For Quick Alerts
ALLOW NOTIFICATIONS  
For Daily Alerts

ಸಹಜ ಲಯ, ತಾಳದಲ್ಲಿ ಪ್ರಿಯಾಂಕ ಫಿಗರ್

|
Priyanka Chopra
"ನಾನು ಜಿಮ್ ವ್ಯಸನಿಯಲ್ಲ ಆದರೆ ದೇಹಕ್ಕೆ ಕಸರತ್ತು ಕೊಡುವ ಕೆಲಸ ನಿತ್ಯ ಮಾಡುತ್ತೇನೆ" ಎಂದವರು ಮಾಜಿ ವಿಶ್ವಸುಂದರಿ ಮತ್ತು ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ. ಆಕೆ ಸೈಝ್ ಝೀರೊ ಪಡೆಯಲು ರೂಪದರ್ಶಿಗಳಂತೆ ಕಸರತ್ತು ಮಾಡುವುದಿಲ್ಲವಂತೆ. ಆರೋಗ್ಯಕರವಾಗಿ ಬದುಕೋದು ಆಕೆಗೆ ಇಷ್ಟ.

ನನ್ನಂತ ಫಿಗರ್ ಪಡೆಯ ಬಯಸುವರೆಲ್ಲ ಯೋಗ ಮಾಡಿ ಅಂತ ಪ್ರಿಯಾಂಕ ಪುಕ್ಕಟೆ ಸಲಹೆ ನೀಡಿದ್ದಾರೆ. ಮನಸ್ಸನ್ನು ಪ್ರಫುಲ್ಲವಾಗಿರಿಸಲು ಮತ್ತು ದೇಹದಲ್ಲಿ ಶಕ್ತಿಯನ್ನು ಪಡೆಯಲು ನಿತ್ಯ ಯೋಗ ಮಾಡುತ್ತಾರಂತೆ.

ನಿತ್ಯ ಒಂದು ಗಂಟೆ ಜಿಮ್, ಯೋಗಾಸನ ಮತ್ತು ಕೆಲವು ವ್ಯಾಯಾಮಗಳನ್ನು ಮಾಡುತ್ತಾರೆ. ಇದರಿಂದ ತೂಕ ಹೆಚ್ಚದೇ ಫಿಗರ್ ಮೆಂಟೇನ್ ಮಾಡಲು ಸಾಧ್ಯವಾಗಿದೆ ಅಂತಾರೆ ಪ್ರಿಯಾಂಕ.

ಆಕೆ ಕಠಿಣ ಪಥ್ಯ ಮಾಡುವುದಿಲ್ಲವಂತೆ. ಆಕೆಗೆ ಒಂದು ಸಮಯದಲ್ಲಿ ಜಂಕ್ ಫುಡ್ ಅಂದ್ರೆ ಇಷ್ಟವಾಗಿತ್ತಂತೆ. ಆದರೆ ಈಗ ಜಂಕ್ ಫುಡ್ ಬಿಟ್ಟಿದ್ದಾರೆ. ಆಕೆಗೆ ತಿನ್ನುವುದೆಂದರೆ ಇಷ್ಟ. ಹಾಗಂತ ಸಿಕ್ಕಾಪಟ್ಟೆ ತಿನ್ನುವುದಿಲ್ಲ. ಬಾಲಿವುಡ್ ನಟಿಯರಿಗೆ ತೂಕ ಹೆಚ್ಚಿಸಿಕೊಳ್ಳುವುದು ಮತ್ತು ಕಡಿಮೆ ಮಾಡಿಕೊಳ್ಳುವುದು ಅಭ್ಯಾಸವಾಗಿದೆ ಅಂತಾರೆ.

ಪ್ರಿಯಾಂಕ ಛೋಪ್ರಾಗೆ ತುಂಬಾ ತಿನ್ನುವುದು ಗೊತ್ತು. ಅಗತ್ಯ ಬಿದ್ದರೆ ಕಠಿಣ ಪಥ್ಯವನ್ನೂ ಮಾಡಬಲ್ಲರು. ಆಕೆಗೆ ಪಂಜಾಬಿ ಕುಡಿ ಎಂಬ ತಿನಿಸು ಇಷ್ಟ. ಮನೆಯಲ್ಲಿ ತಯಾರಿಸಿದ ಆಹಾರಗಳನ್ನು ಪ್ರೀತಿಸುತ್ತಾಳೆ. ದಿನನಿತ್ಯ ಇಂತಹದ್ದೇ ಎಂಬ ಪಥ್ಯ ಮಾಡುವುದಿಲ್ಲವಂತೆ!

ಹೆಚ್ಚು ಕ್ಯಾಲೋರಿಯುಕ್ತ, ಎಣ್ಣೆಯಂಶ ಹೆಚ್ಚಿರುವ ಆಹಾರಗಳನ್ನು ಹೊರತು ಪಡಿಸಿ ಹೆಚ್ಚಿನ ಆಹಾರ ಸೇವಿಸುತ್ತಾರೆ. ಚಪಾತಿ, ತಾಜಾ ತರಕಾರಿ, ಸೂಪ್, ಸಲಾಡ್, ಸ್ವಲ್ಪ ಅನ್ನ, ದಾಲ್ ಮತ್ತು ಹಣ್ಣುಹಂಪಲುಗಳನ್ನು ನಿತ್ಯ ತಿನ್ನುತ್ತಾರೆ. ಪಾನೀಯ ಮತ್ತು ನೀರು ಹೆಚ್ಚು ಕುಡಿಯುತ್ತಾರಂತೆ ಚರ್ಮದ ತ್ವಚೆ ಉಳಿಸಿಕೊಳ್ಳಲು ನಿತ್ಯ ಹತ್ತು ಗ್ಲಾಸ್ ನೀರು ಕುಡಿಯುತ್ತಾರಂತೆ ಪ್ರಿಯಾಂಕ ಛೋಪ್ರಾ.

ವಾರಾಂತ್ಯಗಳಲ್ಲಿ ಚಾಕೋಲೆಟ್, ಕೇಕ್ ಮತ್ತು ತಂದೂರಿಗಳನ್ನು ತಿನ್ನುತ್ತಾರೆ. ವಾರಕ್ಕೊಮ್ಮೆ ತಿನ್ನುವ ಆಹಾರಗಳಲ್ಲಿ ಕ್ಯಾಲೋರಿ ಹೆಚ್ಚಿದ್ದರೂ ಡೋಂಟ್ ಕೇರ್ ಮಾಡದೇ ತಿನ್ನುತ್ತಾರಂತೆ ನಮ್ಮ ಮಾಜಿ ವಿಶ್ವಸುಂದರಿ.

English summary

Priyanka Chopra | Diet and Fitness Routine | ಪ್ರಿಯಾಂಕ ಛೋಪ್ರಾ | ಡಯೆಟ್ ಮತ್ತು ಫಿಟ್ ನೆಸ್ ಜೀವನ ಕ್ರಮ

“I am not a gym freak but I do work out regularly to keep my body well-toned” says Former Miss World and Bollywood actress Priyanka Chopra. Her idea to stay healthy and not too lean makes her maintain her perfect figure as celebrities diet is basically stressed on achieving size zero!
Story first published: Saturday, August 13, 2011, 12:04 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X