For Quick Alerts
ALLOW NOTIFICATIONS  
For Daily Alerts

ತುಳಸಿಯ ಸಹಾಯದಿಂದ ತೂಕ ಇಳಿಸಿಕೊಳ್ಳಬಹುದೇ?

|

ವಿಶ್ವದ ಅತ್ಯಂತ ಹೆಚ್ಚು ಜನಪ್ರಿಯ ಪೇಯವೆಂದರೆ ಟೀ. ಈ ಟೀ ಯನ್ನು ಹಲವು ರೂಪದಲ್ಲಿ ಸೇವಿಸಲಾಗುತ್ತದೆ. ಹಸಿರು ಟೀ, ಗಿಡಮೂಲಿಕೆಗಳ ಟೀ, ಕಪ್ಪು ಟೀ, ಶುಂಠಿಯ ಟೀ, ಹುದುಗುಬಂದ ಟೀ ಇತ್ಯಾದಿ. ಆದರೆ, ಅಚ್ಚರಿ ಎಂಬಂತೆ, ತುಳಸಿ ಟೀ ಮಾತ್ರ ಜನಪ್ರಿಯವಾಗಿಲ್ಲ. ತೂಕ ಇಳಿಸಲು ತುಳಸಿ ನೆರವು ನೀಡುವ ಬಗ್ಗೆ ನಾವೆಲ್ಲಾ ಅರಿತೇ ಇದ್ದೇವೆ. ಹೀಗಿದ್ದಾಗ ತುಳಸಿಯಿಂದ ತಯಾರಿಸಿದ ಟೀ ಸೇವನೆಯಿಂದ ತೂಕ ಇಳಿಯಬಲ್ಲುದೇ?ಉತ್ತರ ಪಡೆಯಲು ಈ ಲೇಖನ ನೆರವಾಗಲಿದೆ:

ಪವಿತ್ರವಾದ ತುಳಸಿಯನ್ನು ಪುರಾತನ ಆಯುರ್ವೇದ ವೈದ್ಯಪದ್ದತಿಯಲ್ಲಿ ಬಳಸುತ್ತಾ ಬರಲಾಗಿದೆ. ಭಾರತದಲ್ಲಿ ತುಳಸಿಗೆ ಪೂಜಿಸಲ್ಪಡುವ ಸ್ಥಾನವನ್ನು ಕಲ್ಪಿಸಲಾಗಿದ್ದು ಇದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಪವಿತ್ರ ತುಳಸಿಯ ಪ್ರಯೋಜನಗಳನ್ನು ಕಂಡುಕೊಂಡ ಪಾಶ್ಚಾತ್ಯ ದೇಶಗಳು ಈ ಬಗ್ಗೆ ಆಳವಾದ ಸಂಶೋಧನೆ ನಡೆಸಿ ಮಾನಸಿಕ ಒತ್ತಡಕ್ಕೆ ಕಾರಣವಾದ ಕಾರ್ಟಿಸೋಲ್ ಎಂಬ ರಸದೂತದ ಮಟ್ಟವನ್ನು ತಗ್ಗಿಸುವ ಕ್ಷಮತೆಯನ್ನು ಹೊಂದಿದೆ ಎಂದು ತಿಳಿಸಿವೆ.

weight loss

ತುಳಸಿ ಎಲೆಗಳ ಆರೋಗ್ಯಕರ ಪ್ರಯೋಜನಗಳು:

'Plant Foods For Human Nutrition' ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಪವಿತ್ರ ತುಳಸಿಯ ಬಳಕೆಯಿಂದ ರಕ್ತದಲ್ಲಿ ಗ್ಲುಕೋಸ್ ಮಟ್ಟ, ಮೇಧಸ್ಸು ಹಾಗೂ ಕೊಲೆಸ್ಟ್ರಾಲ್ ಮಟ್ಟಗಳಲ್ಲಿ ಇಳಿಕೆಗೆ ನೆರವಾಗುತ್ತದೆ. ನಮ್ಮ ಭಾರತದಲ್ಲಿಯೇ ನಡೆಸಿದ ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಲು ತುಳಸಿಯನ್ನು ಆರೋಗ್ಯಕರ ಆಹಾರಕ್ರಮದೊಂದಿಗೆ ಬಳಸಿದರೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದು. ಅಲ್ಲದೇ, ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಪರಾವಲಂಬಿ ಕ್ರಿಮಿ ನಿರೋಧಕ ಗುಣ ಹಲವು ಸೋಂಕುಗಳಿಂದ ರಕ್ಷಿಸುತ್ತದೆ, ಏರಿದ ಜ್ವರವನ್ನು ಕಡಿಮೆ ಮಾಡುತ್ತದೆ, ಜೀರ್ಣಕ್ರಿಯೆಗೆ ನೆರವಾಗುತ್ತದೆ ಹಾಗೂ ನರಗಳನ್ನು ಶಾಂತಗೊಳಿಸುತ್ತದೆ.

1. ಪವಿತ್ರ ತುಳಸಿ ಎಲೆಗಳು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ:

ಈ ಎಲೆಗಳ ಸೇವನೆಯಿಂದ ಜೀವರಾಸಾಯನಿಕ ಕ್ರಿಯೆ ಚುರುಕುಗೊಳ್ಳುತ್ತದೆ, ತನ್ಮೂಲಕ ತೂಕದಲ್ಲಿ ಇಳಿಕೆ ಮತ್ತು ಕೊಲೆಸ್ಟ್ರಾಲ್ ಮಟ್ಟದಲ್ಲಿ ಇಳಿಕೆ ಸಾಧ್ಯವಾಗುತ್ತದೆ. ಅಲ್ಲದೇ ವಿಶೇಷವಾಗಿ ತುಳಸಿ ಎಲೆಗಳು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ ಆರೋಗ್ಯವನ್ನು ಕಾಪಾಡುತ್ತದೆ.

2. ಜಠರವನ್ನು ರಕ್ಷಿಸುತ್ತದೆ

ವಿತ್ರ ತುಳಸಿ ಎಲೆಗಳಲ್ಲಿ ಒತ್ತಡದಿಂದ ಎದುರಾಗುವ ಹುಣ್ಣುಗಳ ವಿರುದ್ದ ಹೋರಾಡುವ ಕ್ಷಮತೆ ಇದೆ. ಜೀರ್ಣರಸಗಳ ಆಮ್ಲೀಯತೆಯನ್ನು ಕಡಿಮೆ ಮಾಡಿ ಜಠರ ಮತ್ತು ಕರುಳುಗಳ ಒಳಗಣ ಗೋಡೆಗಳಲ್ಲಿ ಸ್ನಿಗ್ಧ ದ್ರವವನ್ನು ಹೆಚ್ಚು ಸ್ರವಿಸುವಂತೆ ಮಾಡಿ ತನ್ಮೂಲಕ ಸ್ನಿಗ್ಧ ಜೀವಕೋಶಗಳನ್ನು ಹೆಚ್ಚಿಸಿ ಹುಣ್ಣುಗಳಾಗಂತೆ ಕಾಪಾಡುತ್ತದೆ. ಅಲ್ಲದೇ ತುಳಸಿಯ ಸತತ ಸೇವನೆಯಿಂದ ಈ ಸ್ನಿಗ್ಧ ಜೀವಕೋಶಗಳ ಆಯಸ್ಸು ಸಹಾ ವೃದ್ದಿಸುತ್ತದೆ.

3. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸುತ್ತದೆ

ಒಂದು ವೇಳೆ ನಿಮಗೆ ಟೈಪ್ ೨ ಮಧುಮೇಹವಿದ್ದರೆ ತುಳಸಿ ಗಿಡದ ಎಲ್ಲಾ ಭಾಗಗಳೂ ನಿಮಗೆ ಒಂದಲ್ಲಾ ಒಂದು ರೀತಿಯಲ್ಲಿ ಪ್ರಯೋಜನಕಾರಿಯಾಗಿವೆ. ಪ್ರಮುಖವಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಅಲ್ಲದೇ ಮಧುಮೇಹ ಆವರಿಸುತ್ತಿರುವ ಚಿಹ್ನೆಗಳಾದ ತೂಕದಲ್ಲಿ ಏರಿಕೆ, ರಕ್ತದಲ್ಲಿ ಇನ್ಸುಲಿನ್ ಮಟ್ಟ ಏರಿಕೆ, ಇನ್ಸುಲಿನ್ ನಿರೋಧಕ ಶಕ್ತಿ ಹೆಚ್ಚುವುದು, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಮೊದಲಾದವುಗಳನ್ನು ಕಡಿಮೆ ಮಾಡಿ ಮಧುಮೇಹ ಆವರಿಸುವುದನ್ನು ತಡವಾಗಿಸುತ್ತದೆ.

4. ಸೋಂಕುಗಳಿಂದ ರಕ್ಷಿಸುತ್ತದೆ

ತುಳಸಿ ಎಲೆಗಳಿಂದ ಸೋಸಿ ತೆಗೆದ ಔಷದಿಯ ಸೇವನೆಯಿಂದ ಗಾಯಗಳು ಶೀಘ್ರವಾಗಿ ಮಾಗುತ್ತವೆ ಹಾಗೂ ತುಳಸಿಯ ಬ್ಯಾಕ್ಟೀರಿಯಾ ನಿವಾರಕ, ವೈರಸ್ ನಿವಾರಕ, ಶಿಲೀಂಧ್ರ ನಿವಾರಕ, ಗುಣಪಡಿಸುವ ಹಾಗೂ ಉರಿಯೂತ ನಿವಾರಕ ಗುಣಗಳು ಹಲವಾರು ಬಗೆಯ ಸೋಂಕುಗಳಿಂದ ರಕ್ಷಣೆ ಒದಗಿಸುತ್ತವೆ. ಸೋಂಕುಗಳ ಪರಿಣಾಮದಿಂದ ಎದುರಾಗುವ ಬಾಯಿಯ ಹುಣ್ಣು, ಮೊಡವೆ ಹಾಗೂ ಹಳೆಯ ಗಾಯದ ಕಲೆಗಳು ಉಬ್ಬಿ ನಿಲ್ಲುವುವು ಮೊದಲಾದ ತೊಂದರೆಗಳನ್ನು ನಿವಾರಿಸುತ್ತವೆ.

ತೂಕ ಇಳಿಕೆಗೆ ತುಳಸಿ ಟೀ ಹೇಗೆ ನೆರವಾಗುತ್ತದೆ?

ತುಳಸಿ ಸೇವನೆಯಿಂದ ತೂಕ ಇಳಿಯಬಲ್ಲುದೇ? ಹೌದು, ಇದು ನಿಜ! ತುಳಸಿ ಎಲೆ ಹಾಗೂ ತುಳಸಿ ಹೂವಿನ ಬೀಜಗಳು, ಇವೆರಡರಲ್ಲಿಯೂ ತೂಕ ಇಳಿಸಲು ನೆರವಾಗುವ ಪೋಷಕಾಂಶಗಳಿವೆ. ಬನ್ನಿ, ತೂಕ ಇಳಿಸಲು ತುಳಸಿ ಹೇಗೆ ನೆರವಾಗುತ್ತದೆ ಎಂಬುದನ್ನು ನೋಡೋಣ:

*ಜೀವ ರಾಸಾಯನಿಕ ಕ್ರಿಯೆ ಚುರುಕುಗೊಳಿಸುವುದು:

ತುಳಸಿ ಎಲೆಗಳ ಸೇವನೆಯಿಂದ ಜೀವ ರಾಸಾಯನಿಕ ಕ್ರಿಯೆ ಚುರುಕುಗೊಳ್ಳುತ್ತದೆ. ಇದು ಆಹಾರವನ್ನು ಶಕ್ತಿಯಾಗಿ ಪರಿವರ್ತಿಸಲು ಹಾಗೂ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ.

*ಯಕೃತ್ ನ ಕ್ಷಮತೆಯನ್ನು ಹೆಚ್ಚಿಸುತ್ತದೆ:

ನಮ್ಮ ಯಕೃತ್ ನ ಪ್ರಮುಖ ಕಾರ್ಯವೆಂದರೆ ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ನಿವಾರಿಸುವುದು. ಇವುಗಳನ್ನು ಪೂರ್ಣವಾಗಿ ನಿವಾರಿಸದೇ ಇದ್ದರೆ ಇದು ಕೊಬ್ಬನ್ನು ಹೆಚ್ಚಿಸಿ ತೂಕ ಹೆಚ್ಚಳಕ್ಕೂ ಕಾರಣವಾಗಬಲ್ಲುದು.

*ಆರೋಗ್ಯಕರ ಜೀರ್ಣಕ್ರಿಯೆಯನ್ನು ಉಳಿಸಿಕೊಳ್ಳುತ್ತದೆ:

ತುಳಸಿಯನ್ನು ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ಆರೋಗ್ಯಕರ ಜೀರ್ಣಕ್ರಿಯೆಯನ್ನು ಉಳಿಸಿಕೊಂಡು ಬರಲು ಸಾಧ್ಯವಾಗುತ್ತದೆ. ಕರುಳುಗಳಲ್ಲಿ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳು ಉತ್ತಮ ಪ್ರಮಾಣದಲ್ಲಿರಲು ಹಾಗೂ ಕ್ರಮಬದ್ದವಾದ ವಿಸರ್ಜನಾ ಕಾರ್ಯಕ್ಕೂ ನೆರವಾಗುತ್ತದೆ.

* ಸಹಿಷ್ಣುತೆ ಹೆಚ್ಚಿಸುತ್ತದೆ:

ತುಳಸಿ ಎಲೆಗಳಲ್ಲಿ ಕ್ಯಾಲೋರಿಗಳು ಇಲ್ಲವೇ ಇಲ್ಲ ಹಾಗೂ ಈ ಎಲೆಗಳಿಂದ ತಯಾರಿಸಿದ ಟೀ ದೇಹದಲ್ಲಿ ಶಕ್ತಿ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ. ನಿತ್ಯದ ವ್ಯಾಯಾಮಕ್ಕೂ ಮುನ್ನ ಕುಡಿಯುವ ಒಂದು ಲೋಟ ತುಳಸಿ ಟೀ ಸಹಿಷ್ಣುತೆಯನ್ನು ಹೆಚ್ಚಿಸಲು ನೆರವಾಗುತ್ತದೆ.

*ಥೈರಾಯ್ಡ್ ಗ್ರಂಥಿಯ ಕ್ಷಮತೆ ಕುಂದಿರುವುದನ್ನು ಸರಿಪಡಿಸುತ್ತದೆ:

Hypothyroidism ಅಥವಾ ಥೈರಾಯ್ಡ್ ಗ್ರಂಥಿಯ ಕ್ಷಮತೆ ಕುಂದಿರುವುದನ್ನು ಸರಿಪಡಿಸಲು, ಅಂದರೆ ಈ ಗ್ರಂಥಿಯಿಂದ ಸ್ರವಿಸುವ ರಸದೂತಗಳ ಪ್ರಮಾಣ ಕಡಿಮೆಯಾದರೆ ಇದನ್ನು ಹೆಚ್ಚಿಸಲು ತುಳಸಿ ನೆರವಾಗುತ್ತದೆ. ಈ ರಸದೂತ ಕಡಿಮೆಯಾದರೆ ಆಹಾರವನ್ನು ಪೂರ್ಣವಾಗಿ ನಿರ್ವಹಿಸಲು ಸಾಧ್ಯವಾಗದೇ ಹೆಚ್ಚಿನ ಭಾಗ ಕೊಬ್ಬಾಗಿ ಪರಿವರ್ತಿತವಾಗುತ್ತದೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ತುಳಸಿ ಎಲೆಗಳ ನಿಯಮಿತ ಸೇವನೆಯಿಂದ ಥೈರಾಯ್ಡ್ ರಸದೂತಗಳ ಮಟ್ಟವನ್ನು ಸಮತೋಲನದಲ್ಲಿರಿಸಬಹುದು.

ತೂಕ ಇಳಿಸಲು ತುಳಸಿ ಟೀ ತಯಾರಿಸುವ ಬಗೆ:

ತುಳಸಿ ಎಲೆಗಳನ್ನು ಒಣಗಿಸಿ ಪುಡಿಮಾಡಿ ಟೀಪುಡಿಯಂತೆ ಕುದಿಯುವ ನೀರಿನಲ್ಲಿ ಕುದಿಸಿ ಸೋಸಿ ತಯಾರಿಸಿದ ಟೀ ಸೇವನೆಯಿಂದ ದೇಹಕ್ಕೆ ವಿಟಮಿನ್ ಎ, ಕೆ, ಸಿ, ಮ್ಯಾಂಗನೀಸ್, ತಾಮ್ರ, ಕಬ್ಬಿಣ, ಫೋಲೇಟ್, ಒಮೆಗಾ ೩ ಕೊಬ್ಬಿನ ಆಮ್ಲಗಳು ಹಾಗೂ ಮೆಗ್ನೇಶಿಯಂ ಮೊದಲಾದ ಪೋಷಕಾಂಶಗಳು ಲಭಿಸುತ್ತವೆ.

ಟೀ ತಯಾರಿಸುವ ವಿಧಾನ:

ತುಳಸಿಯನ್ನು ಹಸಿಯಾಗಿದ್ದಾಗ ನೇರವಾಗಿ ಅಗಿದು ನುಂಗುವುದು ಅತ್ಯುತ್ತಮ ವಿಧಾನವಾಗಿದೆ. ಇದು ಸಾಧ್ಯವಾಗದೇ ಹೋದರೆ ಕೆಲವು ತುಳಸಿ ಎಲೆಗಳನ್ನು ಅರ್ಧ ಲೀಟನ್ ನೀರಿನಲ್ಲಿ ಕುದಿಸಿ ಸೋಸಿ ಈ ಟೀಯನ್ನು ನಿತ್ಯವೂ ಕುಡಿಯಿರಿ.

ತೂಕ ಇಳಿಸಲು ತುಳಸಿ ಹೂವಿನ ಬೀಜಗಳ ಬಳಕೆ:

ಅಗತ್ಯವಿರುವ ಸಾಮಾಗ್ರಿಗಳು:

  • 2 ಚಿಕ್ಕ ಚಮಚ ತುಳಸಿ ಬೀಜಗಳು
  • 2 ಲೋಟ ಫ್ರಿಜ್ಜಿನ ತಣ್ಣನೆಯ ನೀರು
  • 6 ದೊಡ್ಡ ಚಮಚ ಗುಲಾಬಿ ನೀರು ಅಥವಾ ಸ್ಟ್ರಾಬೆರಿ ಸಿರಪ್
  • 2 ಚಿಕ್ಕ ಚಮದ ಲಿಂಬೆರಸ
  • 5-6 ಪುದಿನಾ ಎಲೆಗಳು

ವಿಧಾನ:

  1. ಮೊದಲು ನಲ್ಲಿಯ ನೀರಿನ ಧಾರೆಗೆ ತುಳಸಿ ಎಲೆಗಳನ್ನು ಹಿಡಿದು ಚೆನ್ನಾಗಿ ತೊಳೆದುಕೊಳ್ಳಿ. ಎಲೆಗಳನ್ನು ಬಿಡಿಸಿ ಸುಮಾರು ಎರಡು ಘಂಟೆಗಳ ಕಾಲ ಒಂದು ಲೋಟ ತಣ್ಣೀರಿನಲ್ಲಿ ಮುಳುಗಿಸಿಡಿ. ಬಳಿಕ ಹೆಚ್ಚಿನ ನೀರನ್ನು ಸೋಸಿ.
  2. ಒಂದು ಲೋಟದಲ್ಲಿ ಮೂರು ದೊಡ್ಡ ಚಮಚ ಗುಲಾಬಿ ನೀರನ್ನು ಅಥವಾ ನಿಮ್ಮ ಇಷ್ಟದ ಬೇರಾವುದೋ ಸಿರಪ್ ಅನ್ನು ತಣ್ಣನೆಯ ನೀರಿನಲ್ಲಿ ಬೆರೆಸಿ ಚೆನ್ನಾಗಿ ಕಲಕಿ.
  3. ಇದಕ್ಕೆ ನೆನೆಸಿಟ್ಟಿದ್ದ ತುಳಸಿ ಬೀಜಗಳನ್ನು ಹಾಗೂ ಕೊಂಚ ಲಿಂಬೆರಸ ಮತ್ತು ಪುದಿನಾ ಎಲೆಗಳನ್ನು ಸೇರಿಸಿ ತಣ್ಣಗಿದ್ದಂತೆಯೇ ಸೇವಿಸಿ.
English summary

Does Basil Or Tulsi Help You Lose Weight?

Does Basil Or Tulsi Help You Lose Weight?
X
Desktop Bottom Promotion