Just In
Don't Miss
- News
ಲಿಂಗಾಯತರು ಸಿಎಂ ಆಗಿದ್ದು ಜನಸಂಖ್ಯೆ ಹೆಚ್ಚಿದೆ ಅಂತಲ್ಲ, ಮನೋಭಾವದಿಂದ: ಶಂಕರ ಬಿದರಿ
- Finance
ಸತತ 4ನೇ ದಿನ ಕುಸಿದ ಪೆಟ್ರೋಲ್ ದರ
- Sports
ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ
- Technology
ಲಿಂಕ್ಸ್ ಗಳನ್ನು ಕ್ಯೂಆರ್ ಕೋಡ್ ಬಳಸಿ ಹಂಚಿಕೊಳ್ಳುವುದು ಹೇಗೆ?
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Movies
ಜಯಲಲಿತಾ ಸಿನಿಮಾ ಬಳಿಕ ಮತ್ತೊಬ್ಬ ಸಿಎಂ ಬಯೋಪಿಕ್ ಸಾಧ್ಯತೆ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ವಿಶ್ವ ಮಧುಮೇಹ ದಿನ 2019; ಮಧುಮೇಹ ನಿಯಂತ್ರಣಕ್ಕೆ ಸರ್ಕಾರ ತಂದ ಆ್ಯಪ್ ಇದು
ಮಧುಮೇಹ ಎನ್ನುವುದು ಸದ್ದಿಲ್ಲದೆ ಕೊಲ್ಲುವಂತ ಕಾಯಿಲೆ. ಇದು ಜೀವ ಹಾಗೂ ಜೀವನ ಎರಡನ್ನೂ ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಮಧುಮೇಹವು ಇಂದು ವಿಶ್ವದಾದ್ಯಂತ ಜನರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಕಾಯಿಲೆಯಾಗಿದೆ. ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮಧುಮೇಹ ದಿನವನ್ನು ವಿಶ್ವದ 160 ದೇಶಗಳಲ್ಲಿ ಆಚರಣೆ ಮಾಡಲಾಗುತ್ತದೆ. ಮಧುಮೇಹದ ಬಗ್ಗೆ ಇಲ್ಲಿ ವಿಶ್ವದ ಗಮನ ಸೆಳೆಯುವುದು ಇದರ ಪ್ರಮುಖ ಉದ್ದೇಶವಾಗಿದೆ. ಅದೇ ರೀತಿಯಾಗಿ ಸಾರ್ವಜನಿಕ ಹಾಗೂ ರಾಜಕೀಯವಾಗಿಯೂ ಇದರ ಬಗ್ಗೆ ಗಮನಿಸುವಂತೆ ಆಗಬೇಕು ಎನ್ನುವುದೇ ವಿಶ್ವ ಮಧುಮೇಹ ದಿನದ ಉದ್ದೇಶ.
ಪ್ರತೀ ವರ್ಷ ನವಂಬರ್ 14ರಂದು "ವಿಶ್ವ ಮಧುಮೇಹ ದಿನ'' ಆಚರಣೆ ಮಾಡುವರು. 1922ರಲ್ಲಿ ಚಾರ್ಲ್ಸ್ ಬೆಸ್ಟ್ ಜತೆಗೆ ಸೇರಿಸಿಕೊಂಡು ಇನ್ಸುಲಿನ್ ಕಂಡು ಹಿಡಿದ ಸರ್ ಫ್ರೆಡೆರಿಕ್ ಬ್ಯಾಂಟಿಂಗ್ ಅವರ ಜನ್ಮ ದಿನಾಚರಣೆಯನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ.
1991ರಲ್ಲಿ ಐಡಿಎಫ್ (ಇಂಟರ್ ನ್ಯಾಷನಲ್ ಡಯಾಬಿಟಿಕ್ ಫೆಡರೇಷನ್) ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಮಧುಮೇಹ ದಿನವನ್ನು ಆರಂಭಿಸಿತು. ಮಧುಮೇಹದಿಂದಾಗಿ ಕಾಣಿಸಿಕೊಳ್ಳುವ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ಮೂಡಿಸುವುದೇ ಈ ದಿನಾಚರಣೆಯ ಉದ್ದೇಶವಾಗಿದೆ. 2006ರಲ್ಲಿ ವಿಶ್ವಸಂಸ್ಥೆ ಕೂಡ ವಿಶ್ವ ಮಧುಮೇಹ ದಿನವನ್ನು ಅಧಿಕೃತವಾಗಿ ಆಚರಿಸಲು ನಿರ್ಧರಿಸಿತು.

ವಿಶ್ವ ಮಧುಮೇಹ ದಿನ ಅಭಿಯಾನದ ಉದ್ದೇಶ
ಐಡಿಎಫ್ ನ ಧೇಯ್ಯೋದ್ದೇಶಗಳಿಗೆ ಇದು ಒಂದು ವೇದಿಕೆಯಾಗಿದೆ. ವಿಶ್ವಮಟ್ಟದಲ್ಲಿ ಗಂಭೀರ ಆರೋಗ್ಯ ಸಮಸ್ಯೆಯಾಗಿರುವಂತಹ ಮಧುಮೇಹವನ್ನು ಎದುರಿಸಲು ಸೂಕ್ತ ರೀತಿಯ ಕ್ರಮ ತೆಗೆದುಕೊಳ್ಳಲು ಸಹಕಾರದ ಪ್ರಾಮುಖ್ಯತೆಯನ್ನು ಇಲ್ಲಿ ಹೇಳಲಾಗಿದೆ. ಮಧುಮೇಹದ ಬಗ್ಗೆ ವಿಶ್ವಸಂಸ್ಥೆಯಲ್ಲಿ ನಿರ್ಣಯ ಕೈಗೊಂಡ ಬಳಿಕ ನೀಲಿ ವೃತ್ತದ ಲೋಗೊವನ್ನು ಈ ದಿನವನ್ನು ಪ್ರತಿನಿಧಿಸುವ ಸಲುವಾಗಿ ಬಳಸಿಕೊಳ್ಳಲಾಗುತ್ತಿದೆ. ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲು ಈ ನೀಲಿ ವೃತ್ತವು ವಿಶ್ವಮಟ್ಟದ ಸಂಕೇತವಾಗಿದೆ. ಇದು ಮಧುಮೇಹದ ವಿರುದ್ಧವಾಗಿ ಜಗತ್ತಿನಾದ್ಯಂತ ಇರು ಮಧುಮೇಹಿಗಳ ಏಕತೆಯನ್ನು ಪ್ರದರ್ಶಿಸುತ್ತದೆ.
ಪ್ರತೀ ವರ್ಷ ವಿಶ್ವ ಮಧುಮೇಹ ದಿನಕ್ಕಾಗಿ ಒಂದು ಹೊಸ ಥೀಮ್(ಧ್ಯೇಯ) ಅಳವಡಿಸಿಕೊಳ್ಳಲಾಗುತ್ತದೆ.

ಮಧುಮೇಹ ದಿನದ ಧ್ಯೇಯ
2019ರ ಮಧುಮೇಹ ದಿನ ಹಾಗೂ ತಿಂಗಳಿನ ಪ್ರಮುಖ ಧ್ಯೇಯ ಎಂದರೆ ``ಕುಟುಂಬ ಮತ್ತು ಮಧುಮೇಹ''.
ವಿಶ್ವದಾದ್ಯಂತ ಸುಮಾರು 425 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಇದರಲ್ಲಿ ಹೆಚ್ಚಿನವರು ಟೈಪ್ 2 ಮಧುಮೇಹಿಗಳಾಗಿರುವರು. ಈ ರೀತಿಯ ಮಧುಮೇಹವನ್ನು ದೈಹಿಕ ಚಟುವಟಿಕೆ, ಆರೋಗ್ಯಕಾರಿ ಮತ್ತು ಸಮತೋಲಿತ ಆಹಾರ ಕ್ರಮ ಮತ್ತು ಆರೋಗ್ಯಕರ ಜೀವನ ವಾತಾವರಣದಿಂದಾಗಿ ನಿಯಂತ್ರಣದಲ್ಲಿ ಇಡಬಹುದು.
ಟೈಪ್ 2 ಮಧುಮೇಹಿಗಳ ಕಾಳಜಿ ಹಾಗೂ ಅದನ್ನು ನಿಯಂತ್ರಣದಲ್ಲಿ ಇಡುವಲ್ಲಿ ಕುಟುಂಬದವರ ಪಾತ್ರವು ಅತೀ ಮಹತ್ವದ್ದಾಗಿರುವುದು. ಶಿಕ್ಷಣ, ಸಂಪನ್ಮೂಲ ಮತ್ತು ವಾತಾವರಣ ಪೂರೈಸಿದರೆ ಆಗ ಆರೋಗ್ಯಕಾರಿ ಜೀವನಶೈಲಿ ಅಳವಡಿಸಬಹುದು.

ಮಧುಮೇಹ ತಡೆ ಮತ್ತು ನಿಯಂತ್ರಣಕ್ಕೆ ರಾಷ್ಟ್ರೀಯ ಕಾರ್ಯಕ್ರಮಗಳು
ಹೃದಯರಕ್ತನಾಳದ ಕಾಯಿಲೆ ಮತ್ತು ಪಾರ್ಶ್ವವಾಯು(ಎನ್ಪಿಸಿಡಿಸಿಎಸ್) ನ್ನು ಎಂಒಎಚ್ ಎಫ್ಡಬ್ಲ್ಯೂ 2010ರಲ್ಲಿ ಆರಂಭಿಸಿದೆ. ಪ್ರಮುಖ ಎನ್ಸಿಡಿಯನ್ನು ನಿಯಂತ್ರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಕಾರ್ಯಕ್ರಮದ ಪ್ರಮುಖ ಧ್ಯೇಯವೆಂದರೆ ಆರೋಗ್ಯದ ವೃದ್ಧಿ, ಆರಂಭದಲ್ಲೇ ಪತ್ತೆ ಹಚ್ಚುವಿಕೆ, ನಿರ್ವಹಣೆ ಮತ್ತು ಪ್ರಕರಣಗಳ ಉಲ್ಲೇಖದೊಂದಿಗೆ ಮೂಲಭೂತ ಸೌಕರ್ಯಗಳನ್ನು ಬಲಪಡಿಸುವುದು.
2017ರಲ್ಲಿ ಎನ್ಎಚ್ಎಂನ ಪ್ರಾಥಮಿಕ ಆರೋಗ್ಯದಡಿಯಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಸಾಮಾನ್ಯ ಕ್ಯಾನ್ಸರ್ಗಳಾದ (ಬಾಯಿ, ಸ್ತನ ಮತ್ತು ಗರ್ಭಕಂಠ) ಬಗ್ಗೆ ಜನಸಂಖ್ಯೆ ಆಧಾರಿತ ಸ್ಕ್ರೀನಿಂಗ್ ಕೂಡ ಆರಂಭವಾಗಿದೆ.

ಮಧುಮೇಹದ ಮೊಬೈಲ್ ಆಪ್
ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(ಎಂಒಎಚ್ ಎಫ್ ಡಬ್ಲ್ಯೂ), ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಕಚೇರಿ ಜತೆಗೆ ಸೇರಿಕೊಂಡು ಮಧುಮೇಹ ತಡೆ ಹಾಗೂ ಅದನ್ನು ನಿಯಂತ್ರಣದಲ್ಲಿ ಇಡುವ ಸಲುವಾಗಿ mDiabetes ಎನ್ನುವ ಮೊಬೈಲ್ ಆಪ್ ನ್ನು ಜಾರಿ ಮಾಡಿದೆ. ಮಧುಮೇಹ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ/ನೋಂದಣಿಗಾಗಿ 011-22901701ಗೆ ಮಿಸ್ ಕಾಲ್ ಕೊಡಬಹುದು ಅಥವಾ http://mdiabetes.nhp.gov.in/ ಗೆ ಲಾಗಿನ್ ಆಗಬಹುದು.