For Quick Alerts
ALLOW NOTIFICATIONS  
For Daily Alerts

ಮದುವೆ, ವಿಚ್ಛೇದನ ಹೇಗೆ ತೂಕ ಹೆಚ್ಚಿಸುತ್ತೆ ಗೊತ್ತಾ?

|
Marriage and Divorce leads to Weight Gain
ಮದುವೆ ನಂತರ ನಿಮ್ಮ ತೂಕದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದಿದೆ ಎಂದು ನಿಮಗೆ ಅನ್ನಿಸುತ್ತಿದ್ದರೆ ನಿಮ್ಮ ಊಹೆ ಖಂಡಿತ ಸರಿ. ಮದುವೆ ಮತ್ತು ಡೈವರ್ಸ್ ಎರಡೂ ಕೂಡ ತೂಕ ಹೆಚ್ಚಳಕ್ಕೆ ಕಾರಣವಾಗುತ್ತೆ ಎಂದಿದೆ ನೂತನ ಸಂಶೋಧನೆ.

ಮದುವೆಗೂ, ಡೈವರ್ಸ್ ಗೂ, ತೂಕಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ಯೊಚಿಸುತ್ತಿದ್ದಿರಾ? ಹಾಗಾದರೆ ಇದನ್ನು ಓದಿ ನೋಡಿ.

ಮಹಿಳೆಯರ ತೂಕ ಮದುವೆ ನಂತರ ಹೆಚ್ಚಲು ಆರಂಭಿಸಿದರೆ, ಪುರುಷರಲ್ಲಿ ವಿಚ್ಛೇದನದ ನಂತರ ತೂಕ ಹೆಚ್ಚುವ ಸಾಧ್ಯತೆ ಹೆಚ್ಚು ಎಂದು ಡೈಲಿ ಎಕ್ಸ್ ಪ್ರೆಸ್ ವರದಿ ಮಾಡಿದೆ. ಮದುವೆ ಮತ್ತು ವಿಚ್ಛೇದನದ ನಂತರ ತೂಕ ಹೆಚ್ಚಾಗುವುದು ಸಾಮಾನ್ಯವಾಗಿ ಮೂವತ್ತರ ನಂತರ ಕಾಣಿಸಿಕೊಳ್ಳುತ್ತದಂತೆ.

ಆದರೆ ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ, ಅದರಲ್ಲೂ ಮದುವೆ ಮತ್ತು ವಿಚ್ಛೇದನದ ನಂತರವೇ ತೂಕ ಹೆಚ್ಚಲು ಕಾರಣವೇನು ಎಂಬ ಪ್ರಶ್ನೆಗೆ ಇಲ್ಲಿದೆ ಸರಳ ಉತ್ತರ. ಮಹಿಳೆಯರಿಗೆ ಮದುವೆ ನಂತರ ಜವಾಬ್ದಾರಿ, ಕೆಲಸ ಹೆಚ್ಚಾಗಿ ವ್ಯಾಯಾಮ ಮಾಡಲು ಸಮಯ ಸಿಗದೆ ಬೊಜ್ಜು ಬೆಳೆಯಲು ಆರಂಭವಾಗುತ್ತದೆ.

ಇನ್ನೊಂದೆಡೆ, ಮದುವೆಯಾದ ನಂತರ ವ್ಯಾಯಾಮ ಮಾಡಲು ಹೆಚ್ಚು ಸಮಯ ಸಿಗುವ ಪುರುಷರಿಗೆ, ವಿಚ್ಛೇದನದ ನಂತರ ವ್ಯಾಯಾಮಕ್ಕೆ ಸಮಯ ಸರಿದೂಗಿಸಲು ಸಾಧ್ಯವಾಗದೆ ದೇಹದಲ್ಲಿ ಬೊಜ್ಜು ಇಣುಕುವಂತೆ ಮಾಡುತ್ತದೆ ಎಂದು ಅಧ್ಯಯನದ ರೂವಾರಿ ಡಿಮಿಟ್ರಿ ಟ್ಯುಮಿನ್ ತಿಳಿಸಿದ್ದಾರೆ.

ತೂಕದ ಕುರಿತು ಸುಮಾರು 10000 ಜನರಿಗೆ ಪ್ರಶ್ನಾವಳಿಯನ್ನು ನೀಡಿದಾಗ, ಗರ್ಭಾವಸ್ಥೆ, ಬಡತನ, ಸಾಮಾಜಿಕ-ಆರ್ಥಿಕ ಪರಿಸ್ಥಿತಿ, ಶಿಕ್ಷಣ ಇವೆಲ್ಲವೂ ಕೂಡ ತೂಕ ಹೆಚ್ಚಳ ಅಥವಾ ಇಳಿಕೆಗೆ ಕಾರಣ ಎಂದು ತಿಳಿಸಿದ್ದಾರೆ.

ಕೊನೆಯಲ್ಲಿ ಮದುವೆ ಅಥವಾ ವಿಚ್ಛೇದನವಾದ ಮಹಿಳೆ ಅಥವಾ ಪುರುಷರು ಇನ್ನೂ ಮದುವೆಯಾಗಿರದವರಿಗೆ ಹೋಲಿಸಿದಾಗ ತೂಕ ಹೆಚ್ಚಿರುವುದು ತಿಳಿದುಬಂದಿರುವುದಾಗಿ ವರದಿಯಾಗಿದೆ.

English summary

How Marriage and Divorce Leads to Weight Gain | ತೂಕ ಹೆಚ್ಚಳಕ್ಕೆ ಮದುವೆ ಮತ್ತು ವಿಚ್ಛೇದನ ಹೇಗೆ ಕಾರಣ

The new study claims that women tend to gain weight after their wedding day on the other hand, men are more likely to pile on the pounds after a divorce. Take a look to know how marriage and divorce are the reason behind weight gain.
Story first published: Saturday, September 17, 2011, 15:25 [IST]
X
Desktop Bottom Promotion