For Quick Alerts
ALLOW NOTIFICATIONS  
For Daily Alerts

ಗಡ್ಡೆಕೋಸಿನ ಅದ್ಭುತ ಆರೋಗ್ಯಕರ ಪ್ರಯೋಜನಗಳು

By Poornima Hegde
|

ಹಸಿರು ತರಕಾರಿಗಳು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಒಂದೆಂದು ಗಡ್ಡೆ ಗೆಣಸುಗಳು, ಹಸಿರುತರಕಾರಿಗಳು ಬಾಯಿಗೆ ರುಚಿಯನ್ನು ನೀಡುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಉತ್ತಮವಾದುದು.

ಟರ್ನಿಪ್, ಒಂದು ಬಗೆಯ ತರಕಾರಿಯಾಗಿದ್ದು, ಅನೇಕ ಅದ್ಭುತ ಗುಣಗಳನ್ನು ಹೊಂದಿದೆ. ಇದು ಹಲವಾರು ವಿಧಗಳಲ್ಲಿ ಆರೋಗ್ಯಕ್ಕೆ ಲಾಭದಾಯಕವಾಗಿದೆ. ಇದರ ಅದ್ಭುತ ಆರೋಗ್ಯ ಪ್ರಯೋಜನಗಳೆಂದರೆ ಹೃದಯಾಘಾತ ಮತ್ತು ಇತರ ಹೃದಯ ರೋಗಗಳು ಮತ್ತು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿರುವುದು. ಇದು ನಿಮ್ಮ ರೋಗನಿರೋಧಕ ವ್ಯವಸ್ಥೆಗೆ ಹಾಗೂ ಕಣ್ಣಿನ ದೃಷ್ಟಿ , ಮೂಳೆ ಆರೋಗ್ಯ ಮತ್ತು ಚರ್ಮದ ಆರೋಗ್ಯಕ್ಕೂ ತುಂಬಾ ಒಳ್ಳೆಯದು .

ಇದು, ನಿಮ್ಮ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಆಸ್ಟಿಯೊಪೊರೋಸಿಸ್, ಸಂಧಿವಾತ, ಕಣ್ಣಿನ ಸಮಸ್ಯೆಯಿಂದ ನಿಮ್ಮನ್ನು ದೂರವಿರಿಸಿ ಸದಾ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ನೀವು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ನಿಮ್ಮ ದಿನನಿತ್ಯದ ಆಹಾರದಲ್ಲಿ ಈ ತರಕಾರಿಯನ್ನು ಉಪಯೋಗಿಸಿ. ಇದನ್ನು ಸೂಪ್ ಮತ್ತು ಸಲಾಡ್ ಮೊದಲಾದ ರೂಪದಲ್ಲಿ ಬಳಸಬಹುದು. ಅಥವಾ ಇದರ ರುಚಿ ಸ್ವಲ್ಪ ಕಹಿ ಆಗಿರುವುದರಿಂದ ರಾಯತ ತಯಾರಿಸಿ ಸೇವಿಸುವುದು ಒಂದು ಉತ್ತಮ ಆಯ್ಕೆಯಾಗಿದೆ.

ನೀವು ಫಿಟ್ನೆಸ್ ಕಾಯ್ದುಕೊಳ್ಳಲು ಅಥವಾ ವೇಗವಾಗಿ ತೂಕವನ್ನು ಕಡಿಮೆಗೊಳಿಸಲು ಇಚ್ಛಿಸಿದರೆ ದಿನವೂ ಟರ್ನಿಪ್ ಬಳಸುವುದು ಒಳ್ಳೆಯದು. ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ಈ ತರಕಾರಿ ನಿಮ್ಮ ಸಂಪೂರ್ಣ ಚಯಾಪಚಯ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಟರ್ನಿಪ್ ನಿಯಮಿತ ಸೇವನೆ ನಿಮ್ಮ ಕಣ್ಣಿನ ದೃಷ್ಟಿಗೂ ಒಳ್ಳೆಯದು ಮತ್ತು ನಿಮ್ಮ ದೇಹಕ್ಕೆ ಅನೇಕ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳ ಒದಗಿಸುತ್ತದೆ.

ಈ ಅದ್ಭುತ ತರಕಾರಿಯ ಆರೋಗ್ಯ ಉಪಯೋಗಗಳ ಬಗ್ಗೆ ತಿಳಿಯೋಣ:

1 - ಹೃದಯಕ್ಕೆ ಉತ್ತಮ

1 - ಹೃದಯಕ್ಕೆ ಉತ್ತಮ

ಟರ್ನಿಪ್, ನಿಮ್ಮ ಹೃದಯ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಉರಿಯೂತ ತಡೆಯುವ ಗುಣವನ್ನು ಹೊಂದಿರುವುದರಿಂದ ಹೃದಯ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಿಮ್ಮ ಹೃದಯನಾಳದ ವ್ಯವಸ್ಥೆಯನ್ನು ವರ್ಧಿಸಲು ಸಹಾಯಕವಾದ ಫೋಲೇಟ್ ಮತ್ತು ವಿಟಮಿನ್ ಬಿಯ ಉತ್ತಮ ಮೂಲವಾಗಿದೆ.

2 – ಕ್ಯಾನ್ಸರ್ ತಡೆಯುತ್ತದೆ

2 – ಕ್ಯಾನ್ಸರ್ ತಡೆಯುತ್ತದೆ

ಟರ್ನಿಪ್, ಆಂಟಿಆಕ್ಸಿಡೆಂಟ್ ಮತ್ತು ಫೈಟೋನ್ಯೂಟ್ರಿಯೆಂಟ್ಸ್ ಅಂಶಗಳನ್ನು ಬಹಳ ಹೇರಳವಾಗಿ ಹೊಂದಿದ್ದು, ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಲು ಸಹಾಯಕವಾಗಿದೆ. ಇದರಲ್ಲಿರುವ ಪ್ಲಾಂಟ್ ಸಂಯುಕ್ತ, ಟ್ಯೂಮರ್ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ. ಇದರ ಜೊತೆಗೆ ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಮತ್ತು ಗುದನಾಳದ ಗೆಡ್ಡೆಗಳ ಕ್ಯಾನ್ಸರ್ ಗಳನ್ನು ತಡೆಗಟ್ಟಲು ಟರ್ನಿಪ್ ನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದು.

3 ಮೂಳೆಗಳಿಗೆ ಶಕ್ತಿ ನೀಡುತ್ತದೆ

3 ಮೂಳೆಗಳಿಗೆ ಶಕ್ತಿ ನೀಡುತ್ತದೆ

ನೀವು, ಆಸ್ಟಿಯೊಪೊರೋಸಿಸ್ ಮತ್ತು ಸಂಧಿವಾತದಂತಹ ರೋಗಗಳಿಂದ ದೂರ ಉಳಿಯಲು ಬಯಸುವಿರಾದರೆ ನಿಮ್ಮ ಆಹಾರದಲ್ಲಿ ಟರ್ನಿಪ್ ನ್ನು ಉತ್ತಮ ಪ್ರಮಾಣದಲ್ಲಿ ಸೇರಿಸಿ. ಈ ತರಕಾರಿ ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಮೂಳೆಗಳು ಬೆಳವಣಿಗೆಗೆ ಬಹಳ ಅವಶ್ಯಕವಾದ ಅಗತ್ಯ ಖನಿಜಗಳನ್ನು ಅತ್ಯಂತ ಸಮೃದ್ಧವಾಗಿ ಹೊಂದಿದೆ.

4 ಕಣ್ಣಿನ ದೃಷ್ಟಿಗೆ ಉತ್ತಮ

4 ಕಣ್ಣಿನ ದೃಷ್ಟಿಗೆ ಉತ್ತಮ

ನೀವು ಹಲವಾರು ವಿಧಗಳಲ್ಲಿ ದೈನಂದಿನ ಆಹಾರದಲ್ಲಿ ಟರ್ನಿಪ್ ನ್ನು ಬಳಸಿಕೊಳ್ಳಬಹುದು. ನೀವು ಅದರ ಪ್ರಯೋಜನಗಳನ್ನು ಪಡೆಯಲು ಸೂಪ್ ಅಥವಾ ಸಲಾಡ್ ರೂಪದಲ್ಲಿ ಬಳಸಬಹುದು. ಇದರಲ್ಲಿ ಲ್ಯೂಟೀನ್ ಅಂಶ ಸಮೃದ್ಧವಾಗಿದ್ದು ಕಣ್ಣುಗಳಿಗೂ ಸಹ ತುಂಬಾ ಒಳ್ಳೆಯದು. ಇದು ಕಣ್ಣಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಕಣ್ಣಿನ ಮತ್ತು ಅಕ್ಷಿಪಟಲದ ತೊಂದರೆಯನ್ನು ತಡೆಯುವ ಕ್ಯಾರಾಟೇನ್ ಆಗಿದೆ.

5 - ತೂಕ ಕಡಿಮೆ ಸಹಾಯ

5 - ತೂಕ ಕಡಿಮೆ ಸಹಾಯ

ನೀವು ತೂಕವನ್ನು ಕಡಿಮೆಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಟರ್ನಿಪ್ ಇದಕ್ಕೆ ಉತ್ತಮ ಪರಿಹಾರ. ಇದು ತೂಕವನ್ನು ಕಡಿಮೆ ಮಾಡಲು ಅಗತ್ಯವಾದ ಕಡಿಮೆ ಕ್ಯಾಲೊರಿಯನ್ನು ಹೊಂದಿದೆ. ಜೊತೆಗೆ ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶದಿಂದಾಗಿ ನಿಮ್ಮ ಚಯಾಪಚಯ ವ್ಯವಸ್ಥೆಯನ್ನೂ ನಿಯಂತ್ರಿಸುತ್ತದೆ. ಆದ್ದರಿಂದ, ಯಾವುದೇ ಚಿಂತೆಯಿಲ್ಲದೆ ಟರ್ನಿಪ್ ಗೆಡ್ಡೆಗಳನ್ನು ತಿಂದು ಫಿಟ್ನೆಸ್ ನ್ನು ಬೆಳೆಸಿಕೊಳ್ಳಿ.

6 - ಆಸ್ತಮಾಕ್ಕೆ ಅತ್ಯುತ್ತಮ ಚಿಕಿತ್ಸೆ

6 - ಆಸ್ತಮಾಕ್ಕೆ ಅತ್ಯುತ್ತಮ ಚಿಕಿತ್ಸೆ

ನೀವು ಆಸ್ತಮಾ ರೋಗಿಯಾಗಿದ್ದರೆ, ಟರ್ನಿಪ್ ಗೆಡ್ಡೆಗಳು ನಿಮ್ಮ ದೈನಂದಿನ ಆಹಾರದ ಭಾಗವಾಗಿ ಬಳಸಲೇಬೇಕು ಈ ತರಕಾರಿಯು ಉತ್ಕರ್ಷಣ ನಿರೋಧಕದ (ಆಂಟಿ ಆಕ್ಸಿಡೆಂಟ್) ಲಕ್ಷಣಗಳನ್ನು ಹೊಂದಿದ್ದು ಆಸ್ತಮಾವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ಟರ್ನಿಪ್ ನ್ನು ನಿಯಮಿತವಾಗಿ ತೆಗೆದುಕೊಂಡರೆ ಆಸ್ತಮಾ ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿಯಾಗಿದೆ.

7 – ಜೀರ್ಣಕ್ರಿಯೆಯಲ್ಲಿ ಸಹಾಯ

7 – ಜೀರ್ಣಕ್ರಿಯೆಯಲ್ಲಿ ಸಹಾಯ

ನಾರಿನ ಅಂಶ ಅತ್ಯಂತ ಸಮೃದ್ಧವಾಗಿರುವ ಸಸ್ಯ ಕರುಳಿನ ಮತ್ತು ಗುದನಾಳವನ್ನು ಸಂರಕ್ಷಿಸಿಕೊಂಡು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಉತ್ತಮವಾಗಿಲ್ಲದಿದ್ದರೆ ಈ ತರಕಾರಿಯನ್ನು ಸೇವಿಸಿ ಪರಿಣಾಮವನ್ನು ಕಂಡುಕೊಳ್ಳಬಹುದು.

8 - ರೋಗನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ

8 - ರೋಗನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ

ಟರ್ನಿಪ್ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಿ, ಅದು ಸರಿಯಾದ ಕೆಲಸ ಮಾಡುವಂತೆ ಮಾಡುತ್ತದೆ. ಟರ್ನಿಪ್ ನಲ್ಲಿರುವ ಬೀಟಾ ಕ್ಯಾರೋಟಿನ್ ಆರೋಗ್ಯಕರ ಒಳಚರ್ಮವನ್ನು ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಇದಲ್ಲಿರುವ ಪೊಟ್ಯಾಶಿಯಂ ಸ್ನಾಯು ಮತ್ತು ನರಗಳು ಸರಿಯಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ.

9 - ಚರ್ಮಕ್ಕೆ ಒಳ್ಳೆಯದು

9 - ಚರ್ಮಕ್ಕೆ ಒಳ್ಳೆಯದು

ಇದು ಕೇವಲ ಇತರ ವ್ಯಾಧಿಗಳಿಗೆ ಮಾತ್ರವಲ್ಲದೆ ಅನೇಕ ಚರ್ಮದ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಧಿವ್ಯೌಷಧ. ನೀವು ಪ್ರತಿ ದಿನ ಅದರ ರಸ ಕುಡಿದರೆ ಒಣ ಚರ್ಮದ ಅನೇಕ ಸಮಸ್ಯೆಗಳನ್ನು ತೊಡೆದುಹಾಕಬಹುದು. ನೀವು ಇದರ ರುಚಿಯನ್ನು ಹೆಚ್ಚಿಸಲು ಕ್ಯಾರೆಟ್ ಜೊತೆಗೆ ಮಿಶ್ರಣ ಮಾಡಿ ಸೇವಿಸಬಹುದು.

10 - ಬಿಪಿ ರೋಗಿಗಳಿಗೆ ರಾಮಬಾಣ

10 - ಬಿಪಿ ರೋಗಿಗಳಿಗೆ ರಾಮಬಾಣ

ರಕ್ತದ ಒತ್ತಡವನ್ನು ಸ್ಥಿರಗೊಳಿಸಲು ಟರ್ನಿಪ್ ಒಂದು ಉತ್ತಮ ತರಕಾರಿ. ಇದು ರಕ್ತದೊತ್ತಡ ಸ್ಥಿರಗೊಳಿಸಲು ಸಹಾಯಕವಾದ ಮೆಗ್ನೀಶಿಯಂ ಹಾಗೂ ವಿಟಮಿನ್ ಬಿ ಅಂಶವನ್ನು ಹೊಂದಿದೆ. ಅಲ್ಲದೆ, ಈ ಮೆಗ್ನೀಶಿಯಂ ಮೂಳೆಗಳು ಮತ್ತು ಹೃದಯದ ಆರೋಗ್ಯಕ್ಕೂ ಒಳ್ಳೆಯದು.

ಸುಲಭವಾಗಿ ಮಾರುಕಟ್ಟೆಗಳಲ್ಲಿ ದೊರೆಯುವ ಟರ್ನಿಪ್ ತರಕಾರಿ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಉತ್ತಮವಾದುದು. ಈ ತರಕಾರಿಯನ್ನು ನಿರಂತರವಾಗಿ ಸೇವಿಸಿ ಬದಲಾವಣೆಗಳನ್ನು ನೀವೇ ಕಂಡುಕೊಳ್ಳಿ.

English summary

Amazing health benefits of turnips

Turnip, a cruciferous vegetable, has many amazing qualities. It is known to benefit your health in several ways. Its amazing health benefits include prevention of heart attack and other heart diseases and anti -cancer properties among many others.
Story first published: Saturday, December 14, 2013, 10:29 [IST]
X
Desktop Bottom Promotion