Just In
- 1 hr ago
ಆಫ್ರಿಕಾ ಸುಂದರಿ ಮುಡಿಗೇರಿದ 2019 ವಿಶ್ವ ಸುಂದರಿ ಪಟ್ಟ
- 2 hrs ago
ಹೇರ್ ಡೈ ಬಳಸಿದರೆ ಬರುವ 6 ಅಪಾಯಕಾರಿ ಕಾಯಿಲೆಗಳು
- 3 hrs ago
ಪಾರ್ಟಿ ಲುಕ್ಗೆ ಶಿಮ್ಮರಿ ಐ ಮೇಕಪ್ ಹೀಗಿರಲಿ
- 9 hrs ago
ಸೋಮವಾರದ ದಿನ ಭವಿಷ್ಯ (9-12-2019)
Don't Miss
- News
ಚಿಕ್ಕಬಳ್ಳಾಪುರ; ಬಿಜೆಪಿಯ ಡಾ.ಕೆ.ಸುಧಾಕರ್ ಗೆಲುವಿನ ನಗೆ
- Finance
ಮಾರುಕಟ್ಟೆಯಲ್ಲಿ ಈರುಳ್ಳಿ ಡಬಲ್ ಸೆಂಚುರಿ; ಕೌನ್ ಬಗೇನಾ ಕೋಟ್ಯಧಿಪತಿ?
- Education
ECIL Recruitment 2019: 64 ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ವಾಟ್ಸಪ್ ಚಾಟ್ ಅನ್ನು PDF ಫಾರ್ಮೇಟ್ಗೆ ಕನ್ವರ್ಟ್ ಮಾಡುವುದು ಹೇಗೆ ಗೊತ್ತಾ?
- Movies
28 ದಿನದ ಬಳಿಕ ಆಸ್ಪತ್ರೆಯಿಂದ ಮನೆಗೆ ಮರಳಿದ ಲತಾ ಮಂಗೇಶ್ಕರ್
- Automobiles
ವಿಶೇಷವಾಗಿ ಮಾಡಿಫೈಗೊಂಡ ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್
- Sports
ಹೀಗೆ ಫೀಲ್ಡಿಂಗ್ ಮಾಡಿದ್ರೆ ಯಾವ ಮೊತ್ತವೂ ಎದುರಾಳಿಗೆ ಸಾಕಾಗದು!; ಕೊಹ್ಲಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಹಾಗಾದರೆ ಈ ಯೋಗಾಸನಗಳನ್ನು ಮಾಡಿ
ವೇಗವಾದ ಜೀವನದಲ್ಲಿ ನಮ್ಮ ದೇಹಕ್ಕೆ ವಿಶ್ರಾಂತಿ ನೀಡಲು ಸಮಯವಿರಲ್ಲ. ಮನೆಯಿಂದ ಬೆಳಗ್ಗೆ ಏಳು ಗಂಟೆಗೆ ಹೊರಟರೆ ಮತ್ತೆ ವಾಪಸ್ಸು ಮನೆಗೆ ತಲುಪುವಾಗ ರಾತ್ರಿ 11 ಗಂಟೆಯಾಗಿರುತ್ತದೆ. ಇಂತಹ ಸಮಯದಲ್ಲಿ ದೇಹವು ತುಂಬಾ ಬಳಲಿ ಬೆಂಡಾಗಿರುವುದು. ಈ ರೀತಿಯ ಜೀವನ ಸಾಗಿಸುವವರಲ್ಲಿ ನಿಮಗೆ ಸಮಯವಿದ್ದರೆ ಏನು ಮಾಡುತ್ತೀರಿ ಎಂದು ಕೇಳಿದರೆ ಅವರು ಹೇಳುವ ಉತ್ತರ ನಿದ್ರಿಸುವುದು.
ಮೊಬೈಲ್ನಲ್ಲೇ ಹೆಚ್ಚಿನ ಸಮಯ ಕಳೆಯುವ ಕಾರಣ ನಿದ್ರಿಸುವ ತನಕ ನಾವು ಅದನ್ನು ಬಳಸುತ್ತಾ ಇರುತ್ತೇವೆ. ನಿದ್ರೆ ಬಂದ ಬಳಿಕ ಮೊಬೈಲ್ ಕೈಯಲ್ಲೇ ಇರುತ್ತದೆ. ಈ ರೀತಿಯಾದರೆ ಸರಿಯಾದ ನಿದ್ರೆ ಖಂಡಿತವಾಗಿಯೂ ಬರಲ್ಲ. ಕೆಲವೊಂದು ಕಾರಣಗಳಿಂದ ನಿಮಗೆ ನಿದ್ರಾಹೀನತೆ ಉಂಟಾಗಬಹುದು. ಉತ್ತಮ ನಿದ್ರೆ ಪಡೆಯಲು ಕೆಲವೊಂದು ಸರಳ ಯೋಗಾಸನಗಳ ಬಗ್ಗೆ ತಿಳಿಸಲಿದ್ದೇವೆ. ಇದನ್ನು ಓದಿಕೊಂಡು ನಿದ್ರಾಹೀನತೆ ನಿವಾರಿಸಿ.....
ಎ.ಕೆ.ಎ. ವಿಪರೀತ ಕರನಿಯಾಸನ
ನೆಲ ಅಥವಾ ಹಾಸಿಗೆ ಮೇಲೆ ಮಲಗಿಕೊಂಡು ಮೇಲ್ಛಾವಣಿ ನೋಡುತ್ತಾ ಇರಿ. ಕಾಲನ್ನು ಮೇಲಕ್ಕೆ ಎತ್ತಿಕೊಳ್ಳಿ. ಇದು ನೆಲಕ್ಕೆ ಲಂಬವಾಗಿರಲಿ. ಅಂಗೈಯನ್ನು ನೆಲಕ್ಕೆ ತಾಗುವಂತೆ ಎರಡು ಕೈಗಳನ್ನು ಎರಡು ಬದಿಯಲ್ಲಿ ನೇರವಾಗಿ ಇಟ್ಟುಕೊಳ್ಳಿ. ನಿಧಾನವಾಗಿ ಉಸಿರಾಡಿ. ಇದು ದೇಹದಲ್ಲಿ ರಕ್ತಸಂಚಾರ ಉತ್ತಮಪಡಿಸಲು ಒಳ್ಳೆಯ ಭಂಗಿ. ಹೆಚ್ಚು ಪ್ರವಾಸ ಮಾಡುವವರು ಮತ್ತು ದಿನವಿಡಿ ಕುಳಿತುಕೊಂಡು ಕೆಲಸ ಮಾಡುವವರು 1-2 ನಿಮಿಷ ಕಾಲ ಇದನ್ನು ಮಾಡಿ.
ಎ.ಕೆ.ಎ ಭರಧ್ವಜಾಸನ
ಇದನ್ನು ಮಾಡಲು ನೆಲ ಅಥವಾ ಹಾಸಿಗೆ ಮೇಲೆ ಕುಳಿತುಕೊಳ್ಳಿ. ಕಾಲುಗಳನ್ನು ಮಡಚಿಕೊಳ್ಳಿ. ಇದರ ಬಳಿಕ ಬಲದ ಕೈಯನ್ನು ಎಡ ಮೊಣಕಾಲಿನ ಮೇಲೆ ಇಡಿ ದೇಹದ ಮೇಲಿನ ಭಾಗವನ್ನು ಎಡಭಾಗಕ್ಕೆ ತಿರುಗಿಸಿ ಭುಜದ ಕಡೆ ದೃಷ್ಟಿಯಿರಲಿ. ಒಂದು ನಿಮಿಷ ಕಾಲ ಇದೇ ಭಂಗಿಯಲ್ಲಿರಿ. ಇದೇ ರೀತಿ ಬಲದ ಬದಿಗೆ ತಿರುಗಿ. ಎಡದ ಕೈ ಬಲ ಮೊಣಕಾಲ ಮೇಲಿರಲಿ.
ಎ.ಕೆ.ಎ. ಸುಪ್ತ ಬುದ್ಧ ಕೋನಾಸನ
ಬೆನ್ನು ಹಾಸಿಗೆಗೆ ಸಂಪೂರ್ಣವಾಗಿ ತಾಗುವಂತೆ ನೆಲದ ಮೇಲೆ ಅಥವಾ ಹಾಸಿಗೆ ಮೇಲೆ ಮಲಗಿ. ಬಗ್ಗದೆ ಎರಡು ಕಾಲಿನ ಪಾದದ ಕೆಳಭಾಗವನ್ನು ಒಂದಕ್ಕೊಂದು ಸ್ಪರ್ಶಿಸಿ. ಇದು ನೀವು ನಮಸ್ತೆ ಮಾಡುವಂತಿರಬೇಕು. ತೊಡೆಸಂಧುವಿನ ತನಕ ಇದನ್ನು ತನ್ನಿ. ಆದರೆ ಹೆಚ್ಚು ಒತ್ತಡ ಹಾಕಲು ಹೋಗಬೇಡಿ. ಅಂಗೈಗಳು ನೆಲಕ್ಕೆ ತಾಗುವಂತಿರಲಿ ಅಥವಾ ಒಂದು ಕೈ ಎದೆ, ಮತ್ತೊಂದು ಕೈ ಹೊಟ್ಟೆಯ ಮೇಲಿರಲಿ. ನಿಧಾನವಾಗಿ ಉಸಿರಾಡಿ. ಇದೇ ಭಂಗಿಯಲ್ಲಿ 1-2 ನಿಮಿಷ ಕಾಲ ಹಾಗೆ ಇರಿ.
ಮಗುವಿನ ಭಂಗಿ
ಎ.ಕೆ.ಎ. ಶಿಶುಆಸನ
ಮೊಣಕಾಲನ್ನು ಮಡಚಿಕೊಂಡು ಪಾದಗಳ ನೆರವಿನಿಂದ ಕುಳಿತುಕೊಳ್ಳಿ. ಪಾದದ ಮೇಲಿನ ಸಂಪೂರ್ಣ ಭಾಗವು ಹಾಸಿಗೆಯನ್ನು ತಾಗುವಂತಿರಲಿ. ಕೈಗಳನ್ನು ತಲೆಯ ಮೇಲಕ್ಕೆ ಎತ್ತಿ ಮತ್ತು ಇವುಗಳು ಕೂಡ ಹಾಸಿಗೆಗೆ ತಾಗುವಷ್ಟು ಬಗ್ಗಿಸಿ. ಇದು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವಂತಿರಲಿ. ನಿಧಾನವಾಗಿ ಉಸಿರಾಡಿ ಮತ್ತು ಈ ಭಂಗಿಯಲ್ಲಿ ಸುಮಾರು 1-2 ನಿಮಿಷ ಕಾಲ ಇರಿ.
ಆನಂದ ಬಾಲಾಸಾನ
ಬೆನ್ನು ಹಾಸಿಗೆಗೆ ತಾಗುವಂತೆ ನೇರವಾಗಿ ಮಲಗಿಕೊಳ್ಳಿ. ನೆಲಕ್ಕೆ ಲಂಬವಾಗಿರುವಂತೆ ಕಾಲುಗಳನ್ನು ಮೇಲಕ್ಕೆತ್ತಿ. ಕೈಗಳನ್ನು ಮೊಣಕಾಲಿನ ಕೆಳಗಿಡಿ ಮತ್ತು ಮೊಣಕಾಲನ್ನು ಬಗ್ಗಿಸಿ. ಸ್ವಲ್ಪ ಹೆಚ್ಚು ಬಗ್ಗಿಕೊಂಡು ಪಾದ ಹಿಡಿಯಬಹುದು. 1-2 ನಿಮಿಷ ಕಾಲ ಹಿಂದಕ್ಕೆ ಮುಂದಕ್ಕೆ ನಿಧಾನವಾಗಿ ಸುತ್ತಿಕೊಳ್ಳಿ.
ಜಾನು ಶಿರ್ಸಾಸನ(ತಲೆಯಿಂದ ಮೊಣಕಾಲಿನವರೆಗೆ)
ಕಾಲುಗಳನ್ನು ಮುಂದಕ್ಕೆ ಚಾಚಿಕೊಂಡು ನೇರವಾಗಿ ಕುಳಿತುಕೊಳ್ಳಿ. ಬಲ ಮೊಣಕಾಲನ್ನು ಬಗ್ಗಿಸಿ ಮತ್ತು ಅದನ್ನು ಎಡ ತೊಡೆಯ ತನಕ ತನ್ನಿ. ಬಲ ಮೊಣಕಾಲು ನೆಲವನ್ನು ಸ್ಪರ್ಶಿಸಲಿ. ಉಸಿರನ್ನು ಎಳೆದುಕೊಳ್ಳಿ ಮತ್ತು ಎರಡು ಕೈಗಳನ್ನು ವಿಸ್ತಾರಗೊಳಿಸಿ. ಈಗ ಉಸಿರನ್ನು ಹೊರಗೆ ಬಿಡಿ ಮತ್ತು ಎಡ ಪಾದಗಳನ್ನು ಮುಟ್ಟಿ. ಎಡಪಾದದ ಎರಡು ಕಡೆಗೆ ನಿಮ್ಮ ಕೈಗಳನ್ನಿಡಿ. ಹೆಬ್ಬೆರಳನ್ನು ಒಂದು ನಿಮಿಷ ಹಿಡಿಯಿರಿ ಮತ್ತು ಇನ್ನೊಂದು ಕಾಲಿನಲ್ಲಿಯೂ ಇದೇ ರೀತಿ ಮಾಡಿ.
ಉತ್ತನಾಸನ(ನೇರವಾಗಿ ನಿಂತು ಬಾಗುವುದು)
ನಿಮ್ಮ ಎರಡು ಕಾಲುಗಳ ಮಧ್ಯೆ ಆರು ಇಂಚು ಸ್ಥಳಾವಕಾಶ ಇರುವಂತೆ ನಿಂತುಕೊಳ್ಳಿ. ದೇಹವನ್ನು ಬಾಗಿಸಿ ಎರಡು ಕೈಗಳಿಂದ ನಿಮ್ಮ ಕಾಲುಗಳನ್ನು ಮುಟ್ಟಿ. ಈ ಆಸನದಿಂದ ಒಳ್ಳೆಯ ನಿದ್ರೆ ಮಾತ್ರವಲ್ಲದೆ, ತಲೆನೋವು ಶಮನವಾಗುತ್ತದೆ.
ಬಾಲಾಸನ(ಮಕ್ಕಳ ಭಂಗಿ)
ಕೈಗಳನ್ನು ಮತ್ತು ಭುಜವನ್ನು ಮುಂದಕ್ಕೆ ಬಾಗಿಸಿ ಮಗುವಿನಂತೆ ಭಂಗಿ ನೀಡಿ. ನಿಮ್ಮ ಹಿಂಗಾಲಿನ ಮೇಲೆ ಪೃಷ್ಠವಿರಲಿ. ಸಾಮಾನ್ಯವಾಗಿ ಉಸಿರಾಡಿ. ಇದೇ ರೀತಿ ಕೆಲವು ಸಮಯ ಮಾಡಿ. ಉಸಿರು ಮೇಲಕ್ಕೆಳೆದುಕೊಳ್ಳಿ ಮತ್ತು ಆರಂಭದ ಸ್ಥಿತಿಗೆ ಬನ್ನಿ.
ಶವಾಸನ(ಶವದ ಭಂಗಿ)
ಇದು ಎಲ್ಲಕ್ಕಿಂತಲೂ ತುಂಬಾ ಸುಲಭ ಆಸನ. ಬೆನ್ನನ್ನು ನೆಲಕ್ಕೊರಗಿಸಿ ಕೈಗಳು ಮತ್ತು ಕಾಲುಗಳನ್ನು ಜತೆಯಾಗಿಟ್ಟುಕೊಂಡು ಶವದಂತೆ ಮಲಗಿ ಮತ್ತು ನಿಮ್ಮ ಉಸಿರಾಟದ ಕಡೆ ಗಮನಹರಿಸಿ. ನಿದ್ರೆ ಬರಲು ಇದು ಒಳ್ಳೆಯ ಆಸನ.
ಸುಪ್ತ ಬದ್ಧ ಕೋನಾಸನ
ಇದು ಒರಗು ಚಿಟ್ಟೆಯ ಆಸನ. ಬೆನ್ನನ್ನು ನೆಲಕ್ಕೊರಗಿಸಿ ಮಲಗಿ ಮತ್ತು ಕಾಲುಗಳನ್ನು ಜತೆಯಾಗಿರಿಸಿ. ಕಾಲುಗಳನ್ನು ನಿಮ್ಮ ಕೈಗಳಿಂದ ಹಿಡಿಯಿರಿ ಮತ್ತು ಇದೇ ರೀತಿ ಒಂದು ನಿಮಿಷ ಹಾಗೆ ಇರಿ.
ಹಾಲಾಸನ
ಬೆನ್ನನ್ನು ನೆಲಕ್ಕೊರಗಿಸಿ ಮಲಗಿ, ಎರಡು ಕಾಲುಗಳನ್ನು ನಿಮ್ಮ ತಲೆಯ ಮೇಲೆ ಎತ್ತಿ ಮತ್ತು ನೆಲವನ್ನು ಕಾಲಿನಿಂದ ಮುಟ್ಟಲು ಪ್ರಯತ್ನಿಸಿ. ಕೈಗಳು ನಿಮ್ಮ ಬೆನ್ನಿನ ನೆರವಿಗಿರಲಿ ಅಥವಾ ನೆಲದ ಮೇಲಿರಲಿ.
ವಿಪ್ರಿತಾ ಕರಣಿ
ಗೋಡೆಯ ವಿರುದ್ಧವಾಗಿ ಮಾಡಬೇಕಾದ ಆಸನವಿದು. ಗೋಡೆಯ ಮೇಲೆ ಕಾಲುಗಳನ್ನಿಟ್ಟು ಸುಮಾರು 5-6ರಿಂದ ಹಾಗೆ ಇರಲಿ. ಇದು ವಿಶ್ರಾಂತಿ ಪಡೆಯಲು ಮತ್ತು ಒತ್ತಡ ಕಡಿಮೆ ಮಾಡಲು ಒಳ್ಳೆಯ ಆಸನ.
ಸೂರ್ಯ ಭೇದನ
ಅಡ್ಡಕಾಲಿನಲ್ಲಿ ಕುಳಿತುಕೊಂಡು ನಿಮ್ಮ ಬಲ ಮೂಗನ್ನು ಹೆಬ್ಬೆರಳಿನಿಂದ ಹಿಡಿಯಿರಿ ಮತ್ತು ಬೆರಳುಗಳನ್ನು ವಿಸ್ತರಿಸಿ. ಬಲದ ಮೂಗಿನಿಂದ 5-10 ಸಲ ದೀರ್ಘವಾಗಿ ಉಸಿರಾಡಿ.
ಇದರಿಂದ ನಿದ್ರೆ ಸರಿಯಾಗಿ ಆಗುವುದೇ?
ಈ ಆಸನಗಳು ನಿಜವಾಗಿಯು ತುಂಬಾ ಆರಾಮ ನೀಡುವುದು. ನಿದ್ರೆ ಬರದೇ ಇದ್ದರೆ ಈ ಆಸನಗಳನ್ನು ಮಾಡಿಕೊಳ್ಳಿ. ಕೆಲವೇ ನಿಮಿಷಗಳಲ್ಲಿ ನಿಮಗೆ ನಿದ್ರೆ ಬರುವುದು.
ಇದನ್ನು ಓದಿ ನಿಮಗೆ ಖುಷಿಯಾಗಿದೆಯಾ?
ನಿಮ್ಮ ಆರೋಗ್ಯ ಮತ್ತು ಜೀವನ ಚೆನ್ನಾಗಿರಲು ಬೋಲ್ಡ್ ಸ್ಕೈ ಹಲವಾರು ರೀತಿಯ ಸಲಹೆ ಹಾಗು ಮದ್ದುಗಳನ್ನು ಸೂಚಿಸುತ್ತದೆ. ಇದನ್ನು ಓದಿ ನಿಮಗೆ ಖುಷಿಯಾಗಿದ್ದರೆ ಮತ್ತು ಲೇಖನವು ತುಂಬಾ ನೆರವಾಗಲಿದೆ ಎಂದು ಅನಿಸಿದೆ ಇತರರೊಂದಿಗೆ ಕೂಡ ಅದನ್ನು ಹಂಚಿಕೊಳ್ಳಿ.