For Quick Alerts
ALLOW NOTIFICATIONS  
For Daily Alerts

ದೇಹದ ತೂಕ ಇಳಿಸಿಕೊಳ್ಳಲು ಐದು ಬಗೆಯ ಹಸಿರು ಜ್ಯೂಸ್‌ಗಳು!

By Hemanth
|

ದೇಹದಲ್ಲಿ ಬೆಳೆದಿರುವ ಅತಿಯಾದ ತೂಕ ಕಡಿಮೆ ಮಾಡಿಕೊಂಡು ಫಿಟ್ ಆಗಿರುವುದು ಪ್ರತಿಯೊಬ್ಬರ ಕನಸು. ಇದಕ್ಕಾಗಿ ಆಹಾರ ಪಥ್ಯ ಕ್ರಮವನ್ನು ಅನುಸರಿಸಿಕೊಂಡು ಹೋಗುವರು. ಕೆಲವರು ಡಯಾಟಿಷನ್ ಬಳಿಗೆ ಹೋಗಿ ಅವರಿಂದ ಸಲಹೆಗಳನ್ನು ಪಡೆದುಕೊಂಡು ತೂಕ ಇಳಿಸಿಕೊಳ್ಳುವ ಕಾರ್ಯದಲ್ಲಿ ತೊಡಗುವರು. ಇದಕ್ಕಾಗಿ ಅವರು ಆಹಾರ ಪಥ್ಯವನ್ನು ಸೂಚಿಸಿರುವರು. ಇದರಲ್ಲಿ ಕೆಲವು ಜ್ಯೂಸ್ ಗಳು, ತರಕಾರಿಗಳು, ಹಣ್ಣುಗಳು ಸೇರಿರುವುದು. ಇವುಗಳಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ನಿಮ್ಮ ದೇಹವನ್ನು ಶುದ್ಧೀಕರಿಸಿ, ತೂಕ ಇಳಿಸಿಕೊಳ್ಳಲು ನೆರವಾಗುವುದು. ಇದು ಚಯಾಪಚಯ ಕ್ರಿಯೆ ಹೆಚ್ಚಿಸಿ, ಜೀರ್ಣಕ್ರಿಯೆ ಸುಧಾರಿಸುವುದು.

ಈ ಲೇಖನದಲ್ಲಿ ತೂಕ ಕಳೆದುಕೊಳ್ಳಲು ಕೆಲವು ಅತ್ಯುತ್ತಮವಾಗಿರುವ ಹಸಿರು ಜ್ಯೂಸ್ ಗಳನ್ನು ಹೇಳಲಾಗಿದೆ. ಈ ಜ್ಯೂಸ್ ಗಳು ಮೂತ್ರವರ್ಧಕ ಗುಣಗಳು ಹಾಗೂ ಕೊಬ್ಬು ಕರಗಿಸುವ ಗುಣ ಹೊಂದಿದೆ. ಇದು ದ್ರವ ಶೇಖರಣೆಗೆ ಹೇಳಿ ಮಾಡಿಸಿರುವ ಜ್ಯೂಸಗಳಾಗಿವೆ.

homemade juice recipes for weight loss

1.ಅನಾನಸು, ಸೌತೆಕಾಯಿ ಮತ್ತು ಪಾಲಕ್

ಪಾಲಕವನ್ನು ಈ ಜ್ಯೂಸ್ ನಲ್ಲಿ ಸೇರಿಸಿರುವ ಉದ್ದೇಶವೆಂದರೆ ಇದರಲ್ಲಿ ಉನ್ನತ ಮಟ್ಟದ ಪೋಷಕಾಂಶಗಳಿವೆ ಮತ್ತು ಕ್ಯಾಲರಿ ಕಡಿಮೆಯಿದೆ. ಇದು ತೂಕ ಕಳೆದುಕೊಳ್ಳಲು ಪರಿಣಾಮಕಾರಿ. ಈ ಹಸಿರೆಳೆ ತರಕಾರಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಫಾಲಟೆ, ಮೆಗ್ನಿಶಿಯಂ ಮತ್ತು ಇತರ ವಿಟಮಿನ್ ಗಳಿವೆ. ಅನಾನಸು ಮತ್ತು ಸೌತೆಕಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ಮತ್ತು ಜೀರ್ಣಕ್ರಿಯೆ ಕಿಣ್ವಗಳು ಇವೆ. ಇದು ಅತಿಯಾದ ಕೊಬ್ಬು ಮತ್ತು ದ್ರವವು ಕರಗುವಂತೆ ಮಾಡುವುದು. ಈ ಜ್ಯೂಸ್ ನ ಇತರ ಲಾಭಗಳೆಂದರೆ ಉರಿಯೂತ ವಿರುದ್ಧ ಹೋರಾಡುವುದು ಮತ್ತು ಚಯಾಪಚಯ ಕ್ರಿಯೆ ಸುಧಾರಿಸಿ, ತೂಕ ಕಾಪಾಡಿಕೊಳ್ಳಲು ನೆರವಾಗುವುದು.

ತಯಾರಿಸುವುದು ಹೇಗೆ
ಎರಡು ತುಂಡು ಅನಾನಸು ತುಂಡರಿಸಿಕೊಳ್ಳಿ, ½ ಸೌತೆಕಾಯಿ, 4 ಪಾಲಕ ಸೊಪ್ಪು, ½ ಸೇಬು(ರುಚಿಗಾಗಿ). ಇದೆಲ್ಲವನ್ನು ಜ್ಯೂಸರ್ ಗೆ ಹಾಕಿಕೊಂಡು ಒಂದು ಕಪ್ ನೀರು ಹಾಕಿ ಜ್ಯೂಸ್ ಮಾಡಿ. ಸೋಸಿಕೊಂಡು ಬಳಿಕ ಕುಡಿಯಿರಿ

ಕುಡಿಯುವ ವಿಧಾನ
ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿದ ಬಳಿಕ 30 ನಿಮಿಷ ಬಿಟ್ಟು ಉಪಾಹಾರ ಸೇವಿಸಿ, ವಾರದಲ್ಲಿ ಮೂರು ಸಲ ಇದನ್ನು ಕುಡಿಯಿರಿ.

2. ಕಿವಿ ಹಣ್ಣು, ಲಿಟಿಸ್ ಮತ್ತು ಪಾಲಕದ ಜ್ಯೂಸ್

ಕಿವಿ ಹಣ್ಣು, ಪಾಲಕ ಮತ್ತು ಲಿಟಿಸ್ ಸೊಪ್ಪಿನಿಂದ ಜ್ಯೂಸ್ ತಯಾರಿಸಿಕೊಂಡರೆ ಇದರಿಂದ ದೇಹಕ್ಕೆ ಅತ್ಯಧಿಕ ಮಟ್ಟದ ನಾರಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಸಿಗುವುದು. ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಇತರ ಕೆಲವು ಪ್ರಮುಖ ಪೋಷಕಾಂಶಗಳು ಇವೆ. ಇದರಲ್ಲಿ ಕಡಿಮೆ ಕ್ಯಾಲರಿ ಮತ್ತು ಅಧಿಕ ಶಕ್ತಿಯಿದೆ. ಲಿಟಿಸ್ ಮತ್ತು ಪಾಲಕವು ಕಡಿಮೆ ಕ್ಯಾಲರಿ ಹೊಂದಿದೆ. ಈ ಹಸಿರು ಜ್ಯೂಸ್ ಮೂತ್ರವರ್ಧಕ ಮತ್ತು ಶುದ್ಧೀಕರಿಸುವ ಗುಣ ಹೊಂದಿದೆ. ಇದು ವಿಷಕಾರಿ ಅಂಶ ಮತ್ತು ದ್ರವ ತೆಗೆಯುವುದು.

ತಯಾರಿಸುವ ವಿಧಾನ
ಒಂದು ಕಿವಿ ಹಣ್ಣು ಕತ್ತರಿಸಿ, ಐದು ಪಾಲಕ ಎಲೆಗಳು, 3 ಲಿಟಿಸ್ ಎಲೆಗಳು ಮತ್ತು ಒಂದು ಕಪ್ ನೀರು ಹಾಕಿ ಜ್ಯೂಸರ್ ಗೆ ಹಾಕಿ. ಇದನ್ನು ಸೋಸದೆ ಹಾಗೆ ಕುಡಿಯಿರಿ. ಕುಡಿಯುವ ವಿಧಾನ: ವಾರದಲ್ಲಿ ಮೂರು ದಿನಗಳ ಕಾಲ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿಯಿರಿ.

3. ಸೌತೆಕಾಯಿ, ಸೆಲರಿ ಮತ್ತು ಹಸಿರು ಸೇಬಿನ ಜ್ಯೂಸ್

ಈ ಜ್ಯೂಸ್ ನಲ್ಲಿ ತುಂಬಾ ಕಡಿಮೆ ಕ್ಯಾಲರಿ ಇದೆ. ಆದರೆ ಅಧಿಕ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು, ವಿಟಮಿನ್ ಗಳು ಮತ್ತು ಖನಿಜಾಂಶಗಳು ಇವೆ. ಒಂದು ಕಪ್ ಸೌತೆಕಾಯಿಯಲ್ಲಿ 16 ಕ್ಯಾಲರಿ, ವಿಟಮಿನ್ ಕೆ, ವಿಟಮಿನ್ ಸಿ, ಪೊಟಾಶಿಯಂ, ಮೆಗ್ನಿಶಿಯಂ ಮತ್ತು ಇತರ ಪ್ರಮುಖ ಪೋಷಕಾಂಶಗಳು ಇವೆ. ಹಸಿರುವ ಸೇಬಿನಲ್ಲಿ ಜೀರ್ಣಗೊಳ್ಳದ ಅಂಶಗಳು ಇವೆ. ಇದು ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ನಿರ್ಮಾಣ ಮಾಡಿ ತೂಕ ಕಳೆದುಕೊಳ್ಳಲು ಸಹಕರಿಸುವುದು. ಕರುಳು ಕೊಬ್ಬನ್ನು ಹೀರಿಕೊಳ್ಳುವುದನ್ನು ಈ ಜ್ಯೂಸ್ ತಗ್ಗಿಸಲಿದೆ ಮತ್ತು ಚಯಾಪಚಯ ಕ್ರಿಯೆ ಉತ್ತೇಜಿಸಿ, ಸುಲಭವಾಗಿ ತೂಕ ಕಳೆದುಕೊಳ್ಳಲು ನೆರವಾಗುವುದು.

ತಯಾರಿಸುವುದು ಹೇಗೆ
½ ಕಪ್ ಸೌತೆಕಾಯಿ ಕತ್ತರಿಸಿಕೊಳ್ಳಿ, 3 ಸೆಲೆರಿ ದಳಗಳು, 1 ಹಸಿರು ಸೇಬನ್ನು ಒಂದು ಕಪ್ ನೀರಿನೊಂದಿಗೆ ಜ್ಯೂಸರ್ ಗೆ ಹಾಕಿಕೊಂಡು ಜ್ಯೂಸ್ ತಯಾರಿಸಿ.

ಕುಡಿಯುವ ವಿಧಾನ
ಈ ಜ್ಯೂಸ್ ನ್ನು ಬೆಳಗ್ಗೆ ಖಾಲಿ ಹೊಟ್ಟೆ ಮತ್ತು ಮಧ್ಯಾಹ್ನ ಕುಡಿಯಬೇಕು. ವಾರದಲ್ಲಿ ಎರಡು ಅಥವಾ ಮೂರು ಸಲ ಕುಡಿಯಿರಿ.

4. ಕ್ಯಾರೆಟ್, ಲಿಟಿಸ್ ಮತ್ತು ಬ್ರೊಕೊಲಿ ಜ್ಯೂಸ್

ಕ್ಯಾರೆಟ್ ನಲ್ಲಿ ಕಡಿಮೆ ಕ್ಯಾಲರಿಯಿದ್ದು, ಕೇವಲ 50 ಕ್ಯಾಲರಿ ಮಾತ್ರ ಇದೆ. ಇದರಲ್ಲಿ ಇರುವಂತಹ ವಿಟಮಿನ್ ಎ ಯು ದೇಹದಲ್ಲಿ ರೆಡಿನಾಯ್ಡ್ ಆಗಿ ಪರಿವರ್ತನೆಗೊಂಡು ಕೊಬ್ಬಿನ ಕೋಸಗಳು ಮತ್ತು ಪದರಗಳೊಂದಿಗೆ ಕೆಲಸ ಮಾಡುವುದು. ಲಿಟಿಸ್ ಮತ್ತು ಬ್ರೊಕೊಲಿಯಲ್ಲೂ ಕ್ಯಾಲರಿ ಕಡಿಮೆ ಇದೆ. ಇದು ದೇಹವನ್ನು ಶುದ್ಧೀಕರಿಸಿಕೊಂಡು, ನಿಮ್ಮನ್ನು ಫಿಟ್ ಆಗಿಡುವುದು.

ತಯಾರಿಸುವ ವಿಧಾನ
½ ಕಪ್ ಕ್ಯಾರೆಟ್, 3 ಲಿಟಿಸ್ ಎಲೆಗಳು, 1 ಬ್ರೊಕೊಲಿ ಸ್ಪ್ರಿಂಗ್, 2 ಸೆಲೆರಿ ದಳಗಳನ್ನು ಒಂದು ಕಪ್ ಕಿತ್ತಳೆ ಜ್ಯೂಸ್ ನೊಂದಿಗೆ ಜ್ಯೂಸರ್ ಗೆ ಹಾಕಿಕೊಂಡು ಜ್ಯೂಸ್ ತಯಾರಿಸಿ.

ಕುಡಿಯುವ ವಿಧಾನ
ಈ ರುಚಿಕರವಾದ ಜ್ಯುಸ್ ನ್ನು ನೀವು ಉಪಾಹಾರಕ್ಕೆ ಮೊದಲು ಅಥವಾ ಮಧ್ಯಾಹ್ನ ಸೇವಿಸಿ. ಈ ಜ್ಯೂಸ್ ನ್ನು ವಾರದಲ್ಲಿ ಎರಡು ದಿನ ಕುಡಿಯಿರಿ.

5. ಲಿಂಬೆ, ಕೊತ್ತಂಬರಿ, ಪಾಲಕ್

ಈ ಜ್ಯೂಸ್ ಮೂತ್ರವರ್ಧಕವಾಗಿದ್ದು, ಶುದ್ಧೀಕರಿಸುವ ಮತ್ತು ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ ಮತ್ತು ತೂಕ ಕಳೆದುಕೊಳ್ಳಲು ಇದು ಪರಿಣಾಮಕಾರಿಯಾಗಿದೆ. ಲಿಂಬೆಯು ಕ್ಯಾಲರಿ ಕಡಿಮೆ ಮಾಡುವುದು ಮತ್ತು ತೂಕ ಕಳೆದುಕೊಳ್ಳಲು ಸಹಕಾರಿ ಮತ್ತು ಕೊತ್ತಂಬರಿ ಜತೆಗೆ ಇದು ಚಯಾಪಚಯ ಕ್ರಿಯೆ ವೃದ್ಧಿಸುವುದು. ಈ ಮೂರು ಸಾಮಗ್ರಿಗಳು ಪ್ರತಿರೋಧಕ ಶಕ್ತಿ ವೃದ್ಧಿಸುವುದು.

ತಯಾರಿಸುವ ವಿಧಾನ:
ಐದು ಕೊತ್ತಂಬರಿ ಗಿಡ, 6 ಪಾಲಕ ಎಲೆಗಳು, 1 ಸೆಲೆರಿ ದಳ, ½ ಕಪ್ ಸೌತೆಕಾಯಿ, 1 ಚಮಚ ತುರಿದ ಶುಂಠಿ(ರುಚಿಗೋಸ್ಕರ) ಮತ್ತು ಒಂದು ಲಿಂಬೆಯ ರಸ. ಇದನ್ನು ಒಂದು ಕಪ್ ನೀರಿನೊಂದಿಗೆ ಜ್ಯೂಸರ್ ಗೆ ಹಾಕಿ ಜ್ಯೂಸ್ ಮಾಡಿಕೊಳ್ಳಿ.

ಕುಡಿಯುವ ವಿಧಾನ
ಖಾಲಿ ಹೊಟ್ಟೆಯಲ್ಲಿ ವಾರದಲ್ಲಿ ಮೂರು ಸಲ ಇದನ್ನು ಕುಡಿಯಿರಿ. ಈ ಹಸಿರು ಜ್ಯೂಸ್ ಗಳನ್ನು ಬಳಸಿ ನೋಡಿ ಮತ್ತು ನಿಮಗೆ ಅದ್ಭುತವಾದ ಫಲಿತಾಂಶ ಖಂಡಿತವಾಗಿಯೂ ಸಿಗುವುದು.

English summary

5 Green Juice Recipes For Weight Loss

Have you just been advised by your dietitian to lose weight because of some of your health problems? He or she may have given you a diet chart to follow, but apart from that you need to include juices in your diet too, specially green juices that will aid in weight loss. Green juices contain fruits and vegetables with massive antioxidants which will not only cleanse your body but also help in losing weight too. In addition, it will help boost your metabolism, improve digestion, and so on.
Story first published: Thursday, July 26, 2018, 18:29 [IST]
X
Desktop Bottom Promotion