ಅತೀವ ಸೊಂಟ ನೋವೇ..? ಚಿಂತೆ ಬಿಡಿ, ಈ ಲೇಖನ ಓದಿ

By: manu
Subscribe to Boldsky

ಆಧುನಿಕ ಜೀವನಕ್ರಮ ನಮ್ಮೆಲ್ಲರನ್ನು ಸೋಮಾರಿಯಾಗಿಸುತ್ತಾ ಒಂದು ಯಂತ್ರದಂತಾಗಿಸುತ್ತಿದೆ. ಯಂತ್ರ ಎಂಬ ಪದವನ್ನು ಏಕೆ ಬಳಸಲಾಗುತ್ತಿದೆ ಎಂದರೆ ಯಂತ್ರಕ್ಕೆ ಒಂದು ನಿಯಮ ಇದೆ. ಇದೇ ಪ್ರಕಾರ ಇಷ್ಟೇ ವೇಗದಲ್ಲಿ ತಿರುಗಬೇಕು, ಇಲ್ಲಿಯೇ ನಿಲ್ಲಬೇಕು ಎಂಬೆಲ್ಲಾ ಕಟ್ಟಳೆಗಳಿವೆ. ಅಂತೆಯೇ ಇಂದಿನ ಜೀವನಕ್ರಮ ಮಾನವನ ದೇಹವನ್ನೂ ಇಂತಹ ಕಟ್ಟಳೆಯೊಳಗೆ ಬಂಧಿಸುತ್ತಿದೆ. ವಾಸ್ತವವಾಗಿ ನಿಸರ್ಗ ಮಾನವ ಸಹಿತ ಸಕಲ ಜೀವಿಗಳನ್ನು ಒಂದು ನಿಯಮಕ್ಕೆ ಒಳಪಡಿಸಿದೆ. ಸೊಂಟ ನೋವಿನ ಸಂಕಟಕ್ಕೆ ಪರಿಹಾರ 

ಆ ಪ್ರಕಾರ ಪ್ರತಿ ಜೀವಿಗೂ ದೈಹಿಕ ಚಟುವಟಿಕೆಯೇ ಅದರ ಆರೋಗ್ಯದ ಗುಟ್ಟಾಗಿದೆ. ಮಾನವನ ಶರೀರವೂ ಪ್ರಾಣಿಗಳನ್ನು ಅಟ್ಟಾಡಿಸಿ ಹಿಡಿದು, ಕೃಷಿಯ ಮೂಲಕ ಆಹಾರ ಬೆಳೆದು ಸೇವಿಸಲೆಂದೇ ರೂಪಿತವಾಗಿದೆ. ಆದರೆ ಇಂದಿನ ಜೀವನಕ್ರಮ ನಿಸರ್ಗನಿಯಮಕ್ಕೆ ವಿರುದ್ದವಾದ ಕಾರಣ ಸ್ಥೂಲಕಾಯ, ಮೂಳೆ ಮಾಂಸಗಳಿಗೆ ಸಾಕಷ್ಟು ಕೆಲಸವೇ ಇಲ್ಲದೇ ಕ್ಷಮತೆ ಕಳೆದುಕೊಂಡಿರುವುದು ಇತ್ಯಾದಿಗಳು ಎಲ್ಲರನ್ನೂ ಆವರಿಸಿವೆ. ಎಲ್ಲರನ್ನೂ ಅಂದರೆ ಈಗತಾನೇ ಹುಟ್ಟಿದ ಮಗುವಿನಿಂದ ಹಿಡಿದು ವಯೋವೃದ್ಧರವರೆಗೂ.

ಆಧುನಿಕತೆಗೆ ಬಂಧಿಯಾದ ಈ ಜಗತ್ತಿನ ಯಾರೇ ಆಗಲಿ, ಅವರ ಆರೋಗ್ಯ ಕೊಂಚವಾದರೂ ಪ್ರಭಾವಿತವಾಗಿಯೇ ಇದೆ. ತನ್ಮೂಲಕ ಆರೋಗ್ಯದಿಂದ ಕಳಕಳಿಸಬೇಕಿದ್ದ ಮಾನವರ ಶರೀರಗಳು ಗಾಳಿ ತುಂಬಿದ ಬೆಲೂನಿನಂತಾಗಿದ್ದು ಹಲವು ಕಾಯಿಲೆಗಳಿಗೆ ಸುಲಭವಾಗಿ ತುತ್ತಾಗುತ್ತಿವೆ. ಅಂತಹದ್ದೇ ಒಂದು ಇಂದಿನ ದಿನದ ಸಾಮಾನ್ಯ ತೊಂದರೆ ಎಂದರೆ ಸೊಂಟದ ಅಥವಾ ಕೆಳಬೆನ್ನಿನ ನೋವು. ಒಂದು ಸಮೀಕ್ಷೆಯ ಪ್ರಕಾರ ಯು.ಎಸ್.ಎ. ದಲ್ಲಿಯೇ ಎಂಭತ್ತು ಪ್ರತಿಶತ ಜನರಿಗೆ ಸೊಂಟದ ನೋವಿನ ತೊಂದರೆ ಇದೆ.

ಈ ಮಾಹಿತಿ ಗಾಬರಿಪಡಿಸುವಂತಿದ್ದರೆ ಈ ಸಂಖ್ಯೆಯಲ್ಲಿ ಏರುತ್ತಿರುವ ವೇಗ ಕಂಡರೆ ಇನ್ನಷ್ಟು ದಿಗಿಲಾಗುತ್ತದೆ. ಈ ನೋವಿಗೆ ಒಳಗಾದವರು ಇದಕ್ಕೆ ತಕ್ಕ ಪರಿಹಾರವನ್ನು ಹುಡುಕುತ್ತಲೇ ಇದ್ದಾರೆ. ಸಾಮಾನ್ಯವಾಗಿ ಇದಕ್ಕೆ ಮೊದಲು ಕಾಣುವುದು ಮೂಳೆಗಳ ವೈದ್ಯರನ್ನು (ಆರ್ಥೀಪೀಡಿಕ್). ಆದರೆ ವಾಸ್ತವವಾಗಿ ಇಂದಿನ ವೈದ್ಯ ವಿಜ್ಞಾನದ ಬಳಿ ಸೊಂಟದ ನೋವಿಗೆ ಸಮರ್ಥವಾದ ಮದ್ದು ಇಲ್ಲ. ಇರುವುದೇನಿದ್ದರೂ ಈ ನೋವನ್ನು ಹರಡದಂತೆ, ಮತ್ತು ನೋವಿನ ಪ್ರಭಾವ ಮೆದುಳಿಗೆ ತಲುಪದಿರುವಂತೆ ಮಾಡುವುದು ಮಾತ್ರ. ಅಯ್ಯೋ ಸೊಂಟ ನೋವು, ಏನು ಮಾಡೋದು?

ಆದರೆ ಬೆನ್ನು ನೋವನ್ನು ಕಡಿಮೆಗೊಳಿಸಲು ಇದು ಬಂದ ಹಾಗೇ ಹಿಂದಿರುವಂತೆ ಮಾಡುವುದೇ ಉತ್ತಮ ಮಾರ್ಗ. ಸರಿಯಾದ ಕ್ರಮ ಅನುಸರಿಸಿದರೆ ದೇಹದ ರೋಗ ನಿರೋಧಕ ಶಕ್ತಿಯೇ ಪುನಃ ಹಿಂದಿನ ಸ್ಥಿತಿಗೆ ತರಲು ಸಾಧ್ಯವಿದೆ. ವೈದ್ಯರು ಮತ್ತು ಫಿಸಿಯೋಥೆರಪಿಸ್ಟ್ ತಜ್ಞರ ಅನುಭವದ ಪ್ರಕಾರ ಕೆಳಗಿನ ಸ್ಲೈಡ್ ಷೋ ಮೂಲಕ ವಿವರಿಸಲಾಗಿರುವ ವಿಧಾನಗಳನ್ನು ಅನುಸರಿಸಿದರೆ ದೇಹವೇ ನೋವನ್ನು ಕಡಿಮೆಗೊಳಿಸಲು ಸಮರ್ಥವಾಗುತ್ತದೆ. ಬನ್ನಿ, ಇವು ಯಾವುದು ಎಂದು ನೋಡೋಣ...

ವಿರಾಮವನ್ನು ಕಡಿಮೆ ಮಾಡಿ

ವಿರಾಮವನ್ನು ಕಡಿಮೆ ಮಾಡಿ

ಸೊಂಟನೋವೇ, ಮಲಗಿ ಆರಾಮ ಮಾಡಿ, ಅಥವಾ ಮಲಗಿ ಎಂದು ಹೆಚ್ಚಿನವರು ಸಲಹೆ ನೀಡುತ್ತಾರೆ. ವಾಸ್ತವವಾಗಿ ಸೊಂಟದ ನೋವಿಗೆ ಈ ಸಲಹೆಯೇ ಅತ್ಯಂತ ದೊಡ್ಡ ತಪ್ಪು. ಒಂದರ್ಥದಲ್ಲಿ ವಿರಾಮ ಹೆಚ್ಚಾದುದರಿಂದಲೇ ಈ ಸೊಂಟದ ನೋವು ಬಂದಿದೆ. ಹೆಚ್ಚಿನ ಸಮಯ ಕುಳಿತೇ ಇರುವ ಉದ್ಯೋಗಗಳ (ಉದಾಹರಣೆಗೆ ವಾಹನ ಚಾಲನೆ, ಕಛೇರಿಯಲ್ಲಿ ಕೆಲಸ ಇತ್ಯಾದಿ) ಮೂಲಕ ಸೊಂಟದ ನೋವು ಹೆಚ್ಚಾಗಿರುವುದು ಸಾಬೀತಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿರಾಮವನ್ನು ಕಡಿಮೆ ಮಾಡಿ

ವಿರಾಮವನ್ನು ಕಡಿಮೆ ಮಾಡಿ

ಆದ್ದರಿಂದ ಯಾವಾಗ ಸೊಂಟದ ನೋವು ಪ್ರಾರಂಭವಾಯಿತೋ, ಆಗೆಲ್ಲಾ ಸಾಧ್ಯವಾದಷ್ಟು ನಡೆದಾಡುತ್ತಲೇ ಇರಬೇಕು. ಈ ಸಂದರ್ಭದಲ್ಲಿ ಆರಾಮ್ ಕಮರ್ ದೆ ದರ್ಕ್ ಕೆ ಲಿಯೇ ಹರಾಂ ಹೈ ಎನ್ನಬಹುದು.

ಸತತವಾಗಿ ವ್ಯಾಯಾಮ ಮಾಡುತ್ತಿರಿ

ಸತತವಾಗಿ ವ್ಯಾಯಾಮ ಮಾಡುತ್ತಿರಿ

ಸೊಂಟದ ನೋವಿಗೆ ಅತ್ಯುತ್ತಮ ಮದ್ದು ಎಂದರೆ ಇದಕ್ಕೆ ವಿರುದ್ದವಾಗಿ ಸೆಟೆದು ನಿಲ್ಲುವುದು. ಅಂದರೆ ಬೆಳಗ್ಗಿನಿಂದ ರಾತ್ರಿ ಮಲಗುವವರೆಗೂ ಏನಾದರೊಂದು ನೆವ ಹಿಡಿದು ದೇಹವನ್ನು ದಂಡಿಸುತ್ತಾ ಇರುವುದು. ಇದು ಸುಲಭದ ನಡಿಗೆಯಾಗಿರಬಹುದು... ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸತತವಾಗಿ ವ್ಯಾಯಾಮ ಮಾಡುತ್ತಿರಿ

ಸತತವಾಗಿ ವ್ಯಾಯಾಮ ಮಾಡುತ್ತಿರಿ

ಮೆಟ್ಟಿಲು ಹತ್ತುವುದು ಇಳಿಯುವುದಾಗಬಹುದು, ಸೈಕಲ್ ತುಳಿಯುವುದಾಗಬಹುದು, ಒಟ್ಟಾರೆ ಸುಮ್ಮನೆ ಕುಳಿತುಕೊಳ್ಳುವ ಸಂದರ್ಭವನ್ನು ಕಡಿಮೆ ಮಾಡಬೇಕು. ನಿತ್ಯವೂ ಒಂದು ಅಥವಾ ಎರಡು ಘಂಟೆಯನ್ನು ವ್ಯಾಯಮಕ್ಕಾಗಿಯೇ ಮೀಸಲಿಡಬೇಕು. ಸಮಯವಿಲ್ಲ ಎಂಬ ಸಬೂಬು ಬೇಡ.

ಯೋಗಾಭ್ಯಾಸ ಮಾಡಿ

ಯೋಗಾಭ್ಯಾಸ ಮಾಡಿ

ಯೋಗಾಸನಗಳನ್ನು ಅನುಸರಿಸುವುದು ಸಹಾ ಇನ್ನೊಂದು ಉತ್ತಮ ಕ್ರಮ. ಆದರೆ ನಿಮ್ಮ ಆರೊಗ್ಯಕ್ಕೆ ಸೂಕ್ತವಾದ ಆಸನಗಳು ಯಾವುವು ಎಂಬುದನ್ನು ಮೊದಲು ಯೋಗತಜ್ಞರಿಂದ ಅರಿತು ಅನುಸರಿಸಬೇಕು. ಈ ವಿಧಾನವನ್ನು ವೈದ್ಯವಿಜ್ಞಾನವೂ ಒಪ್ಪಿಕೊಂಡ ಬಳಿಕ ಇದನ್ನು ಅನುಸರಿಸದೇ ಇರಲು ನಮ್ಮ ಸೋಮಾರಿತನದ ಹೊರತಾಗಿ ಬೇರಾವುದೇ ಕಾರಣ ಕಾಣುವುದಿಲ್ಲ.

ಉತ್ತಮ ದೇಹದ ಭಂಗಿಯನ್ನು ಅನುಸರಿಸಿ

ಉತ್ತಮ ದೇಹದ ಭಂಗಿಯನ್ನು ಅನುಸರಿಸಿ

ಕುಳಿತುಕೊಳ್ಳುವಾಗ ಬೆನ್ನು ನೆಟ್ಟಗಿರಲಿ, ಕುತ್ತಿಗೆ ಶರ್ಟಿನ ಕಾಲರಿಗೆ ತಾಕುವಂತಿರಲಿ, ಎದೆ ಮುಂದಿರಲಿ, ನಡೆಯುವಾಗ ಎರಡೂ ಕೈಗಳನ್ನು ಬೀಸಿ ನಡೆಯಿರಿ ಎಂದೆಲ್ಲಾ ನಮಗೆ ಚಿಕ್ಕವರಿದ್ದಾಗ ಹೇಳಿದ್ದುದು ಈಗ ಮರೆತು ಹೋಗಿರಬಹುದು. ಈ ಸೂಚನೆಗಳನ್ನು ಅನುಸರಿಸುವುದನ್ನು ಮರೆತಿರುವುದರಿಂದಲೇ ಈಗ ನಮಗೆ ಸೊಂಟನೋವು ಬಂದಿದೆ. ಹಿರಿಯರಾಗಿರುವ ಕಾರಣ ಬೇರೆಯವರು ನಮಗೆ ನೆಟ್ಟಗೆ ಕುಳಿತುಕೊಳ್ಳಲು ಹೇಳಿದರೆ ನಮಗೆ ಸಿಟ್ಟು ಬರುತ್ತದೆಯಾದುದರಿಂದ ಯಾರೂ ಹೇಳಲು ಹೋಗುವುದಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉತ್ತಮ ದೇಹದ ಭಂಗಿಯನ್ನು ಅನುಸರಿಸಿ

ಉತ್ತಮ ದೇಹದ ಭಂಗಿಯನ್ನು ಅನುಸರಿಸಿ

ಆದ್ದರಿಂದ ನಮ್ಮ ಅಹಮ್ಮಿಕೆಯನ್ನು ಕೊಂಚ ಬದಿಗಿಟ್ಟು ಮೂರನೆಯ ತರಗತಿಯಲ್ಲಿ ಈ ಬಗ್ಗೆ ಏನು ಹೇಳಿದ್ದರು ಎಂಬುದನ್ನು ಮತ್ತೊಮ್ಮೆ ಮನನ ಮಾಡಿ ಅಂತೆಯೇ ನಡೆಯುವ ಮೂಲಕ ಸೊಂಟದ ನೋವಿಗೆ ವಿದಾಯ ಹೇಳಲು ಸಾಧ್ಯ. ಸೂಕ್ತ ಭಂಗಿಯನ್ನು ಅನುಸರಿಸಿ ನಡೆದಾಡುವುದು, ಕುಳಿತುಕೊಳ್ಳುವುದು, ಮಲಗುವುದು ಮೊದಲಾದವನ್ನು ಇಂದಿನಿಂದಲೇ ಅನುಸರಿಸಿ.

ಹೊಟ್ಟೆಯ ಸ್ನಾಯುಗಳನ್ನು ದೃಢಗೊಳಿಸುವತ್ತ ಗಮನ ನೀಡಿ

ಹೊಟ್ಟೆಯ ಸ್ನಾಯುಗಳನ್ನು ದೃಢಗೊಳಿಸುವತ್ತ ಗಮನ ನೀಡಿ

ನಾವು ನಗದೇ ಇರುವ ಮೂಲಕ ಕೆನ್ನೆಯ ಸ್ನಾಯುಗಳಿಗೆ ಅತಿ ಕಡಿಮೆ ವ್ಯಾಯಾಮ ನೀಡುತ್ತೇವೆ. ಅಂತೆಯೇ ಹೊಟ್ಟೆಯ ಸ್ನಾಯುಗಳಿಗೂ ಸಹಾ. ನಾವು ದಿನದ ಯಾವುದೇ ಹೊತ್ತಿನಲ್ಲಿ ಪೂರ್ಣವಾಗಿ ಉಸಿರಾಡುವುದಿಲ್ಲ, ಬಗ್ಗುವ ವ್ಯಾಯಾಮ ಮಾಡುವುದಿಲ್ಲ.. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೊಟ್ಟೆಯ ಸ್ನಾಯುಗಳನ್ನು ದೃಢಗೊಳಿಸುವತ್ತ ಗಮನ ನೀಡಿ

ಹೊಟ್ಟೆಯ ಸ್ನಾಯುಗಳನ್ನು ದೃಢಗೊಳಿಸುವತ್ತ ಗಮನ ನೀಡಿ

ಗಹಗಹಿಸಿ ನಗುವುದಿಲ್ಲ, ಜೋರಾಗಿ ಉಸಿರು ಬಿಡುವುದಿಲ್ಲ, ಪರಿಣಾಮವಾಗಿ ಹೊಟ್ಟೆಯ ಸ್ನಾಯುಗಳು ಸಡಿಲವಾಗಿ ಮುಂದೆ ಬರಲು ಸಾಧ್ಯವಾಗಿದೆ. ಇದೇ ಸೊಂಟದ ನೋವಿಗೂ ಕಾರಣಾವಾಗಿದೆ. ಈಗ ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುವತ್ತ ಗಮನ ನೀಡುವ ಮೂಲಕ ಆಗಿರುವ ತಪ್ಪನ್ನು ತಿದ್ದಿಕೊಳ್ಳಲು ಸಾಧ್ಯವಿದೆ.

English summary

Remedies For Excessive Pain In Lower Back

Modern lifestyle is transforming humans into machines, but it is good to remember that the reality is entirely different. Men may work like machines, but their body is made up of blood and muscles that machines do not have. The faulty lifestyle has brought some great harm to the human body. This lifestyle is affecting everyone on this planet of ours. The impact of this faulty lifestyle can be witnessed from a newborn child to a dying old man.
Subscribe Newsletter