For Quick Alerts
ALLOW NOTIFICATIONS  
For Daily Alerts

ನೈಸರ್ಗಿಕ ಆಹಾರಗಳು: ದೇಹದ ಕೊಬ್ಬನ್ನು ಕ್ಷಣಮಾತ್ರದಲ್ಲಿ ಕರಗಿಸುತ್ತದೆ!

By Arshad
|

ಸ್ಥೂಲಕಾಯ ಇಂದಿನ ದಿನಗಳಲ್ಲಿ ಸಾಮಾನ್ಯ ತೊಂದರೆಯಾಗಿದೆ. ದೇಹದಲ್ಲಿ ಅತಿ ಹೆಚ್ಚಾಗಿರುವ ಕೊಬ್ಬು ಹಲವು ಆರೋಗ್ಯದ ತೊಂದರೆಗಳನ್ನು ಎದುರಿಸಬಹುದು. ಹೃದಯದ ತೊಂದರೆಗಳು, ಸಂತಾನಹೀನತೆ, ಮಧುಮೇಹ, ಅಧಿಕ ರಕ್ತದೊತ್ತಡ ಮೊದಲಾದ ತೊಂದರೆಗಳು ಸಾಮಾನ್ಯವಾಗಿವೆ. ನಿಮ್ಮ ದೇಹದ ಅಧಿಕ ಕೊಬ್ಬನ್ನು ಕರಗಿಸಲು ನೀವು ಬಹಳಷ್ಟು ಪ್ರಯತ್ನವನ್ನು ಈಗಾಗಲೇ ಮಾಡಿರಬಹುದು. ಆದರೆ ಮೊದಲು ನಿಮ್ಮ ಶರೀರ ಕಾರ್ಬೋಹೈಡ್ರೇಟುಗಳನ್ನು ಒಡೆಯುತ್ತದೆ, ಬಳಿಕ ಕೊಬ್ಬನ್ನು ಒಡೆಯುತ್ತದೆ ಗೊತ್ತೇ? ಆದ್ದರಿಂದಲೇ ದೇಹದಿಂದ ಕೊಬ್ಬನ್ನು ಕರಗಿಸುವ ಕಾರ್ಯ ತುಂಬಾ ಕಷ್ಟದ್ದಾಗಿದೆ.

ನೀವು ವ್ಯಾಯಾಮ ಮಾಡಿದಾಗ ನಿಮ್ಮ ದೇಹದಲ್ಲಿ ಸಂಗ್ರಹವಾಗಿದ್ದ ಗ್ಲೈಕೋಜೆನ್ ಎಂಬ ಕಣಗಳು ಮೊದಲು ಒಡೆಯಲ್ಪಡುತ್ತವೆ, ಬಳಿಕವೇ ಕೊಬ್ಬಿನ ಕಣಗಳು. ಶುಭಸುದ್ದಿ ಎಂದರೆ ಕೆಲವು ಆಹಾರಗಳು ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ನೆರವಾಗುತ್ತವೆ. ಈ ಅಹಾರಗಳ ಸೇವನೆಯಿಂದ ಕೊಬ್ಬಿನ ಕರಗುವಿಕೆ ಶೀಘ್ರವಾಗುತ್ತದೆ ಹಾಗೂ ತೂಕ ಇಳಿಯಲೂ ನೆರವಾಗುತ್ತದೆ.


ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಈ ಅಹಾರಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ಹಾಗೂ ಇದರೊಂದಿಗೆ ಸಾಕಷ್ಟು ವ್ಯಾಯಾಮ ಮಾಡುವ ಮೂಲಕ ದೇಹವನ್ನು ಎಲ್ಲರ ಕನಸಿನ ಮೈಕಟ್ಟು ಹೊಂದಿರುವಂತೆ ಮಾಡಬಹುದು. ಈ ಆಹಾರಗಳು ನಿತ್ಯದ ಕೆಲಸಗಳಿಗೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಸಾಮಾನ್ಯವಾಗಿ ಊಟ ಬಿಟ್ಟು ಕೊಬ್ಬು ಕರಗಿಸುವ ತಪ್ಪು ನಿರ್ಧಾರವನ್ನು ಕೆಲವರು ತಳೆಯುತ್ತಾರೆ. ಆದರೆ ಇದು ಅತ್ಯಂತ ಅಪಾಯಕಾರಿಯಾದ ನಿರ್ಧಾರವಾಗಿದೆ. ಊಟ ಬಿಟ್ಟಾಗ ದೇಹಕ್ಕೆ ಅಗತ್ಯ ವಿಟಮಿನ್ನುಗಳು, ಖನಿಜಗಳು, ಪ್ರೋಟೀನುಗಳು ಲಭ್ಯವಾಗದೇ ಹೋದಾದ ಕೊಬ್ಬು ಸಹಾ ಕರಗುವುದಿಲ್ಲ. ಬದಲಿಗೆ ದೇಹ ಸೊರಗುತ್ತದೆ. ಬನ್ನಿ, ತೂಕ ಇಳಿಸಲು ನೆರವಾಗುವ ಹಾಗೂ ಆರೋಗ್ಯವನ್ನೂ ಕಾಪಾಡುವ ಕೆಲವು ಆಹಾರಗಳ ಬಗ್ಗೆ ಅರಿಯೋಣ.....

ಶತಾವರಿ

ಶತಾವರಿ

ಇದರಲ್ಲಿರುವ ಆಸ್ಪರಾಜೀನ್ ಎಂಬ ಪೋಷಕಾಂಶ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಹಾಗೂ ಮೂತ್ರಪಿಂಡಗಳು ಇನ್ನಷ್ಟು ಹೆಚ್ಚು ಕ್ಷಮತೆಯಿಂದ ಕೆಲಸ ಮಾಡುವಂತೆ ಪ್ರೇರೇಪಿಸುತ್ತವೆ. ಶತಾವರಿಯ ಸೇವನೆಯಿಂದ ಆಕ್ಸಾಲಿಕ್ ಆಮ್ಲ ಎಂಬ ಕಣವನ್ನು ಒಡೆಯಲು ನೆರವಾಗುತ್ತದೆ. ಈ ಆಮ್ಲ ಕೊಬ್ಬಿನ ಸಂಗ್ರಹಕ್ಕೆ ಮೂಲವಾಗಿದೆ.

ಎಲೆಕೋಸು

ಎಲೆಕೋಸು

ಸಾಮಾನ್ಯವಾಗಿ ಹೋಟೆಲುಗಳಲ್ಲಿ ಸಾಂಬಾರ್ ಮತ್ತು ಪಲ್ಯ ಮಾಡಲು ಅಗ್ಗದ ತರಕಾರಿಗಳನ್ನೇ ಹೆಚ್ಚಾಗಿ ಆಯ್ದುಕೊಳ್ಳುವ ಕಾರಣ ಹೆಚ್ಚಿನ ದಿನಗಳಲ್ಲಿ ಮೂಲಂಗಿ ಸಾಂಬಾರ್ ಮತ್ತು ಕೋಸಿನ ಪಲ್ಯ ತಯಾರಾಗಿರುತ್ತದೆ. ಆದರೆ ಅಗ್ಗವಾದ ಮಾತ್ರಕ್ಕೆ ಇದರ ಆರೋಗ್ಯಕರ ಗುಣಗಳೇನೂ ಕಡಿಮೆಯಲ್ಲ. ಹಸಿಯಾಗಿಯೂ ತಿನ್ನಬಹುದಾದ ಎಲೆಕೋಸಿನಲ್ಲಿ ಹಲವು ಪೋಷಕಾಂಶಗಳಿದ್ದು ಜೀರ್ಣಶಕ್ತಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ, ಅದರಲ್ಲೂ ಕೋಸಿನ ಸೇವನೆಯಿಂದ ಸೊಂಟದ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ಐಯೋಡಿನ್ ಮತ್ತು ಗಂಧಕ ಹೆಚ್ಚಿನ ಕೊಬ್ಬನ್ನು ಕರಗಿಸಲು ನೆರವಾಗುತದೆ. ಕೊಬ್ಬನ್ನು ಕರಗಿಸಲು ಕೋಸನ್ನು ಹಸಿಯಾಗಿ ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.

ಇಡಿಯ ಧಾನ್ಯಗಳು

ಇಡಿಯ ಧಾನ್ಯಗಳು

ಓಟ್ಸ್, ಗೋಧಿಯ ಬ್ರೆಡ್, ಕಂದು ಅಕ್ಕಿ ಮೊದಲಾದ ಇಡಿಯ ಧಾನ್ಯಗಳು ಅಥವಾ ಇವುಗಳಿಂದ ತಯಾರಾದ ಆಹಾರಗಳ ಸೇವನೆಯಿಂದಲೂ ಹೆಚ್ಚುವರಿ ಕ್ಯಾಲೋರಿಗಳು ಬಳಕೆಯಾಗುತ್ತವೆ. ಈ ಧಾನ್ಯಗಳನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳಬೇಕಾಗಿ ಬರುವುದೇ ಕೊಬ್ಬು ಕರಗುವ ಗುಟ್ಟಾಗಿದೆ.

ದ್ವಿದಳ ಧಾನ್ಯಗಳು

ದ್ವಿದಳ ಧಾನ್ಯಗಳು

ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣವಿದ್ದು ದಿನದ ಅಗತ್ಯದ ನಲವತ್ತು ಶೇಖಡಾದಷ್ಟು ಕಬ್ಬಿಣವನ್ನು ಪೂರೈಸುತ್ತದೆ. ನಿಮ್ಮ ನಿತ್ಯದ ಆಹಾರದಲ್ಲಿ ಸಾಕಷ್ಟು ದ್ವಿದಳ ಧಾನ್ಯಗಳಿರುವಂತೆ ನೋಡಿಕೊಳ್ಳುವ ಮೂಲಕ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಒಂದು ವೇಳೇ ದೇಹದಲ್ಲಿ ವಿಟಮಿನ್ನುಗಳು ಹಾಗೂ ಖನಿಜಗಳ ಕೊರತೆಯಾದಾಗ ಸಹಾ ಕೊಬ್ಬುಕರಗುವುದು ನಿಧಾನವಾಗುತ್ತದೆ.

ಗಜ್ಜರಿ ಅಥವಾ ಕ್ಯಾರೆಟ್

ಗಜ್ಜರಿ ಅಥವಾ ಕ್ಯಾರೆಟ್

ಕ್ಯಾರೆಟ್ಟುಗಳಲ್ಲಿರುವ ಕ್ಯಾರೋಟೀನ್ (ನಿಷ್ಕ್ರಿಯ ವಿಟಮಿನ್ ಎ) ಇರುತ್ತದೆ ಹಾಗೂ ಇದು ಕೊಬ್ಬನ್ನು ಕರಗಿಸುವ ಮೂಲಕ ದೇಹದಿಂದ ಕಡಿಮೆಯಾಗಲು ನೆರವಾಗುತ್ತದೆ. ಅಲ್ಲದೇ ಕರುಳುಗಳಲ್ಲಿ ಈ ಕ್ಯಾರೋಟೀನುಗಳನ್ನು ಮತ್ತೊಮ್ಮೆ ವಿಟಮಿನ್ ಎ ಆಗಿ ಪರಿವರ್ತಿಸುವ ಕಾರ್ಯದಲ್ಲಿ ಅನಿವಾರ್ಯವಾಗಿ ಕೊಬ್ಬನ್ನು ಬಳಸಿಕೊಳ್ಳಬೇಕಾಗಿ ಬರುವ ಕಾರಣ ಕೊಬ್ಬು ಕರಗುತ್ತದೆ.

ಹಸಿರು ಟೀ

ಹಸಿರು ಟೀ

ದಿನಕ್ಕೆ ಎರಡು ಕಪ್ ಆದರೂ ಹಸಿರು ಟೀ ಕುಡಿಯುವ ಮೂಲಕ ದೇಹದ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಹಸಿರು ಟೀ ಸೇವನೆಯಿಂದ ನಿಮ್ಮ ಚಯಾಪಚಯ ಕ್ರಿಯೆಗೆ ಪ್ರಚೋದನೆ ದೊರಕುತ್ತದೆ ಹಾಗೂ ಆಹಾರದಲ್ಲಿರುವ ಕಾರ್ಬೋಹೈಡ್ರೇಟುಗಳು ಮತ್ತು ಕೊಬ್ಬನ್ನು ಒಡೆದು ಬಳಸಿಕೊಳ್ಳಲು ನೆರವಾಗುತ್ತದೆ.

ಡೈರಿ ಉತ್ಪನ್ನಗಳು

ಡೈರಿ ಉತ್ಪನ್ನಗಳು

ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳ ಸೇವನೆಯಿಂದ ಸ್ನಾಯುಗಳ ಬೆಳವಣಿಗೆ ಉತ್ಪಾದನೆ ಹೆಚ್ಚುತ್ತದೆ ಹಾಗೂ ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳಲೂ ಸಾಧ್ಯವಾಗುತ್ತದೆ. ಇವುಗಳಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಹಾಗೂ ವಿಟಮಿನ್ ದಿ ಇದ್ದು ವಿಶೇಷವಾಗಿ ಮೂಳೆಗಳಿಗೆ ಉತ್ತಮವಾಗಿದೆ.

ಕೊಬ್ಬು ರಹಿತ ಮಾಂಸ

ಕೊಬ್ಬು ರಹಿತ ಮಾಂಸ

ಒಂದು ವೇಳೆ ನೀವು ಮಾಂಸಾಹಾರವನ್ನು ಇಷ್ಟಪಡುವ ವ್ಯಕ್ತಿಗಳಾಗಿದ್ದರೆ ಕೊಬ್ಬು ರಹಿತವಾದ ಕೋಳಿ ಮಾಂಸವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇದನ್ನು ಜೀರ್ಣಿಸಿಕೊಳ್ಳಲು ನಮ್ಮ ದೇಹ ಸುಮಾರು ಮೂವತ್ತು ಶೇಖಡಾದಷ್ಟು ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಅಂದರೆ ಸುಮಾರು ಮುನ್ನೂರು ಕ್ಯಾಲೋರಿಗಳಷ್ಟು ಶಕ್ತಿ ನೀಡುವ ಕೋಳಿಮಾಂಸವನ್ನು ಜೀರ್ಣಿಸಿಕೊಳ್ಳಲು ನಮ್ಮ ದೇಹ ತೊಂಭತ್ತು ಕ್ಯಾಲೋರಿಗಳನ್ನು ಬಳಸಿಕೊಳ್ಳುತ್ತದೆ.

ಖಾರಮೆಣಸು

ಖಾರಮೆಣಸು

ಮೆಣಸಿಗೆ ಖಾರತನ ನೀಡುವ ಕ್ಯಾಪ್ಸೈಸಿನ್ ಎಂಬ ಪೋಷಕಾಂಶ ದೇಹದ ತಾಪಮಾನವನ್ನು ಹೆಚ್ಚಿಸುತ್ತದೆ.ಈ ತಾಪಮಾನ ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸಿಕೊಳ್ಳಲು ನೆರವಾಗುತ್ತದೆ. ಪರಿಣಾಮವಾಗಿ ತೂಕ ಸಹಾ ಇಳಿಯುತ್ತದೆ.

ಮೊಟ್ಟೆ

ಮೊಟ್ಟೆ

ಮೊಟ್ಟೆಯನ್ನು ಬೆಳಗಿನ ಉಪಹಾರದ ಸಮಯದಲ್ಲಿ ಸೇವಿಸಿದರೆ ಒಳ್ಳೆಯದು. ಪೋಷಕಾಂಶಯುಕ್ತ ಆಹಾರವೂ ಆದ ಮೊಟ್ಟೆ ಹೊಟ್ಟೆಯಲ್ಲಿ ಮತ್ತು ಸೊಂಟದಲ್ಲಿರುವ ಬೊಜ್ಜನ್ನು ಕರಗಿಸುತ್ತದೆ. ತೂಕ ಕಳೆದುಕೊಳ್ಳುವುದಕ್ಕೋಸ್ಕರ ಉಪಹಾರ ಬಿಡುವವರು ಮೊಟ್ಟೆ ತಿನ್ನುವುದರಿಂದ ಉಪಯೋಗ ಹೊಂದಬಹುದು. ಮೊಟ್ಟೆ ಹೆಚ್ಚಿನ ಕ್ಯಾಲೊರಿ ಕರಗಿಸುವುದರೊಂದಿಗೆ ಹಸಿವನ್ನು ನಿಯಂತ್ರಿಸುತ್ತದೆ. ಇದು ಬೊಜ್ಜನ್ನು ಕರಗಿಸಿ ಅದನ್ನು ಶಕ್ತಿಯನ್ನಾಗಿ ಮಾರ್ಪಾಡು ಮಾಡುತ್ತದೆ.

ಜೇನು

ಜೇನು

ನೀವು ಬೇಗನೆ ದೇಹದ ಬೊಜ್ಜನ್ನು ಕರಗಿಸಿಕೊಳ್ಳಬೇಕೆಂದಿದ್ದರೆ ಬಿಸಿ ನೀರಿನೊಂದಿಗೆ ಒಂದು ಚಮಚ ಜೇನನ್ನು ಬೆರೆಸಿ ಕುಡಿಯಿರಿ. ಜೇನನ್ನು ಹಾಗೇ ತಿಂದರೂ ಪ್ರಯೋಜನವಿದೆ. ಜೇನಿನಲ್ಲಿರುವ ಕಾರ್ಬೊಹೈಡ್ರೇಟ್ ಜೀರ್ಣಕ್ರಿಯೆ ಹೆಚ್ಚಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಸಕ್ಕರೆಯ ಬದಲಿಯಾಗಿ ಜೇನನ್ನು ಉಪಯೋಗಿಸಿಕೊಂಡರೆ ತೂಕ ಕ್ರಮೇಣ ಇಳಿಕೆಯಾಗಿರುವುದು ನಿಮಗೆ ಗೋಚರಿಸುತ್ತೆ.

ನಿಂಬೆಹಣ್ಣು

ನಿಂಬೆಹಣ್ಣು

ಕೇವಲ ನಿಂಬೆ ಮಾತ್ರವಲ್ಲ, ವಿಟಮಿನ್ ಸಿ ಹೇರಳವಾಗಿರುವ ಆಹಾರ ಬೊಜ್ಜನ್ನು ಬೇಗನೆ ಕರಗಿಸುತ್ತದೆ. ಡಯಟ್ ಮಾಡಲು ಸಾಧ್ಯವಾಗದಿದ್ದವರು ವಿಟಮಿನ್ ಸಿ ಹೆಚ್ಚಿರುವ ಆಹಾರ ಸೇವಿಸಿದರೆ ಸಾಕು, ಒಳ್ಳೆ ಶೇಪ್ ಪಡೆದುಕೊಳ್ಳಬಹುದು. ನಿಂಬೆ, ದ್ರಾಕ್ಷಿ, ಕಿತ್ತಳೆ, ಕ್ಯಾರೆಟ್, ಎಲೆಕೋಸು, ಹೂಕೋಸು, ಕಲ್ಲಂಗಡಿ ಇವುಗಳ ಸೇವನೆ ಮಾಡಿದರೆ ಕೊಲೆಸ್ಟ್ರಾಲ್ ಬೇಗ ಕರಗುತ್ತದೆ.

ನೀರು

ನೀರು

ನೀರು ತೂಕ ಇಳಿಸಿಕೊಳ್ಳಲು ತುಂಬಾ ಉಪಯೋಗಕ್ಕೆ ಬರುತ್ತೆ. ನೀರನ್ನು ಹೆಚ್ಚು ಕುಡಿಯುವುದರಿಂದ ಹಸಿವನ್ನೂ ನಿಯಂತ್ರಿಸಿ ಅನಗತ್ಯವಾಗಿ ಹೆಚ್ಚು ಊಟ ಮಾಡುವುದನ್ನು ತಡೆಯಬಹುದು. ಊಟವಾದ ನಂತರ ಬಿಸಿ ನೀರನ್ನು ಸೇವಿಸುತ್ತಾ ಬಂದರೆ ಕೆಲವೇ ದಿನಗಳಲ್ಲಿ ಫಲಿತಾಂಶವನ್ನು ನಿಮಗೆ ತಿಳಿಯುತ್ತದೆ. ಬಿಸಿ ನೀರಿನೊಂದಿಗೆ ನಿಂಬೆರಸ ಅಥವಾ ಜೇನನ್ನು ಬೆರೆಸಿ ಕುಡಿದರೂ ಬೊಜ್ಜನ್ನು ಬೇಗ ಕರಗಿಸಿಕೊಳ್ಳಬಹುದು.

English summary

Magic Foods That Will Help Burn Fat

When you exercise, the reserved glycogen is broken down first and then the body fat.. Now the good news is that some foods can help you to break down the excess fat in the body. These foods promote fat burning and help in weight reduction. These foods will also provide you with the sufficient nutrients required for the body. When your body is deficient of essential vitamins, minerals and proteins, the process of burning fat slows down. We will share with you a list of foods that will make fat breakdown easy.
Story first published: Monday, October 30, 2017, 16:49 [IST]
X
Desktop Bottom Promotion