For Quick Alerts
ALLOW NOTIFICATIONS  
For Daily Alerts

ನಿಮಗಾಗಿ 15 ಹಸಿ ಆಹಾರಗಳು

By Super
|

ಬೇಯಿಸಿದ ಆಹಾರಕ್ಕಿಂತ ಹಸಿ ಆಹಾರ ತೂಕ ಇಳಿಸಲು ಹೆಚ್ಚು ಪರಿಣಾಮಕಾರಿ ಮತ್ತು ಸುರಕ್ಷಿತ ಎಂದು ಹೇಳಲಾಗುತ್ತದೆ. ನೀವು ನಿಮ್ಮ ತೂಕವನ್ನು ಇಳಿಸಬೇಕು ಎಂದುಕೊಂಡಿದ್ದಲ್ಲಿ ಹೆಚ್ಚು ಹಸಿ ಪದಾರ್ಥಗಳನ್ನು ನಿಮ್ಮ ಡಯಟ್ ಲಿಸ್ಟಿಗೆ ಸೇರಿಸಿಕೊಳ್ಳಿ. ನೀವು ಇದನ್ನು ಬಳಸಿದಾದಲ್ಲಿ ನಿಮ್ಮ ತೂಕ ಎಷ್ಟು ಬೇಗ ಇಳಿಯುತ್ತದೆ ಎಂದು ನೀವೇ ನೋಡಬಹುದು.
ಹಸಿ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಪ್ರೊಟೀನ್ ಮತ್ತು ಖನಿಜಾಂಶಗಳಿರುತ್ತವೆ. ಇವು ನಿಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ. ನೀವು ತೂಕ ಕಳೆದುಕೊಳ್ಳಲು ದಿನವೂ ಬಳಸಬಹುದಾದ ಹಸಿ ಆಹಾರಗಳು ಬೇಕಾದಷ್ಟಿವೆ.
ನಿಮ್ಮ ನೆಚ್ಚಿನ ತಾರೆಯರ ಸಪೂರ ಕಾಯದ ಗುಟ್ಟು ಈ ಹಸಿ ಆಹಾರಗಳೇ. ನೀವು ಕೂಡ ಇದನ್ನು ಹೆಚ್ಚಾಗಿ ಬಳಸಿದಲ್ಲಿ ಅವರಂತಾಗಬಹುದು. ತಿನ್ನುವ ಮೊದಲು ಇದನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ.

ಸ್ಪಿನಾಚ್

ಸ್ಪಿನಾಚ್

ನಿಮಗೆ ತೂಕ ಕಳೆದುಕೊಳ್ಳಲು ನೆರವಾಗುವಂತಹ ಅತ್ಯತ್ತಮ ಆಹಾರ. ಇದರಲ್ಲಿ ವಿಟಮಿನ್ ಕೆ ಹೆಚ್ಚಿರುತ್ತದೆ. ಇದು ನಿಮಗೆ ಅತ್ಯವಶ್ಯಕವಾದ ಐರನ್ ಒದಗಿಸುತ್ತದೆ.

ಬೀಟ್ ರೂಟ್

ಬೀಟ್ ರೂಟ್

ಇದು ಅನಿಮಿಯಾದಿಂದ ಬಳಲುತ್ತಿರುವವರಿಗೆ ಉತ್ತಮವಾದ ಆಹಾರ. ಇದನ್ನು ಹಸಿಯಾಗಿ ತಿನ್ನಬಹುದು.

ಕ್ಯಾರೆಟ್

ಕ್ಯಾರೆಟ್

ಇದು ಕಣ್ಣುಗಳಿಗೆ ಒಳ್ಳೆಯದು. ಅಷ್ಟೇ ಅಲ್ಲ ಇದು ನಿಮ್ಮ ದೇಹದ ಚೈತನ್ಯವನ್ನು ಕಾಪಾಡುತ್ತದೆ. ನಿಮಗೆ ಸೋಮಾರಿತನ ಕಾಡಿದಾಗ ಒಂದು ಕ್ಯಾರೆಟ್ ತಿನ್ನಿ ಚೈತನ್ಯ ತಾನೇ ತಾನಾಗಿ ಮೈತುಂಬಿಕೊಳ್ಳುತ್ತದೆ.

ಸೌತೆಕಾಯಿ

ಸೌತೆಕಾಯಿ

ಇದನ್ನು ಎಲ್ಲ ಬಗೆಯ ಸಲಾಡ್ ಗಳಲ್ಲಿ ಕಾಣಬಹುದು. ಹಸಿಯಾಗಿ ತಿನ್ನಬಹುದಾದ ತರಕಾರಿಗಳೆಲೆಲ್ಲ ಇದು ಉತ್ತಮ. ನೀವು ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಲ್ಲಿ ಇದನ್ನು ಹೆಚ್ಚಾಗಿ ತಿನ್ನಿ. ಇದರಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ಇದು ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆ.

ಮೂಲಂಗಿ

ಮೂಲಂಗಿ

ಮೂಲಂಗಿಯನ್ನು ಕೂಡ ಹಸಿಯಾಗಿ ತಿನ್ನಬಹುದು. ಆದರೆ ಇದರಲ್ಲಿ ಗ್ಯಾಸ್ ಹೆಚ್ಚಿರುವುದರಿಂದ ಹೆಚ್ಚಾಗಿ ತಿನ್ನುವುದು ಒಳ್ಳೆಯದಲ್ಲ.

ಟೊಮೊಟೊ

ಟೊಮೊಟೊ

ಹಸಿಯಾಗಿ ತಿನ್ನಲು ಬಹಳ ಚೆನ್ನಾಗಿರುತ್ತದೆ. ಇದು ನಿಮ್ಮ ಕೊಬ್ಬನ್ನು ಕರಗಿಸಲು ಸಹಕಾರಿ. ಇದು ಕ್ಯಾನ್ಸರ್ ನಂತಹ ರೋಗಗಳು ಬರದಂತೆ ತಡೆಗಟ್ಟುತ್ತದೆ.

ಮೊಳಕೆ ಕಾಳುಗಳು

ಮೊಳಕೆ ಕಾಳುಗಳು

ಮೊಳಕೆ ಕಾಳುಗಳನ್ನು ಹಸಿಯಾಗಿ ತಿನ್ನುವುದರಿಂದ ತೂಕ ಕಳೆದುಕೊಳ್ಳಲು ಇವು ನೆರವು ನೀಡುತ್ತವೆ. ಇದು ನಿಮ್ಮ ಚರ್ಮದ ಹೊಳಪನ್ನು ಕೂಡ ಹೆಚ್ಚಿಸುತ್ತದೆ.

ಕಾಲೆ

ಕಾಲೆ

ಇದರಲ್ಲಿ ವಿಟಮಿನ್ ಕೆ ಹೆಚ್ಚಿರುತ್ತದೆ. ಇದು ನಿಮ್ಮ ದೇಹಕ್ಕೆ ಅತ್ಯವಶ್ಯಕ. ಇದನ್ನು ವಾರಕ್ಕೊಮ್ಮೆ ಬಳಸಿದರೆ ಮಲಬದ್ಧತೆಯ ಸಮಸ್ಯೆಯಿಂದ ದೂರವುಳಿಯಬಹುದು.

ಕೊಬ್ಬರಿ

ಕೊಬ್ಬರಿ

ಪರಿಣಿತರ ಪ್ರಕಾರ ಕೊಬ್ಬರಿ ತಿನ್ನುವುದರಿಂದ ದೇಹದಲ್ಲಿನ ಕೀಟಾಣುಗಳು ನಾಶವಾಗುತ್ತದೆಯಂತೆ. ನಿಮಗೆ ಹೊಟ್ಟೆಯ ಇನ್ ಫೆಕ್ಷನ್ ಕಾಡುತ್ತಿದ್ದಲ್ಲಿ ಕೊಬ್ಬರಿಯನ್ನು ತಿನ್ನುವುದರಿಂದ ಈ ಸಮಸ್ಯೆಯಿಂದ ಮುಕ್ತರಾಗಬಹುದು.

ಜೋಳ

ಜೋಳ

ಜೋಳವನ್ನು ತಿನ್ನುವುದರಿಂದ ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು. ಇದರಲ್ಲಿ ಹೆಚ್ಚು ಪ್ರೊಟೀನ್ ಇರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು.

ಈರುಳ್ಳಿ

ಈರುಳ್ಳಿ

ಈರುಳ್ಳಿ ಕೊಬ್ಬನ್ನು ಇಳಿಸುವಲ್ಲಿ ಸಹಕಾರಿ. ಇದನ್ನು ಹಸಿಯಾಗಿ ತಿನ್ನುವುದರಿಂದ ತೂಕ ಕಳೆದುಕೊಳ್ಳುವಲ್ಲಿ ಸಹಕಾರಿಯಾಗುತ್ತದೆ.

ಗೆಣಸು

ಗೆಣಸು

ಇದು ಆಲೂಗಡ್ಡೆಯ ರುಚಿಯನ್ನು ಹೊಂದಿರುವ ತರಕಾರಿ. ಇದನ್ನು ಹಸಿಯಾಗಿ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಿಸುತ್ತದೆ. ಇದು ಮಧುಮೇಹಿಗಳಿಗೆ ಉತ್ತಮವಾದ ಆಹಾರ.

ಸೆಲರಿ

ಸೆಲರಿ

ಇದನ್ನು ದಿನವೂ ತಿನ್ನುವುದರಿಂದ ಹೊಟ್ಟೆಯ ಇನ್ ಫೆಕ್ಷನ್ ನಿಂದ ದೂರವುಳಿಯಬಹುದು. ಇದು ದೇಹದಲ್ಲಿನ ಅಪಾಯಕಾರಿ ಬ್ಯಾಕ್ಟಿರೀಯಾಗಳನ್ನು ಕೊಲ್ಲುತ್ತದೆ.

ಗಡ್ಡೆಕೋಸು

ಗಡ್ಡೆಕೋಸು

ಇದನ್ನು ಎಲ್ಲರೂ ಇಷ್ಟಪಡುವುದಿಲ್ಲ. ಆದರೆ ಇದನ್ನು ಹಸಿಯಾಗಿ ವಾರಕ್ಕೊಮ್ಮೆಯಾದರೂ ತಿಂದಲ್ಲಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ.

ನಿಂಬೆ ಹಣ್ಣು

ನಿಂಬೆ ಹಣ್ಣು

ನಿಂಬೆ ಹಣ್ಣು ಕೂಡ ತೂಕ ಕಳೆದುಕೊಳ್ಳಲು ಸಹಕಾರಿ. ಒತ್ತಡದಲ್ಲಿದ್ದಾಗ ಒಂಚೂರು ನಿಂಬೆಹಣ್ಣನ್ನು ಚೀಪಿದರೆ ಒತ್ತಡ ನಿವಾರಣೆಯಾಗುತ್ತದೆ.

English summary

15 Raw Healthy Foods For You

They say that more than boiled food, raw food is one of the most safest and best ways for you to shed those pounds. If you are on a weight loss diet program, raw foods should be added to your daily diet. When you consume these raw foods you will notice the numbers on the weighing scale to drop drastically.
Story first published: Monday, December 2, 2013, 15:58 [IST]
X
Desktop Bottom Promotion