ತೂಕ ಇಳಿಸಿಕೊಳ್ಳಲು 5 ವಿಸ್ಮಯಕಾರಿ ಚಹಾ!

Posted By:
Subscribe to Boldsky

ನೀವು ಇಷ್ಟಪಡುವ ಪಿಜ್ಜಾ, ಬರ್ಗರ್, ಚಾಕಲೇಟ್,ಬರ್ಗರ್, ಚೀಸ್ ನಿಮ್ಮ ಸುತ್ತಲಿದ್ದಾಗ ಪಥ್ಯವನ್ನು ಅನುಸರಿಸುವುದು ಕಷ್ಟಕರವೇ ಸರಿ. ನಿಮ್ಮ ಆಸೆಯ ತಿಂಡಿಗಳನ್ನು ನಿಯಂತ್ರಿಸುವುದು ಸುಲಭದ ಮಾತಲ್ಲ. ದಿನವೂ ವ್ಯಾಯಾಮ ಮಾಡುವುದು ಈ ವ್ಯಸ್ತ ಜೀವನದಲ್ಲಿ ಸುಲಭವಲ್ಲದ ಮಾತು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಹಾ ಚಟದಿಂದ ಸಿಗುವ 10 ಪ್ರಯೋಜನಗಳು!

ವ್ಯಾಯಾಮ ಮತ್ತು ಆಹಾರ ನಿಯಂತ್ರಣ ಮಾತ್ರ ತೂಕ ಇಳಿಸಲು ಸಾಲದು ನೀವು ಅನುಸರಿಸಲೇ ಬೇಕಾದ ಕೆಲವೊಂದು ಮಾಹಿತಿಗಳನ್ನು ಇಲ್ಲಿ ತಿಳಿಯಪಡಿಸಲು ನಾವು ಇಷ್ಟಪಡುತ್ತಿದ್ದೇವೆ.ನಿಮ್ಮ ತೂಕ ಇಳಿಸುವಲ್ಲಿ ಸಹಕಾರಿಯಾಗಿರುವ ಕೆಲವೊಂದು ಆಹಾರ ಪದಾರ್ಥಗಳು ನಿಮ್ಮ ಸುತ್ತಲಿದೆ. ತರಕಾರಿಗಳು, ಹಣ್ಣುಗಳು ಮತ್ತು ಪಾನೀಯಗಳೂ ಸಹ ಈ ನಿಟ್ಟಿನಲ್ಲಿ ಸಹಕಾರಿಯಾಗಿದೆ.

ನೀವು ತೂಕ ಇಳಿಸುವಲ್ಲಿ ಪಾಲೀಸಲೇಬೇಕಾದ ಒಂದು ವಿಧಾನವೆಂದರೆ ಚಹಾ ಸೇವಿಸುವುದಾಗಿದೆ. ನೈಸರ್ಗಿಕ ಅಂಶಗಳಿಂದ ಕೂಡಿರುವ ಹಲವಾರು ಚಹಾ ಲಭ್ಯವಿದ್ದು ತೂಕ ಇಳಿಸುವಲ್ಲಿ ನಿಮಗೆ ಪ್ರಯೋಜನಕಾರಿಯಾಗಲಿದೆ. ಅವು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೂಕ ಇಳಿಕೆಗಾಗಿ ಲಿಂಬೆ ಚಹಾ

1.ರೋಸ್ ಟೀ

1.ರೋಸ್ ಟೀ

ಚಹಾ ತಯಾರಿಸುವಾಗ ಗುಲಾಬಿ ಎಸಳನ್ನು ಹಾಕಿ ಚಹಾ ತಯಾರಿಸುವುದು ಉತ್ತಮ. ಹೊಟ್ಟೆಯ ತೊಂದರೆಯನ್ನು ಈ ರೋಸ್ ಟೀ ನೀಗಿಸುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಈ ಚಹಾ ತೊಲಗಿಸಿ ತ್ವಚೆಯಲ್ಲಿ ಹೊಸ ಕಾಂತಿಯನ್ನು ತರುತ್ತದೆ. ಮತ್ತು ತೂಕ ಇಳಿಸಲು ಸಹಕಾರಿ.

2.ಊಲೋಂಗ್ ಟೀ

2.ಊಲೋಂಗ್ ಟೀ

ಇತರ ಟೀ ಗಳಿಗಿಂತ ಈ ಊಲೋಂಗ್ ಚಹಾದಲ್ಲಿರುವ ತೂಕ ಇಳಿಕೆಯ ಅಂಶಗಳು ನಿಮ್ಮ ಬೊಜ್ಜನ್ನು ಕರಗಿಸಿ ಸುಂದರ ಆಕಾರವನ್ನು ದಯಪಾಲಿಸುತ್ತದೆ. ಊಲೋಂಗ್ ಅನ್ನು 20 - 25 ನಿಮಿಷದವರೆಗೆ ನೀರಿನಲ್ಲಿ ಕುದಿಸಿ ನಂತರ ಚಹಾ ತಯಾರಿಸಬೇಕು.

3.ಬ್ಲಾಕ್ ಟೀ

3.ಬ್ಲಾಕ್ ಟೀ

ಬ್ಲಾಕ್ ಟೀಗೆ ಲಿಂಬೆಯನ್ನು ಹಿಂಡಿ ಅದನ್ನು ಸೇವಿಸುವುದು ನಿಮ್ಮ ತೂಕ ನಿಯಂತ್ರಿಸುತ್ತದೆ. ದೇಹದಲ್ಲಿ ಶಕ್ತಿ ಉತ್ಪಾದಿಸಿ ಸಾಮರ್ಥ್ಯವನ್ನು ಏರಿಸುತ್ತದೆ.

4.ಭಾರತೀಯ ಚಹಾ

4.ಭಾರತೀಯ ಚಹಾ

ಭಾರತೀಯ ಚಹಾದಲ್ಲಿ ಸಕ್ಕರೆ ಅಂಶ ಹೆಚ್ಚು ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಭಾರತೀಯ ಚಹಾವನ್ನು ಶುಗರ್ ಫ್ರೀ/ ಬ್ರೌನ್ ಶುಗರ್ ಕೆನೆ ಇಲ್ಲದ ಹಾಲನ್ನು ಬಳಸಿ ತಯಾರಿಸುವುದು ತೂಕ ನಿಯಂತ್ರಣಕ್ಕೆ ಸಹಕಾರಿ.

5.ಗ್ರೀನ್ ಟೀ

5.ಗ್ರೀನ್ ಟೀ

ನೀವು ತೂಕ ಇಳಿಸುವ ಯೋಜನೆಯಲ್ಲಿದ್ದು, ನಿಮ್ಮ ಬೆಳಗ್ಗಿನ ಪಾನೀಯ ಗ್ರೀನ್ ಚಹಾ ಆಗಿರದಿದ್ದರೆ ನೀವು ತಪ್ಪು ವಿಧಾನವನ್ನು ಅನುಸರಿಸಿರುವಿರಿ ಎಂಬುದು ಅರ್ಥವಾಗಿದೆ. ದೇಹದಲ್ಲಿನ ಚಯಾಪಚಯ ವ್ಯವಸ್ಥೆಯನ್ನು ಸರಿದೂಗಿಸುವಲ್ಲಿ ಗ್ರೀನ್ ಟೀ ಯ ಉಪಕಾರ ಹಿರಿದು.

Read more about: health, ಆರೋಗ್ಯ
English summary

Top 5 Slimming Teas

Losing weight can be a challenge when there are super yummy delicacies like pizzas, burgers, cheesy sandwiches and chocolate desserts everywhere around you. It is difficult to control your appetite. It is even more challenging to exercise and shed off those extra kilograms.
Story first published: Wednesday, February 12, 2014, 9:57 [IST]
Please Wait while comments are loading...
Subscribe Newsletter