For Quick Alerts
ALLOW NOTIFICATIONS  
For Daily Alerts

ಸೂರ್ಯ ನಮಸ್ಕಾರದ 12 ಭಂಗಿಗಳು: ಪ್ರತಿಯೊಂದು ಭಂಗಿಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನಗಳು

|

ಸೂರ್ಯನಿಲ್ಲದ ಬದುಕು ಸಾಧ್ಯವೇ ಇಲ್ಲ, ಈ ಭೂಮಿಯ ಮೇಲೆ ಬದುಕುವ ಪ್ರತಿಯೊಂದು ಜೀವ ರಾಶಿಗೂ ಸೂರ್ಯನ ಬೆಳಕು ಅತ್ಯವಶ್ಯಕ. ಸೂರ್ಯನಿಗೆ ಅರ್ಘ್ಯ ಅರ್ಪಿಸಿ ಅವನನ್ನು ಆರಾಧಿಸುವ ಸಂಪ್ರದಾಯ ನಮ್ಮಲ್ಲಿದೆ. ಈ ಸಂಪ್ರದಾಯದ ಹಿಂದೆ ವೈಜ್ಞಾನಿಕ ಸತ್ಯ ಕೂಡ ಇದೆ. ಏಕೆಂದರೆ ಕಾಯಿಲೆಗಳನ್ನು ಗುಣಪಡಿಸುವ ನಮ್ಮಲ್ಲಿರುವ ಜಡತ್ವ ಹೋಗಲಾಡಿಸುವ ಶಕ್ತಿ ಸೂರ್ಯನ ಕಿರಣದಲ್ಲಿದೆ, ನಮ್ಮ ದೇಹಕ್ಕೆ ಅಗ್ಯತವಾದ ವಿಟಮಿನ್‌ ಡಿ ಕೂಡ ನಮಗೆ ಸಿಗುವುದು ಸೂರ್ಯನಿಂದಲೇ....

ಯೋಗದಲ್ಲಿ ಸೂರ್ಯನಿಗೆ ನಮಸ್ಕಾರ ಮಾಡಲು ಒಂದು ರೀತಿಯಿದೆ. ಅದಕ್ಕೆ ಸೂರ್ಯ ನಮಸ್ಕಾರ ಎಂದು ಕರೆಯಲಾಗುವುದು, ಇದರಲ್ಲಿ 12 ಭಂಗಿಗಳಿವೆ, ಒಂದೊಂದು ಭಂಗಿಯಿಂದಲೂ ಅನೇಕ ಆರೋಗ್ಯಕರ ಪ್ರಯೋಜನಗಳಿವೆ, ಸೂರ್ಯ ನಮಸ್ಕಾರದ 12 ಭಂಗಿಗಳು ಹಾಗೂ ಅದರ ಪ್ರತಿಯೊಂದು ಭಂಗಿಯ ಪ್ರಯೋಜನಗಳ ಬಗ್ಗೆ ತಿಳಿಯೋಣ:

ಸೂರ್ಯ ನಮಸ್ಕಾರದ ಪ್ರಯೋಜನಗಳು

ಸೂರ್ಯ ನಮಸ್ಕಾರದ ಪ್ರಯೋಜನಗಳು

ಸೂರ್ಯ ನಮಸ್ಕಾರದ ಭಂಗಿಗಳಿಂದ ದೇಹದ ಪ್ರತಿಯೊಂದು ಭಾಗಗಳಿಗೂ ಪ್ರಯೋಜನವಿದೆ, ಇದನ್ನು ಅಭ್ಯಾಸ ಮಾಡುವುದರಿಂದ ಹೃದಯ, ಕರುಳು, ಹೊಟ್ಟೆ, ಲಿವರ್‌, ಗಂಟಲು, ಎದೆ ಭಾಗ, ಸ್ನಾಯುಗಳಿಗೆ ಹೀಗೆ ದೇಹದ ಎಲ್ಲಾ ಭಾಗಕ್ಕೆ ಇದರಿಂದ ಪ್ರಯೋಜನಗಳಿವೆ.

* ಸ್ನಾಯುಗಳನ್ನು ಬಲಪಡಿಸುತ್ತೆ

* ದೇಹದ ಮೇಲ್ಭಾಗ ಹಾಗೂ ಕೆಳ ಭಾಗದ ಸ್ನಾಯುಗಳು ಬಲವಾಗುತ್ತೆ

* ಹೃದಯದ ಆರೋಗ್ಯಕ್ಕೆ ಒಳ್ಳೆಯದು

* ನರಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು

* ಪುರುಷ ಹಾಗೂ ಮಹಿಳೆಯ ದೇಹದ ಪ್ಲೆಕ್ಸಿಬಿಲಿಟಿ ಹೆಚ್ಚಿಸುತ್ತೆ

* ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ

* ದೇಹವನ್ನು ಬಲ ಪಡಿಸುತ್ತೆ, ಒಟ್ಟು ಮೊತ್ತದ ಆರೋಗ್ಯಕ್ಕೆ ಒಳ್ಳೆಯದು.

* ಸೂರ್ಯ ನಮಸ್ಕಾರದಿಂದ ದೇಹ ಫಿಟ್‌ ಆಗಿರುತ್ತೆ

* ಮನಸ್ಸಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

 ಸೂರ್ಯ ನಮಸ್ಕಾರದ 12 ಭಂಗಿಗಳು

ಸೂರ್ಯ ನಮಸ್ಕಾರದ 12 ಭಂಗಿಗಳು

1. ಪ್ರಾಣಾಸನ

ವಿಶ್ರಾಂತಿಯ ಭಂಗಿಯಲ್ಲಿ ನಿಂತುಕೊಳ್ಳಿ, ನಂತರ ದೀರ್ಘವಾದ ಉಸಿರನ್ನು ತೆಗೆದುಕೊಂಡು ಕೈಗೊಳ್ಳನ್ನು ಜೋಡಿಸಿ ನಮಸ್ಕಾರ ಮಾಡಿ.

ಪ್ರಯೋಜನಗಳು: ಈ ಭಂಗಿಯಿಂದ ಎಲ್ಲಾ ನರಗಳು ರಿಲ್ಯಾಕ್ಸ್ ಆಗುತ್ತೆ ಜೊತೆಗೆ ನಮ್ಮಲ್ಲಿರುವ ಒತ್ತಡ, ಆತಂಕ ಎಲ್ಲಾ ದೂರಾಗುವುದು.

2. ಹಸ್ತ ಉತ್ತಾನಾಸನ

2. ಹಸ್ತ ಉತ್ತಾನಾಸನ

ಪಾದಗಳು ಮ್ಯಾಟ್‌ಗೆ ತಾಗುವಂತೆ ಇರಬೇಕು, ದೀರ್ಘ ಉಸಿರು ತೆಗೆದುಕೊಂಡು ಎರಡೂ ಕೈಗಳನ್ನುಮೇಲಕ್ಕೆ ಎತ್ತಿ ಹಿಂದೆಕ್ಕೆ ಭಾಗಿ ನಿಧಾನಕ್ಕೆ ಉಸಿರು ಬಿಡಬೇಕು.

ಪ್ರಯೋಜನ: ಕಿಬ್ಬೊಟ್ಟೆಯ ಸ್ನಾಯುಗಳ ಮೇಲೆ ಒತ್ತಡ ಹಾಕಿ ಆ ಸ್ನಾಯುಗಳನ್ನು ಬಲ ಒಡಿಸುತ್ತೆ. ಇದರಿಂದ ಬೆನ್ನಿಗೆ ಒಳ್ಲೆಯದು, ಜೀರ್ಣಕ್ರಿಯೆಗೆ ಸಹಕಾರಿ.

3. ಹಸ್ತ ಪಾದಾಸನ

3. ಹಸ್ತ ಪಾದಾಸನ

ಹಸ್ತ ಉತ್ತಾಸನದಲ್ಲಿ ಕೈಗಳನ್ನು ಎತ್ತಿ ಹಿಂದೆಕ್ಕೆ ಭಾಗಿರುತ್ತೇವೆ ಅಲ್ವಾ? ಈಗ ಕೈಗಳನ್ನು ಮುಂದೆಕ್ಕೆ ಚಾಚಿ ನಿಧಾನಕ್ಕೆ ಭಾಗಿ ಪಾದಗಳನ್ನು ಮುಟ್ಟಬೇಕು. ಈ ಆಸನ ಮಾಡುವಾಗ ಮಂಡಿಗಳನ್ನು ಮಡಚಬೇಡಿ.

ಪ್ರಯೋಜನಗಳು: ಕಾಲುಗಳ ಸ್ನಾಯುಗಳನ್ನು ಬಲ ಪಡಿಸುತ್ತೆ, ನಿದ್ರಾ ಹೀನತೆ ಹೋಗಲಾಡಿಸುತ್ತೆ, ಸಂಧಿವಾತ, ತಲೆನೋವು, ಮಾನಸಿಕ ಒತ್ತಡ ಈ ಸಮಸ್ಯೆಗಳನ್ನು ತಡೆಗಟ್ಟುತ್ತೆ.

4. ಅಶ್ವ ಸಂಚಲನಾಸನ

4. ಅಶ್ವ ಸಂಚಲನಾಸನ

ಈಗ ಹಸ್ತ ಪಾದಾಸನದಿಂದ ಒಂದು ಕಾಲನ್ನು(ಎಡ ಅಥವಾ ಬಲಗಾಲು) ಹಿಂದೆಕ್ಕೆ ಚಾಚಿ ಓಡಲು ಬಳಸುವ ಭಂಗಿ ಇದೆಯಲ್ಲಾ ಆ ರೀತಿ, ನೋಟ ನೇರವಾಗಿರಲಿ, ಎರಡೂ ಕೈಗಳು ಮ್ಯಾಟ್‌ಗೆ ತಾಗುವಂತೆ ಇರಲಿ.

ಪ್ರಯೋಜನಗಳು: ಬೆನ್ನು ಮೂಳೆಯ ಆರೋಗ್ಯಕ್ಕೆ ಒಳ್ಳೆಯದು, ಇದರಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುವುದು, ಅಜೀರ್ಣ, ಮಲಬದ್ಧತೆ ಈ ಬಗೆಯ ಸಮಸ್ಯೆ ತಡೆಗಟ್ಟುತ್ತೆ.

5. ಚದುರಂಗ ದಂಡಾಸ ಅಥವಾ ಪ್ಲ್ಯಾಂಕ್‌ ಪೋಸ್‌

5. ಚದುರಂಗ ದಂಡಾಸ ಅಥವಾ ಪ್ಲ್ಯಾಂಕ್‌ ಪೋಸ್‌

ಅಶ್ವ ಸಂಚಲನಾಸನದಿಂದ ಈ ಆಸನಕ್ಕೆ ಬರಲು ಮತ್ತೊಂದು ಕಾಲುಗಳನ್ನು ಕೂಡ ಹಿಂದೆಕ್ಕೆ ತನ್ನಿ, ದೇಹವನ್ನು ಮೇಲಕ್ಕೆ ತ್ತಿ, ಕೈಗಳು ಮ್ಯಾಟ್‌ಗೆ ತಾಗುವಂತೆ ಇರಲಿ.

ಪ್ರಯೊಜನಗಳು:ಇದು ಮನಸ್ಸನ್ನು ಶಾಂತವಾಗಿಡುತ್ತೆ, ಕೈಗಳು, ಎದೆ, ಭುಜ, ಮೂಳೆಯ ಆರೋಗ್ಯಕ್ಕೆ ಒಳ್ಳೆಯದು, ಪ್ರಾರಂಭದಲ್ಲಿ ಈ ಭಂಗಿ ಕಷ್ಟವಾದರೂ ನಂತರ ಅಭ್ಯಾಸದಿಂದ ಸಾಧ್ಯವಾಗುವುದು.

6. ಅಷ್ಟಾಂಗ ನಮಸ್ಕಾರ

6. ಅಷ್ಟಾಂಗ ನಮಸ್ಕಾರ

ದೇಹದ ಎಂಟು ಭಾಗಗಳು ಮ್ಯಾಟ್‌ಗೆ ತಾಗುವಂತಿರುವ ಭಂಗಿ ಇದೆ. ಇದರಲ್ಲಿ ಪಾದಗಳು, ಮಂಡಿ,ಎದೆ, ಗಲ್ಲ, ಕೈಗಳು ಮ್ಯಾಟ್‌ಗೆ ಮುಟ್ಟಬೇಕು, ಹೊಟ್ಟೆಯನ್ನು ಮೇಲಕ್ಕೆ ಎತ್ತಿರಬೇಕು.

ಪ್ರಯೋಜನಗಳು: ಇದು ದೇಹದ ಫ್ಲಕ್ಸಿಬಿಲಿಟಿ (ಸಡಿಲತೆ) ಹೆಚ್ಚಿಸುವುದು ಹಾಗೂ ಬೆನ್ನು ಮೂಳೆಯ ಆರೋಗ್ಯಕ್ಕೆ ಒಳ್ಳೆಯದು. ಕಾಲುಗಳು ಹಾಗೂ ಕೈಗಳ ಸ್ನಾಯುಗಳನ್ನು ಬಲ ಪಡಿಸುತ್ತೆ.

7. ಭುಜಾಂಗಾಸನ

7. ಭುಜಾಂಗಾಸನ

ಹಾವು ಎಡೆ ಎತ್ತಿ ನಿಲ್ಲುವ ಭಂಗಿ ಇದೆಯಲ್ಲಾ ಇದು ಕೂಡ ಅದೇ ರೀತಿಯ ಭಂಗಿಯಾಗಿದೆ. ನೀವು ಅಷ್ಟಾಂಗ ನಮಸ್ಕಾರ ಮಾಡಿದ ಬಳಿಕ ಭುಜಾಂಗಸನ ಭಂಗಿ ಮಾಡಬೇಕು. ಇದರಲ್ಲಿ ಪಾದಗಳು, ಮಂಡಿಗಳು ಮ್ಯಾಟ್‌ಗೆ ತಾಗುವಂತೆ ಇರುತ್ತದೆ ಉಳಿದ ಭಾಗವನ್ನು ಮೇಲಕ್ಕೆ ಎತ್ತಿ, ನೋಟ ನೇರವಾಗಿರಲಿ.

ಪ್ರಯೋಜನಗಳು:ಇದರಿಂದ ಭುಜ, ಬೆನ್ನು, ಎದೆ ಭಾಗ, ಬೆನ್ನು ಮೂಳೆಯ ಆರೋಗ್ಯಕ್ಕೆ ಒಳ್ಳೆಯದು, ಮೂಡ್‌ ಕೂಡ ಚೆನ್ನಾಗಿರುತ್ತೆ.

8. ಅಧೋಮುಖ ಶ್ವಾನಾಸನ

8. ಅಧೋಮುಖ ಶ್ವಾನಾಸನ

ಭುಜಾಂಗಾಸನದಿಂದ ಅಧೋಮುಖ ಶ್ನಾನಸಕ್ಕೆ ಮರಳಬೇಕು, ಇದನ್ನು ಪರ್ವತಾಸನ ಎಂದು ಕೂಡ ಕರೆಯಲಾಗುವುದು. ಉಸಿರನ್ನುಎಳೆದು ಶರೀರವನ್ನು ಪರ್ವಾತಾಕಾರದಲ್ಲಿ ಮೇಲಕ್ಕೆ ಎತ್ತಿ, ಕೈಗಳು, ಕಾಲುಗಳು ಮ್ಯಾಟ್‌ಗೆ ತಾಗುವಂತೆ ಇರಬೇಕು.ನೀವು ಭಾಗಿ ನಿಮ್ಮ ಹೊಕ್ಕುಳು ನೋಡಿ.

ಪ್ರಯೋಜನಗಳು: ಇದರಿಂದ ರಕ್ತ ಸಂಚಾರ ಹೆಚ್ಚುವುದು, ಮಾನಸಿಕ ಒತ್ತಡ ಕಡಿಮೆಯಾಗುವುದು, ಮೆನೋಪಾಸ್‌ ಸಮಯದಲ್ಲಿ ತುಂಬಾ ಒಳ್ಳೆಯದು.

9. ಅಶ್ವ ಸಂಚಲನಾಸನ

9. ಅಶ್ವ ಸಂಚಲನಾಸನ

ಮೊದಲು ಮಾಡಿದ ಭಂಗಿಯೇ ಆಗ ಬಲಗಾಲು ಇಟ್ಟಿದ್ದರೆ ಈಗ ಎಡಗಾಲು ಇಡಿ.

ಪ್ರಯೋಜನಗಳು: ಬೆನ್ನು ಮೂಳೆಯ ಆರೋಗ್ಯಕ್ಕೆ ಒಳ್ಳೆಯದು, ಇದರಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುವುದು, ಅಜೀರ್ಣ, ಮಲಬದ್ಧತೆ ಈ ಬಗೆಯ ಸಮಸ್ಯೆ ತಡೆಗಟ್ಟುತ್ತೆ.

10. ಹಸ್ತ ಪಾದಾಸನ

10. ಹಸ್ತ ಪಾದಾಸನ

ಹಸ್ತ ಉತ್ತಾಸನದಲ್ಲಿ ಕೈಗಳನ್ನು ಎತ್ತಿ ಹಿಂದೆಕ್ಕೆ ಭಾಗಿರುತ್ತೇವೆ ಅಲ್ವಾ? ಈಗ ಕೈಗಳನ್ನು ಮುಂದೆಕ್ಕೆ ಚಾಚಿ ನಿಧಾನಕ್ಕೆ ಭಾಗಿ ಪಾದಗಳನ್ನು ಮುಟ್ಟಬೇಕು. ಈ ಆಸನ ಮಾಡುವಾಗ ಮಂಡಿಗಳನ್ನು ಮಡಚಬೇಡಿ.

ಪ್ರಯೋಜನಗಳು: ಕಾಲುಗಳ ಸ್ನಾಯುಗಳನ್ನು ಬಲ ಪಡಿಸುತ್ತೆ, ನಿದ್ರಾ ಹೀನತೆ ಹೋಗಲಾಡಿಸುತ್ತೆ, ಸಂಧಿವಾತ, ತಲೆನೋವು, ಮಾನಸಿಕ ಒತ್ತಡ ಈ ಸಮಸ್ಯೆಗಳನ್ನು ತಡೆಗಟ್ಟುತ್ತೆ.

11. ಹಸ್ತ ಉತ್ತಾನಾಸನ

11. ಹಸ್ತ ಉತ್ತಾನಾಸನ

ಪಾದಗಳು ಮ್ಯಾಟ್‌ಗೆ ತಾಗುವಂತೆ ಇರಬೇಕು, ದೀರ್ಘ ಉಸಿರು ತೆಗೆದುಕೊಂಡು ಎರಡೂ ಕೈಗಳನ್ನುಮೇಲಕ್ಕೆ ಎತ್ತಿ ಹಿಂದೆಕ್ಕೆ ಭಾಗಿ ನಿಧಾನಕ್ಕೆ ಉಸಿರು ಬಿಡಬೇಕು.

12. ನಮಸ್ಕಾರ

12. ನಮಸ್ಕಾರ

ನಮಸ್ಕಾರ ಮುದ್ರೆ ಮಾಡಿದರೆ ನರಗಳೆಲ್ಲಾ ರಿಲ್ಯಾಕ್ಸ್ ಆಗುವುದು.

English summary

12 Poses of Surya Namaskar and there health benefits in kannada

12 Poses of Surya Namaskar and there health benefits in kannada, read on...
X
Desktop Bottom Promotion