ದಿನವಿಡೀ ಕುಡಿಯಿರಿ. ದಿನಕ್ಕೆ ಕನಿಷ್ಟ ಒಂದು ಲೀಟರ್ ಕುಡಿಯಬೇಕು.

ಈ ನೀರನ್ನು ಒಂದು ಥರ್ಮಾಸ್ ನಲ್ಲಿ ಹಾಕಿ ನೀವು ಹೋಗುವವಲ್ಲೆಲ್ಲಾ ಕೊಂಡು ಹೋಗಿ ಹಾಗೂ ಆಗಾಗ ಕುಡಿಯುತ್ತಾ ಇಡಿಯ ದಿನದಲ್ಲಿ ಈ ನೀರನ್ನು ಖಾಲಿ ಮಾಡಿ.

ಅತ್ಯುತ್ತಮ ಪರಿಣಾಮಕ್ಕಾಗಿ ಪ್ರತಿದಿನವೂ ತಾಜಾ ಶುಂಠಿಯನ್ನೇ ಬಳಸಿ ನೀರನ್ನು ತಯಾರಿಸಿ.

ಆರೋಗ್ಯ ಉತ್ತಮಗೊಳ್ಳಲು ಹಾಗೂ ದೇಹದಿಂದ ಕಲ್ಮಶಗಳು ಸಂಪೂರ್ಣವಾಗಿ ನಿವಾರಣೆಯಾಗಲು ಈ ನೀರನ್ನು ಕನಿಷ್ಟ ಆರು ತಿಂಗಳಾದರೂ ಸತತವಾಗಿ ಸೇವಿಸಿ

ಶುಂಠಿ ನೀರಿನ ಆರೋಗ್ಯಕರ ಪ್ರಯೋಜನಗಳು

ಶುಂಠಿ ನೀರಿನ ಆರೋಗ್ಯಕರ ಪ್ರಯೋಜನಗಳು

ಶುಂಠಿಯ ನೀರು ದೇಹದ ಕೊಲೆಸ್ಟ್ರಾಲ್ ಗಳ ಮಟ್ಟವನ್ನು ನಿಯಂತ್ರಿಸಬಲ್ಲುದು

ಶುಂಠಿಯ ನೀರಿನ ಮೂಲಕ ಆಂಟಿ ಆಕ್ಸಿಡೆಂಟ್ ಪರಿಣಾಮವನ್ನು ಪ್ರಬಲವಾಗಿಸಬಹುದು

ಶುಂಠಿಯ ನೀರು ಸ್ವತಃ ಒಂದು ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಆಗಿದೆ.

ಶುಂಠಿಯ ನೀರು ಹಲವಾರು ಕ್ಯಾನ್ಸರ್ ಗಳಿಂದ ರಕ್ಷಿಸುತ್ತದೆ.

ವಾಕರಿಕೆಯಿಂದ ಬಿಡುಗಡೆ

ವಾಕರಿಕೆಯಿಂದ ಬಿಡುಗಡೆ

ಇತಿಹಾಸದುದ್ದಕ್ಕೂ ಶುಂಠಿಯನ್ನು ವಾಕರಿಕೆಯ ನಿವಾರಣೆಗಾಗಿ ಬಳಸಲಾಗಿರುವುದನ್ನು ವಿವರಿಸಲಾಗಿದೆ. ಸಮುದ್ರಯಾನಿಗಳಿಗೆ ಸಾಮಾನ್ಯವಾಗಿ ಎದುರಾಗುವ ವಾಕರಿಕೆಯನ್ನೂ ಶುಂಠಿಯ ನೀರು ಕಡಿಮೆಯಾಗಿಸುತ್ತದೆ. ಗರ್ಭಾವಸ್ಥೆ ಅಥವಾ ಕ್ಯಾನ್ಸರ್ ನ ಚಿಕಿತ್ಸೆಯಾದ ಖೀಮೋಥೆರಪಿ ಮೊದಲಾದ ಸಂದರ್ಭದಲ್ಲಿ ಎದುರಾಗುವ ವಾಕರಿಕೆಯನ್ನೂ ಶುಂಠಿಯ ನೀರು ಗುಣಪಡಿಸುತ್ತದೆ.

ಕ್ಯಾನ್ಸರ್ ನಿಂದ ರಕ್ಷಣೆ

ಕ್ಯಾನ್ಸರ್ ನಿಂದ ರಕ್ಷಣೆ

ಶುಂಠಿಯ ನೀರು ಹಲವು ಬಗೆಯ ಕ್ಯಾನ್ಸರ್ ಆವರಿಸುವುದರಿಂದ ರಕ್ಷಣೆ ನೀಡುತ್ತದೆ. ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿಯಂತ್ರಿಸಿ ಕ್ಯಾನ್ಸರ್ ಆವರಿಸುವ ಸಾಧ್ಯತೆಯಿಂದ ರಕ್ಷಿಸುತ್ತದೆ. ಅಲ್ಲದೇ ಕ್ಯಾನ್ಸರ್ ಆವರಿಸಿರುವ ಜೀವಕೋಶಗಳನ್ನು ಕೊಂದು ಇನ್ನಷ್ಟು ಹರಡುವಿಕೆಯಿಂದ ರಕ್ಷಿಸುತ್ತದೆ.

ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ಶುಂಠಿರಸದ ಸೇವನೆಯಿಂದ ರಕ್ತ ಅಗತ್ಯಕ್ಕಿಂತ ಹೆಚ್ಚು ಗಾಢವಾಗಿದ್ದರೆ (ಅಂದರೆ ರಕ್ತದಲ್ಲಿರುವ ನೀರಿನ ಅಂಶವಾದ ಪ್ಲಾಸ್ಮಾ ಕಡಿಮೆಯಾಗಿದ್ದರೆ) ಆ ತೊಂದರೆ ನಿವಾರಣೆಯಾಗುತ್ತದೆ. ಪ್ಲಾಸ್ಮಾ ಕೊರತೆಯಿಂದ ರಕ್ತಸಂಚಾರಕ್ಕೆ ಹೆಚ್ಚಿನ ಒತ್ತಡ ಬೇಕಾಗಿದ್ದುದು ಈಗ ಕಡಿಮೆ ಒತ್ತಡ ಸಾಕಾಗುತ್ತದೆ. ಪ್ರತಿದಿನ ಒಂದು ಲೋಟ ಶುಂಠಿರಸಕ್ಕೆ ಕೆಲವು ಹನಿ ಜೇನನ್ನು ಸೇರಿಸಿ ಕುಡಿಯುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ.

ವಿವಿಧ ನೋವುಗಳನ್ನು ಕಡಿಮೆಗೊಳಿಸುತ್ತದೆ

ವಿವಿಧ ನೋವುಗಳನ್ನು ಕಡಿಮೆಗೊಳಿಸುತ್ತದೆ

ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ತಲೆನೋವಿಗೆ ಶುಂಠಿ ಉತ್ತಮ ಪರಿಹಾರವಾಗಿದೆ. ತಲೆನೋವು ಪ್ರಾರಂಭವಾಗುತ್ತಲೇ ಶುಂಠಿರಸವನ್ನು ಹಣೆಗೆ ಹಚ್ಚುವುದರಿಂದ ತಲೆನೋವು ಹತೋಟಿಗೆ ಬರುತ್ತದೆ. ಶುಂಠಿಯಲ್ಲಿರುವ ಉರಿಶಾಮಕ ಗುಣ ವಿವಿಧ ನೋವುಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಲ್ಲದೇ ಉರಿತರಿಸುವ ಕಣಗಳಿಂದ ನರಗಳ ಒಳಗಿನಿಂದ ಉರಿಯಾಗುವುದನ್ನು ತಡೆಯುತ್ತದೆ. ಪರಿಣಾಮವಾಗಿ ನರಗಳ ಮೂಲಕ ರಕ್ತ ಸರಾಗವಾಗಿ ನೋವಿರುವ ಕಡೆಗೆ ಹರಿದು ನೋವು ಮತ್ತು ಉರಿಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಶುಂಠಿರಸದ ಸೇವನೆ ಜೀರ್ಣಕ್ರಿಯೆಗೆ ಉತ್ತಮವಾಗಿದೆ. ಜಠರದಲ್ಲಿ ಆಹಾರ ಕರಗುವ ಕ್ರಿಯೆಯನ್ನು ಉದ್ರೇಕಿಸಿ ಕರಗಿದ ಆಹಾರ ಶೀಘ್ರದಲ್ಲಿ ಚಿಕ್ಕಕರುಳಿಗೆ ರವಾನೆಯಾಗಲು ನೆರವಾಗುತ್ತದೆ. ಇದರಿಂದಾಗಿ ಹೊಟ್ಟೆಯಲ್ಲಿ ಹೆಚ್ಚು ಹೊತ್ತು ಆಹಾರ ಉಳಿದುಕೊಳ್ಳುವ ಕಾರಣದಿಂದಾಗಿ ಉದ್ಭ್ಹವವಾಗುವ ಹೊಟ್ಟೆಯುರಿ, ಹುಳಿತೇಗು, ಎದೆಯುರಿ, ಹೊಟ್ಟೆಯುಬ್ಬರ, ಮೊದಲಾದ ತೊಂದರೆಗಳು ನಿವಾರಣೆಯಾಗುತ್ತವೆ.

ಸಂಧಿವಾತ (Arthritis) ನಿಂದ ರಕ್ಷಿಸುತ್ತದೆ

ಸಂಧಿವಾತ (Arthritis) ನಿಂದ ರಕ್ಷಿಸುತ್ತದೆ

ಶುಂಠಿರಸದ ಉರಿಯೂತ ನಿವಾರಕ ಗುಣದಿಂದಾಗಿ ಮೂಳೆಗಳ ಸಂದುಗಳಲ್ಲಿ ಮತ್ತು ಥೈರಾಯ್ಡ್ ಗ್ರಂಥಿಯ ಸ್ರವಿಕೆಯ ಕೊರತೆಯಿಂದ ಬಳಲುತ್ತಿರುವ ರೋಗಿಗಳು ಶೀಘ್ರ ಗುಣಮುಖರಾಗುವರು.

ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸುತ್ತದೆ

ಶುಂಠಿರಸ ಜೀರ್ಣಗೊಂಡು ರಕ್ತಕ್ಕೆ ರವಾನೆಯಾದ ಬಳಿಕ ರಕ್ತನಾಳಗಳ ಒಳಗೆ ಕವಲು ಮತ್ತು ಬಿರುಕುಗಳಿರುವಲ್ಲಿ ಸಂಗ್ರಹವಾಗಿದ್ದ ಕೆಟ್ಟ ಕೊಲೆಸ್ಟ್ರಾಲ್ ಜಿಡ್ಡನ್ನು ಸಡಿಲಗೊಳಿಸಿ ನಿವಾರಿಸಲು ನೆರವಾಗುತ್ತದೆ. ತನ್ಮೂಲಕ ಮುಂದಿನ ದಿನಗಳಲ್ಲಿ ಹೃದಯಕ್ಕೆ ಹೆಚ್ಚಿನ ಒತ್ತಡ ನೀಡಬೇಕಾಗಿ ಬರುವುದಿದ್ದುದನ್ನು ತಡೆಯುತ್ತದೆ. ಹೃದಯಾಘಾತದ ಸಂಭವತೆಯನ್ನು ಕಡಿಮೆಗೊಳಿಸುತ್ತದೆ.

ಶೀತಕ್ಕೆ ರಾಮಬಾಣವಾಗಿದೆ

ಶೀತಕ್ಕೆ ರಾಮಬಾಣವಾಗಿದೆ

ಮಳೆಯಲ್ಲಿ ನೆಂದು ಶೀತ ನೆಗಡಿ ಹತ್ತಿಸಿಕೊಂಡಿದ್ದವರಿಗೆ ಅಜ್ಜಿ ಮಾಡಿಕೊಡುತ್ತಿದ್ದ ಕಷಾಯವೆಂದರೆ ಶುಂಠಿ, ಕರಿಮೆಣಸು, ಜೀರಿಗೆ ಬೆರೆಸಿದ ಖಾರವಾದ ನೀರು. ಶುಂಠಿರಸದ ಸೇವನೆಯಿಂದ ಶೀತ, ನೆಗಡಿ, ಮೊದಲಾದ ತೊಂದರೆಗಳು ಶೀಘ್ರವೇ ನಿವಾರಣೆಯಾಗುತ್ತದೆ. ಶುಂಠಿರಸದಲ್ಲಿರುವ ವೈರಸ ವಿರೋಧಿ ಗುಣ ಶೀತಕ್ಕೆ ಕಾರಣವಾಗುವ ವಿವಿಧ ವೈರಸ್ ಗಳನ್ನು ನಿವಾರಿಸುವಲ್ಲಿ ನೆರವಾಗುತ್ತದೆ. ಜೊತೆಗೇ ದೇಹದ ರೋಗ ನಿರೋಧಕ ಶಕ್ತಿಯನ್ನು ಆ ವೈರಸ್ಸಿಗೆ ಹೋರಾಡಲು ಸಜ್ಜುಗೊಳಿಸಿ ಮುಂದೆಂದೂ ದೇಹ ಆ ವೈರಸ್ಸಿಗೆ ತುತ್ತಾಗದಂತೆ ನೋಡಿಕೊಳ್ಳುತ್ತದೆ. ಇದೇ ಕಾರಣದಿಂದ ನಮಗೆ ಪ್ರತಿಬಾರಿಯೂ ಹೊಸ ಹೊಸ ವೈರಸ್ಸಿನ ಕಾರಣವೇ ಶೀತ ಉಂಟಾಗುತ್ತದೆ.

English summary

Ginger Water – Recipe to Lose Weight, Burn Fat and other benefits

Ginger, the root of the Zingiber officinale plant, originated in Asia and has been used as a spice and herbal medicine for thousands of years. Ginger water, or ginger tea, is made by boiling fresh ginger root in water, then cooling and straining the liquid. Although it’s most often considered a treatment for digestive discomfort, ginger may hold the key to numerous health benefits.
X
Desktop Bottom Promotion