For Quick Alerts
ALLOW NOTIFICATIONS  
For Daily Alerts

ಬರೀ, ಒಂದೇ ತಿಂಗಳಿನಲ್ಲಿ 10 ಕೆ.ಜಿ ತೂಕ ಇಳಿಸಿಕೊಳ್ಳಿ!

By manu
|

ದಿನೇ ದಿನೇ ಹೆಚ್ಚುತ್ತಿರುವ ತೂಕವು ನಿಮ್ಮನ್ನು ಕಂಗೆಡಿಸುತ್ತಿದೆಯೇ? ನೀವು ಆಸೆಪಟ್ಟು ಆಗಾಗ ಧರಿಸುತ್ತಿದ್ದ ನಿಮ್ಮ ಫೇವರಿಟ್ ಡ್ರೆಸ್ ಧರಿಸಲು ಸಾಧ್ಯವಾಗುತ್ತಿಲ್ಲವೇ? ನಿಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳಲು ನೀವು ಮಾಡಿದ ಡಯಟ್ ಎಲ್ಲವೂ ವರ್ಥವಾಯಿತೆ? ಅಯ್ಯೋ, ಬಿಡಿ! ತೂಕ ಕಡಿಮೆ ಮಾಡಿಕೊಳ್ಳಲು ಭೂಮಿಯ ಮೇಲೆ ನಿಮ್ಮ ಕೈಗೆ ಎಟುಕುವ ಪ್ರತಿಯೊಂದು ವಿಧಾನವನ್ನು ನೀವು ಪ್ರಯತ್ನಿಸಿ ನೋಡಿದ್ದೀರಿ, ಆದರೆ ಅವುಗಳಿಂದ ನಿಮಗೆ ಯಾವುದೇ ಪ್ರಯೋಜನವಾಗಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುತ್ತಿರಬಹುದು. ತೂಕ ಇಳಿಸಿಕೊಳ್ಳಲು ನೈಸರ್ಗಿಕ ಮದ್ದು-ಅದೇ 'ಪಪ್ಪಾಯಿ ಹಣ್ಣು'

ಚಿಂತಿಸದಿರಿ, ಒಂದು ವಿಚಾರವನ್ನು ತಿಳಿದುಕೊಳ್ಳಿ, ತೂಕ ಕಡಿಮೆ ಮಾಡಿಕೊಳ್ಳುವುದು ಎಂಬುದು ರಾತ್ರೋ ರಾತ್ರಿ ಸಂಭವಿಸುವ ಪ್ರಕ್ರಿಯೆಯಲ್ಲ. ತೂಕ ಹೆಚ್ಚಾದರೆ ಕೇವಲ ಸೌಂದರ್ಯಕ್ಕೆ ಮಾತ್ರ ಹಾನಿಯಲ್ಲ, ಆರೋಗ್ಯಕ್ಕೂ ಸಹ ಹಾನಿಕಾರಕ. ಅಧಿಕ ತೂಕವು ನಿಮಗೆ ಮೊಣಕಾಲು ನೋವು, ಸುಸ್ತು, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಸಮಸ್ಯೆ, ಹೃದ್ರೋಗ ಸಮಸ್ಯೆ ಇತ್ಯಾದಿಗಳಿಗೆ ಕಾರಣವಾಗುತ್ತದೆ. ತೂಕ ಕಡಿಮೆ ಮಾಡಲು ಉಪವಾಸ ಮಾಡುತ್ತಿದ್ದರೆ ಎಚ್ಚರ!

ಆದ್ದರಿಂದ ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಲ್ಲಿ, ನಾವು ಇಲ್ಲಿ ನೀಡಿರುವ ಕೆಲವೊಂದು ಆರೋಗ್ಯದ ಸಲಹೆಗಳನ್ನು ತಿಳಿದುಕೊಂಡು ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಆಗ ನೋಡಿ ಕೇವಲ ಒಂದೇ ತಿಂಗಳಿನಲ್ಲಿ ಹತ್ತು ಕೆ.ಜಿ ತೂಕವನ್ನು ನೀವು ಹೇಗೆ ಕಡಿಮೆ ಮಾಡಿಕೊಳ್ಳುತ್ತೀರಿ ಎಂದು!. ಬನ್ನಿ ಆ ಸಲಹೆಗಳು ಯಾವುವು ಎಂದು ನೋಡೋಣ. ಅತ್ಯುತ್ತಮ ಗಿಡಮೂಲಿಕೆಗಳನ್ನು ಬಳಸಿ ತೂಕ ಇಳಿಸಿ

ಜೇನು ಬೆರೆಸಿದ ಬಿಸಿನೀರು ಕುಡಿಯಿರಿ

ಜೇನು ಬೆರೆಸಿದ ಬಿಸಿನೀರು ಕುಡಿಯಿರಿ

ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ದೊಡ್ಡ ಚಮಚ ಜೇನು ಮತ್ತು ಎರಡು ದೊಡ್ಡಚಮಚ ಲಿಂಬೆ ರಸ ಸೇರಿಸಿ. ಈ ಪೇಯವನ್ನು ಬೆಳಿಗ್ಗೆದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಸೇವಿಸಿ. ಇದು ಸಹಾ ತೂಕ ಇಳಿಸುವ ಕ್ರಿಯೆಯನ್ನು ಶೀಘ್ರಗೊಳಿಸುತ್ತದೆ.

ಬಿಸಿಹಾಲಿಗೆ ಒಂದು ಚಮಚ ಜೇನು

ಬಿಸಿಹಾಲಿಗೆ ಒಂದು ಚಮಚ ಜೇನು

ಒಂದು ಲೋಟ ಬಿಸಿಹಾಲಿಗೆ ಒಂದು ಚಮಚ ಜೇನು ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ಆರೋಗ್ಯ ಉತ್ತಮವಾಗುವ ಜೊತೆಗೇ ತೂಕ ಇಳಿಯಲೂ ನೆರವಾಗುತ್ತದೆ.

ಸರಿಯಾಗಿ ನೀರು ಕುಡಿಯಿರಿ

ಸರಿಯಾಗಿ ನೀರು ಕುಡಿಯಿರಿ

ನೀರು ತೂಕ ಇಳಿಸಿಕೊಳ್ಳಲು ತುಂಬಾ ಉಪಯೋಗಕ್ಕೆ ಬರುತ್ತೆ. ನೀರನ್ನು ಹೆಚ್ಚು ಕುಡಿಯುವುದರಿಂದ ಹಸಿವನ್ನೂ ನಿಯಂತ್ರಿಸಿ ಅನಗತ್ಯವಾಗಿ ಹೆಚ್ಚು ಊಟ ಮಾಡುವುದನ್ನು ತಡೆಯಬಹುದು. ಊಟವಾದ ನಂತರ ಬಿಸಿ ನೀರನ್ನು ಸೇವಿಸುತ್ತಾ ಬಂದರೆ ಕೆಲವೇ ದಿನಗಳಲ್ಲಿ ಫಲಿತಾಂಶವನ್ನು ನಿಮಗೆ ತಿಳಿಯುತ್ತದೆ. ಬಿಸಿ ನೀರಿನೊಂದಿಗೆ ನಿಂಬೆರಸ ಅಥವಾ ಜೇನನ್ನು ಬೆರೆಸಿ ಕುಡಿದರೂ ಬೊಜ್ಜನ್ನು ಬೇಗ ಕರಗಿಸಿಕೊಳ್ಳಬಹುದು.

ತಣ್ಣೀರಿನ ಸ್ನಾನ!

ತಣ್ಣೀರಿನ ಸ್ನಾನ!

ಹೌದು, ತಣ್ಣೀರು ನಿಮ್ಮ ದೇಹವನ್ನು ಗಡ ಗಡ ಎಂದು ನಡುಗಿಸುತ್ತವೆ, ಆದರೆ ಈ ಚಳಿಯು ನಿಮ್ಮ ದೇಹದಲ್ಲಿರುವ ಕೊಬ್ಬಿನ ಕೋಶಗಳನ್ನು ಕರಗಿಸಿ ನಿಮ್ಮ ದೇಹಕ್ಕೆ ಬೇಕಾದ ಶಾಖವನ್ನು ನೀಡುತ್ತವೆ. ಕೊಬ್ಬು ಕರಗಿದ ಮೇಲೆ ತೂಕ ಕರಗದೆ ಇರುತ್ತದೆಯೇ?

 ಗ್ರೀನ್ ಟೀ

ಗ್ರೀನ್ ಟೀ

ನಿಮ್ಮ ಬೆಳಗಿನ ಕಾಫಿ ಬದಲಿಗೆ ಗ್ರೀನ್ ಟೀಯನ್ನು ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಗ್ರೀನ್ ಟೀಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆಯಾದ್ದರಿಂದ ನಿಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆಯು ಹೆಚ್ಚಾಗುತ್ತದೆ!.

ಬಾಳೆದಿಂಡಿನ ಜ್ಯೂಸ್

ಬಾಳೆದಿಂಡಿನ ಜ್ಯೂಸ್

ಬಾಳೆದಿಂಡನ್ನು ಚಿಕ್ಕದಾದ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ (ಸುಮಾರು ಅರ್ಧ ಕೇಜಿ)

*ನೀರು-ಸಮಪ್ರಮಾಣದಲ್ಲಿ

*ಬೆಲ್ಲ (ಕಪ್ಪು ಅಥವಾ ಕಂದುಬೆಲ್ಲ) ಅಥವಾ ಜೇನುತುಪ್ಪ-ರುಚಿಗೆ ತಕ್ಕಷ್ಟು

*ಏಲಕ್ಕಿ ಪುಡಿ -ರುಚಿಗೆ ತಕ್ಕಷ್ಟು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿಧಾನ:

ವಿಧಾನ:

ಮಿಕ್ಸಿಯಲ್ಲಿ ನೀರು ಮತ್ತು ಬಾಳೆದಿಂಡಿನ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಬೆಲ್ಲ ಅಥವ ಜೇನುತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಇನ್ನಷ್ಟು ಗೊಟಾಯಿಸಿ. ಬಳಿಕ ಸ್ವಚ್ಛವಾದ ಬಟ್ಟೆಯಲ್ಲಿ ಸೋಸಿ ದೊಡ್ಡ ನಾರುಗಳನ್ನು ನಿವಾರಿಸಿ. ತಣ್ಣಗಿರುವಂತೆಯೇ ಕುಡಿಯಿರಿ.

ಉತ್ತಮ ಉಪಾಹಾರ

ಉತ್ತಮ ಉಪಾಹಾರ

ಬೆಳಗ್ಗೆ ನೀವು ಸೇವಿಸುವ ಉಪಾಹಾರವು ನಿಮಗೆ ಸಂಪೂರ್ಣವಾಗಿ ಹೊಟ್ಟೆ ತುಂಬಿಸುವಂತೆ ಇರಬೇಕು ಎಂಬುದನ್ನು ಮರೆಯಬಾರದು. ಏಕೆಂದರೆ ಬೆಳಗಿನ ಉಪಾಹಾರವನ್ನು ನೀವು ಸರಿಯಾಗಿ ಸೇವಿಸಿದರೆ, ದಿನದ ಸಮಯದಲ್ಲಿ ಅದು ಇದು ಎಂದು ಕುರುಕಲು ತಿಂಡಿಗಳನ್ನು ಸೇವಿಸುವುದನ್ನು ನೀವು ಬಿಡುತ್ತೀರಿ.

ಬೀನ್ಸ್

ಬೀನ್ಸ್

ದಿನನಿತ್ಯ ಆಹಾರದಲ್ಲಿ ಬೀನ್ಸ್ ಅನ್ನು ಬಳಸದಿರಲು ಮರೆಯದಿರಿ, ಬೀನ್ಸ್‌ನಲ್ಲಿರುವ ನಾರನ್ನು ಜೀರ್ಣಿಸಲು ಜೀರ್ಣಾಂಗಗಳಿಗೆ ಹೆಚ್ಚಿನ ಶಕ್ತಿ ಅವಶ್ಯವಿರುವ ಕಾರಣ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ.ತನ್ಮೂಲಕ ಕೊಬ್ಬು ಕಡಿಮೆಯಾಗಿ ತೂಕ ಇಳಿಯುತ್ತದೆ.

ವ್ಯಾಯಾಮ

ವ್ಯಾಯಾಮ

ಇದನ್ನು ಹೇಳಬೇಕೆ? ವ್ಯಾಯಾಮ ಮಾಡಿದರೆ ದೇಹದಲ್ಲಿರುವ ಅಧಿಕ ಕ್ಯಾಲೋರಿಗಳು ಕರಗುತ್ತವೆ, ಕ್ಯಾಲೋರಿಗಳು ಕರಗಿದರೆ ದೇಹದ ತೂಕವು ಕಡಿಮೆಯಾಗುತ್ತದೆ, ಜೊತೆಗೆ ನಿಮಗೆ ಆರೋಗ್ಯವು ಸಹ ದೊರೆಯುತ್ತದೆ.

ಅಧಿಕ-ಪ್ರೋಟಿನ್

ಅಧಿಕ-ಪ್ರೋಟಿನ್

ನಿಮ್ಮ ಉಪಾಹಾರದಲ್ಲಿ ಅಧಿಕ ಪ್ರೋಟಿನ್ ಇರಬೇಕೆಂಬುದನ್ನು ನೀವು ಮರೆಯಬಾರದು. ಅಂದರೆ ಮೊಟ್ಟೆ, ಬೀನ್ಸ್, ಮೊಳಕೆಗಳು ಇತ್ಯಾದಿಗಳು ನಿಮ್ಮ ಉಪಾಹಾರದ ಭಾಗವಾಗಿರಲಿ. ಅಧಿಕ ಪ್ರೋಟಿನ್ ಕೊಬ್ಬಿನ ಮೇಲೆ ಹೋರಾಡಿ ದೇಹ ತೂಕ ಪಡೆದುಕೊಳ್ಳದಂತೆ ಕಾಪಾಡುತ್ತದೆ!.

ಚಟುವಟಿಕೆಯಿಂದಿರಿ

ಚಟುವಟಿಕೆಯಿಂದಿರಿ

ಕೆಲಸಕ್ಕೆ ನಡೆದುಕೊಂಡು ಹೋಗಿ ಇಲ್ಲವೇ ಸೈಕಲ್‌ನಲ್ಲಿ ಹೋಗಿ. ಲಿಫ್ಟ್ ಬದಲಿಗೆ ಮೆಟ್ಟಿಲುಗಳನ್ನು ಹತ್ತಿ. ಸಾಧ್ಯವಾದಷ್ಟು ಚಟುವಟಿಕೆಯಿಂದಿರಿ, ವಿಶೇಷವಾಗಿ ಬೆಳಗಿನ ಜಾವ ಚಟುವಟಿಕೆಯಿಂದಿರಿ!.

ವೀಳ್ಯದೆಲೆ

ವೀಳ್ಯದೆಲೆ

ಒಂದು ಎಳೆಯ ವೀಳ್ಯದೆಲೆಯೊಳಗೆ ಐದು ಕಾಳುಮೆಣಸಿನ ಕಾಳುಗಳನ್ನು (ಕಪ್ಪು ಕಾಳುಗಳು) ಇಟ್ಟು ಮಡಚಿ ಇಡಿಯಾಗಿ ಬಾಯಿಯಲ್ಲಿಟ್ಟು ಅಗಿಯಿರಿ. ಮೊದಮೊದಲಿಗೆ ಕಾಳುಮೆಣಸಿನ ಖಾರ ಕೊಂಚ ನಾಲಿಗೆಗೆ ಬಿಸಿ ಮುಟ್ಟಿಸುತ್ತದೆ. ಆದರೆ ಶೀಘ್ರದಲ್ಲಿಯೇ ಲಾಲಾರಸದ ಪ್ರಮಾಣ ಹೆಚ್ಚುತ್ತಾ ಹೋಗುವುದರಿಂದ ಖಾರ ಕಡಿಮೆಯಾಗುತ್ತದೆ. ಆದರೆ ಇದನ್ನು ಈಗಲೇ ನುಂಗಬಾರದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವೀಳ್ಯದೆಲೆ

ವೀಳ್ಯದೆಲೆ

ಸ್ವಲ್ಪ ಹೊತ್ತು ಅಂದರೆ ಸುಮಾರು ನಾಲ್ಕರಿಂದ ಐದು ನಿಮಿಷಗಳ ಬಳಿಕ ಹೊಟ್ಟೆಯಲ್ಲಿ ಕೊಂಚ ಹಸಿವು ಅನ್ನಿಸಿದಾಗ, ಅಷ್ಟು ಹೊತ್ತಿಗೆ ಬಾಯಿ ತುಂಬಿರುತ್ತದೆ. ಆ ಬಳಿಕ ನಿಧಾನವಾಗಿ ಈ ದ್ರವವನ್ನು ನುಂಗಿ. ಈ ವಿಧಾನವನ್ನು ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಬಳಿಕ ಸುಮಾರು ಮುಕ್ಕಾಲು ಗಂಟೆ ಏನನ್ನೂ ಸೇವಿಸಬಾರದು. ವಾರದೊಳಗೆಯೇ ತೂಕದಲ್ಲಿ ವ್ಯತ್ಯಾಸ ಕಂಡುಬರುತ್ತದೆ.

ಸೂರ್ಯನ ಬೆಳಕಿನಲ್ಲಿ ಓಡಾಡಿ

ಸೂರ್ಯನ ಬೆಳಕಿನಲ್ಲಿ ಓಡಾಡಿ

ಒಂದು ಅಧ್ಯಯನದ ಪ್ರಕಾರ ಮುಂಜಾನೆ ಸೂರ್ಯನ ಬೆಳಕಿನಲ್ಲಿ ಓಡಾಡಿದರೆ ಕೆಲವು ಕೆ.ಜಿ ತೂಕ ಕಡಿಮೆಯಾಗುತ್ತದೆ. ಏಕೆಂದರೆ ಇದರಿಂದ ನಿಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆಯ ವೇಗ ಹೆಚ್ಚಾಗುತ್ತದೆ.

English summary

Simple Morning Habits Will Help You Lose Up To 10 Kilos In A Month!

Do you often feel that you cannot dress the way you want to because of your overweight issues? Are you struggling with weight loss by following every diet and fitness advice out there, but in vain? If yes, we completely understand your frustration. When you have been trying every possible way to lose some weight and get fit, but with no effect, it can make you feel like giving up! However, when it comes to weight loss, persistence is key.
X
Desktop Bottom Promotion