For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳಲು ಸಿಂಪಲ್ ಟಿಪ್ಸ್-ತಿಂಗಳೊಳಗೆ ಫಲಿತಾಂಶ

By Manu
|

ಇಂದಿನ ಕಾಲದಲ್ಲಿ ತೂಕ ಇಳಿಕೆ ಎಂಬುದು ಸವಾಲಿನ ವಿಷಯವಾಗಿ ಪರಿಣಮಿಸಿದೆ. ಆಧುನಿಕ ಜೀವನ ಪದ್ಧತಿ ಮಾನವ ಜೀವನಕ್ಕೆ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದರೂ ಜೊತೆಗೆ ಕೊಬ್ಬು, ಸ್ಥೂಲಕಾಯತೆ ಎಂಬ ಶಾಪವನ್ನು ನೀಡಿದೆ. ಅತಿಯಾದ ಬಾಯಿ ಚಪಲದಿಂದ ಇಂದು ನಾವು ಕಣ್ಣಿಗೆ ಕಂಡದ್ದನ್ನೆಲ್ಲಾ ಬಾಯಿಗೆ ತುರುಕಿ ನಮ್ಮ ಹೊಟ್ಟೆಯನ್ನು ಕಸದ ತೊಟ್ಟಿಯನ್ನಾಗಿಸಿಕೊಂಡಿದ್ದೇವೆ.

ತೂಕ ಇಳಿಸುವ ಹುನ್ನಾರಕ್ಕೆ ಇಳಿದು ಅದರಲ್ಲೂ ಸೋಲನ್ನು ಕಂಡುಕೊಂಡು ನಮ್ಮ ಜೀವನ ಹೀಗೆಯೇ ಇರಲಿ ಡಯೆಟ್ ಬೇಡ, ವ್ಯಾಯಾಮ ಬೇಡ ಇದ್ದಷ್ಟು ದಿನ ತಿಂದುಂಡು ಇರೋಣ ಎಂಬುದಾಗಿ ನಿರ್ಧರಿಸಿ ನಿಮ್ಮ ತೂಕ ಇಳಿಸುವ ಛಲಕ್ಕೆ ಎಳ್ಳು ನೀರು ಬಿಡುತ್ತೀರಿ. ಆದರೆ ತಿಂದುಂಡು ಬದುಕುವುದಕ್ಕೆ ಬದಲಾಗಿ, ಜೀವಿಸುವುದಕ್ಕಾಗಿ ತಿನ್ನಬೇಕೆಂಬ ಪಾಠವನ್ನು ಅರಿತುಕೊಳ್ಳೋಣ.

ತೂಕ ಇಳಿಸುವ ಸಾಧನೆಗೆ ಪ್ರೇರಕ ಈ ಬ್ರೇಕ್‌ಫಾಸ್ಟ್!

ಆರೋಗ್ಯವೇ ಭಾಗ್ಯ ಎಂದಾಗಿರುವುದರಿಂದ ಅಧಿಕ ಸ್ಥೂಲಕಾಯತೆಯಿಂದಾಗಿ ನೀವು ಕೇಳರಿಯದ ರೋಗಗಳ ದಾಸರಾಗುವುದು ಖಂಡಿತ. ಆದ್ದರಿಂದ ಇಂದಿನ ಲೇಖನದಲ್ಲಿ ನಾವು ತೂಕ ಇಳಿಸುವುದಕ್ಕೆ ಸಹಕಾರಿಯಾಗಿರುವ ನೈಸರ್ಗಿಕ ಆಹಾರವನ್ನು ನಿಮಗೆ ಪರಿಚಯಿಸುತ್ತಿದ್ದು, ನೀವೂ ಕೂಡ ಒಮ್ಮೆ ಪ್ರಯತ್ನಿಸಿ ನೋಡಿ....

ಲೋಳೆಸರದ ಜ್ಯೂಸ್

ಲೋಳೆಸರದ ಜ್ಯೂಸ್

ಲೋಳೆಸರದ ಕೋಡೊಂದನ್ನು ಮುರಿದು ಅದರ ಹೊರಗಿನ ಸಿಪ್ಪೆಯನ್ನು ಆಲುಗಡ್ಡೆಯ ಸಿಪ್ಪೆ ಸುಲಿದಂತೆ ಸುಲಿಯಿರಿ

*ಸಿಪ್ಪೆಯಿಲ್ಲದ ಈ ಭಾಗವನ್ನು ಮಿಕ್ಸಿಯಲ್ಲಿ ಹಾಕಿ ಅರೆಯಿರಿ.

*ಈ ಮಿಶ್ರಣವನ್ನು ಬಟ್ಟೆಯಲ್ಲಿ ಕೊಂಚ ನೀರಿನೊಂದಿಗೆ ಹಿಂಡಿ ರಸ ತೆಗೆದು ಒಂದು ಬಾಟಲಿಯಲ್ಲಿ ಸಂಗ್ರಹಿಸಿ ಈ ದ್ರವವನ್ನು ಬೆಳಿಗ್ಗೆ ಎದ್ದ ತಕ್ಷಣ ಅರ್ಧ ಕಪ್ ಸೇವಿಸಿ ಮತ್ತು ದಿನದ ಮೂರೂ ಹೊತ್ತಿನ ಊಟಕ್ಕೂ ಹದಿನೈದು ನಿಮಿಷ ಮೊದಲು ಸೇವಿಸಿ. ಸುಮಾರು ಎರಡು ವಾರಗಳವರೆಗೆ ಈ ವಿಧಾನವನ್ನು ಅನುಸರಿಸಿ.

ನೆನಪಿಡಿ: ಫ್ರಿಜ್ಜಿನಲ್ಲಿಟ್ಟ ಲೋಳೆಸರ ಕೊಂಚ ಕಹಿಯಾಗುವುದರಿಂದ ಪ್ರತಿದಿನ ಹೊಸತಾದ ಕೋಡನ್ನು ಮುರಿದು ಒಂದು ಚಮಚ ತಿರುಳನ್ನು ಚಮಚದಲ್ಲಿ ಕೆರೆದು ಉಪಯೋಗಿಸಬಹುದು.

ಲಿಂಬೆ ಹಣ್ಣು ಹಾಗೂ ಲೋಳೆಸರದ ಕೋಡು

ಲಿಂಬೆ ಹಣ್ಣು ಹಾಗೂ ಲೋಳೆಸರದ ಕೋಡು

ಒಂದು ಲೋಳೆಸರದ ಕೋಡನ್ನು ಮುರಿದು ಮಧ್ಯಕ್ಕೆ ಉದ್ದನಾಗಿ ಸೀಳಿ. ಇದನ್ನು ಲಿಂಬೆ ಹಿಂಡಿದಂತೆ ಹಿಂಡಿ ರಸ ತೆಗೆಯಿರಿ. ಇಲ್ಲದಿದ್ದರೆ ಸಿಪ್ಪೆ ನಿವಾರಿಸಿದ ಬಳಿಕ ಲಿಂಬೆ ಹಿಸುಕುವ ಉಪಕರಣದಿಂದಲೂ ರಸ ತೆಗೆಯಬಹುದು. ಇನ್ನು ಸಮಪ್ರಮಾಣದಲ್ಲಿ ಲಿಂಬೆರಸವನ್ನು ಸೇರಿಸಿ. ಸಾಕಷ್ಟು ನೀರು ಮತ್ತು ಕೊಂಚ ಸಕ್ಕರೆ ಅಥವಾ ಬೆಲ್ಲ (ರುಚಿಗೆ ಮಾತ್ರ) ಸೇರಿಸಿ ಎರಡರಿಂದ ಮೂರು ನಿಮಿಷ ಕಲಕಿ ನಿಯಮಿತವಾಗಿ ಕುಡಿಯಿರಿ. ಇದು ಸ್ಥೂಲಕಾಯದ ವ್ಯಕ್ತಿಗಳಿಗೆ ಸೂಕ್ತವಾದ ವಿಧಾನವಾಗಿದೆ.

ಹಸಿ ಪಪ್ಪಾಯಿ

ಹಸಿ ಪಪ್ಪಾಯಿ

ಹಸಿ ಪಪ್ಪಾಯಿಯನ್ನು ತುಂಬಾ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಇತರ ಹಣ್ಣುಗಳೊಂದಿಗೆ ಬೆಳಿಗ್ಗಿನ ಉಪಹಾರಕ್ಕೆ ಸೇವಿಸಬಹುದು. ಇದರಿಂದ ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು. ಹಸಿ ಪಪ್ಪಾಯಿಯು ಬೊಜ್ಜಿನ ಸಮಸ್ಯೆಗೆ ರಾಮಬಾಣವಾಗಿದೆ. ಗರ್ಭಿಣಿಯರಿಗೆ ಇದು ನಿಷಿದ್ಧ. ಒಂದು ವೇಳೆ ನಿಮಗೆ ಪಪ್ಪಾಯ ಹಣ್ಣು ಇಷ್ಟವಾಗಲ್ಲ ಎಂದಾದರೆ, ಪಪ್ಪಾಯಿಯ ಸ್ಮೂಥಿ ಮಾಡಿಕೊಂಡು ಕುಡಿಯಿರಿ. ಕೊಬ್ಬುರಹಿತವಾಗಿರುವ ಹಾಲನ್ನು ಬಳಸಿಕೊಂಡು ಪಪ್ಪಾಯಿ ಸ್ಮೂಥಿಯನ್ನು ಬಳಸಬಹುದು. ಸ್ಮೂಥಿಯು ಹಸಿವನ್ನು ನಿಯಂತ್ರಿಸಿ ದೇಹದಲ್ಲಿ ಹೆಚ್ಚುವರಿ ಕೊಬ್ಬು ಉತ್ಪತ್ತಿಯಾಗದಂತೆ ನೋಡಿಕೊಳ್ಳುತ್ತದೆ.

 ದಿನಕ್ಕೆರಡು ಲೋಟ ಮೂಸಂಬಿ ಜ್ಯೂಸ್ ಕುಡಿಯಿರಿ

ದಿನಕ್ಕೆರಡು ಲೋಟ ಮೂಸಂಬಿ ಜ್ಯೂಸ್ ಕುಡಿಯಿರಿ

ದಿನಕ್ಕೆರಡು ಲೋಟ ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಪದೇ ಪದೇ ಹಸಿವಾಗುವುದು ತಪ್ಪುತ್ತದೆ. ಮೂಸಂಬಿಯಲ್ಲಿರುವ ಸಿಟ್ರಿಕ್ ಆಮ್ಲ ಇದಕ್ಕೆ ಕಾರಣ. ಇದರಿಂದ ನಡುನಡುವೆ ಕಂಡದನ್ನೆಲ್ಲಾ ತಿನ್ನುವ ಬಯಕೆ ಕಡಿಮೆಯಾಗಿ ತನ್ಮೂಲಕ ತೂಕ ಹೆಚ್ಚುವುದು ತಪ್ಪಿದಂತಾಗುತ್ತದೆ. ಲಿಂಬೆಯಂತೆಯೇ ಮೂಸಂಬಿಯಲ್ಲಿಯೂ ಕ್ಯಾಲೋರಿಗಳು ಅತಿ ಕಡಿಮೆ ಪ್ರಮಾಣದಲ್ಲಿವೆ. ಇಂದು ಲೋಟದಲ್ಲಿ ಕೇವಲ ಐವತ್ತು ಕ್ಯಾಲೋರಿಗಳಿವೆ. ಆದರೆ ಈ ದ್ರವವನ್ನು ಕರಗಿಸಲು ಹೆಚ್ಚು ಕೊಬ್ಬು ಬೇಕಾಗುತ್ತದೆ. ಪರಿಣಾಮವಾಗಿ ಕುಡಿದಕ್ಕಿಂತಲೂ ಹೆಚ್ಚಿನ ಕ್ಯಾಲೋರಿಗಳು ಖರ್ಚಾಗುವ ಕಾರಣ ತೂಕ ಇಳಿಯಲು ಸಾಧ್ಯವಾಗುತ್ತದೆ.

ಮೂಸಂಬಿ ಜ್ಯೂಸ್

ಮೂಸಂಬಿ ಜ್ಯೂಸ್

ನಮ್ಮ ಊಟದಲ್ಲಿ ಕರಗುವ ಮತ್ತು ಕರಗದ ನಾರು ಎರಡೂ ಇರಬೇಕು. ಆಗಲೇ ನಮ್ಮ ಆಹಾರ ಸುಲಭವಾಗಿ ಜೀರ್ಣಗೊಂದು ವಿಸರ್ಜನೆ ಸುಲಲಿತವಾಗುತ್ತದೆ. ಆದ್ದರಿಂದ ಪ್ರತಿಬಾರಿ ನಿಮ್ಮ ನಿತ್ಯದ ವ್ಯಾಯಾಮದ ಮುನ್ನ ಕೇವಲ ಇಪ್ಪತ್ತು ಮಿಲೀ ಮೂಸಂಬಿ ಜ್ಯೂಸ್ ಕುಡಿದರೂ ನಿಮ್ಮ ನಿತ್ಯದ ಚಟುವಟಿಕೆಗಳು ಆಯಾಸರಹಿತವಾಗಿ ನೆರವೇರುತ್ತವೆ. ಇದರ ಉತ್ತಮ ಪರಿಣಾಮಕ್ಕಾಗಿ ಒಂದು ಲೋಟ ಉಗುರುಬೆಚ್ಚನೆಯ ಮೂಸಂಬಿ ರಸವನ್ನು ಕೊಂಚ ಜೇನುತುಪ್ಪ ಸೇರಿಸಿ ಬೆಳಿಗ್ಗೆದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಕುಡಿಯುವ ಮೂಲಕ ಅತ್ಯುತ್ತಮ ಪರಿಣಾಮ ಪಡೆಯಬಹುದು. ರಾತ್ರಿ ಮಲಗುವ ಮುನ್ನ ಇನ್ನೊಂದು ಲೋಟ ಕುಡಿಯುವುದರಿಂದ ತೂಕವಿಳಿಸುವ ಪ್ರಯತ್ನಗಳು ಅತಿ ಹೆಚ್ಚಿನ ಪ್ರತಿಫಲ ನೀಡುತ್ತವೆ.

ವೀಳ್ಯದೆಲೆ ಜಗಿಯಿರಿ

ವೀಳ್ಯದೆಲೆ ಜಗಿಯಿರಿ

ವೀಳ್ಯದೆಲೆಯನ್ನು ಜಗಿದಾಗ ಬಾಯಿಯಲ್ಲಿ ಜೊಲ್ಲು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದೇ ವೇಳೆಯಲ್ಲಿ ಜಠರಕ್ಕೆ ಸಿದ್ಧವಾಗಿರಲು ಮೆದುಳಿನಿಂದ ಸಂದೇಶ ಹೋಗುತ್ತದೆ. ಪರಿಣಾಮವಾಗಿ ಹೊಟ್ಟೆಹಸಿವು ಪ್ರಾರಂಭವಾಗುತತ್ದೆ. ಈ ದ್ರವವನ್ನು ನುಂಗಿದ ಬಳಿಕ ಹೊಟ್ಟೆಯಲ್ಲಿ ಈ ಮೊದಲು ಜೀರ್ಣಗೊಂಡಿದ್ದ ಆಹಾರದಲ್ಲಿದ್ದ ವಿಷಕಾರಿ ವಸ್ತುಗಳನ್ನು (ಆಯುರ್ವೇದದಲ್ಲಿ ಇದಕ್ಕೆ ಆಮ ಎಂದು ಕರೆಯುತ್ತಾರೆ) ಈ ದ್ರವ ಎದುರಿಸಿ ಹಾನಿಯಾಗುವುದನ್ನು ತಪ್ಪಿಸುತ್ತದೆ. ಜೊತೆಗೇ ಆಯುರ್ವೇದದಲ್ಲಿ ವಿವರಿಸಿರುವಂತೆ ಮೇಧ ಧಾತುವನ್ನು ಕರಗಿಸುತ್ತದೆ. ಈ ಮೇಧ ಧಾತು ಎಂದರೆ ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು. ಕೊಬ್ಬು ಕರಗಿದಂತೆ ನಿಧಾನವಾಗಿ ಹೆಚ್ಚಿನ ತೂಕವೂ ಕಡಿಮೆಯಾಗುತ್ತಾ ಬರುತ್ತದೆ.

 ಜೇನು ತುಪ್ಪ ಬ್ರೆಡ್‌ಗೆ ಹಚ್ಚಿ ಸೇವಿಸಿ

ಜೇನು ತುಪ್ಪ ಬ್ರೆಡ್‌ಗೆ ಹಚ್ಚಿ ಸೇವಿಸಿ

ರಾತ್ರಿಯೂಟದಲ್ಲಿ ಅಧಿಕ ಕ್ಯಾಲೋರಿಗಳ ಆಹಾರದ ಬದಲಿಗೆ ಸರಳವಾದ ಈ ಹೊಸರುಚಿ ಸವಿಯಿರಿ. ಗೋಧಿಯ ಬ್ರೆಡ್ (whole wheat or brown bread) ನ ಎರಡು ತುಣುಕುಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ತುಣುಕಿನ ಒಂದು ಬದಿಗೆ ಮಾತ್ರ ಒಂದು ಚಮಚದಷ್ಟು ಜೇನು ಸವರಿ ಒಂದರ ಮೇಲೊಂದಿಟ್ಟು ಸೇವಿಸಿ. ಬಳಿಕ ಸಾಕಷ್ಟು ನೀರು ಕುಡಿಯಿರಿ. ಬೇರೆ ಯಾವುದೇ ಆಹಾರವನ್ನು ಸೇವಿಸದಿರಿ. ಮಲಗುವ ಮುನ್ನ ಕೊಂಚ ದೂರ ಅಡ್ಡಾಡಿ ಬಳಿಕ ಪವಡಿಸಿ. ಇದರಿಂದ ರಾತ್ರಿಯ ಅನೈಚ್ಛಿಕ ಕಾರ್ಯಗಳಲ್ಲಿ ದೇಹಕ್ಕೆ ಅನಿವಾರ್ಯವಾಗಿ ಕರಗಿದ್ದ ಕೊಬ್ಬನ್ನು ಬಳಸಬೇಕಾಗಿ ಬರುವುದರಿಂದ ತೂಕ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.

ಅಡುಗೆಗಳಲ್ಲಿ ಎಣ್ಣೆ ಬದಲು ಜೇನು ಬಳಸಿ..!

ಅಡುಗೆಗಳಲ್ಲಿ ಎಣ್ಣೆ ಬದಲು ಜೇನು ಬಳಸಿ..!

ಎಣ್ಣೆ ಬಳಸುವ ಕೆಲವು ಫ್ರೈ ಗಳಿಗೂ ಜೇನು ಬಳಸಬಹುದು,ಪ್ರಯತ್ನಿಸಿ ನೋಡಿ. ಸಕ್ಕರೆ ಬಳಸುತ್ತಿದ್ದಲ್ಲೆಲ್ಲಾ ಸಕ್ಕರೆಯ ಪ್ರಮಾಣದ ಅರ್ಧದಷ್ಟು ಜೇನು ಬಳಸಿದರೂ ಸಾಕು, ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ. ತನ್ಮೂಲಕ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಉತ್ತಮ ಪರಿಣಾಮಕ್ಕಾಗಿ ಒಂದು ಲೋಟ ಬಿಸಿಹಾಲಿಗೆ ಒಂದು ಚಮಚ ಜೇನು ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ಆರೋಗ್ಯ ಉತ್ತಮವಾಗುವ ಜೊತೆಗೇ ತೂಕ ಇಳಿಯಲೂ ನೆರವಾಗುತ್ತದೆ.

ಚಹಾಕ್ಕೆ ಎರಡು ಚಮಚ ಜೇನು ತುಪ್ಪ ಹಾಕಿ ಸೇವಿಸಿ

ಚಹಾಕ್ಕೆ ಎರಡು ಚಮಚ ಜೇನು ತುಪ್ಪ ಹಾಕಿ ಸೇವಿಸಿ

ಚಹಾದೊಂದಿಗೆ ಸೇವಿಸಿ ಹಾಲಿಲ್ಲದ ಟೀ ಸೇವಿಸುವವರು ಕೊಂಚ ಲಿಂಬೆರಸವನ್ನು ಸೇರಿಸಿಕೊಳ್ಳುತ್ತಾರೆ. ಇದರೊಂದಿಗೆ ಕೊಂಚ ಜೇನನ್ನೂ ಸೇರಿಸಿ ನಿಮ್ಮ ದಿನದ ಎರಡು ಅಥವಾ ಮೂರು ಹೊತ್ತಿನ ಚಹಾ ಕಾಫಿಗಳ ಬದಲಿಗೆ ಈ ಆರೋಗ್ಯಕರ ಪೇಯವನ್ನು ಸೇವಿಸಿ. ಇದು ಆರೋಗ್ಯವನ್ನು ವೃದ್ಧಿಸುವ ಜೊತೆಗೇ ತೂಕವಿಳಿಸಲೂ ನೆರವಾಗುತ್ತದೆ.

ಬಾಳೆಹಣ್ಣಿನ ಶೇಕ್

ಬಾಳೆಹಣ್ಣಿನ ಶೇಕ್

ಒಂದು ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಹಾಕಿ ಇದಕ್ಕೆ ಕೊಂಚ ಐಸ್ ತುಂಡುಗಳು ಮತ್ತು ಅರ್ಧ ಕಪ್ ನೀರು ಹಾಕಿ ನೊರೆನೊರೆಯಾಗಿಸಿ ಕಡೆಯಿರಿ. ಈ ನೀರನ್ನು ತಣ್ಣಗಿರುವಂತೆಯೇ ಕುಡಿಯಿರಿ. ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂ ಲವಣಗಳು ನೀರಿನಲ್ಲಿ ಕರಗುತ್ತವೆ. ಈ ಪೇಯವನ್ನು ಕುಡಿಯುವ ಮೂಲಕ ಹಾಲು ಕುಡಿಯದೇ ಇದ್ದು ಹಾಲಿನ ಮೂಲಕ ಪಡೆಯಬಹುದಾದ ಪೋಷಕಾಂಶಗಳನ್ನು ಪಡೆದೂ ಕೊಬ್ಬಿಲ್ಲದೇ ಇರುವ ಕಾರಣ ತೂಕ ಇಳಿಸುವ ಪ್ರಕ್ರಿಯೆಗೆ ಹೆಚ್ಚಿನ ಬೆಂಬಲ ದೊರಕುತ್ತದೆ.

ಅರಿಶಿನ, ಲಿಂಬೆ ಬೆರೆಸಿದ ಟೀ

ಅರಿಶಿನ, ಲಿಂಬೆ ಬೆರೆಸಿದ ಟೀ

ಒಂದು ಕಪ್ ನೀರಿನಲ್ಲಿ ಅರ್ಧ ಟೀ ಚಮಚ ಅರಿಶಿನ, ಕೊಂಚ ಟೀಪುಡಿ, ಚಿಟಿಕೆಯಷ್ಟು ಚೆಕ್ಕೆಯ ಪುಡಿ ಬೆರೆಸಿ ಕುದಿಸಿ. ಸುಮಾರು ಎರಡು ನಿಮಿಷ ಕುದಿಸಿದ ಬಳಿಕ ಉರಿ ಆರಿಸಿ ತಣಿಸಿ. ಸುಮಾರು ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಅರ್ಧ ಲಿಂಬೆಯ ರಸವನ್ನು ಬೆರೆಸಿ ತಕ್ಷಣ ಕುಡಿಯಿರಿ. ಈ ಟೀ ಯಲ್ಲಿ ಹೆಚ್ಚಿನ ಪ್ರಮಾಣದ ಫ್ಲೇವನಾಯ್ಡುಗಳಿದ್ದು ತೂಕ ಇಳಿಸಲು ನೆರವಾಗುತ್ತದೆ ಹಾಗೂ ಅರಿಶಿನದ ಬ್ಯಾಕ್ಟೀರಿಯಾನಿವಾರಕ ಗುಣ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಸೂಚನೆ: ಈ ಎಲ್ಲಾ ಮನೆಮದ್ದನ್ನು ಪ್ರಯತ್ನಿಸುವ ಮೊದಲು ಒಮ್ಮೆ ನಿಮ್ಮ ಫ್ಯಾಮಿಲಿ ವೈದ್ಯರ ಸಲಹೆ ಪಡೆದುಕೊಳ್ಳಿ.....

ತುಳಸಿ ಎಲೆ ಮತ್ತು ಸೌತೆಕಾಯಿಯ ಪಾನಕ ಮಾಡಿ ಕುಡಿಯಿರಿ

ತುಳಸಿ ಎಲೆ ಮತ್ತು ಸೌತೆಕಾಯಿಯ ಪಾನಕ ಮಾಡಿ ಕುಡಿಯಿರಿ

ತುಳಸಿ ಮತ್ತು ಸೌತೆಕಾಯಿಯನ್ನು ಬೆರೆಸಿದ ನೀರು ಕುಡಿದರೆ ಇದು ನಾಲಿಗೆಗೆ ಚುರುಗುಟ್ಟಿಸುವ ರುಚಿಯನ್ನು ನೀಡುವ ಜೊತೆಗೇ ತುಳಸಿ ಮತ್ತು ಸೌತೆ ಎರಡರ ಆರೋಗ್ಯಕರ ಪ್ರಯೋಜನವನ್ನೂ ಪಡೆಯಬಹುದು. ಇದಕ್ಕಾಗಿ ಒಂದು ಕಪ್ ಸಕ್ಕರೆಯನ್ನು ಕೊಂಚ ನೀರಿನಲ್ಲಿ ಬೆರೆಸಿ ಬಿಸಿಮಾಡಿ. ಇದಕ್ಕೆ ಕೆಲವು ಲಿಂಬೆಯ ಹನಿಗಳನ್ನು ಸೇರಿಸಿ. ಸಕ್ಕರೆ ಕರಗಿದ ಬಳಿಕ ಉರಿ ಆರಿಸಿ ಅರ್ಧ ಸೌತೆಕಾಯಿಯ ತುಂಡುಗಳು ಮತ್ತು ಕೆಲವು ತುಳಸಿ ಎಲೆಗಳನ್ನು ಸೇರಿಸಿ. ತಣಿದ ಬಳಿಕ ಈ ಮಿಶ್ರಣವನ್ನು ಒಂದು ದೊಡ್ಡ ಬಾಟಲಿ ನೀರಿಗೆ ಬೆರೆಸಿ ಫ್ರಿಜ್ಜಿನಲ್ಲಿ ಒಂದು ಘಂಟೆ ಇಡಿ. ಬಳಿಕ ಇಡಿಯ ದಿನ ಬಾಯಾರಿಕೆಯಾದಾಗಲೆಲ್ಲಾ ಐಸ್ ನೊಂದಿಗೆ ಅಥವಾ ಇಲ್ಲದೇ ಕೊಂಚಕೊಂಚವಾಗಿ ಸೇವಿಸುತ್ತಾ ಇರಿ.

English summary

Powerful Tips & Home Remedies for Fast Weight Loss

In the process of losing weight, one would just go on with strenous exercises and a few go to the extent of starving as well. These, of course, is not the correct way to lose weight. Along with a bit of exercise, having a healthy diet plan is very important if you are looking at losing weight. All that one needs is a month's time to lose weight and get back into shape. Take a look at the tips for the diet plan here.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more