For Quick Alerts
ALLOW NOTIFICATIONS  
For Daily Alerts

ಕ್ಯಾಲೋರಿ ಕರಗಿಸಲು ಅಕ್ಕಿ ತೆಂಗಿನೆಣ್ಣೆಯ ನೈಸರ್ಗಿಕ ರೆಸಿಪಿ

By Jaya Subramanya
|

ಸಾಮಾನ್ಯವಾಗಿ ದೇಹದ ತೂಕ ನಮ್ಮನ್ನು ಕೀಳರಿಮೆಯಿಂದ ಬಳಲುವಂತೆ ಮಾಡುತ್ತದೆ. ನಾವು ಇಷ್ಟಪಡುವ ದಿರಿಸು ನಮಗೆ ತೊಡಲು ಆಗದೇ ಇರುವುದು, ಸಾರ್ವಜನಿಕವಾಗಿ ತೂಕದ ಬಗ್ಗೆ ಮುಜುಗರವನ್ನು ಅನುಭವಿಸುವುದು, ಸ್ಥೂಲಕಾಯದಿಂದ ಉಂಟಾಗುವ ಹಲವಾರು ಕಾಯಿಲೆಗಳು ನಮ್ಮನ್ನು ಜರ್ಝರಿತರನ್ನಾಗಿಸುವುದು ನಿಜ.

ಹೀಗೆ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಸ್ಥೂಲಕಾಯತೆಯು ನಮಗೆ ತಂದೊಡ್ಡುತ್ತದೆ. ದೇಹದ ತೂಕವನ್ನು ಮತ್ತು ಬಿಎಮ್‎ಐ ಅನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ಆವಶ್ಯಕವಾಗಿರುವುದರಿಂದ ಇದು ಆರೋಗ್ಯಕರ ದೇಹಕ್ಕೆ ಒಂದು ಉತ್ತಮ ಬುನಾದಿ ಎಂದೆನಿಸಿದೆ.

ನಿಯಮಿತವಾದ ಆಹಾರ ಪದ್ಧತಿ ಮತ್ತು ವ್ಯಾಯಾಮ ಆರೋಗ್ಯಕರ ತೂಕವನ್ನು ದಯಪಾಲಿಸುವಲ್ಲಿ ಸಹಾಯಕವಾಗಿದೆ. ದೇಹದ ತೂಕ ಅತಿಯಾಯಿತು ಎಂದಾದಲ್ಲಿ ರೋಗಗಳು ಹೇಳದೆಯೇ ನಮ್ಮ ದೇಹದಲ್ಲಿ ನೆಲೆಯೂರಿಬಿಡುತ್ತವೆ. ದೇಹದಲ್ಲಿ ಕೊಬ್ಬು ಶೇಖರವಾಗುವುದು ಬಹುಬೇಗ ನಡೆಯುವಂತಹ ಕ್ರಿಯೆಯಾಗಿದ್ದು ಇದನ್ನು ಕರಗಿಸುವುದು ಅಷ್ಟೇ ಕಷ್ಟದ ಮಾತಾಗಿದೆ.

Try This Secret Rice And Coconut Oil Recipe To Burn Calories

ದೇಹದ ಕೊಬ್ಬನ್ನು ಕರಗಿಸಲು ವೈದ್ಯಕೀಯ ವಿಧಾನಗಳಿಗೆ ಮುಗಿಬೀಳುವುದಕ್ಕಿಂತ ಆರೋಗ್ಯಕರ ನೈಸರ್ಗಿಕ ವಿಧಾನವನ್ನೇ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಆ ವಿಧಾನವನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡುತ್ತಿದ್ದೇವೆ. ಕ್ಯಾಲೋರಿ ಕರಗಿಸುವ ರಹಸ್ಯ, ವಿಚಿತ್ರವಾದರೂ ಇದು ಸತ್ಯ!

ಅಕ್ಕಿ ಮತ್ತು ತೆಂಗಿನೆಣ್ಣೆ ರೆಸಿಪಿಯೇ ಈ ವಿಧಾನವಾಗಿದ್ದು ಇದು ನೈಸರ್ಗಿಕವಾಗಿ ದೇಹದ ಕೊಬ್ಬು ಕರಗಿಸುವ ಅಸ್ತ್ರವಾಗಿದೆ. ಈ ರೆಸಿಪಿಯನ್ನು ತಯಾರಿಸುವ ವಿಧಾನವನ್ನು ಕೆಳಗೆ ನಾವು ನೀಡುತ್ತಿದ್ದು ಇದು ನಿಮ್ಮ ದೇಹದಲ್ಲಿ ಮಾಡುವ ಮ್ಯಾಜಿಕ್ ಅನ್ನು ನೀವೇ ಅರಿತುಕೊಳ್ಳಬಹುದಾಗಿದೆ.

*ತೆಂಗಿನೆಣ್ಣೆ - 1 ಚಮಚ

*ಅಕ್ಕಿ - 1/2 ಕಪ್

Try This Secret Rice And Coconut Oil Recipe To Burn Calories

ಇತ್ತೀಚಿನ ಸಂಶೋಧನೆಯ ಪ್ರಕಾರ, ಅಕ್ಕಿ ಮತ್ತು ತೆಂಗಿನೆಣ್ಣೆ ಕ್ಯಾಲೋರಿಗಳನ್ನು ಕರಗಿಸುವಲ್ಲಿ ಸಹಾಯ ಮಾಡಲಿದೆ ಎಂದಾಗಿದೆ ಅಂತೆಯೇ ಕೊಬ್ಬನ್ನು ಕರಗಿಸುತ್ತದೆ. ಸಿದ್ಧತಾ ಸಮಯದಲ್ಲಿ ಅಕ್ಕಿಯ ಕಣಗಳ ನಡುವೆ ತೆಂಗಿನೆಣ್ಣೆ ಪ್ರವೇಶ ಮಾಡುತ್ತದೆ. ಈ ಮಿಶ್ರಣವು ಜೀರ್ಣಕ್ರಿಯೆ ಪ್ರಕ್ರಿಯೆಯು ತೂಕಕ್ಕೆ ಕಾರಣವಾಗಿರುವ ನಿರ್ದಿಷ್ಟ ಸಕ್ಕರೆ ಮತ್ತು ಕೊಬ್ಬಿಗೆ ಇದು ತಡೆಯೊನ್ನುಡ್ಡುತ್ತದೆ.

ಅಕ್ಕಿ ಮತ್ತು ತೆಂಗಿನೆಣ್ಣೆ ಮಿಶ್ರಣವು ನಿಮ್ಮ ಜೀರ್ಣಕ್ರಿಯೆಯ ವ್ಯವಸ್ಥೆ ಸಾಮರ್ಥ್ಯವನ್ನು ವಿಭಾಗಿಸಿ ಕೊಬ್ಬನ್ನು ಕರಗಿಸುವಂತೆ ಮಾಡುತ್ತದೆ ಇದರಿಂದ ಕೊಬ್ಬಿನ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ.ಈ ಕ್ರಿಯೆಯು ಕ್ಯಾಲೋರಿಗಳನ್ನು ಕರಗಿಸಲು ನಿಮಗೆ ಸಹಾಯ ಮಾಡಿ ದೇಹದಲ್ಲಿರುವ ಕೊಬ್ಬನ್ನು ನಿವಾರಿಸುತ್ತದೆ. ಐಸ್ ತಿನ್ನುವುದರಿಂದ ಕ್ಯಾಲರಿ ಕಡಿಮೆಯಾಗುತ್ತಾ?

ಇದನ್ನು ಮಾಡುವುದು ಹೇಗೆ?‎

Try This Secret Rice And Coconut Oil Recipe To Burn Calories

*ಪ್ಯಾನ್‎ನಲ್ಲಿ ಸ್ವಲ್ಪ ನೀರನ್ನು ಕಾಯಿಸಿಕೊಳ್ಳಿ

*ಇದಕ್ಕೆ ಒಂದು ಚಮಚದಷ್ಟು ತೆಂಗಿನೆಣ್ಣೆಯನ್ನು ಹಾಕಿ.

*ಚೆನ್ನಾಗಿ ಕಲಸಿ, ಮಿಶ್ರಣಕ್ಕೆ 1/2 ಕಪ್‎ನಷ್ಟು ಅಕ್ಕಿಯ ಕಾಳುಗಳನ್ನು ಬೆರೆಸಿ

*ಇನ್ನು ಅಕ್ಕಿ ಚೆನ್ನಾಗಿ ಬೇಯುವವರೆಗೆ ನೀರು ಕುದಿಯಲಿ

*ಇದೀಗ ಪಾತ್ರೆಗೆ ಮಿಶ್ರಣವನ್ನು ಹಾಕಿ ಮತ್ತು 12 ಗಂಟೆಗಳ ಕಾಲ ಇದನ್ನು ಫ್ರಿಡ್ಜ್‎ನಲ್ಲಿರಿಸಿ.

*ಖಾಲಿ ಹೊಟ್ಟೆಗೆ ಮಿಶ್ರಣವನ್ನು ಸೇವಿಸಿ

*ಫಲಕಾರಿ ಫಲಿತಾಂಶಗಳನ್ನು ಪಡೆದುಕೊಳ್ಳಲು ಈ ಕ್ರಿಯೆಯನ್ನು 15 ದಿನಗಳಿಗೊಮ್ಮೆ ಮಾಡಿ.

English summary

Try This Secret Rice And Coconut Oil Recipe To Burn Calories

Have you ever looked at your old pictures and realised that you have put on quite a bit of weight, in a rather short time? Do you often experience frustration and disappointment because of your weight? if you want a natural remedy that can help you burn calories very quickly and effectively, and help you reduce weight within a matter of days, then you should try this rice and coconut oil recipe.
Story first published: Wednesday, May 18, 2016, 10:10 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more