ಹೆಂಗಳೆಯರ ಸ್ತನ ಗಾತ್ರ ಕಿರಿದಾಗಿಸಲು ಸಲಹೆಗಳು

Posted By:
Subscribe to Boldsky

ಹೆಂಗಳೆಯರ ಸೌಂದರ್ಯದ ಪ್ರತೀಕದಂತಿರುವ ಸ್ತನಗಳು ಆಕರ್ಷಣೆಯ ಕೇಂದ್ರಬಿಂದು. ದೊಡ್ಡ ಸ್ತನಗಳು ಉತ್ತಮ ಮತ್ತು ನೋಡಲು ಆಕರ್ಷಕವಾಗಿರುತ್ತವೆ ಆದರೆ ಅದನ್ನು 24 ಗಂಟೆಯೂ ಹೊತ್ತೊಯ್ಯುವುದು ಹೆಂಗಳೆಯರಿಗೆ ಸಾಧ್ಯವಾಗದ ಮಾತು. ಹೆಚ್ಚಿನ ಸಂದರ್ಭಗಳಲ್ಲಿ ಆಕೆ ಮುಜುಗರಕ್ಕೆ ಅಪಮಾನಕ್ಕೆ ಒಳಗಾಗಬೇಕಾಗುತ್ತದೆ. ಇವುಗಳು ದೇಹದ ವಿನ್ಯಾಸವನ್ನು ಹಾಳು ಮಾಡಿ ಬೆನ್ನು ನೋವು ಉಂಟಾಗಲು ಕಾರಣವಾಗುತ್ತವೆ. ಹಿರಿದಾದ ಸ್ತನಗಳನ್ನು ಕಿರಿದಾಗಿಸಲು ಆಕೆ ಸಾಕಷ್ಟು ಪ್ರಯತ್ನ ಮಾಡುತ್ತಾಳೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಎಲೆಕ್ಟ್ರಾನಿಕ್ಸ್ ಸಿಗರೇಟ್ ಎಳೆದರೆ ಅಪಾಯವಿಲ್ಲವೇ?

ಇಂತಹ ಸ್ತನ ಗಾತ್ರವನ್ನು ಕಿರಾದಾಗಿಸುವ ಬಯಕೆ ನಿಮ್ಮಲ್ಲಿದ್ದರೆ ಲೇಖನ ಓದುವುದನ್ನು ಮುಂದುವರಿಸಿ. ಕೊಬ್ಬಿನ ಅಂಶಗಳಿಂದ ಸ್ತನಗಳು ರಚಿತವಾಗಿರುತ್ತವೆ ಇವುಗಳ ಗಾತ್ರವನ್ನು ಕಿರಿದಾಗಿಸುವುದು ಸುಲಭದ ಮಾತಲ್ಲ ಮತ್ತು ಅವುಗಳು ವೇಗವಾಗಿ ಕಿರಿದಾಗುವುದೂ ಇಲ್ಲ.

ನಿಮ್ಮ ಸ್ತನದ ಗಾತ್ರ ನಿಮ್ಮ ದೇಹದ ತೂಕವನ್ನು ಅವಲಂಬಿಸಿರುತ್ತದೆ. ನೈಸರ್ಗಿಕವಾಗಿ ತಮ್ಮ ಸ್ತನದ ಗಾತ್ರವನ್ನು ಕಿರಿದಾಗಿಸಲು ಸಾಧ್ಯವಿರದ ಕೆಲವು ಮಹಿಳೆಯರು ಸರ್ಜರಿ ಮೂಲಕ ಕಿರಿದಾಗಿಸಿಕೊಳ್ಳುತ್ತಾರೆ. ಈ ರೀತಿಯ ಆಪರೇಶನ್‌ಗಳಿಗೆ ನಿಮ್ಮ ಸಮಯ ಮತ್ತು ನಿಮ್ಮ ಅಸ್ಥೆ ಮುಖ್ಯವಾಗಿರುತ್ತದೆ. ಇಂತಹ ನೈಸರ್ಗಿಕವಲ್ಲದ ವಿಧಾನಗಳನ್ನು ಅನುಸರಿಸುವುದು ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.

ನಿಮ್ಮ ಸ್ತನದ ಕೊಬ್ಬನ್ನು ಕರಗಿಸಲು ಹಲವಾರು ನೈಸರ್ಗಿಕ ವಿಧಾನಗಳಿವೆ. ಅವುಗಳು ಯಾವುವು ಎಂಬುದನ್ನು ಬೋಲ್ಡ್‌ಸ್ಕೈ ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅನಿಯಮಿತ ಮುಟ್ಟು: ನಿಮ್ಮ ದೇಹ ಏನನ್ನು ಹೇಳುತ್ತದೆ?

ನಿಮ್ಮ ತೂಕ ಕಳೆದಕೊಳ್ಳಿ:

ನಿಮ್ಮ ತೂಕ ಕಳೆದಕೊಳ್ಳಿ:

ನಿಮ್ಮ ಸ್ತನದ ಕೊಬ್ಬು ಕರಗಿಸಿ ಅದರ ಗಾತ್ರವನ್ನು ಕಿರಿದಾಗಿಸುವ ಬಯಕೆ ನಿಮ್ಮದಾಗಿದ್ದರೆ ನೀವು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು. ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಸಹಜವಾಗಿ ನಿಮ್ಮ ಸ್ತನದ ಗಾತ್ರವನ್ನು ಕಿರಿದಾಗಿಸುತ್ತದೆ.

ಪುಶ್ ಅಪ್‌ಗಳು:

ಪುಶ್ ಅಪ್‌ಗಳು:

ಸ್ತನ ಗಾತ್ರ ಕಿರಿದಾಗಿಸಲು ಪುಶ್ - ಅಪ್‌ಗಳು ಉತ್ತಮ ವಿಧಾನವಾಗಿದೆ. ನಿರ್ದಿಷ್ಟ ತೂಕ ಆಕಾರದ ಸ್ತನಗಳು ನಿಮ್ಮದಾಗಬೇಕಿದ್ದರೆ ನಿಯಮತವಾಗಿ ಪುಶ್ - ಅಪ್‌ಗಳನ್ನು ನೀವು ಮಾಡಬೇಕು. ಕನಿಷ್ಟ ಪಕ್ಷ 20 -25 ನಿಮಿಷ ಈ ವ್ಯಾಯಾಮ ಮಾಡಲು ನೀವು ವ್ಯಯ ಮಾಡಲೇಬೇಕು.

ಆಹಾರ ಪಥ್ಯ:

ಆಹಾರ ಪಥ್ಯ:

ಆರೋಗ್ಯಕರ ರೀತಿಯಲ್ಲಿ ಸ್ತನ ಗಾತ್ರವನ್ನು ಕಿರಿದಾಗಿಸಿಕೊಳ್ಳಬೇಕೆಂಬುದು ನಿಮ್ಮ ಬಯಕೆಯಾಗಿದ್ದರೆ ಸರಿಯಾದ ಆಹಾರ ಕ್ರಮವನ್ನು ನೀವು ರೂಢಿಸಿಕೊಳ್ಳಬೇಕು. ಸಾಕಷ್ಟು ತರಕಾರಿಗಳಿರುವ ಆಹಾರ ಕ್ರಮವನ್ನು ಅನುಸರಿಸಿ. ಕೊಬ್ಬಿರುವ ಮಾಂಸ ಮತ್ತು ಜಂಕ್ ಆಹಾರ ನಿಮ್ಮ ಹವ್ಯಾಸವಾಗಿದ್ದರೆ ಅದನ್ನು ಮೊದಲು ತ್ಯಜಿಸಿ. ಹಾಗೆಂದು 15 ದಿನದಲ್ಲಿ ಸಣ್ಣಗಾಗಬೇಕೆಂದು ಅತಿಯಾದ ಪಥ್ಯವನ್ನು ಮಾಡಬೇಡಿ. ಈ ರೀತಿ ಮಾಡುವುದರಿಂದ ನಿಮ್ಮ ಸ್ತನ ಆಕಾರ ಕಳೆದುಕೊಳ್ಳುತ್ತದೆ.

ಮಾತ್ರೆಗಳು:

ಮಾತ್ರೆಗಳು:

ಯಾವುದೇ ವಿಧಾನವನ್ನು ಅನುಸರಿಸದೇ ನಿಮ್ಮ ಸ್ತನ ಗಾತ್ರವನ್ನು ಕಿರಿದಾಗಿಸಬೇಕೆಂಬ ಬಯಕೆ ನಿಮ್ಮದಾಗಿದ್ದರೆ ಕೆಲವು ಮಾತ್ರೆಗಳು ನಿಮ್ಮ ನೆರವಿಗೆ ಬರಬಹುದು. ಯಾವುದೇ ಸಲಹೆಯಿಲ್ಲದೆ ಈ ಮಾತ್ರೆಯನ್ನು ತೆಗೆದುಕೊಳ್ಳಲು ಹೋಗದಿರಿ. ಅದನ್ನು ಕುರಿತು ನಿಮ್ಮ ವೈದ್ಯರ ಅಭಿಪ್ರಾಯವನ್ನು ತಿಳಿದುಕೊಳ್ಳಿ.

ಯೋಗ:

ಯೋಗ:

ನಿಮ್ಮ ದೇಹವನ್ನು ಆರೋಗ್ಯವನ್ನು ಕಾಪಾಡುವಲ್ಲಿ ಯೋಗವು ಮಹತ್ವದ ಪಾತ್ರ ವಹಿಸುತ್ತದೆ. ನಿಮ್ಮ ಸ್ತನ ಗಾತ್ರವನ್ನು ಕಿರಿದಾಗಿಸಿ ನಿಮ್ಮ ಸ್ತನವನ್ನು ಸುವ್ಯವಸ್ಥಿತಗೊಳಿಸುವ ಹಲವಾರು ಆಸನಗಳಿವೆ. ನಿಮ್ಮ ಮನಸ್ಸನ್ನು ಯೋಗ ವಿಶ್ರಮಗೊಳಿಸುತ್ತದೆ. ನೈಸರ್ಗಿಕವಾಗಿ ಸ್ತನ ಗಾತ್ರವನ್ನು ಕಾಯ್ದುಕೊಳ್ಳುವಲ್ಲಿ ಯೋಗ ಸಹಕಾರಿಯಾಗಿದೆ.

ನಿಮ್ಮ ಕ್ಯಾಲೋರಿಗಳನ್ನು ಎಣಿಸಿ:

ನಿಮ್ಮ ಕ್ಯಾಲೋರಿಗಳನ್ನು ಎಣಿಸಿ:

ನಿಮ್ಮ ಸ್ತನ ಗಾತ್ರವನ್ನು ಕಡಿಮೆ ಮಾಡಬೇಕೆಂಬ ದೃಢ ಸಂಕಲ್ಪ ನಿಮ್ಮದಾಗಿದ್ದರೆ ನಿಮ್ಮ ಕ್ಯಾಲೋರಿಗಳನ್ನು ಎಣಿಸುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ. ನೀವು ತೆಗೆದುಕೊಳ್ಳುತ್ತಿರುವ ಕ್ಯಾಲೋರಿ ಕಡೆ ಸ್ವಲ್ಪ ಗಮನ ಕೊಡಿ. ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲೋರಿಯನ್ನು ಸೇವಿಸಬೇಡಿ. ತೂಕ ಇಳಿಸುವಲ್ಲಿ ಸಹಕಾರಿಯಾಗಿರುವ ವಿಟಮಿನ್ ಬಿ ಅಂಶವುಳ್ಳ ಆಹಾರವನ್ನು ಹೆಚ್ಚು ತೆಗೆದುಕೊಳ್ಳಿ. ಬಾದಾಮಿಯನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ತೆಗೆದುಕೊಳ್ಳುವುದು ನಿಮ್ಮ ತ್ವಚೆಯನ್ನು ಉತ್ತಮಗೊಳಿಸುತ್ತದೆ.

Read more about: health, ಆರೋಗ್ಯ
English summary

Tips To Reduce Breast Fat

Breasts define the ultimate feminine beauty and needless to say, men go crazy about them! Bigger breasts may look good and attractive, but not really for women who carry it 24/7. Huge breasts not only attract attention, but also causes several effects on the body posture.
Subscribe Newsletter