For Quick Alerts
ALLOW NOTIFICATIONS  
For Daily Alerts

ಘಮ ಘಮ ಕಾಫಿಯ ಸ್ವಾದಕ್ಕೆ ಬೆರಗಾಗದವರು ಯಾರಿದ್ದಾರೆ ಹೇಳಿ?

By Super
|

ಕಾಫಿ ಭಾರತಕ್ಕೆ ಹೇಗೆ ಬಂದಿತು ಎಂಬ ಬಗ್ಗೆ ಒಂದು ಕುತೂಹಲಕರ ಕಥೆಯಿದೆ. ಬಾಬಾ ಬುಡನ್‌ರವರು ಅರೇಬಿಯಾದಿಂದ ಹಿಂದಿರುಗಿ ಬರುವಾಗ ಕೆಲವು ಕಾಫಿಬೀಜಗಳನ್ನು ತಮ್ಮ ಜೋಳಿಗೆಯಲ್ಲಿ ತಂದು ಚಿಕ್ಕಮಗಳೂರಿನ ಬಾಬಾಬುಡನ್ ಗಿರಿಯಲ್ಲಿ ನೆಟ್ಟಿದ್ದರಂತೆ. ಆದ್ದರಿಂದಲೇ ನಮ್ಮಲ್ಲಿ ಬಹುತೇಕ ಬೆಳೆಯಲಾಗುತ್ತಿರುವ ತಳಿಗೆ 'ಅರೇಬಿಕಾ' ಎಂಬ ಹೆಸರೇ ಇದೆ. ಆದರೆ ಕಾಫಿಯನ್ನು ಜನಪ್ರಿಯಗೊಳಿಸುವಲ್ಲಿ ನೈಜ ಶ್ರಮ ಬ್ರಿಟಿಷರದ್ದಾಗಿದೆ.

ಕಷಾಯದ ಹೊರತಾಗಿ ಬೇರೇನನ್ನೂ ಕುಡಿಯದ ನಮ್ಮ ಹಿರಿಯರಿಗೆ ಅಂದಿನ ದಿನಗಳಲ್ಲಿ ಪುಕ್ಕಟೆ ಕಾಫಿಯನ್ನು ಕುಡಿಸಿ ಕುಡಿಸಿಯೇ ಕಾಫಿಗೆ ದಾಸರನ್ನಾಗಿಸಿದ ಬಳಿಕವೇ ಮಾರಾಟಕ್ಕೆ ಹೊರತಂದರಂತೆ. ಆದರೆ ಕಾಫಿ ಕುಡಿಯುವುದು ಒಳ್ಳೆಯದಲ್ಲ ಎಂದು ಹಲವರು ಅಭಿಪ್ರಾಯ ಪಡುತ್ತಾರೆ.

ಒಂದೇ ಮಾತಿನಲ್ಲಿ ವಿಶ್ವದ ಜನಪ್ರಿಯ ಪೇಯವಾದ ಕಾಫಿಯನ್ನು ತ್ಯಜಿಸುವುದುಂಟೇ? ಅದಕ್ಕೂ ಮೊದಲು ನಿಜವಾಗಿ ಕಾಫಿ ಏಕೆ ಕೆಟ್ಟದ್ದು ಅಥವಾ ಏಕೆ ಒಳ್ಳೆಯದು ಎಂದು ಪರಾಮರ್ಶಿಸಬೇಡವೇ? ಸರಿ, ಈ ಬಗ್ಗೆ ನಡೆದ ಸಂಶೋಧನೆಗಳಿಂದ ಹಲವು ಕುತೂಹಲಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಅದರಂತೆ ಕಾಫಿಯಲ್ಲಿ ಒಳ್ಳೆಯ ಗುಣಗಳೂ ಇರುವಂತೆ ಕೆಲವು ಆರೋಗ್ಯಕರವಲ್ಲದ ಗುಣಗಳೂ ಇವೆ. ಒಂದರ್ಥದಲ್ಲಿ ಅತಿಯಾದರೆ ವಿಷವಾಗುವ ಅಮೃತದಂತೆ ಚಿಕ್ಕಪ್ರಮಾಣದಲ್ಲಿ ಸೇವಿಸಿದರೆ ಇದು ಆರೋಗ್ಯಕ್ಕೆ ಉತ್ತಮವೇ ಆಗಿದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಕಾಫಿಯಲ್ಲಿದೆ ಸೌಂದರ್ಯದ ನೂರೆಂಟು ಉಪಯೋಗ

ಅಂಕಿ ಅಂಶಗಳ ಪ್ರಕಾರ ಒಂದು ಲೋಟ ಕಾಫಿಯಲ್ಲಿ ದಿನಕ್ಕೆ ಅಗತ್ಯವಿರುವಷ್ಟು ಪ್ರಮಾಣದ ಆಂಟಿ ಆಕ್ಸಿಡೆಂಟುಗಳೂ, ಕೆಫೀನ್ ಮತ್ತಿತರ ಪೋಷಕಾಂಶಗಳು ಇವೆ. ಅಂದರೆ ದಿನವೊಂದಕ್ಕೆ ಗರಿಷ್ಟ ಒಂದು ಲೋಟ ಕಾಫಿ ಕುಡಿದರೆ ಆರೋಗ್ಯಕ್ಕೆ ಪೂರಕ, ಅದಕ್ಕಿಂತ ಹೆಚ್ಚು ಕುಡಿದರೆ ಆರೋಗ್ಯಕ್ಕೆ ಮಾರಕ ಎಂದು ನಾವು ಅರ್ಥೈಸಿಕೊಳ್ಳಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈಗ ನೋಡೋಣ.

ನಿಮ್ಮನ್ನು ಸದಾ ಎಚ್ಚರದಲ್ಲಿರಿಸುತ್ತದೆ

ನಿಮ್ಮನ್ನು ಸದಾ ಎಚ್ಚರದಲ್ಲಿರಿಸುತ್ತದೆ

ನಿಮ್ಮ ಗಮನವನ್ನು ಗರಿಷ್ಟ ಮಟ್ಟದಲ್ಲಿರಿಸಲು ಅಗತ್ಯವಿರುವ ಕೆಲಸಗಳಾದ ವಾಹನ ಚಲಾವಣೆ, ಕ್ರೇನ್ ನಡೆಸುವಿಕೆ, ಹೊಲಿಗೆ ಮೊದಲಾದ ಕೆಲಸಗಳನ್ನು ಮಾಡುವ ಮುನ್ನ ಒಂದು ಲೋಟ ಕಾಫಿ ಕುಡಿಯುವುದರಿಂದ ನಿಮ್ಮ ಮೆದುಳು ಸದಾ ಎಚ್ಚರದ ಅವಸ್ಥೆಯಲ್ಲಿದ್ದು ನಿಮ್ಮ ಕೆಲಸದ ಕಡೆಗೆ ಗರಿಷ್ಟ ಗಮನ ನೀಡಲು ಸಾಧ್ಯವಾಗುತ್ತದೆ. ಕಾಫಿಯಲ್ಲಿರುವ ಪೋಷಕಾಂಶಗಳು ರಕ್ತದ ಮೂಲಕ ಮೆದುಳನ್ನು ತಲುಪಿ ಮೆದುಳಿನ ಸಾಮರ್ಥಗಳಾದ ನೆನಪಿನ ಶಕ್ತಿ, ಜಾಗರೂಕತೆ, ಭಾವಾವೇಶ, ಪ್ರತಿಕ್ರಿಯೆ ಮೊದಲಾದವುಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ. ಆದುದರಿಂದ ಬೆಳಗ್ಗಿನ ಉಪಾಹಾರದ ಬಳಿಕ ಒಂದು ಚಿಕ್ಕ ಲೋಟ ಕಾಫಿ ಕುಡಿದು ನಿಮ್ಮ ಕೆಲಸವನ್ನು ಪ್ರಾರಂಭಿಸಿದರೆ ನಿಮ್ಮ ಕಾರ್ಯಕ್ಷಮತೆ ಹೆಚ್ಚುವುದು ಹಾಗೂ ತಪ್ಪುಗಳಾಗುವ ಸಂಭವವೂ ಕಡಿಮೆಯಾಗುತ್ತದೆ.

ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಕಾಫಿ ಕುಡಿದ ಬಳಿಕ ರಕ್ತದಲ್ಲಿ ಬಿಡುಗಡೆಯಾಗುವ ಹಲವು ಪೋಷಕಾಂಶಗಳ ಮೂಲಕ ದೇಹದ ವಿವಿಧ ಚಟುವಟಿಕೆಗಳಿಗೆ ಹೆಚ್ಚಿನ ಶಕ್ತಿ ದೊರಕುವುದರಿಂದ ನಿಮ್ಮ ಕಾರ್ಯಕ್ಷಮತೆಯಲ್ಲಿ ಹೆಚ್ಚಳ ಉಂಟಾಗುತ್ತದೆ. ಆದರೆ ಈ ಕ್ಷಮತೆ ಕೊಂಚಕಾಲದವರೆಗೆ ಇದ್ದು ಬಳಿಕ ಕೊನೆಯಾಗುತ್ತದೆ. ಈ ಕ್ಷಮತೆ ದೈಹಿಕಕ್ಕಿಂತಲೂ ಮಾನಸಿಕವಾಗಿ ಹೆಚ್ಚಿರುವುದರಿಂದ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಸಹಕಾರಿಯಾಗಿದೆ.

ಆಯಾಸದ ಭಾವನೆಯನ್ನು ಕೊನೆಗೊಳಿಸುತ್ತದೆ

ಆಯಾಸದ ಭಾವನೆಯನ್ನು ಕೊನೆಗೊಳಿಸುತ್ತದೆ

ಯಾವುದೇ ಕೆಲಸ ಮಾಡಿದರೂ ಕೊಂಚ ಹೊತ್ತಿನ ಏಕತಾನತೆಯ ಬಳಿಕ ಆಯಾಸವೆನ್ನಿಸುತ್ತದೆ. ಏಕೆಂದರೆ ನಮ್ಮ ಮೆದುಳು ಒಂದೇ ರೀತಿಯ ಸೂಚನೆಗಳನ್ನು ಸತತವಾಗಿ ಪಡೆದುಕೊಳ್ಳಬಯಸುವುದಿಲ್ಲ, ಮೆದುಳಿಗೆ ಯಾವಾಗಲೂ ಬದಲಾವಣೆಯಾಗುತ್ತಲೇ ಇರಬೇಕು. ಹಾಗಾಗಿ ನಾವು ಸತತವಾಗಿ ಒಂದೇ ರೀತಿಯ ಊಟ ಮಾಡಲಾರೆವು, ಒಂದೇ ರೀತಿಯ ಬಟ್ಟೆ ತೊಡಲಾರೆವು. ಕೆಲವೊಮ್ಮೆ ಸತತವಾಗಿ ಕೆಲಸ ಮಾಡಬೇಕಾದಾಗ ಆಯಾಸವೆನ್ನಿಸಿ ವಿಶ್ರಾಂತಿ ಬಯಸುತ್ತೇವೆ. ಈ ಹೊತ್ತಿನಲ್ಲಿ ಸ್ವಲ್ಪ ಕಾಫಿ ಕುಡಿದರೆ ಕಾಫಿಯಲ್ಲಿನ ಕೆಫೀನ್ ಮೆದುಳಿಗೆ ರವಾನೆಯಾಗಿ ಈ ಭಾವನೆಯಿಂದ ಶೀಘ್ರವಾಗಿ ಹೊರಬರಲು ನೆರವಾಗುತ್ತದೆ.

ನ್ಯೂರಾನ್‌ಗಳನ್ನು ಚುರುಕುಗೊಳಿಸಿ ನರವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ

ನ್ಯೂರಾನ್‌ಗಳನ್ನು ಚುರುಕುಗೊಳಿಸಿ ನರವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ

ನಮ್ಮ ದೇಹದಲ್ಲಿ ಮೆದುಳಿನಿಂದ ಹೊರಡುವ ಸೂಚನೆಗಳು ದೇಹದ ಎಲ್ಲಾ ಭಾಗಗಳಿಗೆ ತಲುಪಲು ನ್ಯೂರಾನ್ ಗಳು ಅವಶ್ಯವಾಗಿವೆ. ಈ ನ್ಯೂರಾನ್ ಗಳ ಚಟುವಟಿಕೆಗೆ (adenosine receptor) ಎಂಬ ವ್ಯವಸ್ಥೆ ತಡೆಯೊಡ್ಡುತ್ತದೆ. ವೃದ್ದಾಪ್ಯ ಸಮೀಪಿಸುತ್ತಿದ್ದಂತೆ ಮರೆವು ಹೆಚ್ಚಾಗುವುದು ಇದೇ ಕಾರಣದಿಂದ. ರಕ್ತದ ಮೂಲಕ ಬರುವ ಕೆಫೀನ್ ಈ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವುದರಿಂದ ನ್ಯೂರಾನ್ ಗಳ ಚಲನೆಗೆ ಯಾವುದೇ ಅಡ್ಡಿಯಿಲ್ಲದಂತಾಗಿ ಅತ್ಯಂತ ಕ್ಷಿಪ್ರವಾಗಿ ತಲುಪುತ್ತದೆ. ಪರಿಣಾಮವಾಗಿ ಮೆದುಳು ಚುರುಕಾಗುತ್ತದೆ.

ಯಕೃತ್ ಅನ್ನು ರಕ್ಷಿಸುತ್ತದೆ

ಯಕೃತ್ ಅನ್ನು ರಕ್ಷಿಸುತ್ತದೆ

ಇಟಲಿಯಲ್ಲಿ ಸಂಶೋಧಕರ ತಂಡ ಸುಮಾರು 3,100ಜನರ ಮೇಲೆ ಹದಿನಾರು ವರ್ಷ ನಡೆಸಿದ ಪ್ರಯೋಗಗಳ ಮೂಲಕ ಈಗ ಕಾಫಿ ಸೇವನೆ ಯಕೃತ್ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಶೇಖಡಾ ನಲವತ್ತರಷ್ಟು ಕಡಿಮೆಗೊಳಿಸುತ್ತದೆ ಎಂದು ಕಂಡುಕೊಂಡಿದೆ. ದಿನಕ್ಕೆ ಅಲ್ಪಪ್ರಮಾಣದಲ್ಲಿ ಮೂರು ಬಾರಿ ಕುಡಿಯುವುದರಿಂದ ಐವತ್ತ ಶೇಖಡಾ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ತಿಳಿದುಬಂದಿದೆ.

ಖಿನ್ನತೆಯನ್ನು ಕಡಿಮೆಗೊಳಿಸುತ್ತದೆ

ಖಿನ್ನತೆಯನ್ನು ಕಡಿಮೆಗೊಳಿಸುತ್ತದೆ

ಕಾಫಿ ಕುಡಿಯುವುದರಿಂದ ಮೆದುಳು ಚುರುಕಾಗುವ ಮೂಲಕ ಯಾವುದೇ ವಿಷಯದಿಂದ ಖಿನ್ನಗೊಂಡಿದ್ದ ಮನಸ್ಸು ಸಾಮಾನ್ಯಸ್ಥಿತಿಗೆ ಹಿಂದಿರುಗಲು ನೆರವಾಗುತ್ತದೆ. ಇದು ಕಾಫಿಯ ಉತ್ತಮ ಗುಣಗಳಲ್ಲಿ ಪ್ರಮುಖವಾಗಿದೆ.

ತೂಕ ಕಡಿಮೆಗೊಳಿಸಲು ಸಹಕರಿಸುತ್ತದೆ

ತೂಕ ಕಡಿಮೆಗೊಳಿಸಲು ಸಹಕರಿಸುತ್ತದೆ

ಕಾಫಿಯ ಮೂಲಕ ಜೀರ್ಣಾಗಗಳಿಗೆ ಸೇರುವ ಕೆಫೀನ್ ರಕ್ತ ಸೇರುವ ಮೊದಲು ಕರುಳುಗಳು ಹೆಚ್ಚಿನ ಕೊಬ್ಬನ್ನು ದಹಿಸಬೇಕಾಗಿ ಬರುತ್ತದೆ. ಇದರಿಂದಾಗಿ ಕೊಬ್ಬು ಶೀಘ್ರವಾಗಿ ಕರಗಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಆದರೆ ಕಾಫಿ ಕುಡಿದೇ ತೂಕ ಇಳಿಸುತ್ತೇವೆ ಎಂದು ಇದರ ಅರ್ಥವಲ್ಲ. ತೂಕ ಕಳೆದುಕೊಳ್ಳಲು ಇತರ ಪ್ರಯತ್ನಗಳ ಜೊತೆಗೆ ಪ್ರತಿದಿನ ಅಲ್ಪಪ್ರಮಾಣದಲ್ಲಿ ಕಾಫಿ ಕುಡಿಯುವುದರಿಂದ ನಿಧಾನವಾಗಿ ಆರೋಗ್ಯಕರ ವಿಧಾನದಲ್ಲಿ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತದೆ.

ಆಯಸ್ಸು ಹೆಚ್ಚುತ್ತದೆ

ಆಯಸ್ಸು ಹೆಚ್ಚುತ್ತದೆ

ಆಯಸ್ಸು ಹೆಚ್ಚಲು ಆರೋಗ್ಯ ಉತ್ತಮ ಸ್ಥಿತಿಯಲ್ಲಿರುವ ಜೊತೆಗೇ ಮೆದುಳು ಸಹಾ ಉತ್ತಮ ಸ್ಥಿತಿಯಲ್ಲಿರುವುದು ಮುಖ್ಯ. ನಿಯಮಿತವಾಗಿ ಮಿತಪ್ರಮಾಣದಲ್ಲಿ ಕಾಫಿ ಕುಡಿಯುವುದರಿಂದ ದೇಹ ಮತ್ತು ಮೆದುಳು ಉತ್ತಮ ಸ್ಥಿತಿಯನ್ನು ಕಾಯ್ದುಕೊಳ್ಳುವ ಮೂಲಕ ಆಯಸ್ಸು ಹೆಚ್ಚುತ್ತದೆ.

ಕ್ಯಾನ್ಸರ್ ರೋಗವನ್ನು ತಡೆಯುತ್ತದೆ

ಕ್ಯಾನ್ಸರ್ ರೋಗವನ್ನು ತಡೆಯುತ್ತದೆ

ಮಿತಪ್ರಮಾಣದಲ್ಲಿ ಕಾಫಿ ಕುಡಿಯುವುದರಿಂದ ದೇಹ ವಿವಿಧ ಕ್ಯಾನ್ಸರ್ ಬರುವುದನ್ನು ತಡೆಯಬಹುದು ಎಂದು ಸಂಶೋಧನೆಗಳಿಂದ ಕಂಡುಬಂದಿದೆ. ಬಾಯಿ ಮತ್ತು ತಲೆಯ ಕ್ಯಾನ್ಸರ್ ಬರುವ ಸಂಭವವನ್ನು 39%, ಮಹಿಳೆಯರಲ್ಲಿ ಗರ್ಭಕೋಶದ ಮತ್ತು ಸ್ತನ ಕ್ಯಾನ್ಸರ್ ಬರುವ ಸಂಭವವನ್ನು ಸಾಕಷ್ಟು ಪ್ರಮಾಣದಲ್ಲಿ, ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಸಂಭವವನ್ನು 60%, ಮೆದುಳಿನ ಕ್ಯಾನ್ಸರ್ ಬರುವ ಸಂಭವವನ್ನು 40%, ಕರುಳಿನ ಕ್ಯಾನ್ಸರ್ ಬರುವ ಸಂಭವವನ್ನು 25%, ಯಕೃತ್ ಕ್ಯಾನ್ಸರ್ ಬರುವ ಸಂಭವವನ್ನು 41% ಕಡಿಮೆಗೊಳಿಸುತ್ತದೆ.

ವಿವಿಧ ಆಂಟಿ ಆಕ್ಸಿಡೆಂಟುಗಳು ಆರೋಗ್ಯವನ್ನು ವೃದ್ಧಿಸುತ್ತವೆ

ವಿವಿಧ ಆಂಟಿ ಆಕ್ಸಿಡೆಂಟುಗಳು ಆರೋಗ್ಯವನ್ನು ವೃದ್ಧಿಸುತ್ತವೆ

ಕಾಫಿಯಲ್ಲಿ ಹಲವು ಆಂಟಿ ಆಕ್ಸಿಡೆಂಟುಗಳಿದ್ದು ದೇಹದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಕುಡಿದರೆ ಅಗತ್ಯಕ್ಕಿಂತಲೂ ಹೆಚ್ಚಿನ ಪೋಷಕಾಂಶಗಳು ಲಭ್ಯವಾಗಿ ಇತರ ತೊಂದರೆಗಳು ಎದುರಾಗಬಹುದು.

English summary

Top Health Benefits Of Coffee

Do you know about the health benefits of coffee? Most of us love coffee. Without a cup of coffee, some of us cannot even imagine starting the day. We have been brain washed by our elders who maintain that coffee is unhealthy But you must remember the fact that you must consume it in small quantities. have a look
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more