For Quick Alerts
ALLOW NOTIFICATIONS  
For Daily Alerts

ದಿನನಿತ್ಯ ಒಂದು ಗ್ಲಾಸ್ ಹಾಲು ಕುಡಿಯಿರಿ-ತೂಕ ಇಳಿಸಿಕೊಳ್ಳಿ

By Manu
|

ಹಾಲು ಕುಡಿದರೆ ಇದರಲ್ಲಿರುವ ಕೊಬ್ಬು ತೂಕ ಏರಿಸುತ್ತದೆ ಎಂದೇ ನಾವೆಲ್ಲಾ ತಿಳಿದುಕೊಂಡಿದ್ದೇವೆ. ಆದರೆ ಹಾಲು ಕುಡಿದೂ ತೂಕ ಇಳಿಸಬಹುದು ಎಂದು ಹೇಳಿದರೆ ಅಚ್ಚರಿಯಾಗುತ್ತದೆ. ಹಾಲಿಗೆ ಬೆಲ್ಲ ಹಾಕಿ ಕುಡಿಯಿರಿ, ಆರೋಗ್ಯ ಪಡೆಯಿರಿ

ಹಾಲಿನ ಕೊಬ್ಬು ತೂಕ ಏರಿಸುತ್ತದೆ ಎಂಬ ಮಾಹಿತಿಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡ ಸಂಸ್ಥೆಗಳು ತೂಕ ಇಳಿಸುವವರಿಗಾಗಿ ಹಾಲಿನಪುಡಿಯಿಂದ ತಯಾರಿಸಿದ ಸ್ಕಿಮ್ಡ್ ಮಿಲ್ಕ್, ಕೊಬ್ಬು ಕಡಿಮೆ ಮಾಡಿದ ಲೋ ಫ್ಯಾಟ್ ಮಿಲ್ಕ್ ಮೊದಲಾದ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ಬಿಡುಗಡೆಗೊಳಿಸಿವೆ. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ವಾಸ್ತವವಾಗಿ ನೈಸರ್ಗಿಕ ಹಾಲಿನಿಂದ ತೂಕ ಹೆಚ್ಚುವ ಹೊರತಾಗಿ ಹಲವಾರು ಪ್ರಯೋಜನಗಳಿವೆ. ಅಷ್ಟೇ ಅಲ್ಲ, ತೂಕ ಏರಲು ಹಾಲಿನ ಕೊಬ್ಬು ನೆರವಾದರೂ ಇದರಿಂದ ಮಾತ್ರವೇ ತೂಕ ಏರುತ್ತದೆ ಎನ್ನುವುದು ತಪ್ಪಾಗುತ್ತದೆ. ತೂಕ ಏರುತ್ತದೆ ಎಂದು ಹಾಲನ್ನು ಕುಡಿಯುವುದನ್ನೇ ಬಿಟ್ಟವರಿದ್ದಾರೆ. ವಾಸ್ತವವಾಗಿ ಇದರಿಂದ ಅಮೂಲ್ಯವಾದ ಪೋಷಕಾಂಶಗಳಿಂದ ವಂಚಿತರಾಗಬೇಕಾಗುತ್ತದೆ.ಹಾಲು-ಜೇನಿನ ಜೋಡಿಯನ್ನು ಎಷ್ಟು ಹೊಗಳಿದರೂ ಸಾಲದು!

ಆದ್ದರಿಂದ ಅತಿ ಹೆಚ್ಚು ತೂಕ ಇಲ್ಲದ ಹೊರತು ಹಾಲನ್ನು ಬಿಟ್ಟೇ ಬಿಡುವುದು ತರವಲ್ಲ. ಸ್ಥೂಲಕಾಯದ ಮಿತಿಗಳನ್ನು ಮೀರಿದ ವ್ಯಕ್ತಿಗಳು ಮಾತ್ರ ಲೋ ಫ್ಯಾಟ್ ಸ್ಕಿಮ್ಡ್ ಮಿಲ್ಕ್ ಎಂಬ ಉತ್ಪನ್ನಗಳನ್ನು ಸೇವಿಸುವುದು ಉತ್ತಮ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ದಿನನಿತ್ಯ ತುಳಸಿ ಬೆರೆಸಿದ ಹಾಲು ಕುಡಿಯಿರಿ- ಆರೋಗ್ಯ ಪಡೆಯಿರಿ

ಈ ಹಾಲಿನಲ್ಲಿ ಕ್ಯಾಲೋರಿಗಳು ಕಡಿಮೆ ಇದ್ದು ಕೊಬ್ಬಿನ ಅಂಶ ಸಹಾ 0.5 ಶೇಖಡಾಕ್ಕಿಂತಲೂ ಕಡಿಮೆ ಇರುವ ಕಾರಣ ತೂಕ ಇಳಿಸುವ ಇತರ ಕ್ರಿಯೆಗಳಿಗೆ ನೆರವು ನೀಡುತ್ತದೆ.ಅಂದರೆ ಈ ಹಾಲು ಸಂಪೂರ್ಣವಾಗಿ ಅನಾರೋಗ್ಯಕರ ಎಂದು ಅರ್ಥವಲ್ಲ, ಬದಲಿಗೆ ಇದರಲ್ಲಿ ದೇಹಕ್ಕೆ ಅಗತ್ಯವಾದ ಪ್ರೋಟೀನು ಮತ್ತು ಇತರ ಪೋಷಕಾಂಶಗಳನ್ನು ಹಾಗೇ ಉಳಿಸಿಕೊಂಡು ಬರಲಾಗಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಲು ಇತರ ಹಾಲಿನಂತೆಯೇ ನೆರವಾಗುತ್ತದೆ. ಬರೀ, ಒಂದೇ ತಿಂಗಳಿನಲ್ಲಿ 10 ಕೆ.ಜಿ ತೂಕ ಇಳಿಸಿಕೊಳ್ಳಿ!

ಬನ್ನಿ, ಈ ಲೋ ಫ್ಯಾಟ್ ಸ್ಕಿಮ್ಡ್ ಮಿಲ್ಕ್ ಉತ್ಪನ್ನಗಳ ಸೇವನೆಯ ಬಗ್ಗೆ ಕೆಲವು ಅಚ್ಚರಿಯ ನಿಜಾಂಶಗಳನ್ನು ನೋಡೋಣ......

ಹಸಿವನ್ನು ಕಡಿಮೆಗೊಳಿಸುತ್ತದೆ

ಹಸಿವನ್ನು ಕಡಿಮೆಗೊಳಿಸುತ್ತದೆ

ಹಾಲಿನಲ್ಲಿ ಪ್ರೋಟೀನು ಹೇರಳವಾಗಿದ್ದು ಒಂದು ಲೋಟ ಹಾಲು ಕುಡಿದ ಬಳಿಕ ಹೆಚ್ಚಿನ ಹೊತ್ತಿನವರೆಗೆ ದೇಹಕ್ಕೆ ಶಕ್ತಿ ನೀಡುತ್ತಾ ಬರುತ್ತದೆ. ಇದೇ ಕಾರಣಕ್ಕೆ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದನ್ನು ಶಿಫಾರಸ್ಸು ಮಾಡಲಾಗಿದೆ.

ಹಸಿವನ್ನು ಕಡಿಮೆಗೊಳಿಸುತ್ತದೆ

ಹಸಿವನ್ನು ಕಡಿಮೆಗೊಳಿಸುತ್ತದೆ

ನಿಮ್ಮ ನೆಚ್ಚಿನ ಒಣಫಲ ಅಥವಾ ಒಣ ಆಹಾರಗಳೊಂದಿಗೆ ಸಾಮಾನ್ಯ ಹಾಲಿನ ಬದಲಿಗೆ ಕೊಬ್ಬುರಹಿತ ಹಾಲು ಕುಡಿಯುವ ಮೂಲಕ, ಸ್ಮೂಥಿ, ಲಸ್ಸಿಗಳನ್ನು ತಯಾರಿಸಿ ಕುಡಿಯುವ ಮೂಲಕವೂ ದಿನದ ಚಟುವಟಿಕೆಗೆ ಅಗತ್ಯವಾದ ಪೋಷಕಾಂಶಗಳನ್ನು ಪಡೆಯಬಹುದು. ಕೊಬ್ಬು ಇಲ್ಲದ ಕಾರಣ ತೂಕ ಏರದೇ ತೂಕ ಇಳಿಸುವ ಪ್ರಕ್ರಿಯೆಗಳಿಗೆ ಹೆಚ್ಚಿನ ಫಲ ದೊರಕುತ್ತದೆ.

ವ್ಯಾಯಾಮದ ಬಳಿಕದ ಸೇವನೆ

ವ್ಯಾಯಾಮದ ಬಳಿಕದ ಸೇವನೆ

ವ್ಯಾಯಾಮದ ಬಳಿಕ ಬಳಲಿದ ದೇಹಕ್ಕೆ ಅಗತ್ಯವಾದ ಪ್ರೋಟೀನುಗಳು ಮತ್ತು ಪೋಷಕಾಂಶಗಳನ್ನು ಈ ಹಾಲು ಸಹಾ ನೀಡುತ್ತದೆ. ಇದರಲ್ಲಿ ಕೊಬ್ಬು ಇಲ್ಲದ ಕಾರಣ ಸ್ಥೂಲದೇಹಿಗಳಿಗೆ ಸೂಕ್ತವಾಗಿದೆ. ಆದರೆ ಸಾಮಾನ್ಯ ಮೈಕಟ್ಟಿನ ವ್ಯಕ್ತಿಗಳಿಗೆ ಸ್ನಾಯುಗಳ ಬೆಳವಣಿಗೆ ಮತ್ತು ದೃಢಕಾಯಕ್ಕೆ ಕೊಬ್ಬಿನ ಅಗತ್ಯವಿರುವ ಕಾರಣ ವ್ಯಾಯಾಮದ ಬಳಿಕ ಸಾಮಾನ್ಯ ಹಾಲು ಉತ್ತಮವಾಗಿದೆ.

ವಿಟಮಿನ್ ಡಿ ದೊರಕುತ್ತದೆ

ವಿಟಮಿನ್ ಡಿ ದೊರಕುತ್ತದೆ

ತೂಕ ಹೆಚ್ಚಲು ದೇಹದಲ್ಲಿ ವಿಟಮಿನ್ ಡಿ ಕೊರತೆಯೂ ಕಾರಣ. ತೂಕ ಏರುತ್ತದೆ ಎಂಬ ಹೆದರಿಕೆಯಿಂದ ಹಾಲನ್ನೇ ಕುಡಿಯದೇ ಇರುವುದರಿಂದ ವಿಟಮಿನ್ ಡಿ ಸಿಗದೇ ಕೊಬ್ಬು ಕರಗಲು ಅಸಾಧ್ಯವಾಗುತ್ತದೆ.

ವಿಟಮಿನ್ ಡಿ ದೊರಕುತ್ತದೆ

ವಿಟಮಿನ್ ಡಿ ದೊರಕುತ್ತದೆ

ಆದ್ದರಿಂದ ಹಾಲು ಕುಡಿಯುವ ಮೂಲಕ, ಅದರಲ್ಲೂ ಸ್ಥೂಲದೇಹಿಗಳು ಲೋ ಫ್ಯಾಟ್ ಹಾಲನ್ನು ಕುಡಿಯುವ ಮೂಲಕ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ಪಡೆಯಬಹುದು.

ವಿಟಮಿನ್ ಡಿ ದೊರಕುತ್ತದೆ

ವಿಟಮಿನ್ ಡಿ ದೊರಕುತ್ತದೆ

ಆದರೆ ಕೇವಲ ಹಾಲು ಕುಡಿದರೆ ಮಾತ್ರ ಸಾಲದು, ಕೊಂಚ ಬಿಸಿಲಿನಲ್ಲಿ ಅಡ್ಡಾಡಲೂ ಬೇಕು. ಏಕೆಂದರೆ ಈ ವಿಟಮಿನ್ ಡಿ ಅನ್ನು ಹೇಹ ಹೀರಿಕೊಳ್ಳಬೇಕಾದರೆ ಸೂರ್ಯನ ಕಿರಣಗಳು ಬೇಕೇ ಬೇಕು. ಇಲ್ಲದಿದ್ದರೆ ಹಾಲು ಕುಡಿದರೂ ಇದು ಬಳಸಲ್ಪಡದೇ ವ್ಯರ್ಥವಾಗಿ ಹೊರಹರಿದು ಹೋಗುತ್ತದೆ.

ಜೀವರಾಸಾಯನಿಕ ಕ್ರಿಯೆ ಉತ್ತಮಗೊಳಿಸುತ್ತದೆ

ಜೀವರಾಸಾಯನಿಕ ಕ್ರಿಯೆ ಉತ್ತಮಗೊಳಿಸುತ್ತದೆ

ಹಾಲು, ಕೊಬ್ಬುಸಹಿತ ಅಥವಾ ಕೊಬ್ಬುರಹಿತ ಯಾವುದೇ ಆಗಿರಲಿ, ಇದರ ಸೇವನೆಯಿಂದ ದೇಹದ ಜೀವ ರಾಸಾಯನಿಕ ಕ್ರಿಯೆಗಳು ಉತ್ತಮಗೊಳ್ಳುತ್ತವೆ.

ಜೀವರಾಸಾಯನಿಕ ಕ್ರಿಯೆ ಉತ್ತಮಗೊಳಿಸುತ್ತದೆ

ಜೀವರಾಸಾಯನಿಕ ಕ್ರಿಯೆ ಉತ್ತಮಗೊಳಿಸುತ್ತದೆ

ಪೋಷಕಾಂಶಗಳನ್ನು ಬಳಸಿಕೊಳ್ಳುವ ಗತಿ ಮತ್ತು ಕೊಬ್ಬನ್ನು ದಹಿಸುವ ಕ್ರಿಯೆ ಚುರುಕುಗೊಂಡು ತೂಕ ಇಳಿಯಲು ನೆರವಾಗುತ್ತದೆ. ವಾಸ್ತವವಾಗಿ ತೂಕ ಕಳೆದುಕೊಳ್ಳಬೇಕೆಂದರೆ ಹಾಲು ಕುಡಿಯುವುದು ಅನಿವಾರ್ಯ.

English summary

Facts About How Milk Helps You Lose Weight

Milk and weight loss? Well, you might find it strange, but yes, it is a fact that milk helps in losing weight. But one needs to make it a point to use low-fat skimmed milk and then see how it helps in losing weight. There are many myths surrounding the health benefits of milk. Due to its rich fat content, people going on a diet totally shut it for the fear of gaining weight.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more