For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಬೊಜ್ಜು ಕರಗಿಸೋ ಸರಳ ಉಪಾಯ

|
Tips For Flat Stomach
ಯಾವುದೆ ಡ್ರೆಸ್ ಹಾಕಿರಲಿ ಸುಂದರವಾಗಿ ಕಾಣಬೇಕೆಂದರೆ ಹೊಟ್ಟೆ ಚಪ್ಪಟೆಯಾಗಿರಬೇಕು. ಬೊಜ್ಜು ಹೊಟ್ಟೆ ದೇಹದ ಆಕಾರವನ್ನೇ ಹಾಳು ಮಾಡಿ ಬಿಡುತ್ತದೆ. ಅದರಲ್ಲೂ ಹುಡುಗಿಯರಿಗೆ ಮಾಡರ್ನ್ ಡ್ರೆಸ್ ಹಾಕಿದಾಗ ಬೊಜ್ಜು ಹೊಟ್ಟೆ ಇದ್ದರೆ ಚೆಂದ ಕಾಣಿಸುವುದಿಲ್ಲ. ಆದ್ದರಿಂದ ಚಪ್ಪಟೆಯಾದ ಹೊಟ್ಟೆಯನ್ನು ಪಡೆಯುವುದು ಹೆಣ್ಣುಮಕ್ಕಳ ಕನಸಾಗಿದೆ. ಆದ್ದರಿಂದ ಈ ಕೆಳಗಿನ ಸಲಹೆಗಳನ್ನು ಪಾಲಿಸಿ ಚಪ್ಪಟೆ ಹೊಟ್ಟೆಯನ್ನು ಪಡೆಯಬಹುದಾಗಿದೆ.

1. ಹೊತ್ತಿಗೆ ಸರಿ ಊಟ ಮಾಡುವುದು: ವೈದ್ಯರ ಪ್ರಕಾರ ಪ್ರೊಟೀನ್ ಅಂಶವಿರುವ ಆಹಾರವನ್ನು ಸಾಯಂಕಾಲ

3-4 ಗಂಟೆಗಳ ಒಳಗೆ ಸೇವಿಸಬೇಕು. ಇಷ್ಟೊತ್ತಿಗೆ ತಿಂದರೆ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ. ದೇಹದಲ್ಲಿ ಸಕ್ಕರೆ ಅಂಶವನ್ನು ಸಮತೋಲದಲ್ಲಿ ಇಟ್ಟಷ್ಟೂ ದೇಹವು ಫಿಟ್ ಆಗಿ ಇರುತ್ತದೆ.

2. ಚೆಂಡಿನ ವ್ಯಾಯಾಮ: ಚಪ್ಪಟೆ ಹೊಟ್ಟೆಯನ್ನು ಪಡೆಯಲೇ ಬೇಕು ಎಂದು ಬಯಸುವುವವರಿಗೆ ಚೆಂಡಿನ ವ್ಯಾಯಾಮ ಒಂದು ಉತ್ತಮವಾದ ಸಲಹೆ. ಅಂಗಾತ ಮಲಗಿ ಚೆಂಡನ್ನು ತಲೆಯ ಹಿಂದೆ ಇಡಬೇಕು, ನಂತರ ಅದನ್ನು ಕೈಯಿಂದ ತೆಗೆದು ಎದೆ ಹತ್ತಿರ ಹಿಡಿಯಬೇಕು, ಈಗ ನಿಧಾನಕ್ಕೆ ಕಾಲನ್ನು ಎತ್ತಿ ಎದೆ ಹತ್ತಿರ ಹಿಡಿದಿರುವ ಚೆಂಡನ್ನು ಕಾಲಿನ ನಡುವೆ ಸಿಕ್ಕಿಸಿ ಅದನ್ನು ಕಾಲಿನಿಂದಲೆ ಹೊರಗೆ ಎಸೆಯಬೇಕು. ಈ ರೀತಿ 10 ಬಾರಿ ಪುನಾರ್ವತಿಸಬೇಕು. ಈ ವ್ಯಾಯಾಮವನ್ನು ದಿನಾವೂ ಮಾಡುವುದರಿಂದ ಚಪ್ಪಟೆಯ ಹೊಟ್ಟೆಯನ್ನು ಪಡೆಯಬಹುದು.

3.ಆಹಾರಕ್ರಮ: ಆಹಾರಕ್ರಮ ದೇಹದ ಫಿಟ್ ನೆಸ್ ನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಧಿಕ ಆಹಾರ ಸೇವನೆ ಮಾಡುವುದರ ಬದಲು ಕಡಿಮೆ ಕೊಬ್ಬಿನ ಆಹಾರವನ್ನು ಆಗಾಗ್ಗೆ ಸೇವಿಸಬಹುದು.ಹೆಚ್ಚು ಕೊಬ್ಬಿ ಮತ್ತು ಕುರುಕುಲು ತಿಂಡಿಗಳನ್ನು ಆದಷ್ಟು ಕಡಿಮೆ ತಿನ್ನಬೇಕು.

4. ಸಮುದ್ರ ಉಪ್ಪು: ಉಪ್ಪನ್ನು ಆಹಾರದಲ್ಲಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

6. ಕೂರುವ ಭಂಗಿ: ಹೀಗೆಲ್ಲಾ ಕಂಪ್ಯೂಟರ್ ನ ಎದುರುಗಡೆ ತುಂಬಾ ಹೊತ್ತು ಕೂತು ಕೆಲಸ ಮಾಡುವುದರಿಂದ ಹೊಟ್ಟೆ ಬರಲಾರಂಭಿಸುತ್ತದೆ. ಆದ್ದರಿಂದ ಕೂರುವಾಗ ನೇರವಾಗಿ ಕೂರಬೇಕು, ಸಮಯ ಸಿಕ್ಕಿದಾಗ ದೀರ್ಘ ಉಸಿರನ್ನು ತೆಗೆದು ಬಿಡುವ ವ್ಯಾಯಾಮ ಮಾಡುತ್ತಿರಬೇಕು . ಹೀಗೆ ಮಾಡಿ ದೇಹಕ್ಕೆ ಸುಂದರ ಆಕಾರವನ್ನು ನೀಡಬಹುದು.

English summary

Tips For Flat Stomach | Flat Stomach For Attractive Body | ಚಪ್ಪಟೆ ಹೊಟ್ಟೆಯನ್ನು ಪಡೆಯಲು ಕೆಲ ಸಲಹೆ | ಆಕರ್ಷಕ ಮೈಕಟ್ಟಿಗೆ ಚಪ್ಪಟೆ ಹೊಟ್ಟೆ

A flat stomach is every girls dream and it has been proved that stomach is one part of the body which tends to collect fat quite easily and it is also very difficult to get rid of the stomach flab.
Story first published: Thursday, December 8, 2011, 11:41 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X