For Quick Alerts
ALLOW NOTIFICATIONS  
For Daily Alerts

ಆರೋಗ್ಯದ ಆಗರ-ಬಿಸಿಬಿಸಿಯಾದ ಕುಚ್ಚಲಕ್ಕಿಯ ಗಂಜಿ

By Super
|

ಗಂಜಿ ಎಂದೊಡನೆ ಇದನ್ನು ಬಡವರ ಊಟವೆಂದು ಹೆಚ್ಚಿನವರು ನಿರ್ಧರಿಸಿಬಿಡುತ್ತಾರೆ. ಹಿಂದಿನಿಂದಲೂ ಕೆಲವು ಆಹಾರಗಳನ್ನು ಕೆಲವು ವರ್ಗಗಳಿಗೆ ಮೀಸಲಾಗಿಸಿ ಅದನ್ನು ಇತರರು ಸೇವಿಸದೇ ಇರುವುದು ಪೂರ್ವಾಗ್ರಹವಾಗಿದೆ.

ಉದಾಹರಣೆಗೆ ಬಿಳಿ ಈರುಳ್ಳಿಯನ್ನು ಕೆಳವರ್ಗದ ಜನತೆ ಅಡುಗೆಗೆ ಉಪಯೋಗಿಸುತ್ತಾರೆಂದೇ ಕೆಲವರ್ಗದ ಜನರು ತಿನ್ನುವುದೇ ಇಲ್ಲ. ಅದೇ ರೀತಿ ಗಂಜಿ ಎಂದಾಕ್ಷಣ ರೋಗಿಗಳು ಅಥವಾ ಬಡವರು ತಿನ್ನುವುದು ಎಂಬ ಪೂರ್ವಾಗ್ರಹದಿಂದ ಹೆಚ್ಚಿನವರು ಮುಖ ಸಿಂಡರಿಸುತ್ತಾರೆ. ಕುಚ್ಚಲಕ್ಕಿಯ ಆರೋಗ್ಯಕಾರಿ ಪ್ರಯೋಜನಗಳೇನು ?

ಆದರೆ ವಾಸ್ತವವಾಗಿ ಆರೋಗ್ಯಕ್ಕೆ ಅತ್ಯಂತ ಪೂರಕವಾದ ಈ ಗಂಜಿ ಸುಲಭವಾಗಿ ತಯಾರಿಸಬಹುದಾದ ಮತ್ತು ವಿವಿಧ ರೋಗಗಳನ್ನು ಸಮರ್ಥವಾಗಿ ನಿವಾರಿಸಬಲ್ಲ ಗುಣ ಹೊಂದಿದೆ. ಅದರಲ್ಲೂ ಕುಚ್ಚಲಕ್ಕಿಯ (ಕೆಂಪು ಅಕ್ಕಿಯ) ಗಂಜಿ ಅಂತೂ ಶಕ್ತಿಯ ಆಗರ. ಬನ್ನಿ ಗಂಜಿಯ ಮಹತ್ವ ಮತ್ತು ಆರೋಗ್ಯಕರ ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ..

ಶಕ್ತಿಯ ಆಗರವಾಗಿದೆ ಗಂಜಿ

ಶಕ್ತಿಯ ಆಗರವಾಗಿದೆ ಗಂಜಿ

ಗಂಜಿಯಲ್ಲಿ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟುಗಳಿರುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಅಕ್ಕಿ ಪೂರ್ಣವಾಗಿ ಬೆಂದಿರುವ ಕಾರಣ ಇದರಿಂದ ಪೋಷಕಾಂಶಗಳನ್ನು ಕರುಳುಗಳು ಸುಲಭವಾಗಿ ಹೀರಿಕೊಳ್ಳುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶಕ್ತಿಯ ಆಗರವಾಗಿದೆ ಗಂಜಿ

ಶಕ್ತಿಯ ಆಗರವಾಗಿದೆ ಗಂಜಿ

ಅಲ್ಲದೇ ಈ ಪೋಷಕಾಂಶಗಳು ನಿಧಾನವಾಗಿ, ಹೆಚ್ಚಿನ ಸಮಯದವರೆಗೆ ರಕ್ತಕ್ಕೆ ಪೂರೈಕೆಯಾಗುವ ಕಾರಣ ಹೆಚ್ಚು ಹೊತ್ತು ಚಟುವಟಿಕೆಯಿಂದಿರಲು ನೆರವಾಗುತ್ತದೆ. ಬೆಳಿಗ್ಗೆ ಹೊರಹೊರಡುವ ಮೊದಲು ಒಂದು ಲೋಟ ಕುಚ್ಚಲಕ್ಕಿಯ ಗಂಜಿಯನ್ನು ಕುಡಿದು ಹೊರಟರೆ ಮಧ್ಯಾಹ್ನದ ಊಟದವರೆಗೂ ಇನ್ನೇನೂ ಬೇಕಾಗಿಲ್ಲ, ಸುಸ್ತು, ಹಸಿವೂ ಆಗುವುದಿಲ್ಲ.

ಮಲಬದ್ಧತೆಯಿಂದ ರಕ್ಷಿಸುತ್ತದೆ

ಮಲಬದ್ಧತೆಯಿಂದ ರಕ್ಷಿಸುತ್ತದೆ

ಗಂಜಿಯಲ್ಲಿರುವ ಪಿಷ್ಟದಲ್ಲಿ ನಮ್ಮ ಜೀರ್ಣಕ್ರಿಯೆಗೆ ನೆರವಾಗುವ ಬ್ಯಾಕ್ಟೀರಿಯಾಗಳು ಇರುವ ಕಾರಣ ಜೀರ್ಣಕ್ರಿಯೆ ಆರಾಮವಾಗಿ ನಡೆಯುತ್ತದೆ. ಅಲ್ಲದೇ ಉತ್ತಮ ಪ್ರಮಾಣದ ಕರಗಿದ ನಾರು ಇರುವುದರಿಂದ ಆಹಾರ ಸುಲಭವಾಗಿ ಚಲಿಸಲು ಮತ್ತು ವಿಸರ್ಜನೆ ಸುಲಭವಾಗಲು ನೆರವಾಗುತ್ತದೆ.

ನಿರ್ಜಲೀಕರಣದಿಂದ ರಕ್ಷಿಸುತ್ತದೆ

ನಿರ್ಜಲೀಕರಣದಿಂದ ರಕ್ಷಿಸುತ್ತದೆ

ಬಿಸಿಲಿನ ತಾಪದಿಂದ ದೇಹ ಹೆಚ್ಚಿನ ಪ್ರಮಾಣದಲ್ಲಿ ಬೆವರಿನ ಮೂಲಕ ನೀರನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಪದೇ ಪದೇ ನೀರು ಕುಡಿಯುತ್ತಿರಬೇಕಾಗುತ್ತದೆ. ಆದರೆ ಕೆಲಸದ ಸಮಯದಲ್ಲಿ ಸದಾ ನೀರು ಸಿಗುತ್ತಲೇ ಇರಲು ಸಾಧ್ಯವಿಲ್ಲದಿರುವುದರಿಂದ ಮನೆಯಿಂದ ಗಂಜಿ ಕುಡಿದು ಹೊರಡುವುದು ಉತ್ತಮ.

ನಿರ್ಜಲೀಕರಣದಿಂದ ರಕ್ಷಿಸುತ್ತದೆ

ನಿರ್ಜಲೀಕರಣದಿಂದ ರಕ್ಷಿಸುತ್ತದೆ

ಏಕೆಂದರೆ ಗಂಜಿ ನಿಧಾನವಾಗಿ ದೇಹಕ್ಕೆ ಅಗತ್ಯವಾದ ಲವಣಗಳು ಮತ್ತು ನೀರಿನಂಶವನ್ನು ನಿಧಾನವಾಗಿ ಬಿಡುಗಡೆ ಮಾಡುತ್ತಾ ಇರುವ ಮೂಲಕ ನಿರ್ಜಲೀಕರಣವಾಗುವ ಸಾಧ್ಯತೆಯಿಂದ ತಪ್ಪಿಸುತ್ತದೆ.

ವೈರಸ್ಸುಗಳ ಸೋಂಕಿನಿಂದ ರಕ್ಷಿಸುತ್ತದೆ

ವೈರಸ್ಸುಗಳ ಸೋಂಕಿನಿಂದ ರಕ್ಷಿಸುತ್ತದೆ

ವೈರಸ್ಸಿನ ಧಾಳಿಯ ಕಾರಣ ಉಂಟಾದ ಸೋಂಕನ್ನು ನಿವಾರಿಸಲು ಗಂಜಿ ಸಮರ್ಥವಾಗಿದೆ. ಏಕೆಂದರೆ ಜ್ವರ ಬಂದ ಬಳಿಕ ದೇಹ ಬೆವರುವಿಕೆ, ವಾಂತಿ ಮೊದಲಾದ ಕಾರಣಗಳಿಂದ ಕಳೆದುಕೊಳ್ಳುವ ನೀರನ್ನು ಮತ್ತು ಅಗತ್ಯವಾದ ಪೋಷಕಾಂಶಗಳನ್ನು ನಿಧಾನವಾಗಿ ಮರುಪೂರೈಸಿ ದೇಹಕ್ಕೆ ಚೈತನ್ಯ ನೀಡುತ್ತದೆ.

ಅತಿಸಾರದಿಂದ ರಕ್ಷಿಸುತ್ತದೆ

ಅತಿಸಾರದಿಂದ ರಕ್ಷಿಸುತ್ತದೆ

ಮಕ್ಕಳಲ್ಲಿಯೇ ಆಗಲಿ ಹಿರಿಯರಲ್ಲಿಯೇ ಆಗಲಿ ಅತಿಸಾರ ಉಂಟಾಗಿದ್ದರೆ ಗಂಜಿಯ ಸೇವನೆಯಿಂದ ಉತ್ತಮ ಪರಿಹಾರ ದೊರಕುತ್ತದೆ. ಅದರಲ್ಲೂ ಮಕ್ಕಳಿಗೆ ಅತಿಸಾರ ಬಾಧಿಸಿದರೆ ಸೂಕ್ತ ಸಮಯದಲ್ಲಿ ಆರೈಕೆ ಮತ್ತು ಚಿಕಿತ್ಸೆ ನೀಡುವುದು ಅಗತ್ಯ.

ಅತಿಸಾರದಿಂದ ರಕ್ಷಿಸುತ್ತದೆ

ಅತಿಸಾರದಿಂದ ರಕ್ಷಿಸುತ್ತದೆ

ಇಲ್ಲದಿದ್ದರೆ ಮಕ್ಕಳು ನಿರ್ಜಲೀಕರಣದಿಂದ ತೀರಾ ನಿತ್ರಾಣರಾಗುತ್ತಾರೆ. ಒಂದು ಸಂಶೋಧನೆಯ ಪ್ರಕಾರ ಮಕ್ಕಳಲ್ಲಿ ಅತಿಸಾರ ಕಂಡುಬಂದರೆ ಕೂಡಲೇ ಗಂಜಿ ಕುಡಿಸುವುದರಿಂದ ಅತಿಸಾರ ಕೂಡಲೇ ನಿಯಂತ್ರಣಕ್ಕೆ ಬರುವುದು ಹಾಗೂ ವಿಸರ್ಜನೆಯ ಪ್ರಮಾಣ ಮತ್ತು ನೀರು ವ್ಯರ್ಥವಾಗಿ ಹೋಗುವುದು ಕಡಿಮೆಯಾಗುತ್ತದೆ.

ಗಂಜಿಯನ್ನು ತಯಾರಿಸುವ ಬಗೆ

ಗಂಜಿಯನ್ನು ತಯಾರಿಸುವ ಬಗೆ

ಒಂದು ಕಪ್ ಕುಚ್ಚಅಕ್ಕಿಯನ್ನು ತೊಳೆದು ಮೂರು ಕಪ್ ನೀರಿನಲ್ಲಿ ಹಾಕಿ ಕುದಿಸಿ. ಅಕ್ಕಿ ಸುಮಾರು ಅರ್ಧ ಬೆಂದಿದೆ ಎಂದಾಕ್ಷಣ ಉರಿ ಆರಿಸಿ ಈ ನೀರನ್ನು ಬಸಿದು ಪಾತ್ರೆಯಲ್ಲಿ ಸಂಗ್ರಹಿಸಿ. ಇದಕ್ಕೆ ನಿಮ್ಮ ಆಯ್ಕೆಯಂತೆ ಕೊಂಚ ಸಕ್ಕರೆ ಅಥವಾ ಉಪ್ಪನ್ನು ಸೇರಿಸಿ ಬಿಸಿಬಿಸಿಯಿರುವಂತೆಯೇ ಸೇವಿಸಿ.

ಗಂಜಿಯನ್ನು ತಯಾರಿಸುವ ಬಗೆ

ಗಂಜಿಯನ್ನು ತಯಾರಿಸುವ ಬಗೆ

ಸಾಮಾನ್ಯವಾಗಿ ಕುಚ್ಚಲಕ್ಕಿಯ ಗಂಜಿ ಆರೋಗ್ಯಕ್ಕೆ ಅತ್ಯತ್ತಮ ಎಂದು ವೈದ್ಯರೇ ಹೇಳುತ್ತಾರೆ. ಇದಕ್ಕಾಗಿ ಮೊದಲು ನೀವು ಅಕ್ಕಿಯಲ್ಲಿ ಕಲ್ಲುಗಳಿಲ್ಲವೆಂದು ಖಾತರಿಪಡಿಸಿ ನೀರಿನಲ್ಲಿ ನಾಲ್ಕಾರು ಬಾರಿ ತೊಳೆಯಿರಿ.ಬಳಿಕ ಒಂದು ಕಪ್‌ಗೆ ನಾಲ್ಕು ಕಪ್ ನೀರು ಸೇರಿಸಿ, ಕೊಂಚ ಉಪ್ಪು ಸೇರಿಸಿ ಕುದಿಸಿ. ಅನ್ನ ಬೆಂದ ಬಳಿಕ ಉರಿಯನ್ನು ತಗ್ಗಿಸಿ ಇನ್ನಷ್ಟು ಕುದಿಸಿ. ಬಳಿಕ ಈ ನೀರನ್ನು ಹಾಗೇ ಬಿಡಿ. ಸುಮಾರು ಒಂದು ಗಂಟೆಯ ಬಳಿಕ ಒಂದು ಚಮಚದಿಂದ ದ್ರವವನ್ನು ಚೆನ್ನಾಗಿ ಕದಡಿ. ಇದು ಸುಮಾರು ಚಮಚದಲ್ಲಿ ಕುಡಿಯುವಷ್ಟು ಗಾಢವಾಗಿರುತ್ತದೆ. ಇದನ್ನು ಉಪ್ಪಿನಕಾಯಿಯೊಂದಿಗೆ ಅಥವಾ ಹುರಿದ ಮೆಣಸು, ಹಪ್ಪಳ ಮೊದಲಾದವುಗಳ ಜೊತೆಗೆ ಸೇವಿಸಲು ಚೆನ್ನಾಗಿರುತ್ತದೆ. ಇನ್ನಷ್ಟು ನೀರು ಹಾಕಿ ಕುಡಿಯಲೂ ಚೆನ್ನಾಗಿರುತ್ತದೆ.

English summary

Reasons you must drink Brown rice kanji every day

You probably have had kanji or rice water as a child or when you were really sick. You might not have enjoyed the taste, but this humble concoction has various health benefits.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more