For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳು ಮೊಟ್ಟೆಯನ್ನು ಹೇಗೆ ತಿನ್ನುವುದು ಸುರಕ್ಷಿತ?

|

ಮೊಟ್ಟೆ ಅತ್ಯಂತ ಆರೋಗ್ಯಕರ ಆಹಾರಗಳಲ್ಲಿ ಒಂದು ಎಂಬುವುದು ಸಂದೇಹವೇ ಇಲ್ಲ. ಇದನ್ನು ಮಧುಮೇಹಿಗಳು ತಿನ್ನುವುದು ಒಳ್ಳೆಯದು ಎಂದು ಅಮೆರಿಕನ್ ಡಯಾಬಿಟಸ್ ಅಸೋಷಿಯೇಷನ್ ಹೇಳಿದೆ. ಏಕೆಂದರೆ ಒಂದು ಮೊಟ್ಟೆಯಲ್ಲಿ ಅರ್ಧ ಗ್ರಾಂ ಕಾರ್ಬೋಹೈಡ್ರೇಟ್ಸ್ ಇರುವುದರಿಂದ ಇದನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ.

How To Eat Eggs If You Have Diabetes | Boldsky Kannada
How To Eat Egg If You Have Diabetes

ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಕೂಡ ಇರುತ್ತದೆ. ಒಂದು ಮೊಟ್ಟೆಯಲ್ಲಿ 200ಮಿಗ್ರಾಂ ಕೊಲೆಸ್ಟ್ರಾಲ್ ಇರುವುದರಿಂದ ಮೊಟ್ಟೆ ಮಧುಮೇಹಿಗಳಿಗೆ ಒಳ್ಳೆಯದೇ ಎಂಬುವುದರ ಕುರಿತು ಅನೇಕ ಚರ್ಚೆಗಳು ನಡೆದಿವೆ. ಮಧುಮೇಹಿಗಳು ಕೊಲೆಸ್ಟ್ರಾಲ್‌ ನಿಯಂತ್ರಣದಲ್ಲಿಡುವುದು ತುಂಬಾ ಅವಶ್ಯಕ. ಇಲ್ಲದಿದ್ದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.

ದೇಹದ ರಕ್ತದಲ್ಲಿ ಕೊಲೆಸ್ಟ್ರಾಲ್ ಅಧಿಕವಿದ್ದರೆ ಹೃದಯಾಘಾತ ಉಂಟಾಗಬಹುದು. ಆದ್ದರಿಂದ ಮಧುಮೇಹಿಗಳು ಹೃದಯ ಸಂಬಂಧಿ ಸಮಸ್ಯೆಗಳು ಬಾರದಂತೆ ಮುನ್ನೆಚ್ಚರಿಕೆವಹಿಸುವುದು ಹೇಗೆ ಎಂದು ತಿಳಿದಿರುವುದು ಒಳ್ಳೆಯದು.

ಮೊಟ್ಟೆಯ ಪ್ರಯೋಜನಗಳು

ಮೊಟ್ಟೆಯ ಪ್ರಯೋಜನಗಳು

ಒಂದು ಮೊಟ್ಟೆಯಲ್ಲಿ 7 ಗ್ರಾಂ ಪ್ರೊಟೀನ್ ಇರುತ್ತದೆ. ಮೊಟ್ಟೆಯಲ್ಲಿ ಪೊಟಾಷ್ಯಿಯಂ ಇದ್ದು ಇದು ನರ ಹಾಗೂ ಸ್ನಾಯುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪೊಟಾಷ್ಯಿಯಂ ದೇಹದಲ್ಲಿ ಸೋಡಿಯಂ ಪ್ರಮಾಣ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಮೊಟ್ಟೆಯಲ್ಲಿ ಲುಟಿನ್ ಹಾಗೂ ಚೊಲೈನ್ ಅಂಶವಿದ್ದು ಇದು ಕಾಯಿಲೆಗಳ ವಿರುದ್ಧ ಹೋರಾಡುತ್ತದೆ ಹಾಗೂ ಮೆದುಳಿನ ಆರೋಗ್ಯಕ್ಕೂ ಒಳ್ಳೆಯದು. ಮೊಟ್ಟೆಯ ಹಳದಿಯಲ್ಲಿ ಬಯೋಟಿನ್ ಇದ್ದು ಇದು ಕೂದಲು, ತ್ವಚೆ, ಉಗುರಿನ ಆರೋಗ್ಯ, ಹಾಗೂ ಇನ್ಸುಲಿನ್ ಉತ್ಪತ್ತಿಗೆ ಸಹಕಾರಿ.

ಮೊಟ್ಟೆಯಲ್ಲಿರುವ ಒಮೆಗಾ 3 ಕೊಬ್ಬಿನಂಶ ಕೂಡ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಒಂದು ಮೊಟ್ಟೆಯಲ್ಲಿ 75ಕ್ಯಾಲೋರಿ ಹಾಗೂ 5ಗ್ರಾಂ ಕೊಬ್ಬಿನಂಶವಿದ್ದು, ಕೊಬ್ಬು ಬೇಡ ಎನ್ನುವುದಾದರೆ ಬರೀ ಬಿಳಿ ಮಾತ್ರ ಸೇವಿಸಬಹುದು.

ಮಧುಮೇಹಿಗಳು ಹೇಗೆ ಸೇವಿಸಿದರೆ ಒಳ್ಳೆಯದು?

ಮಧುಮೇಹಿಗಳು ಹೇಗೆ ಸೇವಿಸಿದರೆ ಒಳ್ಳೆಯದು?

ದಿನಕ್ಕೆ ಒಂದು ಬೇಯಿಸಿದ ಮೊಟ್ಟೆಯ ಸೇವನೆ ಮಧುಮೇಹಕ್ಕೆ ಉತ್ತಮ ಚಿಕಿತ್ಸೆಯಾಗಿದೆ, ಆದರೆ ಇದರೊಂದಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಇತರ ಆಹಾರಗಳನ್ನು ಸೇವಿಸಬೇಡಿ. ಬೇಯಿಸಿದ ಮೊಟ್ಟೆ ಮೇಲೆ ಸ್ವಲ್ಪ ಪ್ರಮಾಣದ ವಿನೆಗರ್ ಚಿಮುಕಿಸಿ ರಾತ್ರಿ ಇಡೀ ಹಾಗೆಯೆ ಇಟ್ಟು , ಬೆಳಗ್ಗೆ ಒಂದು ಚಮಚ ವಿನೆಗರ್ ಬೆರೆಸಿದ ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. ಈ ರೀತಿ ಮಾಡುವುದರಿಂದ ದೇಹದಲ್ಲಿ ಸಕಕ್ರೆಯಂಶವನ್ನು ನಿಯಂತ್ರಣದಲ್ಲಿಡಬಹುದು.

ಕೊಲೆಸ್ಟ್ರಾಲ್ ನಿಯಂತ್ರಣ ಹೇಗೆ?

ಕೊಲೆಸ್ಟ್ರಾಲ್ ನಿಯಂತ್ರಣ ಹೇಗೆ?

ಕೆಲವರಿಗೆ ತುಂಬಾ ಕೊಲೆಸ್ಟ್ರಾಲ್ ಸಮಸ್ಯೆ ಇರುತ್ತದೆ. ಅಂಥವರು ಮೊಟ್ಟೆ ಸೇವಿಸುವಾಗ ದೇಹದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇಡುವುದರ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಮಧುಮೇಹಿಗಳು ದಿನದಲ್ಲಿ 200 ಮಿಗ್ರಾಂಗಿಂತ ಅಧಿಕ ಕೊಲೆಸ್ಟ್ರಾಲ್ ಸೇವಿಸುವುದು ಒಳ್ಳೆಯದು, ಕೆಲವೊಮ್ಮೆ 300 ಮಿಗ್ರಾಂನಷ್ಟು ಸೇವಿಸಬಹುದು. ಒಂದು ಮೊಟ್ಟೆಯಲ್ಲಿ 186ಮಿಗ್ರಾಂ ಕೊಲೆಸ್ಟ್ರಾಲ್ ಇರುತ್ತದೆ. ಆದ್ದರಿಂದ ಮೊಟ್ಟೆ ತಿಂದ ಮೇಲೆ ಇತರ ಕೊಲೆಸ್ಟ್ರಾಲ್ ಇರುವ ಆಹಾರ ತಿನ್ನಬಾರದು.

ಅಧಿಕ ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುವ ಸಾಧ್ಯತೆ ಇದೆ. ಇಡೀ ಮೊಟ್ಟೆ ಸೇವನೆ ಒಳ್ಳೆಯದು, ಆದರೆ ಕೊಲೆಸ್ಟ್ರಾಲ್ ನಿಯಂತ್ರನದಲ್ಲಿಡಲು ಮೊಟ್ಟೆಯ ಬಿಳಿ ಮಾತ್ರ ಸೇವನೆ ಮಾಡಬಹುದು. ಆದರೆ ವಿಟಮಿನ್ ಎ, ಚೊಲೈನ್, ಒಮೆಗಾ 3, ಕ್ಯಾಲ್ಸಿಯಂ ಇವೆಲ್ಲಾ ಮೊಟ್ಟೆಯ ಹಳದಿಯಲ್ಲಿರುತ್ತದೆ.

ಆದ್ದರಿಂದ ಇಡೀ ಮೊಟ್ಟೆ ಸೇವನೆ ತುಂಬಾ ಆರೋಗ್ಯಕರ.

 ವಾರದಲ್ಲಿ ಎಷ್ಟು ಬಾರಿ ಸೇವಿಸಬಹುದು?

ವಾರದಲ್ಲಿ ಎಷ್ಟು ಬಾರಿ ಸೇವಿಸಬಹುದು?

ಮಧುಮೇಹಿಗಳು ತುಂಬಾ ಮೊಟ್ಟೆ ತಿನ್ನುವುದು ಒಳ್ಳೆಯದಲ್ಲ, ಆದ್ದರಿಂದ ಮೊಟ್ಟೆಯನ್ನು ವಾರದಲ್ಲಿ 2-3 ಬಾರಿಯಷ್ಟೇ ಸೇವಿಸಿ. ನಿಮಗೆ ಕಂಫರ್ಟ್ ಅನಿಸಿದರೆ ಮೊಟ್ಟೆಯ ಬಿಳಿ ಮಾತ್ರ ಕೂಡ ತಿನ್ನಬಹುದು.

ಇನ್ನು ಮೊಟ್ಟೆಯನ್ನು ಆಮ್ಲೇಟ್ ಮಾಡಿ ತಿನ್ನುವುದಕ್ಕಿಂತ ಎಗ್‌ಪೋಚ್‌ ಅಥವಾ ಬೇಯಿಸಿ ತಿನ್ನಿ. ಆಗ ಬೇರೆ ಕೊಬ್ಬಿನಂಶ ಸೇರುವುದಿಲ್ಲ.

ಇನ್ನು ಮಧುಮೇಹಿಗಳು ತಮ್ಮ ಆಹಾರದಲ್ಲಿ ಸ್ವಲ್ಪ ಪ್ರೊಟೀನ್ ಇರುವ ಆಹಾರ ಸೇವಿಸುವುದು ಒಳ್ಳೆಯದು. ಆಹಾರಕ್ರಮದ ಕಡೆ ಸ್ವಲ್ಪ ಗಮನ ನೀಡಿದರೆ ರುಚಿಕರ ಹಾಗೂ ಆರೋಗ್ಯಕರ ಸೇವನೆ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

ಸೂಚನೆ: ಆಹಾರ ಸೇವನೆ ಜೊತೆಗೆ ವ್ಯಾಯಾಮ ಮಾಡಲು ಮರೆಯದಿರಿ.

English summary

How To Eat Egg If You Have Diabetes

The American Diabetes Association considers eggs an excellent choice for people with diabetes. e are tips for diabetes patient to eat egg in a healthy way
X
Desktop Bottom Promotion