For Quick Alerts
ALLOW NOTIFICATIONS  
For Daily Alerts

ಎಷ್ಟೇ ಡಯಟ್ ಮಾಡಿದರೂ ತೂಕ ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೇ?

By Super
|

ಅದೇಕೆ ಬಹುತೇಕ ಡಯಟ್‍ಗಳು ವಿಫಲವಾಗುತ್ತವೆ? ಬನ್ನಿ ನಾವು ಈ ಕುರಿತು ಚರ್ಚಿಸೋಣ. ನಾವೆಲ್ಲರು ನಮ್ಮ ನಮ್ಮ ಡಯಟ್ ಕುರಿತಾಗಿ ಕಾಳಜಿ ವಹಿಸಬೇಕಾದ ಜವಾಬ್ದಾರಿ ನಮ್ಮ ಮೇಲೆ ಇದೆ. ಡಯಟ್‍ ಮಾಡುವುದರಲ್ಲಿ ನಾನಾ ತರಹ ಪದ್ಧತಿಗಳು ಇವೆ!. ಅಂದರೆ ಇವುಗಳಲ್ಲಿ ಕೆಲವೊಂದು ಒಳ್ಳೆಯ ಡಯತ್ ಇದ್ದರೆ, ಕೆಲವೊಂದು ಡಯಟ್ ಪಾಲಿಸಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವೊಂದು ಡಯಟ್‍ಗಳು ಜನಪ್ರಿಯವಾಗಿರುತ್ತವೆ, ದುರದೃಷ್ಟವಶಾತ್ ಜನರು ಇಂತಹ ಅನುಪಯುಕ್ತ ಡಯಟ್ ಪಾಲಿಸಲು ಹಾತೊರೆಯುತ್ತಾರೆ.

ಕೆಲವರು ಇವುಗಳನ್ನೂ ಪಾಲಿಸುತ್ತಾರೆ, ಇನ್ನು ಕೆಲವರು ಇದನ್ನು ಬಿಟ್ಟು ಬಿಡುತ್ತಾರೆ. ಇದರ ಕೊನೆಯ ಫಲಿತಾಂಶ ಏನಪ್ಪಾ ಎಂದರೆ, ಕೆಲವರು ತಮ್ಮ ಅಮೂಲ್ಯವಾದ ಹಣವನ್ನು ಇದಕ್ಕಾಗಿ ವಿನಿಯೋಗಿಸುತ್ತಾರೆ, ಇನ್ನೂ ಕೆಲವರು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಹೀಗೆ ಕೊಟ್ಟ ಕೊನೆಗೆ ಇವರು ಡಯಟ್‍ನಲ್ಲಿ ಯಾವುದನ್ನು ಪಾಲಿಸಬೇಕು ಮತ್ತು ಯಾವುದನ್ನು ಪಾಲಿಸಬಾರದು ಎಂದು ತಿಳಿದುಕೊಳ್ಳುತ್ತಾರೆ.

ನಿಮ್ಮ ಡಯಟ್ ಕಡ್ಡಾಯವಾಗಿ ಪೋಷಕಾಂಶಗಳನ್ನು ಹೊಂದಿರಬೇಕು. ಒಂದು ವೇಳೆ ನಿಮ್ಮ ಆಹಾರದಲ್ಲಿ ಅವಶ್ಯಕ ಪೋಷಕಾಂಶಗಳು ಕೊರತೆಯಾದಲ್ಲಿ, ನಿಮಗೆ ಸುಸ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಡಯಟ್ ಮಾಡುವ ಗೀಳು ಇದ್ದಲ್ಲಿ ಅದನ್ನು ಬಿಡಿ. ಈ ಗೀಳು ನಿಮ್ಮನ್ನು ಕೆಲವೊಂದು ಮುಖ್ಯ ಆಹಾರ ಪದಾರ್ಥಗಳನ್ನು ತಿನ್ನದಂತೆ ತಡೆಯುತ್ತದೆ. ಹೀಗೆ ನೀವು ದಿನಾ ಪೂರ್ತಿ ಹಸಿವಿನಿಂದ ನರಳುತ್ತೀರಿ. ಯಾವಾಗ ಹಸಿವು ನಿಮ್ಮನ್ನು ಕಾಡುತ್ತದೆಯೋ, ಆಗ ನೀವು ಆ ಡಯಟ್ ಪಾಲಿಸುವ ಕ್ರಮವನ್ನು ಬಿಟ್ಟು ಬಿಡುತ್ತೀರಿ. ಡಯಟ್ ಮಾಡದೆಯೇ ತೆಳ್ಳಗಾಗಬೇಕೆ?

ಈ ಅನಾನುಕೂಲತೆಯು ಒಂದು ಅತ್ಯುತ್ತಮವಾದ ಡಯಟ್ ಯೋಜನೆಯನ್ನು ಸಹ ಹಾಳು ಮಾಡಿ, ಅದಕ್ಕೆ ಅಪಖ್ಯಾತಿಯನ್ನು ತರುತ್ತದೆ. ಆದರೆ, ಕೆಲವೊಂದು ನಿರ್ದಿಷ್ಟ ಡಯಟ್‍ಗಳು ನೀವು ಸೇವಿಸುವ ದೈನಂದಿನ ಪೋಷಕಾಂಶಗಳನ್ನು ತಡೆಯುವುದಿಲ್ಲ. ಹಾಗಾಗಿ ನಿಮ್ಮ ಒಳ್ಳೆಯದಕ್ಕಾಗಿ ಅವುಗಳಿಂದ ದೂರವಿರುವುದು ಉತ್ತಮ.

Reasons Why Most Diets Fail

ಡಯಟ್‍ಗಳು ವಿಫಲವಾಗಲು ಇರುವ ಕಾರಣಗಳು
ನೀವು ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಡಯಟ್ ಮಾಡುವಾಗ, ನಿಮ್ಮ ಡಯಟ್‍ಗೆ ಹೊಂದಿಕೊಳ್ಳುವಂತಹ ವ್ಯಾಯಾಮಗಳನ್ನು ಸಹ ಮಾಡಿ. ಆಗ ಮಾತ್ರ ಇವುಗಳ ಪ್ರಯೋಜನ ನಿಮ್ಮ ದೇಹಕ್ಕೆ ಸಿಗುತ್ತದೆ. ನೀವು ಸೇವಿಸುವ ಆಹಾರಕ್ಕು ಮತ್ತು ನೀವು ಮಾಡುವ ವ್ಯಾಯಾಮಕ್ಕು ಹೊಂದಿಕೊಳ್ಳದಿದ್ದಲ್ಲಿ, ಆಗ ನಿಮ್ಮ ಡಯಟ್- ವ್ಯಾಯಾಮ ಎರಡು ನಿರರ್ಥಕವಾಗುತ್ತದೆ. ಒಂದು ವೇಳೆ ವ್ಯಾಯಾಮವು ನಿಮಗೆ ಹಸಿವನ್ನುಂಟು ಮಾಡಿದರೆ, ಆಗ ನೀವು ಅಧಿಕ ಪ್ರಮಾಣದ ಆಹಾರವನ್ನು ಸೇವಿಸುತ್ತೀರಿ. ಆಗ ಅದು ನಿಮ್ಮ ತೂಕವನ್ನು ಕರಗಿಸಿಕೊಳ್ಳುವ ಸಂಪೂರ್ಣ ಯೋಜನೆಯನ್ನು ತಲೆಕೆಳಗೆ ಮಾಡುತ್ತದೆ.

ದೀರ್ಘಾವಧಿ ಪರಿಣಾಮಗಳು
ಗೀಳಿಗಾಗಿ ಮಾಡುವ ಡಯಟ್‍ಗಳು ಯಾವಾಗಲು ಚಿಕ್ಕ ಚಿಕ್ಕ ಗುರಿಗಳನ್ನು ಮಾತ್ರ ಈಡೇರಿಸುತ್ತವೆ. ಆದರೆ ದೀರ್ಘಾವಧಿಯಲ್ಲಿ ಇವು ನಿಮಗೆ ಒಳ್ಳೆಯ ಫಲಿತಾಂಶ ನೀಡುತ್ತವೆಯೇ? ಹಾಗಾಗಿಯೇ ಬಹುತೇಕ ಡಯಟ್‍ಗಳು ವಿಫಲವಾಗುತ್ತವೆ. ನಮ್ಮ ಡಯಟ್‍ ದೀರ್ಘಕಾಲಕ್ಕೆ ಹೊಂದಿಕೊಳ್ಳುವಂತಿರಬೇಕು.

ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸದಿರುವುದು
ಏಕೆ ಕೆಲವೊಂದು ಡಯಟ್‌ಗಳು ವಿಫಲವಾಗುತ್ತವೆ? ಏಕೆಂದರೆ, ಕೆಲವೊಂದು ಡಯಟ್‍ಗಳಲ್ಲಿ ಕೆಲವೊಂದು ನಿರ್ದಿಷ್ಟ ಆಹಾರವನ್ನು ಸೇವಿಸುವ ಮತ್ತು ತ್ಯಜಿಸುವ ನಿರ್ಬಂಧಗಳು ಇರುತ್ತವೆ. ಇದಕ್ಕಾಗಿ ನಿಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ನೀವು ಮಾಡಿಕೊಳ್ಳಬೇಕಾಗುತ್ತದೆ. ಇದು ಕೆಲವರಿಗೆ ಕಷ್ಟಕರವಾಗಿರಬಹುದು. ಯಾವಾಗ ನಿಮ್ಮ ಡಯಟ್ ಯೋಜನೆ ಅವಾಸ್ತವಿಕವಾಗುತ್ತದೆಯೋ, ಆಗ ಅದನ್ನು ಅನುಷ್ಟಾನಕ್ಕೆ ತರುವುದು ಸಹ ಕೆಲವರಿಗೆ ಕಷ್ಟಕರವಾಗುತ್ತದೆ. ಹೀಗೆ ಕೆಲವೊಂದು ಡಯಟ್‌ಗಳು ಅಕಾಲಿಕವಾಗಿ ಅಂತ್ಯಗೊಳ್ಳುತ್ತವೆ.

ನಾವು ಉಪವಾಸವನ್ನು ತ್ಯಜಿಸುತ್ತೇವೆ
ಏಕೆ ಕೆಲವೊಂದು ಡಯಟ್‍ಗಳು ವಿಫಲವಾಗುತ್ತವೆ? ಕೆಲವು ಡಯಟ್ ಗೀಳು ಹತ್ತಿಸಿಕೊಂಡವರು ಮೊದ ಮೊದಲು ಪೂರ್ತಿ ಆಹಾರವನ್ನು ಸೇವಿಸದೆ ಬಿಟ್ಟು ಬಿಡುತ್ತಾರೆ. ಇನ್ನೂ ಕೆಲವೊಂದು ಡಯಟ್‍ಗಳನ್ನು ಪ್ರತಿನಿತ್ಯ ಅನುಸರಿಸುವುದು ಕಷ್ಟ. ಹೀಗಾಗಿ ಕೆಲವರು ಇದರ ಭಾದೆ ತಡೆಯಲಾರದೆ ಅದನ್ನು ತ್ಯಜಿಸುತ್ತಾರೆ. ಏಕೆ ಇಂತಹ ಗೀಳು ಡಯಟ್‍ಗಳು ವಿಫಲವಾಗುತ್ತವೆ? ಏಕೆಂದರೆ, ಇದನ್ನು ಸೃಷ್ಟಿಸಿದವರು ತಮ್ಮ ಉತ್ಪನ್ನಗಳನ್ನು ಮಾರಲು ಮತ್ತು ತಾವು ಹಣ ಸಂಪಾದಿಸುವ ದೃಷ್ಟಿಯಿಂದ ಇದನ್ನು ಜನಪ್ರಿಯಗೊಳಿಸಿರುತ್ತಾರೆ. ಕೆಲವೊಂದು ಡಯಟ್‍ಗಳ ಕುರಿತು ಅಧ್ಯಯನ ಮಾಡಿರುವುದಿಲ್ಲ. ಅವುಗಳು ವೈಜ್ಞಾನಿಕವಾಗಿ ಪ್ರಯೋಜನಕಾರಿ ಎಂದು ಸಾಬೀತಾಗಿರುವುದಿಲ್ಲ. ಇಂತಹ ಡಯಟ್‍ಗಳು ಯಾವುದೇ ಪ್ರಯೋಜನ ನೀಡದಿದ್ದಾಗಲು ಅದನ್ನು ಅನುಸರಿಸುವವರು ಇದನ್ನು ತ್ಯಜಿಸುತ್ತಾರೆ.

English summary

Reasons Why Most Diets Fail

Why most diets fail? Let us discuss that here. It is very important to be careful before you pick up a new diet programme. There are some good programmes and there are some which never really work. when it comes to certain diets that never address the daily intake of nutrients, it is better to stay away from them.
Story first published: Friday, January 16, 2015, 17:42 [IST]
X
Desktop Bottom Promotion