For Quick Alerts
ALLOW NOTIFICATIONS  
For Daily Alerts

ಸುಖ ನಿದ್ದೆಗಾಗಿ ಅನುಸರಿಸಿ ಸುಪ್ತ ಬದ್ಧ ಕೋನಾಸನ

By Super
|

ಯೋಗಾಸನಗಳ ಮೂಲಕ ದೇಹದ ಹಲವು ತೊಂದರೆಗಳನ್ನು ಸುಲಭವಾಗಿ ಎದುರಿಸಬಹುದು. ನಿದ್ರಾರಾಹಿತ್ಯ ತೊಂದರೆಗೂ ಒಂದು ಯೋಗಾಸನವಿದೆ. ಅದೇ ಸುಪ್ತ ಬುದ್ಧ ಕೋನಾಸಾನ ಅಥವಾ ಆರಾಮದಾಯಕ ಭಂಗಿ. ಈ ಪದಗಳನ್ನು ವಿಂಗಡಿಸಿದರೆ ಸುಪ್ತ ಎಂದರೆ ನೆಲದಲ್ಲಿ ಮಲಗಿರುವುದು, ಬದ್ಧ ಎಂದರೆ ಒಂದು ಮಿತಿಗೆ ಬದ್ಧನಾಗಿರುವುದು ಮತ್ತು ಕೋನಾಸನ ಎಂದರೆ ದೇಹವನ್ನು ಒಂದು ಕೋನದಲ್ಲಿರುವಂತೆ ಬಗ್ಗಿಸುವುದು.

ನಮ್ಮ ನಿತ್ಯದ ಚಟುವಟಿಕೆಗಳಿಗೆ ನಮ್ಮ ದೇಹವನ್ನು ವಿವಿಧ ರೀತಿಯಲ್ಲಿ ಬಳುಕಿಸಿದ ಬಳಿಕ ದೇಹಕ್ಕೆ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡಲು ನಿದ್ದೆ ಬೇಕು. ಸುಖಕರ ನಿದ್ದೆಗೆ ಈ ಆಸನ ಅತ್ಯಂತ ಸೂಕ್ತವಾಗಿದೆ. ಎಷ್ಟೇ ವ್ಯಸ್ತರಿದ್ದರೂ ಇದ್ದರೂ ಆಗಾಗ ತಂಪು ತಾಣಗಳಿಗೆ ಭೇಟಿ ನೀಡಿ ಉತ್ತಮ ಹವೆ ಮತ್ತು ಕಣ್ಣುಗಳಿಗೆ ತಂಪು ಪಡೆದುಕೊಳ್ಳುವ ಮೂಲಕ ಮನಸ್ಸಿಗೆ ಮತ್ತು ದೇಹಕ್ಕೆ ಮುದ ಪಡೆದುಕೊಳ್ಳಬಹುದು.

ಅಲ್ಲದೇ ಒಂದು ವೇಳೆ ನೀವು ಇದುವರೆಗೆ ಯೋಗಾಸನ ಪ್ರಯತ್ನಿಸಿರದೇ ಇದ್ದರೆ ಈ ಆಸನ ನಿಮಗೆ ಪ್ರಾರಂಭದ ಹಂತವಾಗಲು ಸೂಕ್ತವಾಗಿದೆ. ನಿಮ್ಮ ಬಿಡುವಿನ ಪ್ರವಾಸದಲ್ಲಿ ಈ ಆಸನವನ್ನು ಅನುಸರಿಸಿದರೆ ಎರಡೂ ಕಡೆಯಿಂದ ನಿಮಗೆ ಲಾಭಕರವಾಗುತ್ತದೆ. ಈ ಆಸನದ ಮಹತ್ವ ಏನೆಂದರೆ ನಾವು ಸಾಮಾನ್ಯವಾಗಿ ಕಾಲುಗಳನ್ನು ಅಗಲಿಸುವುದೇ ಇಲ್ಲ. ರಾತ್ರಿ ಮಲಗುವಾಗಲೂ ಜೋಡಿಸಿಯೇ ಇರುವ ಕಾರಣ ಸೊಂಟ ಮತ್ತು ನಿತಂಬಗಳು ಹೆಚ್ಚಾಗಿ ಒಂದಕ್ಕೊಂದು ಅಂಟಿಯೇ ಇದ್ದು ರಕ್ತಸಂಚಾರಕ್ಕೆ ಸರಿಯಾದ ದಾರಿ ನೀಡಿರುವುದಿಲ್ಲ. ನಿದ್ರೆ ಬರುತ್ತಿಲ್ಲವೇ? ಮಾತ್ರೆ ಬಿಡಿ, ಯೋಗ ಮಾಡಿ

Supta Baddha Konasana Or Reclining Bound Angle Pose For Better Sleep

ಈ ಭಂಗಿಯಲ್ಲಿ ಸೊಂಟದ ಸ್ನಾಯುಗಳು ಹೆಚ್ಚು ವಿಸ್ತಾರವಾಗುವ ಮೂಲಕ ಹಾಗೂ ವಿಸ್ತಾರಗೊಂಡ ಎದೆ, ಭುಜ, ಪಕ್ಕೆಲುಬುಗಳಿಂದಾಗಿ ಹೆಚ್ಚಿನ ವಾಯುವನ್ನು ಶ್ವಾಸಕೋಶಗಳು ಪಡೆಯಲು ಸಾಧ್ಯವಾಗುತ್ತದೆ. ಇದು ಮನಸ್ಸಿನ ಒತ್ತಡವನ್ನು ನಿವಾರಿಸಲು ಹಾಗೂ ಬಳಲಿದ ದೇಹ ಪುನಃಶ್ಚೇತನ ಪಡೆಯಲು ನೆರವಾಗುತ್ತದೆ. ಈ ಆಸನವನ್ನು ಅನುಸರಿಸುವುದು ಹೇಗೆ ಎಂಬುದನ್ನು ಹಂತಹಂತವಾಗಿ ಈ ಕೆಳಗೆ ನೀಡಲಾಗಿದೆ ಮುಂದೆ ಓದಿ...

ಹಂತ 1:
ಮೊದಲು ಶವಾಸನ ಅಥವಾ ಉದ್ದಕ್ಕೆ ಮಲಗಿ ಉಸಿರನ್ನು ಪೂರ್ಣವಾಗಿ ಒಳಗೆಳೆದುಕೊಳ್ಳಿ. ಈಗ ನಿಧಾನವಾಗಿ ಬೆನ್ನನ್ನು ಹಿಂದೆ ಬಾಗಿಸುತ್ತಾ ನೆಲದಲ್ಲಿ ಬೆನ್ನು ಬರುವಂತೆ ಮಲಗಿ. ಎರಡು ಹಸ್ತಗಳನ್ನು ಸೊಂಟದ ಅಕ್ಕಪಕ್ಕ ಬರುವಂತೆ ಇರಿಸಿ. ಈಗ ನಿಧಾನವಾಗಿ ಮೊದಲು ಬಲಗಾಲನ್ನು ಮಡಚಿ ಬಲಪಾದವನ್ನು ಸಾಧ್ಯವಾದಷ್ಟು ಸೊಂಟದ ಕೆಳಗೆ ಬರುವಂತೆ ಮಾಡಿ. ಬಳಿಕ ಎಡಗಾಲನ್ನೂ ಹೀಗೇ ಹತ್ತಿರ ತನ್ನಿ. ಈ ಹಂತದಲ್ಲಿ ಕುತ್ತಿಗೆಯ ಕೆಳಗೆ ನೋವಾಗುವಂತಿದ್ದರೆ ಚಿಕ್ಕ ದಿಂಬನ್ನು ಉಪಯೋಗಿಸಬಹುದು. ಆದರೆ ದಿಂಬು ಉಪಯೋಗಿಸದೇ ಕುತ್ತಿಗೆಯನ್ನು ನೆಲಮಟ್ಟದಲ್ಲಿರಿಸುವ ಮೂಲಕ ಹೆಚ್ಚಿನ ಪ್ರಯೋಜನವಿದೆ. ಎರಡೂ ಹಸ್ತಗಳು ನೆಲಕ್ಕೆ ತಾಕಿರಲಿ. ಈ ಟಾಪ್ 10 ಕೊಡುಗೆ ಯೋಗ ಮಾಡುವವರಿಗೆ ಮಾತ್ರ

ಹಂತ 2
ಈಗ ಬಲ ಮೊಣಕಾಲನ್ನು ಬಲಬದಿಗೂ ಎಡಮೊಣಕಾಲನ್ನು ಎಡಬದಿಗೂ ಮಡಚಿ. ಇದೇ ಹೊತ್ತಿನಲ್ಲಿ ಎರಡೂ ಪಾದಗಳು ಒಂದಕ್ಕೊಂದು ತಾಕಿರಲಿ. ಎಷ್ಟು ಸಾಧ್ಯವೋ ಅಷ್ಟೂ ಅಗಲಿಸಿ. ಕಾಲುಗಳಿಂದ ಪಾದಗಳ ಮೇಲೆ ಕೊಂಚ ಒತ್ತಡ ನೀಡಿ. ಜೊತೆಗೇ ನಿತಂಬಗಳಿಂದ ನೆಲವನ್ನು ಒತ್ತುತ್ತಿರುವಂತೆ ಎರಡೂ ಕಾಲುಗಳನ್ನು ಸಾಧ್ಯವಾದಷ್ಟು ಅಗಲಿಸಿ. ಪ್ರಾರಂಭದಲ್ಲಿ ಕುಹರ (pelvis)ದ ಭಾಗದಲ್ಲಿ ಕೊಂಚ ನೋವಾಗುವಂತಿದ್ದರೂ ಕ್ರಮೇಣ ಅಭ್ಯಾಸವಾದಂತೆ ಎರಡೂ ತೊಡೆಗಳು ನೆಲದ ಮೇಲೆ ಇಡುವಷ್ಟು ಅಗಲಿಸಲು ಸಾಧ್ಯ.

ಈಗ ಎರಡೂ ಕೈಗಳನ್ನು ಮೇಲೆತ್ತಿ ತಲೆಯ ಹಿಂಭಾಗಕ್ಕೆ ತನ್ನಿ ಮತ್ತು ಪೂರ್ಣವಾಗಿ ಉಸಿರು ಬಿಡಿ. ಈಗ ಮತ್ತೊಮ್ಮೆ ಪೂರ್ಣ ಉಸಿರೆಳೆದುಕೊಂಡು ಕೈಗಳನ್ನು ಮೇಲಿನಿಂದ ಕೆಳಕ್ಕೆ ತಂದು ನಲವತ್ತೈಡು ಡಿಗ್ರಿ ಕೋನದಲ್ಲಿರುವಂತೆ ದೇಹದ ಎರಡೂ ಬದಿ ಅಗಲಿಸಿ. ಈಗ ಹಸ್ತದ ಭಾಗ ಮೇಲಿರಲಿ.

ಹಂತ 3
ಈ ಹಂತದಲ್ಲಿ ಉಸಿರು ಕಟ್ಟಿಕೊಂಡು ಕಾಲುಗಳನ್ನು ಸಾಧ್ಯವಾದಷ್ಟು ನೆಲಕ್ಕೆ ತಾಕಿಸಲು ಯತ್ನಿಸಿ. ಒಂದು ವೇಳೆ ನಿಮ್ಮ ಕುಹರ ಬಹಳ ಗಡುಸಾಗಿದ್ದರೆ ಕೊಂಚ ನೋವು ಎನಿಸಬಹುದು. ಆದರೆ ಈ ಪ್ರಯತ್ನ ನಿಮ್ಮ ಕೆಳಹೊಟ್ಟೆ ಮತ್ತು ಸೊಂಟದ ಸ್ನಾಯುಗಳನ್ನು ಬಲಿಷ್ಠವಾಗಿಸಲು ನೆರವಾಗುತ್ತದೆ.

ಹಂತ 4
ಈ ಭಂಗಿಯಲ್ಲಿ ಕನಿಷ್ಠ ಒಂದು ನಿಮಿಷವಾದರೂ ಇರಲು ಯತ್ನಿಸಿ. ಒಂದು ವೇಳೆ ಅಷ್ಟೂ ಹೊತ್ತು ಉಸಿರು ಕಟ್ಟಿಕೊಂಡಿರಲು ಸಾಧ್ಯವಾಗದೇ ಇದ್ದರೆ ಎರಡು ಬಾರಿ ಉಸಿರೆಳೆದುಕೊಳ್ಳಬಹುದು. ಅಭ್ಯಾಸವಾದಂತೆ ಈ ಭಂಗಿಯಲ್ಲಿ ನಿಧಾನವಾಗಿ ಹೆಚ್ಚಿನ ಸಮಯ ವಿನಿಯೋಗಿಸುತ್ತಾ ಹತ್ತು ನಿಮಿಷಗಳವರೆಗೆ ಬರಬಹುದು.

ಈ ಭಂಗಿಯಿಂದ ಹೊರಬರಲು ಮೊದಲು ಕೈಗಳನ್ನು ಸೊಂಟದ ಕೆಳಗೆ ಬರುವಂತೆ ಮಾಡಿ ಅಗಲಿಸಿದ್ದ ಕಾಲುಗಳನ್ನು ಮೇಲೆತ್ತಿ ಮೊಣಕಾಲುಗಳು ತಾಕುವಂತೆ ಮಾಡಿ. ಈಗ ಮೊದಲು ಬಲಗಾಲನ್ನು ಮುಂದಕ್ಕೆ ಚಾಚಿ ಸಡಿಲಗೊಳಿಸಿ. ಬಳಿಕ ಎಡಗಾಲನ್ನು ಸಡಿಲಗೊಳಿಸಿ. ಕೆಲವು ನಿಮಿಷ ಇದೇ ಭಂಗಿಯಲ್ಲಿದ್ದು ಬಳಿಕ ಕುಳಿತುಕೊಳ್ಳಿ.

ಪ್ರಾರಂಭದಲ್ಲಿ ಈ ಹಂತ ಕೊಂಚ ಕಷ್ಟ ಎನಿಸಿದರೂ ಕೆಲವೇ ದಿನಗಳಲ್ಲಿ ಸುಲಭವಾಗುತ್ತದೆ. ಈ ಹಂತದಲ್ಲಿ ನಿರಾಳವಾಗಿರುವ ಮೂಲಕ ಬಳಿಕ ಬರುವ ನಿದ್ದೆ ಗಾಢವಾಗಿರುತ್ತದೆ. ಇದು ಆರೋಗ್ಯದ ಲಕ್ಷಣವಾಗಿದೆ.

ಈ ಆಸನದ ಪ್ರಯೋಜನಗಳು
ಈ ಆಸನದಲ್ಲಿ ಕೆಳಹೊಟ್ಟೆ ಅಗಲವಾಗುವ ಕಾರಣ ವಿಶೇಷವಾಗಿ ದೊಡ್ಡಕರುಳಿಗೆ ಹೆಚ್ಚಿನ ಸ್ಥಳಾವಕಾಶ ಮತ್ತು ರಕ್ತಪರಿಚಲನೆ ದೊರೆತು ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಅಲ್ಲದೇ ಕೆಳಹೊಟ್ಟೆಯ ಭಾಗದಲ್ಲಿ ಹೆಚ್ಚಿನ ರಕ್ತಸಂಚಾರವಾಗುವ ಮೂಲಕ ನರವ್ಯವಸ್ಥೆ ಉತ್ತಮಗೊಳ್ಳುತ್ತದೆ ಹಾಗೂ ಒತ್ತಡ ಮತ್ತು ಉದ್ವೇಗದಿಂದ ಹೊರಬರಲು ಸಾಧ್ಯವಾಗುತ್ತದೆ.

ಎಚ್ಚರಿಕೆ
ಈ ಆಸನದಲ್ಲಿ ಸೊಂಟ ಮತ್ತು ಕೆಳಹೊಟ್ಟೆಯ ಸ್ನಾಯುಗಳಿಗೆ ಹೆಚ್ಚಿನ ಒತ್ತಡ ಬೀಳುವ ಕಾರಣ ಸೊಂಟನೋವಿದ್ದವರು ಈ ಆಸನವನ್ನು ಅನುಸರಿಸದಿರುವುದು ಲೇಸು. ಅಲ್ಲದೇ ಮೊಣಕಾಲ ಗಂಟಿನ ನೋವು ಅಥವಾ ಪೆಟ್ಟಾಗಿದ್ದವರಿಗೂ ಈ ಆಸನತರವಲ್ಲ. ಉಳಿದವರೆಲ್ಲರಿಗೂ ಉತ್ತಮವಾಗಿದೆ.

English summary

Supta Baddha Konasana Or Reclining Bound Angle Pose For Better Sleep

Supta Baddha Konasana, also known as the relaxing pose, again like any other Yoga asanas has been originated from the Sanskrit term. If you dissect this word, it is an amalgamation of three terms – “Supta”, which means lying down reclining, “Baddha” which means bound and “Kona” which means angle. Human body is not a machine. Even if people treat their body like a machine, it also needs rest.
X
Desktop Bottom Promotion