For Quick Alerts
ALLOW NOTIFICATIONS  
For Daily Alerts

ಪುರುಷರ ಆರೋಗ್ಯ ಸಪ್ತಾಹ: ಮಿಸ್ ಮಾಡದೇ ಓದಿ..!

By Super
|

ಆರೋಗ್ಯವೆಂದರೇನು? ನಮ್ಮ ಶರೀರದ ಎಲ್ಲಾ ವ್ಯವಸ್ಥೆಗಳು ಸರಿಯಾಗಿ ಕೆಲಸ ಮಾಡುತ್ತಿರುವುದೇ ಆರೋಗ್ಯ ಎಂದುಕೊಳ್ಳುವುದಾದರೆ ಯಾವುದಾದರೂ ಕೆಲವು ವ್ಯವಸ್ಥೆಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲದಿರುವುದನ್ನು ಅನಾರೋಗ್ಯ ಎಂದು ವ್ಯಾಖ್ಯಾನಿಸಿಕೊಳ್ಳಬಹುದು. ಆದರೆ ನಿಜವಾದ ಆರೋಗ್ಯ ಎಂದರೆ ಬೇರೆಯೇ ಇದೆ. ಅದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲವಾಗಿ ಅವಲಂಬಿಸಿದೆ. ನಿಸರ್ಗ ಜೀವಿಗಳಿಗೆ ನೀಡಿರುವ ವರದಾನವೆಂದರೆ ಈ ರೋಗ ನಿರೋಧಕ ವ್ಯವಸ್ಥೆ. ನಮ್ಮ ಕಾಯಿಲೆ ಗುಣವಾಗಲು ವೈದ್ಯರು ನೀಡುವ ಔಷಧಿಗಳೂ ಈ ರೋಗ ನಿರೋಧಕ ಶಕ್ತಿಗೆ ಬೆಂಬಲ ನೀಡುವ ಮೂಲಕವೇಕೆಲಸ ಮಾಡುತ್ತವೆ. ಧೂಮಪಾನ; ಮಹಿಳಿಯರಿಗಿಂತ ಪುರುಷರ ಸಂಖ್ಯೆ ಜಾಸ್ತಿ ಏಕೆ?

ಈ ರೋಗ ನಿರೋಧಕ ವ್ಯವಸ್ಥೆ ಎಲ್ಲರಲ್ಲಿಯೂ ಒಂದೇ ರೀತಿಯಲ್ಲಿರುವುದಿಲ್ಲ. ಕೆಲವರಲ್ಲಿ ಅತಿ ಬಲವಾಗಿದ್ದು ಕೆಲವರಲ್ಲಿ ದುರ್ಬಲವಾಗಿರುತ್ತದೆ. ಕೆಲವೊಮ್ಮೆ ದೇಹಕ್ಕೆ ಆಗಮಿಸುವ ಅಪಾಯಕಾರಿ ವಸ್ತುಗಳಿಂದ ರಕ್ಷಣೆ ಹೊಂದದೇ ತನ್ನಿಂದ ತಾನೇ ಮಾರ್ಪಾಡೂ ಹೊಂದುತ್ತದೆ. ಇದನ್ನೇ 'ವ್ಯಸನ' ಎನ್ನುತ್ತೇವೆ. ಉದಾಹರಣೆಗೆ ಇಡಿಯ ಜೀವಮಾನ ಮದ್ಯಮಾನ ಮಾಡುತ್ತಾ ಬಂದಿರುವ ಕುಡುಕ ತೊಂಬತ್ತಾದರೂ ಸಾಯದೇ ಇರುವುದಕ್ಕೂ ಎಂದೂ ಮದ್ಯಪಾನ ಮಾಡದ ವ್ಯಕ್ತಿ ಅರವತ್ತರಲ್ಲಿಯೇ ಭಗವಂತನ ಪಾದ ಸೇರುವುದಕ್ಕೂ ಈ ಶಕ್ತಿಗೆ ನೇರವಾದ ಸಂಬಂಧವಿದೆ. ಪುರುಷರೇ ಎಚ್ಚರ, ನಿಮಗೂ ಇಂತಹ ಸಮಸ್ಯೆ ಇರಬಹುದು!

ಆದ್ದರಿಂದ ಉತ್ತಮ ರೋಗ ನಿರೋಧಕ ವ್ಯವಸ್ಥೆಯನ್ನು ಹೊಂದಿದ್ದು ತನ್ಮೂಲಕ ಎಲ್ಲಾ ವ್ಯವಸ್ಥೆಗಳು ಸಮರ್ಪಕವಾಗಿ ಕೆಲಸ ಮಾಡುತ್ತಿರುವ ದೇಹವನ್ನು ಉತ್ತಮ ಆರೋಗ್ಯವಂತ ದೇಹ ಎಂದು ಕರೆಯಬಹುದು. ಇದಕ್ಕೆ ನಿಸರ್ಗ ನಮಗೆ ನೀಡಿರುವ ನಿಯಮಗಳನ್ನು ಪಾಲಿಸುವುದು ಮುಖ್ಯ. ನಮ್ಮ ದೇಹ ಸತತ ಶಾರೀರಿಕ ಚಟುವಟಿಕೆಗಾಗಿಯೇ ನಿರ್ಮಿಸಲ್ಪಟ್ಟಿದೆ. ಆದರೆ ಇಂದಿನ ಬಿಡುವಿಲ್ಲದ ದಿನಚರಿಯಲ್ಲಿ ಶಾರೀರಿಕ ಚಟುವಟಿಕೆ ಕಡಿಮೆ ಮತ್ತು ಮೆದುಳಿನ ಕಸರತ್ತಿನ ಕೆಲಸಗಳು ಹೆಚ್ಚಾಗಿವೆ. ಇದು ನಮಗೆ ಅನಿವಾರ್ಯವೆಂದೆನ್ನಿಸಿದರೂ ನಮ್ಮ ಶರೀರದ ಒಳಗಿನ ವ್ಯವಸ್ಥೆಗಳು ಚಟುವಟಿಕೆಯಿಲ್ಲದೇ ನಿಧಾನವಾಗಿ ತುಕ್ಕು ಹಿಡಿಯುತ್ತವೆ. ಇದನ್ನೇ ಜಡತ್ವ ಎಂದು ಕರೆಯುತ್ತೇವೆ.

ನಮಗೆ ಸಿಕ್ಕಿರುವ ಸವಲತ್ತುಗಳ ಮೂಲಕ ನಾವು ಹಲವು ಅಭ್ಯಾಸಗಳನ್ನು ರೂಢಿಸಿಕೊಂಡಿದ್ದು ನಿಸರ್ಗದ ನಿಯಮದ ಪಾಲನೆ ಮಾಡದೇ ಬೋನಿನೊಳಗಿನ ಪ್ರಾಣಿಯಂತೆ ನೋಡಲು ದಷ್ಟಪುಷ್ಟರಾಗಿದ್ದರೂ ಒಳಗಿನಿಂದ ಕುಂಬಾಗಿದ್ದೇವೆ. ಇದಕ್ಕೆ ಕಾರಣವಾದ ಅಭ್ಯಾಸಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಮುಂದೆ ಓದಿ..

ಧೂಮಪಾನ

ಧೂಮಪಾನ

ನಿಸರ್ಗ ನೀಡಿರದೇ ಇರುವ ಒಂದು ದುರಭ್ಯಾಸವೆಂದರೆ ಧೂಮಪಾನ. ಇದು ಯಾವಾಗ ಪ್ರಾರಂಭವಾಯಿತು ಎಂಬ ಬಗ್ಗೆ ಸ್ಪಷ್ಟವಾದ ನಿಲುವಿಲ್ಲ. ಆದರೆ ಒಮ್ಮೆ ರುಚಿಗೆ ಅಥವಾ ಅದಕ್ಕೂ ಹೆಚ್ಚಾಗಿ ತಮ್ಮ ಹಿರಿಯರನ್ನು ಅಥವಾ ನೆಚ್ಚಿನ ನಟನನ್ನು ಅನುಸರಿಸಲು ಹೋಗಿ ಪ್ರಾರಂಭಗೊಳ್ಳುವ ಈ ವ್ಯಸನ ಅಂಟಿಕೊಂಡ ಬಳಿಕ ಥಟ್ಟನೇ ಬಿಡಲು ಸಾಧ್ಯವಿಲ್ಲ. ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು, ಅದರಲ್ಲೂ ವಿಶೇಷವಾಗಿ ಶ್ವಾಸದ ಮೂಲಕ ಪಡೆಯುವ ಕರ್ರಗಿನ ಟಾರನ್ನು ರಕ್ತಕ್ಕೆ ಸೇರಿಸುವ ಮೂಲಕ (ನಿಕೋಟಿನ್) ಹಲವು ಬಗೆಯ ರೋಗಗಳಿಗೆ ಕಾರಣವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಧೂಮಪಾನ

ಧೂಮಪಾನ

ಈ ರೋಗಗಳ ಪರಿಣಾಮವನ್ನು ಸಿಗರೇಟಿನ ಪ್ಯಾಕೆಟ್ಟುಗಳ ಮೇಲೆ ಮುದ್ರಿಸಿದರೂ ಜನರು ರಾಜಾರೋಷವಾಗಿ ಸಿಗರೇಟನ್ನು ಸೇದುತ್ತಾರೆ. ಇದಕ್ಕೆ ಅವರ ತಲೆಯೊಳಗೆ ಗಟ್ಟಿಯಾಗಿ ಕುಳಿತಿರುವ 'ನನಗೇನೂ ಆಗುವುದಿಲ್ಲ' ಎಂಬ ಒಣ ಹುಂಬತನವೇ ಇರುತ್ತದೆ. ಆದರೆ ವಾಸ್ತವವಾಗಿ ಇವರ ರೋಗ ನಿರೋಧಕ ಶಕ್ತಿ ಒಳಗಿಂದೊಳಗೇ ಶಿಥಿಲವಾಗುತ್ತಾ ಬಂದಿದ್ದರೂ ಕುಸಿದಿರುವುದಿಲ್ಲ.

ಧೂಮಪಾನ

ಧೂಮಪಾನ

ನಮ್ಮ ರೋಗ ನಿರೋಧಕ ವ್ಯವಸ್ಥೆಯ ಇನ್ನೊಂದು ಗುಣವೆಂದರೆ ಅತ್ಯಂತ ಕಟ್ಟ ಕಡೆಯ ಸ್ಥಿತಿಯವರೆಗೂ ಅದು ಹೋರಾಡುತ್ತದೆ. ಕಟ್ಟಕಡೆಗೆ ಬುಡಕಡಿದ ಬಾಳೆಯಂತೆ ಒಮ್ಮೆಲೇ ಕುಸಿದು ಬೀಳುತ್ತದೆ. ಹೀಗಾಯಿತೋ, ಕೇವಲ ಒಂದೇ ಒಂದು ದಮ್ ಎಳೆದರೂ ಸಾಕು ದೇಹ ಇದನ್ನು ತಡೆಯಲಾಗದೇ ಕುಸಿಯುತ್ತದೆ. ವರ್ಷಗಳಿಂದ ತಲೆಯೊಳಕ್ಕೆ ಭದ್ರವಾಗಿ ಕುಳಿತಿದ್ದ 'ನನಗೇನೂ ಆಗುವುದಿಲ್ಲ' ಎಂಬ ಅಹಂ ಒಂದೇ ಕ್ಷಣದಲ್ಲಿ ನುಚ್ಚುನೂರಾಗುತ್ತದೆ.

ಧೂಮಪಾನ

ಧೂಮಪಾನ

ಈ ಸ್ಥಿತಿಯ ಬಳಿಕ ಜೀವಂತ ಉಳಿದರೆ ಅದು ನಿಮ್ಮ ಮನೆಯವರ ಪ್ರಾರ್ಥನೆಯ ಫಲವೇ ಹೊರತು ನೀವು ಇಡಿಯ ಜೀವಮಾನ ಪೋಷಿಸಿಕೊಂಡು ಬಂದಿದ್ದ ಹುಂಬತನ ಏನೂ ಕೆಲಸಕ್ಕೆ ಬರುವುದಿಲ್ಲ. ಇದು ಯಾವಾಗ ಆಗುತ್ತದೆ ಎಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಸ್ವತಃ ನಿಮ್ಮ ಕುಟುಂಬವೈದ್ಯರಿಗೂ ಸಹಾ! ಆದ್ದರಿಂದ ಧೂಮಪಾನ ಬಿಡುವತ್ತ ದೃಢ ನಿಶ್ಚಯ ಮಾಡಿ. ನಿಮಗಾಗಿ ಅಲ್ಲದಿದ್ದರೂ ನಿಮ್ಮ ಪ್ರೀತಿಪಾತ್ರರಿಗಾಗಿ. ಉಳಿದ ಕೆಲಸವನ್ನು ನಿಮ್ಮ ವೈದ್ಯರಿಗೆ ಬಿಡಿ.

ಅತಿ ಹೆಚ್ಚಿನ ಮದ್ಯಪಾನ

ಅತಿ ಹೆಚ್ಚಿನ ಮದ್ಯಪಾನ

ಮದ್ಯಪಾನವೂ ಒಂದು ಪಿಡುಗಾಗಿದೆ. ವಾಸ್ತವವಾಗಿ ಆಲ್ಕೋಹಾಲ್ ಸೇವನೆಯಿಂದ ದೇಹದ ತಾಪಮಾನ ಕೊಂಚವೇ ಹೆಚ್ಚುವ ಕಾರಣ ಅತಿಶೀತದ ಪ್ರದೇಶಗಳಲ್ಲಿ ಸಾವನ್ನು ತಡೆಯುವ ಸಾಧನವಾಗಿ ಇದರ ನಿಜವಾದ ಬಳಕೆಯಾಗಿದೆ. ಇಂದಿಗೂ ಶೀತಪ್ರದೇಶಗಳಲ್ಲಿ ಕಳೆದುಹೋದವರನ್ನು ಹುಡುಕಲು ಕಳಿಸುವ ನಾಯಿಗಳ ಕುತ್ತಿಗೆಯಲ್ಲಿ ಕೊಂಚ ಮದ್ಯವನ್ನು ಕಳಿಸುತ್ತಾರೆ. ಶೀತದ ಪ್ರಭಾವದಿಂದ ಮರಗಟ್ಟಿ ಇನ್ನೇನು ಸಾಯುವಂತಾಗಿರುವವರು ಮದ್ಯ ಕುಡಿಯುವ ಮೂಲಕ ಸಾವಿನ ದವಡೆಯಿಂದ ಪಾರಾಗಬಹುದು. ಇದು ಮದ್ಯದ ಸೇವನೆಗೆ ಒಂದು ಸಕಾರಣವಾಗಿದೆ. ಆದರೆ ಇಂದು ವ್ಯಸನಕ್ಕೆ ಒಳಗಾಗಿರುವ ನಮ್ಮ ಅಕ್ಕಪಕ್ಕದವರಿಗೆ ಸಾಯುವಂತಹ ಯಾವ ಕಾರಣವೂ ಇಲ್ಲ. ವಾಸ್ತವವಾಗಿ ಇದು ಒಬ್ಬರೊಂದೊಬ್ಬರಿಗೆ ಹರಡಿರುವ ಒಂದು ಪಿಡುಗಾಗಿದೆ.

ಅತಿ ಹೆಚ್ಚಿನ ಮದ್ಯಪಾನ

ಅತಿ ಹೆಚ್ಚಿನ ಮದ್ಯಪಾನ

ಮದ್ಯಪಾನ ಕೊಂಚವೇ ಪ್ರಮಾಣದಲ್ಲಿದ್ದರೆ ಆರೋಗ್ಯ ಮತ್ತು ರೋಗ ನಿರೋಧಕ ವ್ಯವಸ್ಥೆ ಬಾಧೆಗೊಳಗಾಗುವುದಿಲ್ಲ. ಆದರೆ ಈ ಪ್ರಮಾಣ ಹೆಚ್ಚಿದರೆ ಮಾತ್ರ ರೋಗ ನಿರೋಧಕ ವ್ಯವಸ್ಥೆಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಭಾರ ಬೀಳುವ ಕಾರಣ ಒಂದು ಹಂತದಲ್ಲಿ ಕುಸಿಯುತ್ತದೆ. ಪ್ರಮುಖವಾಗಿ ಬಾಧೆಗೊಳಗಾಗುವ ಅಂಗವೆಂದರೆ ಯಕೃತ್. ಇನ್ನುಳಿದಂತೆ ಅನ್ನನಾಳ, ಬಾಯಿ ಮತ್ತು ಗಂಟಲ ಒಳಭಾಗವನ್ನು ಒಣದಾಗಿಸುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಈ ಪರಿಸ್ಥಿತಿಯನ್ನೇ ಕಾಯುತ್ತಿದ್ದ ಬ್ಯಾಕ್ಟೀರಿಯಾಗಳು ಏಕಾಏಕಿ ಧಾಳಿ ಮಾಡುತ್ತವೆ.

ಅತಿ ಹೆಚ್ಚಿನ ಮದ್ಯಪಾನ

ಅತಿ ಹೆಚ್ಚಿನ ಮದ್ಯಪಾನ

ಇದನ್ನು ನಿರೀಕ್ಷಿಸಿರದ ದೇಹದ ರೋಗ ನಿರೋಧಕ ವ್ಯವಸ್ಥೆ ಇತ್ತ ಬ್ಯಾಕ್ಟೀರಿಯಾಗಳನ್ನು ಎದುರಿಸಲಾಗದೇ ಅತ್ತ ಮದ್ಯದ ದುಷ್ಪರಿಣಾಮಗಳನ್ನೂ ಎದುರಿಸಲಾಗದೇ ಸೋಲುತ್ತದೆ. ಕಡೆಗೊಂದು ಹಂತದಲ್ಲಿ ಸೋತು ಕುಸಿಯುತ್ತದೆ. ಆದ್ದರಿಂದ ವೈದ್ಯರು ಮದ್ಯದಿಂದ ಹೊರಬರಲು ಸೂಚಿಸುತ್ತಾರೆ. ಆದರೆ ವ್ಯಸನಿಗಳಿಗೆ ಇದರಿಂದ ಹೊರಬರಲು ಸಾಕಷ್ಟು ಸಮಯಾವಕಾಶ ಬೇಕಾಗಿರುವುದರಿಂದ ದಿನಕ್ಕೆ ಗರಿಷ್ಟ ಎರಡು ಪ್ರಮಾಣದಷ್ಟನ್ನು ಮಾತ್ರ ಸೇವಿಸಲು ಸೂಚಿಸುತ್ತಾರೆ. (ಒಂದು ಪ್ರಮಾಣ ಎಂದರೆ 40% ಕ್ಕಿಂತಲೂ ಹೆಚ್ಚು ಆಲ್ಕೋಹಾಲ್ ಇರುವ ಪೇಯ (ವಿಸ್ಕಿ) =25ml, 12%ರಷ್ಟಿರುವ ಪೇಯ (ಬಿಯರ್) =125ಮಿ.ಲೀ ಗರಿಷ್ಟ)

ಸಿದ್ಧ ಆಹಾರಗಳು

ಸಿದ್ಧ ಆಹಾರಗಳು

ನಿಧಾನವಾಗಿ ರೋಗ ನಿರೋಧಕ ಶಕ್ತಿಯನ್ನು ಕೊಲ್ಲುವ ಇನ್ನೊಂದು ಆಹಾರವೆಂದರೆ ಸಿದ್ಧ ಆಹಾರಗಳು. ನಿಮ್ಮ ಗಮನವನ್ನು ಸೆಳೆಯಲು ಬಣ್ಣಬಣ್ಣದ ಜಾಹೀರಾತು ಮತ್ತು ನಿಮ್ಮ ನಾಲಿಗೆಗೆ ಆ ರುಚಿಯನ್ನು ಚಟವನ್ನಾಗಿಸಲು ಗ್ಲುಟೆನ್, ಸಕ್ಕರೆ, ಯೀಸ್ಟ್ ಮೊದಲಾದ ವಸ್ತುಗಳನ್ನು ಸೇರಿಸುವ ಮೂಲಕ ನಿಮ್ಮನ್ನು ತಮ್ಮ ಉತ್ಪನ್ನಗಳಿಗೆ ದಾಸರನ್ನಾಗಿಸುತ್ತವೆ.

ಸಿದ್ಧ ಆಹಾರಗಳು

ಸಿದ್ಧ ಆಹಾರಗಳು

ಪರೋಕ್ಷವಾಗಿ ಧೂಮಪಾನದಂತಹ ಚಟಕ್ಕೆ ನಿಧಾನವಾಗಿ ಬಲಿಯಾಗಿ ವಾರಕ್ಕೊಂದು ಅಥವಾ ಎರಡು ಬಾರಿ ತಿನ್ನದೇ ಇದ್ದರೆ ಆಗದೇ ಇಲ್ಲ ಎನ್ನುವ ಸ್ಥಿತಿ ಬಂದರೆ ನಿಮ್ಮ ರೋಗ ನಿರೋಧಕ ಶಕ್ತಿ ಕುಸಿಯುತ್ತಿದೆ ಎಂದೇ ಅರ್ಥ. ಇದರ ಪರಿಣಾಮವನ್ನು ನಿಮ್ಮ ಸ್ಥೂಲಕಾಯ ಸ್ಪಷ್ಟಪಡಿಸುತ್ತದೆ.

ಹೆಚ್ಚಿನ ಮಾನಸಿಕ ಒತ್ತಡ

ಹೆಚ್ಚಿನ ಮಾನಸಿಕ ಒತ್ತಡ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾನಸಿಕ ಒತ್ತಡವಿಲ್ಲದೇ ಯಾವುದೇ ಕೆಲಸ ಸಾಧ್ಯವಿಲ್ಲ. ಆದರೆ ಕೆಲವು ಸುಲಭ ಮತ್ತು ಸರಳ ವಿಧಾನಗಳಿಂದ ಇದನ್ನು ಕಡಿಮೆಗೊಳಿಸಬಹುದು. ವೈಯಕ್ತಿಕ ಕಾರಣ, ಕೆಲಸದ ಹೊರೆ, ಪರೀಕ್ಷೆ, ಸೀಮಿತ ಅವಧಿಯೊಳಗೇ ಮುಗಿಸಬೇಕಾದ ಓದು ಮೊದಲಾದವೆಲ್ಲಾ ಒತ್ತಡಕ್ಕೆ ಕಾರಣವಾಗಿವೆ. ಇದಕ್ಕೆ ಉತ್ತರವೆಂದರೆ ಉಸಿರಾಟವನ್ನು ದೀರ್ಘಗೊಳಿಸುವ ವ್ಯಾಯಾಮಗಳು.

ಹೆಚ್ಚಿನ ಮಾನಸಿಕ ಒತ್ತಡ

ಹೆಚ್ಚಿನ ಮಾನಸಿಕ ಒತ್ತಡ

ದಿನಕ್ಕೊಂದು ಗಂಟೆಯಾದರೂ ಐಚ್ಛಿಕವಾಗಿ ಪೂರ್ಣ ಪ್ರಮಾಣದ ಶ್ವಾಸವನ್ನು ಒಳಗೆಳೆದುಕೊಳ್ಳಿ ಮತ್ತು ಪೂರ್ಣವಾಗಿ ಬಿಡಿ. ಇದು ಒತ್ತಡದಲ್ಲಿದ್ದ ಮೆದುಳಿಗೆ ಹೆಚ್ಚಿನ ರಕ್ತ ಪೂರೈಸುವ ಮೂಲಕ ಒತ್ತಡದಿಂದ ಹೊರಬರಲು ನೆರವಾಗುತ್ತದೆ. ಪರೋಕ್ಷವಾಗಿ ನಿಮ್ಮ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಜಿಗಿತದ ವ್ಯಾಯಾಮ

ಜಿಗಿತದ ವ್ಯಾಯಾಮ

ಜಿಗಿತ ಅಥವಾ ಸ್ಕಿಪ್ಪಿಂಗ್ ಒಂದು ಉತ್ತಮ ವ್ಯಾಯಾಮ ಎಂದುಕೊಂಡಿದ್ದವರಿಗೆ ಒಂದು ಆಘಾತಕಾರಿ ಸುದ್ದಿ. ಏನೆಂದರೆ ನಿಂತಲ್ಲೇ ಜಿಗಿಯುವ ಅಥವಾ ಹಗ್ಗವನ್ನು ಬೀಸುತ್ತ ಜಿಗಿಯುವ ಸ್ಕಿಪ್ಪಿಂಗ್ ವ್ಯಾಯಮ ನಡುವಯಸ್ಸು ದಾಟಿಕ ಬಳಿಕ ಉತ್ತಮವಲ್ಲ. ಇದು ಹದಿಹರೆಯದ ಮತ್ತು ವೃತ್ತಿಪರ ಕ್ರೀಡಾಪಟುಗಳಿಗೆ ಮಾತ್ರ ಹೆಚ್ಚು ಉಪಯುಕ್ತವೇ ಹೊರತು ಮೂವತ್ತು ದಾಟಿದ ಬಳಿಕ ಉತ್ತಮವಲ್ಲ. ಏಕೆಂದರೆ ಇದು ಸಹಾ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಿರುವುದು ಕಂಡುಬಂದಿದೆ. ಬದಲಿಗೆ ನಿಧಾನಗತಿಯ ಓಟ, ನಡಿಗೆ, ಸೈಕಲ್ ತುಳಿಯುವುದು ಮೊದಲಾದವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ನಿದ್ದೆ ಬಿಡುವುದು

ನಿದ್ದೆ ಬಿಡುವುದು

ನಗರಗಳ ಹೆಚ್ಚಿನ ಮನೆಗಳಲ್ಲಿ ಈಗ ಮಲಗುವ ಸಮಯ ತಡರಾತ್ರಿಗೆ ಬಂದು ತಲುಪಿದೆ. ಅಂತೆಯೇ ಬೆಳಿಗ್ಗೆ ಏಳುವ ಸಮಯವೂ ತಡವಾಗಿಯೇ ಆಗುತ್ತದೆ. ಇವೆರಡೂ ನಿಸರ್ಗದ ನಿಯಮಕ್ಕೆ ವಿರುದ್ಧವಾಗಿದೆ. ಒಂದರ್ಥದಲ್ಲಿ ಇದೂ ಸಹಾ ಒಂದು ವ್ಯಸನವಾಗಿದೆ.

ನಿದ್ದೆ ಬಿಡುವುದು

ನಿದ್ದೆ ಬಿಡುವುದು

ಅದರಲ್ಲೂ ಯುವಜನಾಂಗ ಈ ವ್ಯಸನಕ್ಕೆ ಹೆಚ್ಚಾಗಿ ಬಲಿಯಾಗಿದ್ದಾರೆ. ನಮ್ಮ ಶರೀರದ ಎಷ್ಟೋ ಕೆಲಸಗಳು ರಾತ್ರಿ ಮಲಗಿದ್ದಾಗಲೇ ಆಗುತ್ತವೆ (ಅನೈಚ್ಛಿಕ ಕಾರ್ಯಗಳು). ಇದರಲ್ಲಿ ಪ್ರಮುಖವಾದುದು ಜೀವಕೋಶಗಳ ಬೆಳವಣಿಗೆ, ವಿಷವಸ್ತುಗಳನ್ನು ಸಂಗ್ರಹಿಸಿ ವಿಸರ್ಜನೆಗೆ ಕಳುಹಿಸುವುದು, ಮೂಳೆಗಳ ಬೆಳವಣಿಗೆ, ಹೊಸ ರಕ್ತದ ಉತ್ಪಾದನೆ, ವಿವಿಧ ಹಾರ್ಮೋನುಗಳನ್ನು ಸ್ರವಿಸುವುದು ಮೊದಲಾದವು ಈ ಸಮಯದಲ್ಲಿ ಎಚ್ಚರಿದ್ದರೆ ಆ ಕೆಲಸಗಳೆಲ್ಲಾ ಏರುಪೇರಾಗಿ ನಮ್ಮ ರೋಗ ನಿರೋಧಕ ಶಕ್ತಿಯನ್ನೇ ಕುಂದಿಸುತ್ತವೆ. ಸ್ಥೂಲಕಾಯ, ಹೆಚ್ಚಿನ ಮಾನಸಿಕ ಒತ್ತಡ, ಕೆಲಸದಿಂದ ಹಿಂದುಳಿಯಲು ಪ್ರೇರಣೆ, ಮಧುಮೇಹ ಮೊದಲಾದ ಪರಿಸ್ಥಿತಿಗಳಿಗೆ ನಿದ್ದೆ ಬಿಡುವುದು ನೇರವಾದ ಕಾರಣಗಳಾಗಿವೆ.

ಅಪಾಯಕರ ಲೈಂಗಿಕ ಭಂಗಿಗಳು

ಅಪಾಯಕರ ಲೈಂಗಿಕ ಭಂಗಿಗಳು

ಲೈಂಗಿಕ ವಿಷಯ ಬಂದರೆ ಅದರಲ್ಲಿ ನಿಜಕ್ಕಿಂತಲೂ ಉತ್ಪೇಕ್ಷೆಯೇ ಹೆಚ್ಚು. ನಿಸರ್ಗ ನೀಡಿರುವ ಈ ಕ್ರಿಯೆ ನೈಸರ್ಗಿಕ ವಿಧಾನದಲ್ಲಿಯೇ ನಡೆದಷ್ಟೂ ಆರೋಗ್ಯಕರ ಮತ್ತು ರೋಗ ನಿರೋಧಕ ಶಕ್ತಿ ಬೆಳೆಯಲು ಉತ್ತಮವಾಗಿದೆ. ಆದರೆ ತಮ್ಮ ಕಲ್ಪನೆಯನ್ನೇ ಉತ್ಪ್ರೇಕ್ಷಿಸಿ ತಮ್ಮ ಒಂದು ಸಾಮರ್ಥ್ಯದಂತೆ ಹೇಳಿರುವ ಸುಳ್ಳನ್ನೇ ನಂಬುವವರು ಇದನ್ನು ಅನುಸರಿಸಲು ಹೋಗಿ ಆಪಾಯಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.

ಅಪಾಯಕರ ಲೈಂಗಿಕ ಭಂಗಿಗಳು

ಅಪಾಯಕರ ಲೈಂಗಿಕ ಭಂಗಿಗಳು

ನಿಸರ್ಗ ಏಕಸಂಗಾತಿಯ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಿದ್ದರೂ ಜಗತ್ತಿನಲ್ಲಿ ಲಭ್ಯವಿರುವ ಉತ್ಪ್ರೇಕ್ಷೆ ಮತ್ತು ಸುಳ್ಳುಗಳಿಗೆ ಮನಸೋತು ಈ ಸೇವೆಯನ್ನು ಹೊರಗಿನಿಂದ ಖರೀದಿಸುವವರು ಸುರಕ್ಷತೆಯನ್ನು ಪಾಲಿಸದ ಒಂದೇ ಕ್ಷಣ ಇಡಿಯ ಜೀವಮಾನ ಪರಿತಪಿಸುವಂತಹ ಏಡ್ಸ್ ಮತ್ತು ಇತರ ರೋಗಗಳಿಗೆ ಬಲಿಯಾಗಬಹುದು

ಅಪಾಯಕರ ಲೈಂಗಿಕ ಭಂಗಿಗಳು

ಅಪಾಯಕರ ಲೈಂಗಿಕ ಭಂಗಿಗಳು

ಅದರಲ್ಲೂ ಏಡ್ಸ್ ನಿಮ್ಮ ರೋಗ ನಿರೋಧಕ ವ್ಯವಸ್ಥೆಯನ್ನೇ ಬುಡದಲ್ಲಿ ಕತ್ತರಿಸಿ ಕೇವಲ ಒಂದು ಚಿಕ್ಕ ಜ್ವರಕ್ಕೂ ನೆರವು ನೀಡದ ಸ್ಥಿತಿಗೆ ತಂದು ಮರಣವನ್ನು ಅನಿವಾರ್ಯವಾಗಿಸುತ್ತದೆ. ಆದ್ದರಿಂದ ನಿಸರ್ಗವನ್ನು ಪಾಲಿಸಿ, ಏಕಸಂಗಾತಿ ವ್ಯವಸ್ಥೆಯಲ್ಲಿ ವಿಶ್ವಾಸವಿಡಿ.

 ವೈದ್ಯರ ಸಲಹೆ ಇಲ್ಲದೇ ಔಷಧಿ ತೆಗೆದುಕೊಳ್ಳುವುದು

ವೈದ್ಯರ ಸಲಹೆ ಇಲ್ಲದೇ ಔಷಧಿ ತೆಗೆದುಕೊಳ್ಳುವುದು

ಹೊಸ ವೈದ್ಯರಿಗಿಂತ ಹಳೆಯ ರೋಗಿ ಮೇಲು ಎಂಬ ಗಾದೆಯೊಂದಿದೆ. ನಮ್ಮಲ್ಲಿ ಕೆಲವರಿಗೆ ಈ ಗಾದೆಯಲ್ಲಿ ಅಪರಿಮಿತ ನಂಬಿಕೆ. ಏಕೆಂದರೆ ದೇಹಕ್ಕೆ ಎದುರಾಗುವ ಯಾವುದಾದರೊಂದು ತೊಂದರೆಗೆ ಇಂತಹ ಮದ್ದು ಹಿಂದೆಂದೋ ವೈದ್ಯರು ಕೊಟ್ಟಿದ್ದುದ್ದು ರೋಗಿಗೆ ಚೆನ್ನಾಗಿ ನೆನಪಿದ್ದು ಮತ್ತೊಮ್ಮೆ ಅದೇ ತೊಂದರೆ ಬಂದರೆ ಅದೇ ಮದ್ದು ತೆಗೆದುಕೊಳ್ಳುವುದೇ ಈ 'ಹಳೆಯ ರೋಗಿ' ಗೆ ಕಾರಣ.

 ವೈದ್ಯರ ಸಲಹೆ ಇಲ್ಲದೇ ಔಷಧಿ ತೆಗೆದುಕೊಳ್ಳುವುದು

ವೈದ್ಯರ ಸಲಹೆ ಇಲ್ಲದೇ ಔಷಧಿ ತೆಗೆದುಕೊಳ್ಳುವುದು

ವಾಸ್ತವವಾಗಿ ಇಂದು ಕಾಣಿಸಿಕೊಂಡಿರುವ ಲಕ್ಷಣ ಅದೇ ತರಹವೇ ಕಂಡು ಬಂದಿದ್ದರೂ ಅದಕ್ಕೆ ಕಾರಣ ಬೇರೆ ವೈರಸ್ ಅಥವಾ ಬ್ಯಾಕ್ಟೀರಿಯಾ ಇರಬಹುದು. ಇದನ್ನು ವೈದ್ಯರು ಗುರುತಿಸಬಲ್ಲರೇ ಹೊರತು ನೀವಲ್ಲ. ಬದಲಿಗೆ ನಿಮ್ಮ ಹಳೆಯ ಚಾಳಿಯಂತೆ ಹಿಂದೆ ಇದೇ ತೊಂದರೆ ಬಂದಿದ್ದಾಗ ಸೇವಿಸಿದ್ದ ಔಷಧಿಯನ್ನೇ ಈಗಲೂ ತೆಗೆದುಕೊಂಡರೆ ಎರಡು ಕಡೆಯಿಂದ ನಿಮಗೆ ಹೊಡೆತ ಬೀಳುತ್ತದೆ.

ವೈದ್ಯರ ಸಲಹೆ ಇಲ್ಲದೇ ಔಷಧಿ ತೆಗೆದುಕೊಳ್ಳುವುದು

ವೈದ್ಯರ ಸಲಹೆ ಇಲ್ಲದೇ ಔಷಧಿ ತೆಗೆದುಕೊಳ್ಳುವುದು

ಒಂದು ನಿಮ್ಮ ಈ ಸ್ಥಿತಿಗೆ ಕಾರಣವಾದ ಬ್ಯಾಕ್ಟೀರಿಯಾಕ್ಕೆ ಈ ಔಷಧಿ ಪರಿಣಾಮ ಬೀರದೇ ಬ್ಯಾಕ್ಟೀರಿಯಾಗಳು ಹಬ್ಬ ಹುಡಿ ಹಾರಿಸಿ ಈ ಪರಿಸ್ಥಿತಿ ಉಲ್ಬಣಿಸಬಹುದು. ಇನ್ನೊಂದೆಡೆ ನೀವು ಸೇವಿಸಿದ ಔಷಧಿ ನಿಮಗೆ ಅರಿವಿಲ್ಲದೇ ಬೇರಾವುದೋ ಪರಿಣಾಮ ಬೀರಬಹುದು. ಇವೆರಡೂ ಒಟ್ಟಾಗಿ ನೀವು ಕುಸಿದು ಬಿದ್ದರೆ ಆಸ್ಪತ್ರೆಯಲ್ಲಿ ಇದಕ್ಕೆ ಕಾರಣ ಹುಡುಕಲೂ ವೈದ್ಯರು ಹೆಣಗಾಡಬೇಕಾಗುತ್ತದೆ. ಒಂದು ವೇಳೆ ನೀವು ಇಂತಹ ಮಾತ್ರೆ ತೆಗೆದುಕೊಂಡೆ ಎಂದು ಹೇಳಿದರೆ ಮಾತ್ರ ವೈದ್ಯರ ಕೆಲಸ ಸುಲಭವಾಗಬಹುದು. ಆದರೆ ಆ ವೇಳೆ ನೀವು ಪ್ರಜ್ಞೆ ಕಳೆದುಕೊಂಡಿದ್ದರೆ? .......

ಸಮಾಜದಿಂದ ದೂರವಿರುವುದು

ಸಮಾಜದಿಂದ ದೂರವಿರುವುದು

ಹೆಚ್ಚಿನವರಲ್ಲಿ ಒಂದು ದುರಭ್ಯಾಸವಿದೆ. ಅದೆಂದರೆ ತಾವು ಮಾತ್ರ (ತಮ್ಮ ಪಂಗಡ ಮಾತ್ರ) ಉಳಿದವರೆಲ್ಲ ನಿಕೃಷ್ಟರು ಎಂಬ ಭಾವನೆ. ಇದೊಂದು ಅತ್ಯಂತ ಘೋರವಾದ ಮಾನಸಿಕ ವ್ಯಾಧಿಯಾಗಿದ್ದು ಕಾಲಕಳೆದಂತೆ ಹೊರಗಿನವರಿಂದ, ಬಳಿಕ ತಮ್ಮವರಿಂದಲೂ ದೂರವಾಗುತ್ತಾ ಬರುತ್ತಾರೆ. ನೀವು ಒಂಟಿಯಾದಷ್ಟೂ ಸಮಾಜವೂ ನಿಮ್ಮನ್ನು ಮರೆಯುತ್ತಾ ಬರುತ್ತದೆ. ಮಾನವ ಸಂಘಜೀವಿ. ನಿಮಗೆ ಇತರರ ಎಷ್ಟು ಅಗತ್ಯವಿದೆಯೋ ಅಂತೆಯೇ ಉಳಿದವರಿಗೂ ನಿಮ್ಮ ಅಗತ್ಯ ಬಂದೇ ಬರುತ್ತದೆ. ಒಂಟಿತನವೂ ಒಂದು ವ್ಯಸನವಾಗಿದ್ದು ರೋಗ ನಿರೋಧಕ ವ್ಯವಸ್ಥೆ ಕುಸಿಯಲು ಪರೋಕ್ಷವಾಗಿ ಕಾರಣವಾಗಿದೆ. ಮಾನಸಿಕ ಮತ್ತು ದೈಹಿಕವಾಗಿ ಸುಸ್ಥಿತಿಯಲ್ಲಿರುವ ಸಾಮಾಜಿಕ ಜೀವನ ಅತ್ಯಗತ್ಯವಾಗಿದೆ.

ನಗುವಿನ ಕೊರತೆ

ನಗುವಿನ ಕೊರತೆ

laughter is the best medicine ಎಂಬ ಸುಭಾಷಿತವೊಂದಿದೆ. ಇದನ್ನು ಮನಗಂಡ ಹಲವು ಸಂಸ್ಥೆಗಳು ನಗೆ ಕ್ಲಬ್ ಗಳನ್ನೂ ಸ್ಥಾಪಿಸಿದ್ದಾರೆ. ನಿತ್ಯವೂ ಕೆಲವು ಬಾರಿಯಾದರೂ ಮನಸಾರೆ, ಹೊಟ್ಟೆಯೊಳಗಿನ ವಾಯುವೆಲ್ಲಾ ಹೊರಬರುವಂತೆ ನಗಬೇಕು. ಇದು ಮನುಷ್ಯರಿಗೆ ನಿಸರ್ಗ ನೀಡಿರುವ, ಬೇರೆ ಯಾವುದೇ ಪ್ರಾಣಿಗೆ ನೀಡಿರದ ಒಂದು ವರ. ಇದನ್ನು ಬಳಸಿಕೊಳ್ಳಿ. ನಗುವ ಮೂಲಕ ವಾಯುರೂಪದ ಕಲ್ಮಶಗಳು ಹೊಟ್ಟೆಯೊಳಗಿನಿಂದ ಹೊರಬರುವ ಮೂಲಕ ರೋಗ ನಿರೋಧಕ ಶಕ್ತಿಗೆ ನೆರವು ನೀಡಿದಂತಾಗುತ್ತದೆ. ನಿಮ್ಮ ಸ್ನೇಹಿತರು ಮತ್ತು ನಿಕಟವರ್ತಿಗಳೊಂದಿಗೆ ಉತ್ತಮ ವ್ಯವಹಾರ, ನಡುನಡುವೆ ಹಾಸ್ಯ ಚಟಾಕಿ ಮತ್ತು ವಿನೋದವನ್ನು ಅನುಭವಿಸಿ. ಆದರೆ ಬೇರೆ ಯಾರನ್ನೂ ಅಪಹಾಸ್ಯ ಮಾಡಿ ಅವರ ಮನ ನೋಯಿಸಬೇಡಿ.

English summary

Health Habits That Weaken Men

Today lifestyle has become faster and hectic than before. Though your body gets some rest, your brain continues working even while you’re sleeping. Such an uptight lifestyle can hamper your immunity system. Therefore, to deal with your life’s evil, you have to build a strong immunity. But men always don’t follow the healthy lifestyle. So, what are the health habits that weaken men? Read on to know more
X