For Quick Alerts
ALLOW NOTIFICATIONS  
For Daily Alerts

ಬಾಡಿ ಬಿಲ್ಡ್ ಮಾಡುತ್ತಿರುವವರಿಗಾಗಿ ಈ ಟಿಪ್ಸ್

By Super
|

ಅಂದವಾದ ಮೈಕಟ್ಟು ಯಾರಿಗೆ ಬೇಕಾಗಿಲ್ಲ ಹೇಳಿ? ಹುಡುಗಿಯರು ಮುಖ ಸೌಂದರ್ಯದ ಬಗ್ಗೆ ಯೋಚಿಸಿದಂತೆ ಹುಡುಗರು ತಮ್ಮ ದೇಹ ಸೌಂದರ್ಯದ ಬಗ್ಗೆ ಯೋಚಿಸುವುದು ಸುಳ್ಳಲ್ಲ. ಎಲ್ಲರಿಗೂ ಇಂತಹ ಆಸೆ ಇದ್ದೇ ಇರುತ್ತದೆ ಆದರೆ ಇದಕ್ಕೆ ಬೇಕಾದ ವ್ಯಾಯಾಮ ಮಾಡಲು ಮತ್ತು ಜಿಮ್ ಗೆ ಹೋಗಲು ತಯಾರಾಗುವ ಮಂದಿ ಬಹಳ ಕಡಿಮೆ. ಹಾಗೆಯೇ ಇದಕ್ಕೆಲ್ಲ ಬಹಳ ಕಷ್ಟಪಡಬೇಕಾಗುತ್ತದೆ ಹಾಗೂ ಇದು ನಮಗೆ ಸಾಧ್ಯವಿಲ್ಲ ಎನ್ನುವವರೇ ಹೆಚ್ಚು. ಆದರೆ ಇದಕ್ಕೆ ಹೆಚ್ಚಿನ ಕಷ್ಟ ಪಡಬೇಕಾಗಿಲ್ಲ, ಬದಲಾಗಿ ಮಾಡುವ ಕೆಲಸವನ್ನು ಸರಿಯಾಗಿ ಮಾಡಿದರೆ ಸಾಕು ಹಾಗೂ ಇದಕ್ಕೆ ಸ್ಟಿರಾಯ್ಡ್ಸ್ ಸೇವನೆ ಮಾಡಬೇಕಾಗಿಲ್ಲ. ಬದಲಾಗಿ ನಿಯಮಿತವಾದ ಆಹಾರ ಕ್ರಮ ಇದ್ದರೆ ಸಾಕು.

ಹಾಗಂತ ಎರಡೇ ದಿನಕ್ಕೆ ಆಕರ್ಷಕ ಮೈಕಟ್ಟು ಬೇಕು ಎಂದು ಆಸೆ ಪಡಬೇಡಿ. ಇದು ಸಾಧ್ಯವಿಲ್ಲ. ನಿರಂತರ ಪ್ರಯತ್ನ ಅಗತ್ಯ. ಮತ್ತೊಂದು ವಿಷಯ ನಿಮ್ಮ ಈ ಪ್ರಯತ್ನದ ಮೊದಲ 6 ರಿಂದ 12 ತಿಂಗಳುಗಳು ನಿಮ್ಮಲ್ಲಿ ಶೀಘ್ರವಾದ ಮತ್ತು ವೇಗವಾದ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ.

ವ್ಯಾಯಾಮಗಳಲ್ಲಿ ಮತ್ತು ಜಿಮ್, ವರ್ಕ್ ಔಟ್ ಗಳಲ್ಲಿ ಸರಿಯಾದ ವಿಧಾನವನ್ನು ಕಲಿಯಬೇಕಾದ್ದು ಮುಖ್ಯ ಅಂಶವಾಗಿದೆ. ನಿಮ್ಮ ಸುರಕ್ಷತೆಗೆ ಹೆಚ್ಚಿನ ಮಹತ್ವ ಕೊಡಬೇಕು. ಒಂದು ಬಾರಿ ನಿಮಗೆ ಅಭ್ಯಾಸ ಆಗುವ ತನಕ ಯಾವುದೇ ರೀತಿಯ ಗಾಯಗಳನ್ನು ಮಾಡಿಕೊಳ್ಳದಂತೆ ಎಚ್ಚರ ವಹಿಸಿ. ಹಂತ ಹಂತವಾಗಿ ಮಾಡಲು ಮುಂದಾಗಿ ಎಲ್ಲವನ್ನೂ ಒಂದೇ ದಿನದಲ್ಲಿ ಮಾಡಿ ಕಲಿಯುತ್ತೇನೆ ಎಂದರೆ ಆಗದ ಮಾತು.

1. ವೈದ್ಯರ ಸಲಹೆ ಪಡೆಯಿರಿ

1. ವೈದ್ಯರ ಸಲಹೆ ಪಡೆಯಿರಿ

ನೀವು ವ್ಯಾಯಾಮಗಳನ್ನು ಆರಂಭಿಸುವ ಮುನ್ನ ಅಥವಾ ಜಿಮ್ ಗೆ ತೆರಳುವ ಮುನ್ನ ನಿಮ್ಮ ವೈದ್ಯರಲ್ಲಿ ಹೋಗಿ ಸಲಹೆ ಪಡೆಯಿರಿ ನಿಮ್ಮ ದೇಹಕ್ಕೆ ಮತ್ತು ದೇಹ ಪ್ರಕೃತಿಗೆ ಸರಿಹೊಂದುವ ವ್ಯಾಯಾಮಗಳ ಆಯ್ಕೆಗೆ ಈ ಭೇಟಿ ಸಹಾಯ ಮಾಡುತ್ತದೆ. ನಿಮಗೆ ಸರಿಹೊಂದದ ಯಾವುದೇ ವ್ಯಾಯಾಮ ಅಥವಾ ಭಂಗಿಗಳಿದ್ದರೆ ನಿಮ್ಮ ವೈದ್ಯರು ನಿಮಗೆ ಮೊದಲೇ ತಿಳಿಸುತ್ತಾರೆ ಹಾಗೂ ಇದರಿಂದ ಮುಂದಾಗುವ ಅನಾಹುತವನ್ನು ತಪ್ಪಿಸಬಹುದಾಗಿದೆ.

2. ಸರಿಯಾದ ಸವಲತ್ತುಗಳನ್ನು ಹೊಂದಿರುವ ಜಿಮ್ ಅನ್ನೇ ಆರಿಸಿಕೊಳ್ಳಿ

2. ಸರಿಯಾದ ಸವಲತ್ತುಗಳನ್ನು ಹೊಂದಿರುವ ಜಿಮ್ ಅನ್ನೇ ಆರಿಸಿಕೊಳ್ಳಿ

ಸರಿಯಾದ ಜಿಮ್ ನ ಆಯ್ಕೆ ಕೂಡ ಮಹತ್ವದ ಅಂಶ. ಅಲ್ಲಿನ ಉಪಕರಣಗಳು, ಪರಿಸರ, ನಿಮಗೆ ತರಬೇತಿ ನೀಡುವ ತರಬೇತುದಾರರು ಇವೆಲ್ಲದರ ಬಗ್ಗೆ ನಿಗಾ ಇರಬೇಕು. ಅಸಮರ್ಪಕ ವರ್ಕ್ ಔಟ್ ಗಳು ಸಹಾಯಕ್ಕಿಂದ ಸಮಸ್ಯೆಗಳನ್ನೇ ಹೆಚ್ಚು ತರುವುದರಲ್ಲಿ ಅನುಮಾನವೇ ಇಲ್ಲ.

3. ಬಾಡಿ ಬಿಲ್ಡಿಂಗ್ ಮಾದರಿಯನ್ನು ಇಟ್ಟುಕೊಳ್ಳಿ

3. ಬಾಡಿ ಬಿಲ್ಡಿಂಗ್ ಮಾದರಿಯನ್ನು ಇಟ್ಟುಕೊಳ್ಳಿ

ನೀವು ನಿಮ್ಮ ವ್ಯಾಯಾಮಗಳನ್ನು ಆರಂಭಿಸುವ ಮುನ್ನ ಯಾರಂತೆ ಆಗಬೇಕು ಎನ್ನುವ ಬಗ್ಗೆ ಆಲೋಚನೆ ಇದ್ದರೆ ಒಳಿತು ಅದು ಯಾರೇ ಆಗಿರಲಿ ನಿಮ್ಮ ತರಬೇತುದಾರರು, ನಿಮ್ಮ ಗೆಳೆಯರು, ಕ್ರೀಡಾಪಟು, ಅಥವಾ ನಿಮ್ಮ ಮೇಲೆ ಪ್ರಭಾವ ಬೀರಿದ ಯಾವುದೇ ವ್ಯಕ್ತಿಯಾದರೂ ಸರಿಯೇ. ಮಾದರಿ ಇದ್ದರೆ ಅವರಂತಾಗುವ ಛಲ ಇರುತ್ತದೆ.

4. ನಿಮ್ಮ ಸ್ನಾಯುಗಳನ್ನು ಬಲಪಡಿಸಿಕೊಳ್ಳಿ

4. ನಿಮ್ಮ ಸ್ನಾಯುಗಳನ್ನು ಬಲಪಡಿಸಿಕೊಳ್ಳಿ

ಭಾರ ಎತ್ತಲು ಆರಂಭಿಸುವ ಮೊದಲು ನಿಮ್ಮ ಸ್ನಾಯುಗಳನ್ನು ಬಲಪಡಿಸಿಕೊಳ್ಳಲು ಮರೆಯದಿರಿ. ಹೀಗೆ ಮಾಡದ ಪಕ್ಷದಲ್ಲಿ ಸ್ನಾಯುಗಳ ಮೇಲೆ ವ್ಯತಿರಿಕ್ತ ಪ್ರಭಾವ ಬೀರುವ ಎಲ್ಲಾ ಸಾಧ್ಯತೆಗಳಿವೆ. ನೀವು ನಿಮ್ಮ ವ್ಯಾಯಾಮಗಳನ್ನು ಆರಂಭಿಸುವಾಗಲೇ ಮೂಳೆಗಳ ಬಲವರ್ಧನೆಯನ್ನೂ ಆರಂಭಿಸಿದರೆ ಸೂಕ್ತ.

5. ತರಬೇತಿ ಜೊತೆಗಾರರಿದ್ದರೆ ಬೇಗನೇ ಪ್ರಭಾವ ಬೀರುತ್ತದೆ

5. ತರಬೇತಿ ಜೊತೆಗಾರರಿದ್ದರೆ ಬೇಗನೇ ಪ್ರಭಾವ ಬೀರುತ್ತದೆ

ಗೆಳೆಯರು ನಿಮ್ಮ ಜೊತೆಗೆ ಜಿಮ್ ಗೆ ಬರಲು ಆರಂಭಿಸಿದರೆ ನೀವು ಮಾಡುವ ವರ್ಕ್ ಔಟ್ ಗಳನ್ನು ಮತ್ತಷ್ಟು ಆಸಕ್ತಿಯಿಂದ ಮಾಡುತ್ತೀರಿ. ಅವನ ಜೊತೆಗೆ ಒಂದು ಸ್ಪರ್ಧೆ ಏರ್ಪಟ್ಟರೆ ಮತ್ತೂ ಒಳ್ಳೆಯದು.

6. ದೇಹದ ಕ್ಷಮತೆಯ ಪ್ರಕಾರ ಸಾಗಿ

6. ದೇಹದ ಕ್ಷಮತೆಯ ಪ್ರಕಾರ ಸಾಗಿ

ಮೊದಲ ದಿನದಿಂದಲೇ ಎಲ್ಲವನ್ನೂ ಮಾಡಲು ಹೋಗಬೇಡಿ. ನಿಧಾನವಾಗಿ ಹಂತ ಹಂತವಾಗಿ ನಿಮ್ಮ ದೇಹದ ಸಾಮರ್ಥ್ಯದ ಪ್ರಕಾರ ಸಾಗಿ. ಹೀಗೆ ಮೊದಲ ಕೆಲವು ದಿನಗಳನ್ನು ನೀವು ಮಾನಸಿಕವಾಗಿ ಗಟ್ಟಿಯಾಗಲು ಮತ್ತು ದೇಹವನ್ನು ಬಲಪಡಿಸಲು ಮೀಸಲಿಡಿ. ಇಂತಿಷ್ಟು ದಿನಗಳಿಗೆ ಇಂತಿಷ್ಟು ಎಂದು ಗುರಿಗಳನ್ನು ನಿಗದಿ ಪಡಿಸಿಕೊಳ್ಳಿ. ಅದರ ಪ್ರಕಾರ ಸಾಗಿ. ಒಂದು ದಿನ ಬಹಳ ಬೇಗ ದಣಿವಾದರೆ ಅಂದು ದೇಹದ ಮೇಲೆ ಹೆಚ್ಚಿನ ಒತ್ತಡ ಹಾಕಬೇಡಿ ಮುಂದಿನ ದಿನ ಮುಂದುವರೆಸಬಹುದು ಚಿಂತೆಯಿಲ್ಲ.

7. ಸ್ಟ್ರೆಚಿಂಗ್ ಬಹಳ ಅಗತ್ಯ

7. ಸ್ಟ್ರೆಚಿಂಗ್ ಬಹಳ ಅಗತ್ಯ

ಕೆಲವು ವರ್ಕ್ ಔಟ್ ಗಳನ್ನು ಮಾಡಿದ ಮೇಲೆ ಸ್ಟ್ರೆಚಿಂಗ್ ಅನ್ನು ಮಾಡಲು ಮರೆಯದಿರಿ. ಇದು ನಿಮ್ಮ ಸ್ನಾಯುಗಳನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು ಬಹಳ ಸಹಕಾರಿ. ಇದು ಗಾಯಗಳಿಂದಲೂ ರಕ್ಷಿಸುತ್ತದೆ ಮತ್ತು ನಿಮ್ಮ ದೇಹ ನಿಮಗೆ ಬೇಕಾದ ಹಾಗೆ ಇರಲು ನೆರವಾಗುತ್ತದೆ.

8. ಉಸಿರಾಟ ಬಹಳ ಪ್ರಮುಖ ಅಂಶ

8. ಉಸಿರಾಟ ಬಹಳ ಪ್ರಮುಖ ಅಂಶ

ಉಸಿರಾಟ ಹೇಗೆ ನಿಮ್ಮ ಮೈಕಟ್ಟಿನ ಮೇಲೆ ಪ್ರಭಾವ ಬೀರಬಹುದು ಎಂದು ನಿರ್ಲಕ್ಷಿಸಬೇಡಿ. ಸರಿಯಾಗಿ ಉಸಿರಾಡಿದರೆ ನಿಮ್ಮ ದೇಹಕ್ಕೆ ಆಮ್ಲಜನಕದ ಪೂರೈಕೆ ಸರಿಯಾದ ಪ್ರಮಾಣದಲ್ಲಿರುತ್ತದೆ. ಇದು ನಿಮ್ಮ ಸ್ನಾಯುಗಳನ್ನು ಸರಿಯಾದ ಸ್ಥಿತಿಯಲ್ಲಿಡುತ್ತದೆ.

9. ಸರಿಯಾಗಿ ನಿದ್ದೆ ಮಾಡಿ

9. ಸರಿಯಾಗಿ ನಿದ್ದೆ ಮಾಡಿ

ಸರಿಯಾಗಿ ನಿದ್ದೆ ಮಾಡದ ಹೊರತು ನಿಮಗೆ ಹೆಚ್ಚಿನ ದಣಿವಾಗುವುದರಲ್ಲಿ ಸಂಶಯವಿಲ್ಲ. ಈ ದಣಿವು ಕೇವಲ ನಿಮಗಷ್ಟೇ ಅಲ್ಲ ನಿಮ್ಮ ಸ್ನಾಯುಗಳಿಗೂ ಆಗುವುದು. ಇದಕ್ಕಾಗಿ ಸರಿಯಾದ ನಿದ್ದೆ ಮಾಡಬೇಕು. ದಿನಕೆ ಕನಿಷ್ಠ ಪಕ್ಷ ಏಳು ಗಂಟೆಗಳಾದರೂ ನಿದ್ದೆ ಮಾಡಬೇಕು.

10. ಆಹಾರ ಕ್ರಮದಲ್ಲೂ ಜಾಗರೂಕತೆ ಬೇಕು

10. ಆಹಾರ ಕ್ರಮದಲ್ಲೂ ಜಾಗರೂಕತೆ ಬೇಕು

ನೀವು ಸೇವಿಸುವ ಆಹಾರದ ಬಗ್ಗೆಯೂ ನಿಗಾ ವಹಿಸಿ. ಸರಿಯಾದ ಪೋಷಕಾಂಶಗಳಿರುವ ಆಹಾರ ಸೇವಿಸುವುದು ಅಗತ್ಯ. ಜಿಮ್ ನಲ್ಲಿ ವರ್ಕ್ ಔಟ್ ಮಾಡಿದ ಬಳಿಕ ಸರಿಯಾದ ಆಹಾರ ಯಾವುದೆಂದು ತಿಳಿದು ಅಂತಹ ಆಹಾರಗಳನ್ನು ಹೆ಼ಚ್ಚಾಗಿ ಸೇವಿಸಿ.

11. ನಿಧಾನವಾಗಿ ಆರಂಭಿಸಿ

11. ನಿಧಾನವಾಗಿ ಆರಂಭಿಸಿ

ಜಿಮ್ ಗೆ ಹೋದ ಕೂಡಲೇ ಹೆಚ್ಚು ಭಾರದ ಮತ್ತು ಕಠಿಣವಾದ ವರ್ಕ್ ಔಟ್ ಗಳನ್ನು ಮಾಡಲು ಮುಂದಾಗಬೇಡಿ. ಮೊದಲಿಗೆ ನಿಧಾನಕ್ಕೆ ಸುಲಭವಿರುವ ವರ್ಕ್ ಔಟ್ ಗಳಿಂದ ಆರಂಭಿಸಿ. ನಿಮ್ಮ ದೇಹ ಕಠಿಣವಾದ ವರ್ಕ್ ಔಟ್ ಗಳಿಗೆ ಸಿದ್ಧವಾಗಿದೆ ಎಂದು ಅನ್ನಿಸಿದ ಮೇಲಷ್ಟೇ ಕಠಿಣವಾದುವುಗಳನ್ನು ಆರಿಸಿಕೊಳ್ಳಿ.

12. ಸಾಧ್ಯವಾಗುವ ಗುರಿಗಳನ್ನಷ್ಟೇ ಇಟ್ಟುಕೊಳ್ಳಿ

12. ಸಾಧ್ಯವಾಗುವ ಗುರಿಗಳನ್ನಷ್ಟೇ ಇಟ್ಟುಕೊಳ್ಳಿ

ನಿಮ್ಮ ಅಂದವಾದ ಮೈಕಟ್ಟು ಕಟ್ಟುವ ಕಾರ್ಯದಲ್ಲಿ ಸರಿಯಾದ ಮತ್ತು ಸಾಧ್ಯವಾಗುವ ಗುರಿಗಳನ್ನಷ್ಟೇ ಇಟ್ಟುಕೊಳ್ಳುವುದು ಅಗತ್ಯ. ಮೈಕಟ್ಟು ರಚನೆಯಾಗುವುದು ಗಂಟೆಗಳ ಅಥವಾ ದಿನಗಳ ಮಾತಲ್ಲ. ಇದು ವಾರಗಳು ಮತ್ತು ತಿಂಗಳುಗಳ ಕೆಲಸವಾಗಿದೆ. ಎಷ್ಟು ಬೇಗ ಮಾಡಬಲ್ಲೆ ಎನ್ನುವುದಕ್ಕಿಂತ ಎಷ್ಟು ನಿಧಾನವಾಗಿ ಮಾಡಬಲ್ಲೆ ಎಂಬ ಕಲ್ಪನೆ ಇರಲಿ.

13. ವಿವಿಧ ವ್ಯಾಯಾಮ ಅಭ್ಯಾಸಗಳನ್ನು ಮಾಡಿಕೊಳ್ಳಿ

13. ವಿವಿಧ ವ್ಯಾಯಾಮ ಅಭ್ಯಾಸಗಳನ್ನು ಮಾಡಿಕೊಳ್ಳಿ

ನಿಮ್ಮ ವ್ಯಾಯಾಮ ಅಭ್ಯಾಸಗಳನ್ನು ಬದಲಾಯಿಸುತ್ತಾ ಇರಿ. ಇದರಿಂದ ನಿಮಗೆ ಬಹಳ ಹೆಚ್ಚಿನ ವ್ಯಾಯಾಮಗಳ ಬಗ್ಗೆ ತಿಳಿಯುತ್ತದೆ ಮತ್ತು ಇವುಗಳನ್ನು ನಿಮಗೆ ಯಾವುದು ಸೂಕ್ತ ಎಂದು ನೀವು ನಿರ್ಧರಿಸಬಲ್ಲರಾಗುತ್ತೀರಿ.

14. ಮರಳಿ ತಯಾರಾಗಲು ಸಮಯ ಇಟ್ಟುಕೊಳ್ಳಿ

14. ಮರಳಿ ತಯಾರಾಗಲು ಸಮಯ ಇಟ್ಟುಕೊಳ್ಳಿ

ಸತತವಾಗಿ ವರ್ಕ್ ಔಟ್ ಮಾಡದಿರಿ. ಕೆಲವು ದಿನಗಳ ವರ್ಕ್ ಔಟ್ ನಂತರ ಒಂದೆರಡು ದಿನಗಳ ವಿರಾಮ ಅಗತ್ಯವಾಗಿರುತ್ತದೆ. ದೇಹಕ್ಕೆ ವಿರಾಮ ನೀಡಿದರಷ್ಟೇ ಅದು ಇನ್ನೊಮ್ಮೆ ದಣಿಯಲು ಸಿದ್ಧವಾಗುತ್ತದೆ ಎಂದು ನೆನಪಿಡಿ.

15. ಫ್ರೀ ವೈಟ್ ಗಳನ್ನು ಆರಿಸಿಕೊಳ್ಳಿ

15. ಫ್ರೀ ವೈಟ್ ಗಳನ್ನು ಆರಿಸಿಕೊಳ್ಳಿ

ಡಂಬಲ್ಸ್, ಬಾರ್ಬೆಲ್ಸ್ ಮುಂತಾದ ಫ್ರೀ ವೈಟ್ ಗಳನ್ನು ಮೆಷಿನ್ ತೂಕಗಳ ಬದಲಿಗೆ ಆರಿಸಿಕೊಳ್ಳಿ. ಇದು ನಿಮ್ಮ ಸ್ನಾಯುಗಳಗೆ ಬಹಳ ಲಾಭದಾಯಕ.

16. ಸಂಕೀರ್ಣ ವ್ಯಾಯಾಮಗಳನ್ನು ಮಾಡಿ

16. ಸಂಕೀರ್ಣ ವ್ಯಾಯಾಮಗಳನ್ನು ಮಾಡಿ

ಸ್ಕ್ವಾಟ್ಸ್, ಡೆಡ್ ಲಿಫ್ಟ್, ಬೆಂಚ್ ಪ್ರೆಸ್, ಮಿಲಿಟರಿ ಪ್ರೆಸ್ ಮತ್ತು ಡಂಬಲ್ ರೋ ಗಳಂತಹ ಸಂಕೀರ್ಣ ವ್ಯಾಯಾಮಗಳನ್ನು ಆರಿಸಿಕೊಳ್ಳಿ. ಇದು ನಿಮ್ಮ ದೇಹದ ಎಲ್ಲಾ ಸ್ನಾಯುಗಳ ಗಾತ್ರಗಳನ್ನು ಹಿಗ್ಗಿಸುತ್ತದೆ.

17. ಬೇರೆ ಬೇರೆ ತೂಕಗಳು ಮತ್ತು ಪುನರಾವರ್ತನೆಗಳು

17. ಬೇರೆ ಬೇರೆ ತೂಕಗಳು ಮತ್ತು ಪುನರಾವರ್ತನೆಗಳು

ನೀವು ಅಭ್ಯಾಸ ಹೆಚ್ಚು ಮಾಡಿದಂತೆ ಹೆಚ್ಚು ಹೆಚ್ಚು ತೂಕಗಳನ್ನು ಸೇರಿಸುತ್ತಾ ಹೋಗಿ ಹಾಗೂ ಒಂದು ಆವರ್ತನದಲ್ಲಿ ಎಷ್ಟು ತೂಕ ಸೇರಿಸಿದ್ದೀರಿ ಎಂಬ ಬಗ್ಗೆ ನೋಡಿ. ಇದು ನಿಮ್ಮ ದೇಹ ನಿರ್ಮಾಣ ಪ್ರಯಾಣದಲ್ಲಿ ನೀವು ಕ್ರಮಿಸಿರುವ ದೂರವನ್ನು ನಿಮಗೆ ಅಂದಾಜಿಸಲು ನೆರವಾಗುತ್ತದೆ.

18. ನಿಮ್ಮ ಭಂಗಿಗಳ ಮೇಲೆ ಸ್ವಲ್ಪ ಗಮನವಿರಲಿ

18. ನಿಮ್ಮ ಭಂಗಿಗಳ ಮೇಲೆ ಸ್ವಲ್ಪ ಗಮನವಿರಲಿ

ನಿಮ್ಮ ವ್ಯಾಯಾಮಗಳ ವೇಳೆ ಸರಿಯಾದ ಮತ್ತು ಸಮರ್ಪಕವಾದ ದೇಹದ ಭಂಗಿಗಳನ್ನು ಹೊಂದಿರುವುದು ಬಹಳ ಅಗತ್ಯ. ಯಾವಾಗಲೂ ಭಂಗಿಗಳನ್ನು ಸರಿಯಾಗಿ ಮತ್ತು ಬಹಳ ನೇರವಾಗಿ ಇಟ್ಟುಕೊಳ್ಳಿ. ಇದು ಗಾಯಗಳಿಂದ ಪಾರಾಗಲು ನೆರವಾಗುತ್ತದೆ.

19. ಸಾಧ್ಯವಾದಷ್ಟು ಹೆಚ್ಚಿನ ನೀರನ್ನು ಕುಡಿಯಿರಿ

19. ಸಾಧ್ಯವಾದಷ್ಟು ಹೆಚ್ಚಿನ ನೀರನ್ನು ಕುಡಿಯಿರಿ

ವರ್ಕ್ ಔಟ್ ಮಾಡುವಾಗ ಬೆವರಿನ ರೂಪದಲ್ಲಿ ಬಹಳ ನೀರಿನಾಂಶ ನಿಮ್ಮ ದೇಹದಿಂದ ಹೊರಹೋಗುತ್ತದೆ ಇದನ್ನು ಮರಳಿ ಗಳಿಸುವುದು ಬಹಳ ಅಗತ್ಯವಾಗಿದೆ. ಸತತವಾಗಿ ನೀರು ಕುಡಿಯುವುದರಿಂದ ನಿಮ್ಮ ದೇಹಕ್ಕೆ ಅಗತ್ಯ ನೀರಿನಾಂಶ ಸಿಗುತ್ತದೆ ಜೊತೆಗೆ ಆರೋಗ್ಯವೂ ಚೆನ್ನಾಗಿರುತ್ತದೆ.

20. ಗಾಯಗಳ ಬಗ್ಗೆ ಎಚ್ಚರಿಕೆ ಇರಲಿ

20. ಗಾಯಗಳ ಬಗ್ಗೆ ಎಚ್ಚರಿಕೆ ಇರಲಿ

ಸಣ್ಣ ಗಾಯವೇ ಇರಲಿ ಕಂಡುಬಂದಲ್ಲಿ ಅದನ್ನು ಖಂಡಿತ ನಿರ್ಲಕ್ಷಿಸಬೇಡಿ. ಹೀಗೆ ಮಾಡಿದಲ್ಲಿ ಅದು ನಿಮ್ಮ ದೇಹವನ್ನು ಮತ್ತಷ್ಟು ಕುಗ್ಗಿಸುತ್ತದೆ. ಗಾಯವಾದ ತಕ್ಷಣ ಅದನ್ನು ಸರಿಯಾಗಿ ಗುಣ ಮಾಡುವ ಕ್ರಮಗಳನ್ನು ಅನುಸರಿಸಿ.

English summary

20 Body Building Tips For Beginners

Don't expect overnight miracles - building a body takes time, focus and consistency. The good news is that the first 6-12 months is the time when you will probably make the most dramatic gains. Here's a step-by-step introduction to the iron game that will get you started on the right foot.
X
Desktop Bottom Promotion