ಲಿಂಬೆ ಜ್ಯೂಸ್, ಇದುವೇ ಶಕ್ತಿಯ ಆಗರ- ಚಾಲೆಂಜ್‌ಗೆ ರೆಡಿನಾ?

Posted By:
Subscribe to Boldsky

ನಮಗೆ ಸಿಗುವ ಸವಲತ್ತುಗಳ ಪ್ರಕಾರ ನಮ್ಮ ಮನಃಸ್ಥಿತಿಯೂ ಬದಲಾಗುತ್ತಾ ಹೋಗಿದೆ. ದೈಹಿಕ ಶ್ರಮ ಬೇಡುವ ಯಾವುದೇ ಕೆಲಸವನ್ನು ತಡೆಹಿಡಿಯಲು ಅದಕ್ಕೇನಾದರೂ ಪರ್ಯಾಯ ಲಭ್ಯವಿದೆಯೇ ಎಂದು ಮೊದಲು ನಾವು ಯೋಚಿಸುತ್ತೇವೆ. ಉದಾಹರಣೆಗೆ ಇಪ್ಪತ್ತು ನಿಮಿಷದಲ್ಲಿ ನಡೆದು ತಲುಪಬಹುದಾದ ಸ್ಥಳ ಸೇರಲು ಇಪ್ಪತ್ತು ನಿಮಿಷ ಬಸ್ಸಿಗೆ ಕಾದು, ಬಸ್ಸಿನಲ್ಲಿ ಹತ್ತು ನಿಮಿಷ ಪ್ರಯಾಣಿಸಿ, ಬಸ್ಸಿನಿಂದಿಳಿದು ಆ ಸ್ಥಳಕ್ಕೆ ಮತ್ತೂ ಹತ್ತು ನಿಮಿಷ ನಡೆದು ತಲುಪುತ್ತೇವೆ!

ಹತ್ತಿರದಲ್ಲಿಯೇ ಇರುವ ಅಂಗಡಿಯಿಂದ ಏನಾದರೂ ದಿನಬಳಕೆಯ ವಸ್ತು ಬೇಕೆಂದರೂ ವಾಹನವನ್ನು ಅವಲಂಬಿಸುತ್ತೇವೆ. ಇದರಿಂದ ದೇಹಕ್ಕೆ ನೈಸರ್ಗಿಕವಾಗಿ ಲಭ್ಯವಾಗಬೇಕಾಗಿದ್ದ ವ್ಯಾಯಾಮ ದೊರಕದೇ ದೇಹ ಒಳಗಿನಿಂದ ಶಿಥಿಲವಾಗುತ್ತದೆ. ಸ್ವಾದಿಷ್ಟ ಆಹಾರವನ್ನೂ ಆಯ್ದು ಸೇವಿಸಲು ನಮಗೆ ಸಮಯವಿಲ್ಲ! ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!

ಆದರೆ ಇದಕ್ಕೂ ಕೆಲವು ಉಪಾಯಗಳಿವೆ. ನಿಮ್ಮ ನಿತ್ಯದ ಚಟುವಟಿಕೆಗಳಲ್ಲಿ ಸಾಧ್ಯವಾದಷ್ಟು ನಡೆಯುವ ಬಗ್ಗೆ ಯೋಚಿಸುವುದು ಮತ್ತು ಲಿಂಬೆರಸದ ನೀರನ್ನು ಕುಡಿಯುವುದು. ಉದಾಹರಣೆಗೆ ಲಿಫ್ಟ್‌ಗೆ ಕಾಯುವ ಸಮಯದಲ್ಲಿ ಕೆಲವಾರು ಮಹಡಿಗಳನ್ನು ಇಳಿದೇ ಹೋಗಿಬಿಡಬಹುದು. ಇದರಿಂದ ದೈಹಿಕ ಚಟುವಟಿಕೆ ಸಾಧ್ಯವಾಗುತ್ತದೆ. ಪ್ರತಿದಿನ ಬೆಳಿಗ್ಗೆ ಲಿಂಬೆರಸವನ್ನು ಕುಡಿಯುವ ಮೂಲಕ ಆರೋಗ್ಯ ಉತ್ತಮಗೊಳ್ಳುವುದು ಮತ್ತು ದಿನವಿಡೀ ಉಲ್ಲಾಸವಿರುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ.

ಚರ್ಮಕ್ಕೆ ತೇಜಸ್ಸು ನೀಡುತ್ತದೆ

ಚರ್ಮಕ್ಕೆ ತೇಜಸ್ಸು ನೀಡುತ್ತದೆ

ಲಿಂಬೆಯಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ಚರ್ಮಕ್ಕೆ ಅಗತ್ಯವಾಗಿರುವ ಪೋಷಣೆಯನ್ನು ಒಳಗಿನಿಂದ ನೀಡುವ ಮೂಲಕ ಚರ್ಮದ ಕಾಂತಿ ಹೆಚ್ಚಿಸುತ್ತದೆ ಮತ್ತು ಪೋಷಣೆಯನ್ನೂ ನೀಡುತ್ತದೆ.

ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ

ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ

ಲಿಂಬೆರಸವನ್ನು ನಿತ್ಯವೂ ಸೇವಿಸುವವರಲ್ಲಿ ಅಧಿಕ ರಕ್ತದೊತ್ತಡದವರು ಹತ್ತು ಶೇಖಡಕ್ಕೂ ಕಡಿಮೆಯಾಗಿರುವುದನ್ನು ಗಮನಿಸಲಾಗಿದೆ. ನಿತ್ಯವೂ ಒಂದೇ ಹೊತ್ತಿನಲ್ಲಿ, ಅಂದರೆ ಪ್ರತಿದಿನ ಬೆಳಿಗ್ಗೆ ಲಿಂಬೆರಸ ಸೇರಿಸಿದ ನೀರನ್ನು ಕುಡಿಯುತ್ತಾ ಬಂದರೆ ಕ್ರಮೇಣ ಅಧಿಕ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರುತ್ತದೆ.

ಖಿನ್ನತೆ ಮತ್ತು ಉದ್ವೇಗವನ್ನು ಕಡಿಮೆ ಮಾಡುತ್ತದೆ

ಖಿನ್ನತೆ ಮತ್ತು ಉದ್ವೇಗವನ್ನು ಕಡಿಮೆ ಮಾಡುತ್ತದೆ

ಕೆಲಸದ ಒತ್ತಡ ಮತ್ತು ಇತರ ಕಾರಣಗಳಿಂದಾಗಿ ಖಿನ್ನತೆ ಅಥವಾ ಉದ್ವೇಗ ಆವರಿಸಿದ್ದರೆ ಲಿಂಬೆರಸವನ್ನು ಕೊಂಚವೇ ಬಿಸಿ ಇರುವ ನೀರಿನಲ್ಲಿ ಸೇರಿಸಿ ಕುಡಿಯುವ ಮೂಲಕ ಕಡಿಮೆ ಮಾಡಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಖಿನ್ನತೆ ಮತ್ತು ಉದ್ವೇಗವನ್ನು ಕಡಿಮೆ ಮಾಡುತ್ತದೆ

ಖಿನ್ನತೆ ಮತ್ತು ಉದ್ವೇಗವನ್ನು ಕಡಿಮೆ ಮಾಡುತ್ತದೆ

ಖಿನ್ನತೆಗೆ ಪೊಟ್ಯಾಶಿಯಂ ಕೊರತೆ ಕಾರಣವಾಗಿದ್ದು ಇದನ್ನು ಲಿಂಬೆಯ ರಸ ಪೂರ್ಣಗೊಳಿಸುವ ಕಾರಣ ನಿತ್ಯದ ಸೇವನೆ ನಿಮ್ಮ ದುಗುಡವನ್ನು ಕಡಿಮೆ ಮಾಡಿ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುತ್ತದೆ

ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುತ್ತದೆ

ಲಿಂಬೆರಸದಲ್ಲಿ ಪ್ರಬಲವಾದ ಆಂಟಿ ಆಕ್ಸಿಡೆಂಟುಗಳಿರುವ ಕಾರಣ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತಮಪಡಿಸಲು ಉತ್ತಮವಾದ ದ್ರವಾಹಾರವಾಗಿದೆ. ಇದು ದೇಹವನ್ನು ರಕ್ಷಿಸುವುದರ ಜೊತೆಗೇ ಕೆಲವು ಕ್ಯಾನ್ಸರ್‌ಗೆ ಕಾರಣವಾಗುವ ಕಣಗಳನ್ನು ನಿವಾರಿಸುವ ಮೂಲಕ ಹಲವು ತೊಂದರೆಗಳು ಆವರಿಸದಂತೆ ರಕ್ಷಣೆ ನೀಡುತ್ತದೆ.

ಯಕೃತ್‌ನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಯಕೃತ್‌ನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಲಿಂಬೆರಸ ಸೇರಿಸಿದ ನೀರಿನ ನಿತ್ಯದ ಸೇವನೆಯಿಂದ ಯಕೃತ್ ಸಹಾ ಉತ್ತಮ ಪ್ರಮಾಣದಲ್ಲಿ ಕಿಣ್ವಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ. ತನ್ಮೂಲಕ ಯಕೃತ್ ನ ಕ್ಷಮತೆ ಹೆಚ್ಚುತ್ತದೆ.

ಉಸಿರಾಟಾದ ನಾಳದ ಸೋಂಕು ನಿವಾರಿಸುತ್ತದೆ

ಉಸಿರಾಟಾದ ನಾಳದ ಸೋಂಕು ನಿವಾರಿಸುತ್ತದೆ

ಗಾಳಿಯ ಮೂಲಕ ಆಗಮಿಸುವ ರೋಗಾಣುಗಳಿಂದ ಎದುರಾಗುವ ಸೋಂಕು ನಿವಾರಿಸಲು ಲಿಂಬೆರಸ ಉತ್ತಮವಾಗಿದೆ. ಇದರ ಉರಿಯೂತ ನಿವಾರಕ ಗುಣ ಹಲವು ಬ್ಯಾಕ್ಟೀರಿಯಾಗಳಿಗೆ ರಾಮಬಾಣವಾಗಿದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಕೊಂಚ ಬಿಸಿಯಾಗಿರುವ ನೀರು ಮತ್ತು ಲಿಂಬೆರಸವನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಬಹುದು. ಇದರಲ್ಲಿರುವ ಸಿಟ್ರಿಕ್ ಆಮ್ಲ ಜೀರ್ಣಾಂಗಗಳಲ್ಲಿ ಜೀರ್ಣರಸಗಳು ಹೆಚ್ಚು ಉತ್ಪತ್ತಿಯಾಗಲು ನೆರವಾಗುತ್ತದೆ.

ಮೂಳೆಸಂದುಗಳನ್ನು ಗುಣಪಡಿಸುತ್ತದೆ

ಮೂಳೆಸಂದುಗಳನ್ನು ಗುಣಪಡಿಸುತ್ತದೆ

ಲಿಂಬೆ ನಿತ್ಯದ ಸೇವನೆಯಿಂದ ಮೂಳೆಸಂದು ಮತ್ತು ಸ್ನಾಯುಗಳಲ್ಲಿ ಆಗುವ ನೋವನ್ನು ನಿವಾರಿಸಲು ಸಾಧ್ಯವಾಗುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ಲಿಂಬೆ ನಿತ್ಯದ ಸೇವನೆಯಿಂದ ಹೆಚ್ಚಿನ ಕೊಬ್ಬು ಕರಗಲು ಸಾಧ್ಯವಾಗುತ್ತದೆ. ಅಲ್ಲದೇ ದಿನದ ಅಗತ್ಯ ಆಹಾರಗಳ ಹೊರತಾಗಿ ಇತರ ಅನಾರೋಗ್ಯಕರ ಆಹಾರಗಳನ್ನು ಸೇವಿಸದಿರಲು ಮನಸ್ಸು ಗಟ್ಟಿಯಾಗಲು ಸಾಧ್ಯವಿರುವುದರಿಂದ ತೂಕ ಕಳೆದುಕೊಳ್ಳಲು ನೆರವಾಗುತ್ತದೆ.

ದೇಹಕ್ಕೆ ಎಲೆಕ್ಟ್ರೋಲೈಟ್‌ಗಳನ್ನು ನೀಡುತ್ತದೆ

ದೇಹಕ್ಕೆ ಎಲೆಕ್ಟ್ರೋಲೈಟ್‌ಗಳನ್ನು ನೀಡುತ್ತದೆ

ದೇಹದ ಚಟುವಟಿಕೆಗೆ ಅಗತ್ಯವಿರುವ ಎಲೆಕ್ಟ್ರೋಲೈಟುಗಳಾದ ಪೊಟ್ಯಾಶಿಯಂ, ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂಗಳನ್ನು ಲಿಂಬೆ ಉತ್ತಮ ಪ್ರಮಾಣದಲ್ಲಿ ಒದಗಿಸುತ್ತದೆ.

ರಕ್ತಶುದ್ಧಿಗೊಳಿಸುತ್ತದೆ

ರಕ್ತಶುದ್ಧಿಗೊಳಿಸುತ್ತದೆ

ಲಿಂಬೆಯ ಅತ್ಯುತ್ತಮ ಗುಣವೆಂದರೆ ರಕ್ತಶುದ್ಧಿ, ರಕ್ತದಲ್ಲಿದ್ದ ವಿಷಕಾರಿ ವಸ್ತುಗಳನ್ನು ವಿಸರ್ಜಸುವ ಮೂಲಕ ರಕ್ತನಾಳ ಮತ್ತು ರಕ್ತಪರಿಚಲನಾ ವ್ಯವಸ್ಥೆ ಸುಸ್ಥಿತಿಯಲ್ಲಿರುವಂತೆ ನೆರವಾಗುತ್ತದೆ.

ಮೂತ್ರಪಿಂಡಗಳ ಕಲ್ಲು ನಿವಾರಿಸುತ್ತದೆ

ಮೂತ್ರಪಿಂಡಗಳ ಕಲ್ಲು ನಿವಾರಿಸುತ್ತದೆ

ಮೂತ್ರಪಿಂಡದಲ್ಲಿ ಕಲ್ಲುಂಟಾಗಿದ್ದರೆ ನಿತ್ಯವೂ ಮುಂಜಾನೆ ಕೊಂಚವೇ ಬಿಸಿ ಇರುವ ನೀರಿನಲ್ಲಿ ಲಿಂಬೆಯೊಂದರ ರಸ ಹಾಕಿ ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ಈ ಕಲ್ಲು ನಿಧಾನವಾಗಿ ಕರಗುತ್ತಾ ಹೋಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೂತ್ರಪಿಂಡಗಳ ಕಲ್ಲು ನಿವಾರಿಸುತ್ತದೆ

ಮೂತ್ರಪಿಂಡಗಳ ಕಲ್ಲು ನಿವಾರಿಸುತ್ತದೆ

ಜೊತೆಗೇ ಮೇದೋಜೀರಕ ಗ್ರಂಥಿಯ ಕಲ್ಲು, ಪಿತ್ತಕೋಶದ ಕಲ್ಲುಗಳು ಮತ್ತು ಕ್ಯಾಲ್ಸಿಯಂ ಘನೀಕರಿಸಿದ್ದರೆ ಅವೂ ಕರಗಿ ನೀರಾಗಿ ಹೊರಹರಿದು ಹೋಗುತ್ತವೆ.

ಬಾಯಿಯ ದುರ್ವಾಸನೆ ನಿವಾರಿಸುತ್ತದೆ

ಬಾಯಿಯ ದುರ್ವಾಸನೆ ನಿವಾರಿಸುತ್ತದೆ

ಲಿಂಬೆರಸದ ಸೇವೆನೆಯಿಂದ ಬಾಯಿಯಲ್ಲಿ ದುರ್ವಾಸನೆಯಾಗುವುದು ಕಡಿಮೆಯಾಗುತ್ತದೆ ಹಾಗೂ ಹಲ್ಲು ಮತ್ತು ಒಸಡುಗಳು ಸಹಾ ಸುಸ್ಥಿತಿಯಲ್ಲಿರುತ್ತವೆ. ಹಲ್ಲುನೋವು ಮೊದಲಾದ ತೊಂದರೆಗಳಿಂದ ಶೀಘ್ರವೇ ಶಮನಹೊಂದಲೂ ನೆರವಾಗುತ್ತದೆ.

ಕ್ಯಾನ್ಸರ್ ಬರುವುದನ್ನು ತಪ್ಪಿಸುತ್ತದೆ

ಕ್ಯಾನ್ಸರ್ ಬರುವುದನ್ನು ತಪ್ಪಿಸುತ್ತದೆ

ಲಿಂಬೆ ಜ್ಯೂಸ್ ನಲ್ಲಿ ಆಮ್ಲೀಯವಾದ ಅಂಶದ ಜೊತೆಗೇ ಕೆಲವು ಕ್ಷಾರೀಯ ಅಂಶಗಳೂ ಇದ್ದು ಕೆಲವು ಕ್ಯಾನ್ಸರ್ ಕಾರಕ ಕಣಗಳು ನಿಮ್ಮ ದೇಹದ ಮೇಲೆ ಧಾಳಿ ಮಾಡುವ ಸಂಭವವನ್ನು ತಪ್ಪಿಸಿ ವಿವಿಧ ಕ್ಯಾನ್ಸರ್‌ಗಳಿಂದ ರಕ್ಷಿಸುತ್ತದೆ.

ಉದರ ಸ೦ಬ೦ಧೀ ತೊ೦ದರೆಗೆ

ಉದರ ಸ೦ಬ೦ಧೀ ತೊ೦ದರೆಗೆ

ಜ೦ತು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ ಲಿ೦ಬೆ ಹಣ್ಣಿನ ಜ್ಯೂಸ್ ಅತ್ಯುತ್ತಮವಾದ ಆರೋಗ್ಯ ಸ೦ಬ೦ಧೀ ಪ್ರಯೋಜನವೇನೆ೦ದರೆ, ಅದು ಸಣ್ಣಕರುಳುಗಳಲ್ಲಿರುವ ಜ೦ತು ಅಥವಾ ಹುಳುಗಳನ್ನು ನಿವಾರಿಸುತ್ತದೆ.

ಹಲ್ಲು ನೋವಿಗೆ ರಾಮಬಾಣ

ಹಲ್ಲು ನೋವಿಗೆ ರಾಮಬಾಣ

ಹಲ್ಲುಗಳ ಮೇಲೆ ಲಿ೦ಬೆಯ ಸಿಪ್ಪೆಯಿಂದ ಮಸಾಜ್ ಮಾಡಿಕೊಳ್ಳುವುದರಿ೦ದ, ಒಸಡಿನ ರಕ್ತಸ್ರಾವವು ನಿಲ್ಲುತ್ತದೆ. ಮಾತ್ರವಲ್ಲ, ಲಿ೦ಬೆಯು ವಸಡುಗಳಿಗೆ ಸ೦ಬ೦ಧಿಸಿದ ವಿವಿಧ ರೋಗಗಳಿ೦ದ ಉ೦ಟಾಗಬಹುದಾದ ಉಸಿರಿನ ದುರ್ವಾಸನೆಯನ್ನು ನಿವಾರಿಸುತ್ತದೆ.

ಮಧುಮೇಹ ತಡೆಯುತ್ತದೆ

ಮಧುಮೇಹ ತಡೆಯುತ್ತದೆ

ಲಿಂಬೆ ಜ್ಯೂಸ್ ಮಧುಮೇಹಿಗಳಿಗೆ ಕೂಡ ತುಂಬಾ ಒಳ್ಳೆಯದು. ಇದು ರಕ್ತ ಹೀರಿಕೊಳ್ಳುವ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಜೊತೆಗೆ ಚಯಾಪಚಾಯ ಕ್ರಿಯೆಗೂ ನೆರವಾಗುತ್ತದೆ.

English summary

Drinking lemon water daily will change your life

Due to the lifestyle that we all follow these days, we hardly get time to exercise or follow a strict routine to remain fit and fine. Even if we plan a diet chart, it's hardly that one gets time to follow it regularly. But, today we bring you some simple uses of lemons added with warm water. It's just a simple beverage that can change your life to a much higher extent and it would just take few minutes.
Story first published: Thursday, October 1, 2015, 23:17 [IST]
Subscribe Newsletter