For Quick Alerts
ALLOW NOTIFICATIONS  
For Daily Alerts

ಓಟ್ ಮೀಲ್ ನಿಜವಾಗಿಯೂ ತೂಕ ಇಳಿಸುತ್ತದೆಯಾ?

By Super
|

ಬಿಳಿ ತೋಕೆ ಗೋಧಿಯಿಂದ ಮಾಡುವಂತಹ ಓಟ್ ಮೀಲ್ ಇಡೀ ಧಾನ್ಯವಾಗಿದ್ದು, ಇದರಲ್ಲಿ ಹೊಟ್ಟು ಹಾಗೂ ಮೊಳಕೆಯನ್ನು ಹಾಗೆ ಉಳಿಸಿಕೊಳ್ಳಲಾಗುತ್ತದೆ. ಈ ಕಾರಣದಿಂದಾಗಿ ಓಟ್ ಮೀಲ್ ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದೆ. ಓಟ್ ಮೀಲ್ ನಲ್ಲಿ ಹಲವಾರು ಆರೋಗ್ಯಕರ ಅನುಕೂಲಗಳಿದ್ದು, ಇದು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ, ಹೃದಯದ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ದೇಹದ ಚಟುವಟಿಕೆ ಮತ್ತು ಚಯಾಪಚಯಾ ಕ್ರಿಯೆಯನ್ನು ಹೆಚ್ಚಿಸುತ್ತದೆ. ದೇಹವು ಅಧಿಕ ತೂಕ ಪಡೆಯದಂತೆ ತಡೆಯುವ ಕಾರಣದಿಂದಾಗಿ ಇದು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.

ಹೆಚ್ಚಿನ ಜನರು ಓಟ್ ಮೀಲ್ಸ್ ಸೇವನೆಯಿಂದ ತೂಕ ಇಳಿಸಿಕೊಳ್ಳಬಹುದೆಂದು ನಂಬಿದ್ದಾರೆ. ಮಾರುಕಟ್ಟೆಯಲ್ಲಿ ಓಟ್ ಮೀಲ್ ನ್ನು ಒಳಗೊಂಡ ಹಲವಾರು ಪ್ಯಾಕೇಜ್ಡ್, ಇನ್ ಸ್ಟೆಂಟ್ ಆಹಾರಗಳು ಲಭ್ಯವಿದೆ. ಓಟ್ ಮೀಲ್ ನ್ನು ತಮ್ಮ ಆಹಾರ ಕ್ರಮದಲ್ಲಿ ಬಳಸಿಕೊಂಡ ಜನರು ತಮ್ಮ ತೂಕ ಕಡಿಮೆಗೊಳಿಸಿದ ಹಲವಾರು ಉದಾರಣೆ ಮತ್ತು ವಿವರಣೆಗಳಿವೆ. ಆದರೆ ಕೇವಲ ಒಂದು ಆಹಾರದಿಂದ ಮಾತ್ರ ತೂಕವನ್ನು ಅಷ್ಟೊಂದು ಪ್ರಮಾಣದಲ್ಲಿ ಕಡಿಮೆ ಮಾಡಲು ಸಾಧ್ಯವಿಲ್ಲ. ತೂಕ ಕಡಿಮೆಗೊಳಿಸಲು ಹಲವಾರು ಆಹಾರ ಕ್ರಮದಲ್ಲಿ ಓಟ್ ಮೀಲ್ ನ್ನು ಪ್ರಮುಖ ಆಹಾರವಾಗಿ ಬಳಸಿಕೊಳ್ಳಲಾಗುತ್ತದೆ. ಓಟ್ ಮೀಲ್ ವಿಟಮಿನ್, ನಾರಿನಾಂಶ, ಖನಿಜಾಂಶ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ತೂಕ ಇಳಿಸಲು ನೆರವಾಗುವುದು ಮಾತ್ರವಲ್ಲದೆ ಇದು ಹೃದಯದ ಸಮಸ್ಯೆ ಮತ್ತು ರೋಗಗಳನ್ನು ತಡೆಯುತ್ತದೆ.

Does oatmeal really lead to weight loss?

ಓಟ್ ಮೀಲ್ ತೂಕ ಇಳಿಸಿಕೊಳ್ಳಲು ಯಾಕೆ ಒಳ್ಳೆಯ ಆಹಾರ ಎನ್ನುವ ಬಗ್ಗೆ ಕೆಲವೊಂದು ಕಾರಣಗಳು ಮತ್ತು ವಾಸ್ತವಾಂಶಗಳನ್ನು ಇಲ್ಲಿ ಚರ್ಚಿಸಲಾಗಿದೆ.

1. ಅಧಿಕ ನಾರಿನಾಂಶವಿರುವ ಧಾನ್ಯ

ಓಟ್ಸ್ ನಲ್ಲಿ ಕರಗುವ ಮತ್ತು ಕರಗದ ನಾರಿನಾಂಶಗಳು ಸಮೃದ್ಧವಾಗಿದೆ. ಇದರಲ್ಲಿರುವ ನಾರಿನಾಂಶದಿಂದ ಕೊಲೆಸ್ಟ್ರಾಲ್ ಮತ್ತು ರಕ್ತದ ಸಕ್ಕರೆಯನ್ನು ಕಡಿಮೆ ಮಾಡಬಹುದು. ಓಟ್ಸ್ ತಿಂದರೆ ಹೊಟ್ಟೆ ತುಂಬಿದಂತಾಗಿ ಹಸಿವಿನ ಭಾವನೆಯಾಗುವುದಿಲ್ಲ. ತೂಕ ಇಳಿಸಿಕೊಳ್ಳಲು ಹಸಿವಿನ ಮೇಲೆ ನಿಯಂತ್ರಣ ಹೇರಬೇಕು ಮತ್ತು ಆರೋಗ್ಯಕರವಾಗಿರುವುದನ್ನು ತಿನ್ನಬೇಕು. ನಾರಿನಾಂಶ ಹೆಚ್ಚಾಗಿರುವ ಆಹಾರವು ನಿಮ್ಮ ಹೃದಯಕ್ಕೆ ತುಂಬಾ ಒಳ್ಳೆಯದು.

2. ಶಕ್ತಿಯ ಖಜಾನೆ

ಓಟ್ಸ್ ದೇಹಕ್ಕೆ ಅಧಿಕ ಶಕ್ತಿ ನೀಡಿ ದೇಹದ ಚಟುವಟಿಕೆಗೆ ಬಲ ನೀಡುತ್ತದೆ. ಇದರಿಂದಾಗಿ ಹೆಚ್ಚಿನವರು ಉಪಹಾರಕ್ಕೆ ಓಟ್ಸ್ ಸೇವಿಸುತ್ತಾರೆ. ಒಂದು ಪಿಂಗಾಣಿ ಓಟ್ಸ್ ನಿಮಗೆ ದಿನಪೂರ್ತಿ ಕೆಲಸ ಮಾಡಲು ಶಕ್ತಿ ನೀಡಲಿದೆ. ಅಧಿಕ ಶಕ್ತಿಯು ದೇಹದ ಚಯಾಪಚಯಾ ಕ್ರಿಯೆ ಹೆಚ್ಚಿಸಿ ದೇಹದಲ್ಲಿರುವ ಕೊಬ್ಬನ್ನು ದಹಿಸುತ್ತದೆ. ಓಟ್ಸ್ ತೂಕ ಇಳಿಸಿಕೊಳ್ಳಲು ಮಾತ್ರವಲ್ಲದೆ ದೇಹಕ್ಕೆ ಸೂಕ್ತ ಶಕ್ತಿ ನೀಡಲು ಅತೀ ಮುಖ್ಯ. ಇದೇ ಕಾರಣದಿಂದ ಓಟ್ಸ್ ನಿಂದ ಮಾಡಿದಂತಹ ಉಪಹಾರದ ಆಹಾರಗಳು ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ.

3. ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕ

ಓಟ್ಸ್ ನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಅಂಶವು ದೇಹದಲ್ಲಿನ ವಿಷಕಾರಕಗಳನ್ನು ತೆಗೆದು ಪುನರ್ಚೇತನಗೊಳಿಸುತ್ತದೆ. ಅಧಿಕ ಆ್ಯಂಟಿಆಕ್ಸಿಡೆಂಟ್ ಗಳು ದೇಹದಲ್ಲಿ ಬೇಡದ ಅಂಶಗಳನ್ನು ತೆಗೆಯುತ್ತದೆ. ಆ್ಯಂಟಿಆಕ್ಸಿಡೆಂಟ್ ಗಳು ವಿಷಕಾರಗಳನ್ನು ಹೊರಹಾಕುತ್ತದೆ. ಇದರಿಂದ ತೂಕ ಕಡಿಮೆಯಾಗಿ ದೇಹದ ವ್ಯವಸ್ಥೆಯು ಶುಚಿಯಾಗುತ್ತದೆ. ಆ್ಯಂಟಿಆಕ್ಸಿಡೆಂಟ್ ಗಳು ದೇಹದ ಕಾರ್ಯಚಟುವಟಿಕೆಯನ್ನು ಉತ್ತಮ ರೀತಿಯಲ್ಲಿಟ್ಟು ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತದೆ.

4. ಕಡಿಮೆ ಕ್ಯಾಲರಿ

ಇತರ ಆಹಾರಗಳಿಗೆ ಹೋಲಿಸಿದರೆ ಓಟ್ಸ್ ನಲ್ಲಿ ಕ್ಯಾಲರಿ ಕಡಿಮೆಯಿದೆ. ಇದರಿಂದಾಗಿ ಓಟ್ಸ್ ನ್ನು ತೂಕ ಇಳಿಸುವ ಆಹಾರ ಕ್ರಮದಲ್ಲಿ ಸೇರಿಸಲಾಗುತ್ತದೆ. ಕಡಿಮೆ ಕ್ಯಾಲರಿ ಇರುವ ಆಹಾರವು ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ತೆಗೆಯುತ್ತದೆ. ಓಟ್ಸ್ ಕಡಿಮೆ ಕ್ಯಾಲರಿ ಇರುವ ಆಹಾರ ಮತ್ತು ಇದು ತೂಕ ಕಡಿಮೆಗೊಳಿಸುವ ಆಹಾರಕ್ರಮಕ್ಕೆ ತುಂಬಾ ಒಳ್ಳೆಯದು. ಕೇವಲ ಓಟ್ಸ್ ಮಾತ್ರ ತೂಕ ಇಳಿಸುವುದಿಲ್ಲ. ಇದಕ್ಕಾಗಿ ಇತರ ಕೆಲವೊಂದು ಆಹಾರ ಕ್ರಮವನ್ನು ಪಾಲಿಸಬೇಕಾಗುತ್ತದೆ.

5. ತಯಾರಿಸಲು ಸುಲಭ

ಓಟ್ಸ್ ಇಡೀ ಧಾನ್ಯವು ತುಂಬಾ ಆರೋಗ್ಯಕಾರಿ. ಇತರ ಇಡೀ ಧಾನ್ಯಗಳಿಗೆ ಹೋಲಿಸಿದರೆ ಓಟ್ಸ್ ನ್ನು ಬೇಯಿಸಲು ಮತ್ತು ತಿನ್ನಲು ತುಂಬಾ ಸುಲಭ. ಓಟ್ಸ್ ನ್ನು ಗಂಜಿ ಮಾಡಿ ತಿನ್ನಬಹುದು. ಹಣ್ಣು ಮತ್ತು ಹಾಲಿನೊಂದಿಗೆ ಸೇರಿಸಿ ಓಟ್ಸ್ ತಿನ್ನಬಹುದು. ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಓಟ್ಸ್ ನಿಂದ ಮಾಡಿರುವಂತಹ ಕೆಲವೊಂದು ಆಹಾರಗಳನ್ನು ಉಪಹಾರಕ್ಕೆ ಬಳಸಬಹುದು. ಪ್ಯಾಕ್ ಮಾಡಿದ ಅಥವಾ ಇನ್ ಸ್ಟೆಂಟ್ ಆಹಾರದಲ್ಲಿ ಓಟ್ಸ್ ತನ್ನ ಪೌಷ್ಠಿಕಾಂಶವನ್ನು ಕಳಕೊಳ್ಳುವುದಿಲ್ಲ. ಎಲ್ಲವನ್ನು ಪರಿಗಣಿಸಿದಾಗ ತೂಕ ಇಳಿಸಿಕೊಳ್ಳಲು ಓಟ್ಸ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ಸಾಬೀತಾಗಿದೆ.

English summary

Does oatmeal really lead to weight loss?

Oatmeal are general foods made from white oats. Oats are whole grains that have their bran and germ retained. Because of this reason, oats are rich in nutrition. Oats have many health benefits like they reduce cholesterol level,
Story first published: Saturday, December 21, 2013, 22:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more