For Quick Alerts
ALLOW NOTIFICATIONS  
For Daily Alerts

40ರ ನಂತರವೂ ಫಿಟ್ ಆಗಿರುವುದು ಹೇಗೆ?

|
Get Rid Of Belly Flab After 40 Years
ವಯಸ್ಸು 40 ದಾಟಿದರೂ ಫಿಟ್ ಆಗಿದ್ದವರನ್ನು ನೋಡಿದಾಗ ಅವರಡೆಗೆ ಮೆಚ್ಚುಗೆಯಿಂದ ಮತ್ತು ಆಶ್ಚರ್ಯದಿಂದ ನೋಡುವುದು ಸಹಜ. ಏಕೆಂದರೆ 40 ದಾಟುತ್ತಿದ್ದಂತೆ ದಪ್ಪಗಾಗ ತೊಡಗುತ್ತಾರೆ. ಅದರಲ್ಲಿ ಮಹಿಳೆಯರು ಬೇಗನೆ ದಪ್ಪಗಾಗುತ್ತಾರೆ. ಬೊಜ್ಜು ಮತ್ತಷ್ಟು ವಯಸ್ಸದಾಂತೆ ಮಾಡುತ್ತದೆ, ಹುರುಪು ಕಡಿಮೆಯಾಗ ತೊಡಗುತ್ತದೆ. ಆದ್ದರಿಂದ ದೇಹವನ್ನು ಫಿಟ್ ಆಗಿ ಇಟ್ಟರೆ ದೇಹವು ಆರೋಗ್ಯದಿಂದ ಕೂಡಿರುತ್ತದೆ. 40ರ ನಂತರ ಫಿಟ್ ಮತ್ತು ಆರೋಗ್ಯಕರವಾಗಿರಲು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.
40ರ ನಂತರ ಬೊಜ್ಜುಗೆ ಕಾರಣಗಳು:
* 40ರ ನಂತರ ದೇಹದಲ್ಲಿ ಸ್ಯಾಯುಗಳು ಸಡಿಲಗೊಳ್ಳುವುದರಿಂದ ದಪ್ಪಗಾಗ ತೊಡಗುತ್ತಾರೆ.
* ನಿದ್ರೆ ಇಲ್ಲದಿದ್ದರೆ ಕೂಡ ಮಧ್ಯವಯಸ್ಸಿನವರಲ್ಲಿ ತೂಕ ಹೆಚ್ಚಾಗುತ್ತದೆ.
* ಮಹಿಳೆಯರಲ್ಲಿ ಮೆನೊಪಾಸ್ ಮತ್ತು ಪುರುಷರಲ್ಲಿ ಓಷ್ಟ್ರೋಜನ್ ಹೆಚ್ಚಾಗುವುದರಿಂದ ತೂಕ ಹೆಚ್ಚಾಗುತ್ತದೆ.

ಈ ರೀತಿ ಆಗುವ ತೂಕವನ್ನು ಈ ಕೆಳಗಿನ ಆಹಾರಕ್ರಮವನ್ನು ಪಾಲಿಸಿ ತಡೆಗಟ್ಟಿ ಫಿಟ್ ದೇಹವನ್ನು ಪಡೆಯಬಹುದು.
1. ಬ್ರೊಕೋಲಿ, ಹೂಕೋಸು, ಪಾಲಾಕ್ ಸೊಪ್ಪು, ಬೀಟ್ ರೂಟ್ಸ್, ಸಿಟ್ರಸ್ ಇರುವ ಹಣ್ಣುಗಳ ಸೇವನೆಯನ್ನು ಹೆಚ್ಚಾಗಿ ಮಾಡಬೇಕು.
2. ವೆಜಿಟೇಬಲ್ ಸಲಾಡ್ ಗೆ ಆಲೀವ್ ಎಣ್ಣೆಯನ್ನು ಬಳಸಬೇಕು, ಹಾಗೆಯೆ ಎಳ್ಳು, ಹುಚ್ಚೆಳ್ಳನ್ನು ಸೇವಿಸಿದರೆ ದೇಹದಲ್ಲಿ ಓಸ್ಟ್ರೋಜನ್ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
3.ಆಹಾರದಲ್ಲಿ ಸ್ವಲ್ಪವಾದರೂ ಪ್ರೊಟೀನ್ ಅಂಶವಿರುವಂತೆ ನೋಡಿಕೊಳ್ಳಬೇಕು. ಮೊಟ್ಟೆ, ಚಿಕ್ಕನ್, ಮೀನು ಇವುಗಳ ಸೇವನೆ ಒಳ್ಳೆಯದು. ಆದರೆ ಹೀಗೆ ತೆಗೆದುಕೊಳ್ಳುವಾಗ ದೇಹಕ್ಕೆ ಅಗತ್ಯವಿರುವ ಕ್ಯಾಲೋರಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು.
4. ಪ್ರತಿನಿತ್ಯ ವ್ಯಾಯಾಮ ಮಾಡಬೇಕು. ದಿನದಲ್ಲಿ 30 ನಿಮಿಷ ನಡೆಯುವುದು, ಸೈಕಲ್ ತುಳಿಯುವುದು ಇವೆಲ್ಲಾ ಅರೋಗ್ಯವಾಗಿ ಇರುವಂತೆ ಮಾಡುತ್ತದೆ.
5. ಮದ್ಯಪಾನದ ಅಭ್ಯಾಸವಿರುವವರು ದಿನವೂ ಕುಡಿಯುವ ಅಭ್ಯಾಸವನ್ನು ಬಿಡಬೇಕು, ಅದನ್ನು ವಾರಕ್ಕೆ ಒಮ್ಮೆಯಂತೆ ಮಾಡುವುದರಿಂದ ಹೊಟ್ಟೆ ಅಷ್ಟಾಗಿ ಬರುವುದಿಲ್ಲ, ಸಂಪೂರ್ಣ ಕುಡಿಯುವುದನ್ನು ಬಿಟ್ಟರೆ ಆರೋಗ್ಯಕ್ಕೆ ಮತ್ತಷ್ಟು ಒಳ್ಳೆಯದು.
6. ಅಧಿಕ ಒತ್ತಡ ಮತ್ತು ನಿದ್ರಾಹೀನತೆಯಿಂದ ದಪ್ಪಾಗುವುದು, ಆದ್ದರಿಂದ ಯೋಗ, ವ್ಯಾಯಾಮ ಮಾಡಿದರೆ ಒತ್ತಡ ಕಡಿಮೆಯಾಗಿ ನಿದ್ರೆ ಚೆನ್ನಾಗಿ ಬರುತ್ತದೆ.

English summary

Get Rid Of Belly Flab After 40 Years | Tips For Fitness | 40 ನಂತರ ಬರುವ ಬೊಜ್ಜನ್ನು ಕರಗಿಸಿ | ಫಿಟ್ ನೆಸ್ ದೇಹಕ್ಕೆ ಕೆಲ ಸಲಹೆ

Many people aged above 40, practice simple exercises or stick to a diet, yet complain about the excess weight gain. To overcome weight gain in 40s, one must resort to a proper workout in addition to following a well-balanced diet.
Story first published: Friday, December 16, 2011, 12:57 [IST]
X
Desktop Bottom Promotion