For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳಿಗೆ ಕಪ್ಪಕ್ಕಿ ಅನ್ನ ಒಳ್ಳೆಯದು, ಏಕೆ? ಇತರರು ಇದನ್ನು ತಿಂದರೆ ಟೂಪ್ 2 ಮಧುಮೇಹ ತಡೆಗಟ್ಟಬಹುದೇ?

|

ಮಧುಮೇಹಿಗಳು ಆಹಾರಕ್ರಮದ ಕಡೆ ತುಂಬಾನೇ ಜಾಗ್ರತೆವಹಿಸಬೇಕಾಗುತ್ತದೆ. ತಿನ್ನುವ ಆಹಾರದಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೆ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗಿ ತೊಂದರೆ ಉಂಟಾಗುವುದು. ಸಾಮಾನ್ಯವಾಗಿ ಮಧುಮೇಹಿಗಳು ಅನ್ನ ತಿನ್ನುವುದು ಒಳ್ಳೆಯದಲ್ಲ ಎಂದು ಹೇಳುವುದನ್ನು ನೀವು ಕೇಳಿರಬಹುದು, ಆದರೆ ಅದು ತಪ್ಪು ಕಲ್ಪನೆ, ಮಧುಮೇಹಗಳು ಅನ್ನವನ್ನು ತಿನ್ನಬಹುದು, ಆದರೆ ತಮಗೆ ಸೂಕ್ತವಾದ ಅಕ್ಕಿಯಿಂದ ಅನ್ನ ಮಾಡಿ ತಿನ್ನಬೇಕು.

diabetes diet

ಮಧುಮೇಹಿಗಳಿಗೆ ಯಾವ ಅಕ್ಕಿ ಒಳ್ಳೆಯದು, ಏಕೆ ಒಳ್ಳೆಯದು ಎಂಬೆಲ್ಲಾ ಅಂಶಗಳನ್ನು ತಿಳಿಯೋಣ:

ಮಧುಮೇಹಿಗಳಿಗೆ ಯಾವ ಬಗೆಯ ಅಕ್ಕಿ ಒಳ್ಳೆಯದು?

ಮಧುಮೇಹಿಗಳಿಗೆ ಯಾವ ಬಗೆಯ ಅಕ್ಕಿ ಒಳ್ಳೆಯದು?

ಮಧುಮೇಹಿಗಳು ಪಾಲಿಷ್‌ ಮಾಡಿದ ಅಕ್ಕಿಯ ಬದಲಿಗೆ ಪಾಲಿಷ್‌ ಮಾಡದ ಅಕ್ಕಿಯನ್ನು ಬಳಸುವುದು ಒಳ್ಳೆಯದು. ಪಾಲಿಷ್‌ ಮಾಡಿದ ಅಕ್ಕಿಯಿಂದ ಆಹಾರ ಮಾಡಿ ಸೇವಿಸಿದರೆ ದೇಹದಲ್ಲಿ ಸಕ್ಕರೆಯಂಶ ಬೇಗನೆ ಹೆಚ್ಚಾಗುವುದು. ಅದೇ ಕೆಂಪಕ್ಕಿ ಅಥವಾ ಕಪ್ಪಕ್ಕಿಯಿಂದ ಅನ್ನ ಮಾಡಿ ತಿನ್ನುವುದು ತುಂಬಾ ಒಳ್ಳೆಯದು. ಅದರಲ್ಲೂ ಕಪ್ಪಕ್ಕಿ ಅತ್ಯುತ್ತಮವಾದ ಆಯ್ಕೆಯಾಗಿದೆ, ಇದರ ಕುರಿತು ಮತ್ತೊಂದಿಷ್ಟು ವಿವರಗಳನ್ನು ತಿಳಿಯೋಣ..

ಕಪ್ಪಕ್ಕಿ ಏಕೆ ಒಳ್ಳೆಯದು?

ಕಪ್ಪಕ್ಕಿ ಏಕೆ ಒಳ್ಳೆಯದು?

ಕಪ್ಪಕ್ಕಿಯಿಂದ ಅನ್ನ ಮಾಡಿ ತಿಂದರೆ ಬೇಗನೆ ಜೀರ್ಣವಾಗುವುದಿಲ್ಲ, ನಿಧಾನಕ್ಕೆ ಜೀರ್ಣವಾಗುತ್ತದೆ. ಇದರಿಂದ ದೇಹಕ್ಕೆ ಗ್ಲುಕೋಸ್‌ ನಿಧಾನಕ್ಕೆ ಬಿಡುಗಡೆಯಾಗುತ್ತದೆ, ಹಾಗಾಗಿ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ, ಅದೇ ಬಿಳಿ ಅಕ್ಕಿಯಿಂದ ಅನ್ನ ಮಾಡಿ ತಿಂದರೆ ದೇಹದಲ್ಲಿ ಸಕ್ಕರೆ ಸಕ್ಕರೆಯಂಶ ಬೇಗನೆ ಏರಿಕೆಯಾಗುತ್ತದೆ ಆದ್ದರಿಂದ ಬಿಳಿ ಅಕ್ಕಿ ಬದಲಿಗೆ ಕಪ್ಪು ಅಕ್ಕಿ ಬೆಸ್ಟ್.

ಮಧುಮೇಹಿಗಳು ಕಪ್ಪಕ್ಕಿ ತಿನ್ನುವುದರಿಂದ ದೊರೆಯುವ ಪ್ರಯೋಜನಗಳು

ಮಧುಮೇಹಿಗಳು ಕಪ್ಪಕ್ಕಿ ತಿನ್ನುವುದರಿಂದ ದೊರೆಯುವ ಪ್ರಯೋಜನಗಳು

* ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ: ತುಂಬಾ ಜನರಿಗೆ ಅನ್ನ ತಿಂದರೆ ಮಾತ್ರ ಸಮಧಾನ, ಅಂಥವರು ಕಪ್ಪಕ್ಕಿ ಅನ್ನ ತಿಂದರೆ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ.

ತೂಕ ನಿಯಂತ್ರಣಕ್ಕೆ ಸಹಕಾರಿ

ಬಿಳಿ ಅಕ್ಕಿಯಿಂದ ಮಾಡಿದ ಅನ್ನ ತಿಂದರೆ ದಪ್ಪಗಾಗುತ್ತಾರೆ, ಅದೇ ಕಪ್ಪಕ್ಕಿಯಿಂದ ಮಾಡಿದ ಅನ್ನ ತಿಂದರೆ ಮೈ ತೂಕ ಹೆಚ್ಚಾಗುವುದಿಲ್ಲ. ಆರೋಗ್ಯಕರ ಮೈ ತೂಕ ಪಡೆಯಲು ಈ ಕಪ್ಪಕ್ಕಿ ಸಹಕಾರಿಯಾಗಿದೆ.

ಗ್ಲುಟೇನ್ ಫ್ರೀ

ಮಧುಮೇಹಿಗಳು ಗ್ಲುಟೇನ್‌ ಫ್ರೀ ಆಹಾರ ಸೇವಿಸಬೇಕು. ಅದರಲ್ಲಿ ಕಪ್ಪಕ್ಕಿ ನೈಸರ್ಗಿಕವಾಗಿಯೇ ಗ್ಲುಟೇನ್ ಫ್ರೀಯಾದ ಆಹಾರವಾಗಿದೆ.

ಟೈಪ್‌ 2 ಮಧುಮೇಹ ತಡೆಗಟ್ಟಲೂ ಸಹಕಾರಿ

ಟೈಪ್‌ 2 ಮಧುಮೇಹ ತಡೆಗಟ್ಟಲೂ ಸಹಕಾರಿ

ಇತ್ತೀಚಿನ ವರ್ಷಗಳಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಧುಮೇಹವನ್ನು ತಡೆಗಟ್ಟಲು ನಿಮ್ಮ ಆಹಾರಕ್ರಮದಲ್ಲಿ ಕೆಂಪಕ್ಕಿ ಸೇರಿಸುವುದು ಒಳ್ಳೆಯದು.

ಕೆಂಪಕ್ಕಿ ಇತರ ಪ್ರಯೋಜನಗಳು

* ಹೃದಯದ ಆರೋಗ್ಯಕ್ಕೆ ಒಳ್ಳೆಯದು

* ಅತ್ಯಧಿಕ ನಾರಿನಂಶವಿದೆ

* ಗ್ಲುಟೇನ್ ಫ್ರೀ ಆಹಾರ

 ಅಡ್ಡಪರಿಣಾಮವಿದೆಯೇ?

ಅಡ್ಡಪರಿಣಾಮವಿದೆಯೇ?

ಕಪ್ಪಕ್ಕಿಯಿಂದ ಮಾಡಿದ ಅನ್ನ ತಿನ್ನುವುದರಿಂದ ಸಾಮಾನ್ಯವಾಗಿ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ಕೆಲವರಿಗೆ ಹೊಟ್ಟೆ ಉಬ್ಬದಂತೆ, ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಬಹುದು.

English summary

Reasons Why Black Rice Better For Diabetes Than White Rice in Kannada

Diabetes Diet: Why black rice is best for diabetic patient, read on...
Story first published: Monday, September 19, 2022, 9:13 [IST]
X
Desktop Bottom Promotion