For Quick Alerts
ALLOW NOTIFICATIONS  
For Daily Alerts

ತೂಕ ಕಳೆದುಕೊಳ್ಳಲು ಸ್ಟ್ರೆಚಿಂಗ್ ನೆರವಾಗುವುದೇ?

By Hemanth
|

ದೇಹದ ವ್ಯಾಯಾಮದಲ್ಲಿ ಹಲವಾರು ವಿಧಗಳಿವೆ. ಇದರಲ್ಲಿ ಸ್ಟ್ರೆಚಿಂಗ್ ಕೂಡ ಒಂದು. ದೇಹದ ಕೆಲವು ಸ್ನಾಯುಗಳ ಚಲನೆಯ ನಿಯಂತ್ರಿಸುವ ಮೂಲಕ ಸ್ಟ್ರೆಚಿಂಗ್ ವ್ಯಾಯಾಮ ಮಾಡಲಾಗುತ್ತದೆ. ಇದನ್ನು ಕಠಿಣ ವ್ಯಾಯಾಮ, ಏರೋಬಿಕ್ಸ್ ಮತ್ತು ಬಲಶಾಲಿ ತರಬೇತಿಗೆ ಮೊದಲು ಮಾಡಲಾಗುತ್ತದೆ. ವ್ಯಾಯಾಮದ ಬಳಿಕ ಸ್ನಾಯುಗಳಿಗೆ ಆರಾಮ ನೀಡಲು ಕೂಡ ಸ್ಟ್ರೆಚಿಂಗ್ ಮಾಡಲಾಗುವುದು.

ಸ್ಟ್ರೆಚಿಂಗ್ ಅಗತ್ಯವೇ?
ಯಾವುದೇ ವ್ಯಾಯಾಮದ ಮೊದಲು ಸ್ಟ್ರೆಚಿಂಗ್ ಮಾಡಲು ಸೂಚಿಸಲಾಗುತ್ತದೆ. ಇದು ಸ್ನಾಯುಗಳನ್ನು ಸಡಿಲಗೊಳಿಸುವುದು ಮಾತ್ರವಲ್ಲದೆ ಅದನ್ನು ವ್ಯಾಯಾಮಕ್ಕೆ ಸಜ್ಜುಗೊಳಿಸುವುದು. ಇದರಿಂದ ವ್ಯಾಯಾಮದ ವೇಳೆ ಸ್ನಾಯುಗಳ ಮೇಲೆ ಬಲ ಬೀಳುವ ಅಪಾಯವು ಕಡಿಮೆಯಾಗುವುದು. ನೀವು ಭಾರ ಎತ್ತಲು ತಯಾರಾಗಿದ್ದೀರಿ ಎಂದಾದರೆ ಆಗ ಸ್ವಲ್ಪ ನಡೆದಾಡಿ, ಸೈಕಲ್ ಓಡಿಸಿ, ಅಥವಾ ಸ್ವಲ್ಪ ಸ್ಟ್ರೆಚಿಂಗ್ ವ್ಯಾಯಾಮ ಮಾಡಿದರೆ ಅದರಿಂದ ಭಾರ ಎತ್ತುವಾಗ ಗಾಯಾಳುವಾಗದಂತೆ ದೇಹಕ್ಕೆ ಸ್ಥಿತಿಸ್ಥಾಪಕತ್ವವು ಸುಧಾರಣೆಯಾಗುವುದು.

Stretching

ಸ್ಟ್ರೆಚಿಂಗ್ ನ ಲಾಭಗಳು
ನಿಯಮಿತವಾಗಿ ಸ್ಟ್ರೆಚಿಂಗ್ ಮಾಡುವ ಲಾಭಗಳು
• ದೇಹಕ್ಕೆ ಸ್ಥಿತಿಸ್ಥಾಪಕತ್ವ ಬರುವುದು.
• ಗಂಟುಗಳ ಚಲನೆಯು ಉತ್ತಮವಾಗುವುದು.
• ಸ್ನಾಯುಗಳಿಗೆ ಒತ್ತಡ ಬೀಳದಂತೆ ತಡೆಯುವುದು
• ರಕ್ತ ಪರಿಚಲನೆಯು ಉತ್ತಮವಾಗುವುದು.
• ವ್ಯಾಯಾಮಕ್ಕೆ ದೇಹವನ್ನು ಸಜ್ಜುಗೊಳಿಸುವುದು
• ವ್ಯಾಯಾಮ ಬಳಿಕ ದೇಹ ಶಾಂತಗೊಳಿಸುವುದು
• ಸ್ನಾಯುಗಳಿಗೆ ಗಾಯವಾದರೆ ಅದಕ್ಕೆ ಶಮನ ನೀಡುವುದು.
• ವ್ಯಾಯಾಮ ವೇಳೆ ಉಂಟಾಗುವ ಗಾಯಾಳು ಸಮಸ್ಯೆ ಅಪಾಯ ಕಡಿಮೆಗೊಳಿಸುವುದು.

ತೂಕ ಕಳೆದುಕೊಳ್ಳಲು ಸ್ಟ್ರೆಚಿಂಗ್ ಪರಿಣಾಮಕಾರಿಯೇ?
ಸ್ಟ್ರೆಚಿಂಗ್ ಹಲವಾರು ರೀತಿಯ ಚಲನೆಗಳನ್ನು ಒಳಗೊಂಡಿದೆಯಾದರೂ ಇದು ಕ್ಯಾಲರಿ ದಹಿಸುವುದು ತುಂಬಾ ಕಡಿಮೆ. ತೂಕ ಕಳೆದುಕೊಳ್ಳಲು ಸ್ಟ್ರೆಚಿಂಗ್ ನೆರವಾಗುವುದಿಲ್ಲ. ಆದರೆ ದೇಹವನ್ನು ವ್ಯಾಯಾಮಕ್ಕೆ ಸಜ್ಜುಗೊಳಿಸಲು ಇದು ನೆರವಾಗುವುದು.

ಸ್ಟ್ರೆಚಿಂಗ್ ವೇಳೆ ದಹಿಸುವ ಕ್ಯಾಲರಿ
ನೀವು ಸುಮ್ಮನೆ ಕುಳಿತುಕೊಂಡಿರುವಾಗ ದೇಹವು ಕ್ಯಾಲರಿ ದಹಿಸುವುದಿಲ್ಲ. ಅದೇ ದೈಹಿಕ ಅಭ್ಯಾಸದಲ್ಲಿ ತೊಡಗಿದಾಗ ಕ್ಯಾಲರಿ ದಹಿಸಲ್ಪಡುವುದು. ಉದಾಹರಣೆಗೆ 72 ಕೆಜಿ ತೂಕವಿರುವ ವ್ಯಕ್ತಿಯೊಬ್ಬ 30 ನಿಮಿ ಕಾಲ ಸ್ಟ್ರೆಚಿಂಗ್ ಮಾಡಿದರೆ ಆತ 144 ಕ್ಯಾಲರಿ ದಹಿಸುವನು. ಬೇರೆ ಯಾವುದೇ ದೈಹಿಕ ಚಟುವಟಿಕೆಯಿಂದ ದಹಿಸುವಂತಹ ಕ್ಯಾಲರಿಗಿಂತ ಇದು ತುಂಬಾ ಕಡಿಮೆಯಾಗಿದೆ. ಏರೋಬಿಕ್ಸ್ ಮಾಡಿದರೆ ಆಗ ಆತ 254 ಕ್ಯಾಲರಿ ದಹಿಸಬಹುದು. ಇದರಿಂದ ಸ್ಟ್ರೆಚಿಂಗ್ ಕ್ಯಾಲರಿ ದಹಿಸಲು ಪರಿಣಾಮಕಾರಿಯಲ್ಲವೆಂದು ಸಾಬೀತಾಗಿದೆ.

ಇನ್ನು ರಾತ್ರಿ ಊಟ ಲಘುವಾಗಿರಲಿ
ರಾತ್ರಿ ನಾವು ಮಲಗಿದ ಬಳಿಕ ಹಲವು ಅನೈಚ್ಛಿಕ ಚಟುವಟಿಕೆಗಳು ನಡೆಯುತ್ತವೆ. ದಿನದ ಆಹಾರವನ್ನು ಪೂರ್ಣವಾಗಿ ಜೀರ್ಣಿಸಿ ಅದರಲ್ಲಿರುವ ಹೆಚ್ಚಿನ ಪೋಷಕಾಂಶಗಳನ್ನು ಕೊಬ್ಬಾಗಿ ಪರಿವರ್ತಿಸಿ ಶೇಖರಿಸಿಡುವ ಕಾರ್ಯವೂ ಒಂದು. ಒಂದು ವೇಳೆ ರಾತ್ರಿ ಊಟ ಭಾರಿಯಾಗಿದ್ದರೆ ಭಾರೀ ಪ್ರಮಾಣದಲ್ಲಿ ಪೋಷಕಾಂಶಗಳೂ ಲಭ್ಯವಾಗಿ ಹೆಚ್ಚಿನ ಕೊಬ್ಬು ಶೇಖರವಾಗುತ್ತದೆ. ಬದಲಿಗೆ ನಾರು ಹೆಚ್ಚಿರುವ ಬೇಯಿಸಿದ ತರಕಾರಿ ಹಾಗೂ ಹಣ್ಣು ಹಂಪಲು ರಾತ್ರಿ ಊಟಕ್ಕೆ ಸೂಕ್ತವಾಗಿದೆ. ಊಟದ ಬಳಿಕ ಕೊಂಚ ನಡೆಯುವುದೂ ಆರೋಗ್ಯಕ್ಕೆ ಒಳ್ಳೆಯದು.

ಹಣ್ಣುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ
ನೀರಿನ ಅಂಶದಿಂದ ಕೂಡಿದ ಹಣ್ಣುಗಳು ನಿಮ್ಮ ತೂಕವನ್ನು ಇಳಿಸಿಕೊಳ್ಳುವ ಪ್ರಕ್ರಿಯೆಯನ್ನು ವೇಗ ಮಾಡಬೇಕೆಂದರೆ, ನೀರಿನ ಅಂಶದಿಂದ ಕೂಡಿದ ಆಹಾರಗಳನ್ನು ಸೇವಿಸಬೇಕು. ಅದರಲ್ಲಿಯೂ ಸಿಟ್ರಸ್ ಹಣ್ಣುಗಳಲ್ಲಿ ನೀರಿನಂಶವು ಅಧಿಕ ಪ್ರಮಾಣದಲ್ಲಿರುತ್ತದೆ. ಜೊತೆಗೆ ಈ ಹಣ್ಣುಗಳಲ್ಲಿ ಕ್ಯಾಲೋರಿಗಳು ಸಹ ಕಡಿಮೆ ಪ್ರಮಾಣದಲ್ಲಿರುತ್ತವೆ. ಇದಕ್ಕೂ ಮೇಲಾಗಿ ಸಿಟ್ರಸ್ ಹಣ್ಣುಗಳಲ್ಲಿ, ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುತ್ತದೆ. ಅದು ಕಣ್ಣು ಮತ್ತು ತ್ವಚೆಗೆ ಒಳ್ಳೆಯ ಪೋಷಕಾಂಶಗಳನ್ನು ನೀಡುತ್ತದೆ.

ಜ೦ಕ್ ಫುಡ್ ಆಹಾರಪದಾರ್ಥಗಳ ಸೇವನೆಯಿಂದ ದೂರವಿರಿ
ಜ೦ಕ್ ಫುಡ್‌ಗಳು ಸ೦ಸ್ಕರಿತ ಆಹಾರಪದಾರ್ಥಗಳ ವರ್ಗಕ್ಕೆ ಸೇರಿದವುಗಳಾಗಿದ್ದು, ಅವುಗಳಲ್ಲಿ ಬರೀ ಕ್ಯಾಲರಿಗಳಲ್ಲದೇ ಬೇರೇನೂ ಇರುವುದಿಲ್ಲ. ಜೇನುತುಪ್ಪವನ್ನೊಳಗೊ೦ಡ ಆಹಾರಕ್ರಮದ ಸ೦ಪೂರ್ಣ ಲಾಭವನ್ನು ಪಡೆದುಕೊಳ್ಳುವ೦ತಾಗಲು ಜ೦ಕ್ ಫುಡ್ ಗಳ ಸೇವನೆಯನ್ನು ತ್ಯಜಿಸಿರಿ.

ತೂಕ ಕಳೆದುಕೊಳ್ಳಲು ಒಳ್ಳೆಯ ವ್ಯಾಯಾಮ
ತೂಕ ಕಳೆದುಕೊಳ್ಳಲು ಸ್ಟ್ರೆಚಿಂಗ್ ನೆರವಾಗದೆ ಇದ್ದರೆ ಬೇರೆ ಯಾವ ವ್ಯಾಯಾಮವು ತೂಕ ಕಳೆದುಕೊಳ್ಳಲು ನೆರವಾಗುವುದು? ನಿಮಗೆ ತೂಕ ಕಳೆದುಕೊಳ್ಳಬೇಕೆಂದು ಆಸೆಯಿದ್ದರೆ ಆಗ ಏರೋಬಿಕ್ಸ್ ಅಥವಾ ಬಲಗೊಳಿಸುವ ವ್ಯಾಯಾಮ ಮಾಡಿ. ಇದರಿಂದ ತೂಕ ಕಳೆದುಕೊಳ್ಳಲು ನೆರವಾಗುವುದು ಮಾತ್ರವಲ್ಲದೆ ಸ್ನಾಯುಗಳು ಚಟುವಟಿಕೆ ಹೆಚ್ಚು ಮಾಡಿ, ದೇಹ ಕ್ಯಾಲರಿ ದಹಿಸುವಂತೆ ಮಾಡುವುದು. ತೂಕ ಕಳೆದುಕೊಳ್ಳಬೇಕೆಂದಿದ್ದರೆ ನೀವು ಮಧ್ಯಮದಿಂದ ತೀವ್ರ ಸ್ವರೂಪದಲ್ಲಿರುವ ಏರೋಬಿಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ವಾರದಲ್ಲಿ ಮೂರು ಗಂಟೆಗಳ ಕಾಲ ನಡಿಗೆ ಅಥವಾ ಈಜು ಮಾಡಿದರೆ ಒಳ್ಳೆಯದು.

ಜಾಗಿಂಗ್ ಅಥವಾ ಓಡುವುದರಿಂದಲೂ ತೂಕ ಕಳೆದುಕೊಳ್ಳಬಹುದು. ವಾರದಲ್ಲಿ ಅರ್ಧ ಗಂಟೆ ಕಾಲ ಹೀಗೆ ಮಾಡಿ. ಇದರೊಂದಿಗೆ ವಾರದಲ್ಲಿ ಎರಡು ಸಲ ಬಲಗೊಳಿಸುವ ವ್ಯಾಯಾಮ ಮಾಡಿ. ಸೈಕ್ಲಿಂಗ್, ಈಜು ಮತ್ತು ಓಡುವುದು ಅತ್ಯುತ್ತಮವಾದ ಏರೋಬಿಕ್ಸ್ ವ್ಯಾಯಾಮಗಳು. ಇದು ಕೊಬ್ಬು ಕರಗಿಸಿ, ಕ್ಯಾಲರಿ ಕಡಿಮೆ ಸೇವಿಸುವಂತೆ ಮಾಡುವುದು.

ಕೊನೇ ಮಾತು
ಸ್ಟ್ರೆಚಿಂಗ್ ನ್ನು ಕೇವಲ ವ್ಯಾಯಾಮದ ಮೊದಲು ಮಾಡಬಹುದು. ಇದು ತೂಕ ಇಳಿಸುವಂತಹ ವ್ಯಾಯಾಮವಲ್ಲ. ಇದು ಹಲವಾರು ರೀತಿಯ ವ್ಯಾಯಾಮಗಳಿಗೆ ಒಂದು ಒಳ್ಳೆಯ ತಯಾರಿ ವ್ಯಾಯಾಮ. ಇದರಿಂದ ಕ್ಯಾಲರಿ ದಹಿಸದು. ಸ್ಟ್ರೆಚಿಂಗ್ ನಿಂದ ಕೊಬ್ಬು ಕರಗುವುದಾದರೂ ಇದು ಬೇರೆ ವ್ಯಾಯಾಮಗಳಿಗೆ ಹೋಲಿಸಿದರೆ ನಗಣ್ಯ ವೆನ್ನಬಹುದು. ಯಾವುದೇ ರೀತಿಯ ವ್ಯಾಯಾಮ ಮಾಡುವ ಮೊದಲು ನೀವು ಸ್ಟ್ರೆಚಿಂಗ್ ಮಾಡಿ. ನಿಮ್ಮ ಆರೋಗ್ಯ, ಚಟುವಟಿಕೆ ಹಾಗೂ ಫಿಟ್ ಆಗಿ ಇಡಲು ಇದು ನೆರವಾಗುವುದು.

ಸ್ಟ್ರೆಚಿಂಗ್ ಮಾಡುವ ವೇಳೆ ಪಾಲಿಸಬೇಕಾದ ನಿಯಮಗಳು
*ಸ್ನಾಯುಗಳನ್ನು ಬಡಿದೆಬ್ಬಿಸಲು ನೀವು ಐದು ನಿಮಿಷ ಕಾಲ ನಡೆಯಿರಿ. ಇದರಿಂದ ಸ್ಟ್ರೆಚಿಂಗ್ ಮಾಡುವ ವೇಳೆ ಸ್ನಾಯುವಿನ ಗಾಯಾಳು ಸಮಸ್ಯೆ ಕಡಿಮೆಯಾಗುವುದು.
* ಸ್ಟ್ರೆಚಿಂಗ್ ಮಾಡುವಾಗ ಕೆಲವು ಪ್ರಮುಖ ಸ್ನಾಯುಗಳಾದ ಬೆನ್ನಿನ ಕೆಳಭಾಗ, ಕುತ್ತಿಗೆ, ಭುಜ, ತೊಡೆ ಮತ್ತಿತರ ಭಾಗಗಳ ಕಡೆ ಗಮನಹರಿಸಿ. 30 ಸೆಕೆಂಡುಗಳ ಕಾಲ ಸ್ಟ್ರೆಚಿಂಗ್ ನಲ್ಲಿರಿ. ಇದನ್ನು ಮತ್ತೆ ದೇಹದ ಎರಡೂ ಭಾಗಗಳಿಗೆ ವಿಸ್ತರಿಸಿ.
*ವ್ಯಾಯಾಮದ ವೇಳೆ ಬಲ ಬೀಳುವಂತಹ ಸ್ನಾಯುಗಳ ಬಗ್ಗೆ ನೀವು ಸ್ಟ್ರೆಚಿಂಗ್ ವೇಳೆ ಗಮನಹರಿಸಬೇಕು. ಉದಾಹರಣೆಗೆ ನೀವು ಸೈಕಲ್ ತುಳಿಯುವುದಾದರೆ ತೊಡೆ, ಕಾಲಿನ ಭಾಗದ ಕಡೆ ಗಮನಹರಿಸಿ.
* ನಿಮಗೆ ಗಾಯಾಳು ಸಮಸ್ಯೆಯಿದ್ದರೆ ಆಗ ನಿಮ್ಮ ಸಮಸ್ಯೆಯು ಮತ್ತಷ್ಟು ಹೆಚ್ಚಾಗಬಹುದು. ಇದರಿಂದ ನೀವು ವೈದ್ಯರು ಅಥವಾ ತಜ್ಞರನ್ನು ಭೇಟಿಯಾಗಿ ಸ್ಟ್ರೆಚಿಂಗ್ ಮಾಡಿ.
* ನಿಮ್ಮ ಉದ್ದೇಶ ತೂಕ ಕಳೆದುಕೊಳ್ಳುವುದು ಎಂದಿದ್ದರೆ ಆಗ ನೀವು ವಾರದಲ್ಲಿ 3-5 ಸಲ ಏರೋಬಿಕ್ಸ್ ಮಾಡಿ, ಎರಡು ಸಲ ಸ್ನಾಯುಗಳ ವ್ಯಾಯಾಮ ಮಾಡಿ. ಪ್ರತಿನಿತ್ಯ ಸ್ಟ್ರೆಚಿಂಗ್ ಮಾಡಿ.

English summary

Can Stretching Help You To Lose Weight?

Stretching is usually recommended before any exercise, as it helps loosen and warm up your muscles, thereby reducing the risk of straining when exercising. Whether you plan to lift weights, take a walk, or do bicycling, setting aside a few minutes to stretching is effective in improving your flexibility for the activity that you plan, so as to prevent any injury.
X
Desktop Bottom Promotion