For Quick Alerts
ALLOW NOTIFICATIONS  
For Daily Alerts

ಮನೆಮದ್ದು: ಮಧುಮೇಹ, ಕೊಲೆಸ್ಟ್ರಾಲ್‌ ನಿಯಂತ್ರಿಸಲು ಸೀಬೆಕಾಯಿ ಎಲೆಗಳನ್ನು ಹೇಗೆ ಬಳಸಬೇಕು?

|

ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಜನರನ್ನು ಕಾಡುತ್ತಿರುವ ಸಮಸ್ಯೆಯೆಂದರೆ ಮಧುಮೇಹ. ವಿಶ್ವದಲ್ಲಿ ಮಧುಮೇಹಿಗಳ ಸಂಖ್ಯೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. 4-5 ದಶಕಗಳ ಹಿಂದೆ ಭಾರತದಲ್ಲಿ ತುಂಬಾ ಅಪರೂಪವಾಗಿದ್ದ ಮಧುಮೇಹ, ಇದೀಗ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪ್ರತಿಯೊಂದು ಮನೆಯಲ್ಲಿ ಮಧುಮೇಹಿಗಳಿದ್ದಾರೆ. ಬದಲಾಗಿದ ಜೀವನಶೈಲಿ ಹಾಗೂ ಆಹಾರಶೈಲಿ ಮಧುಮೇಹಕ್ಕೆ ಪ್ರಮುಖ ಕಾರಣವಾಗಿದೆ.

Guava leaf benefits

ಮಧುಮೇಹ ಒಮ್ಮೆ ಬಂದರೆ ಅದನ್ನು ನಿಯಂತ್ರಿಸಬಹುದೇ ಹೊರತು ಅದರಿಂದ ಸಂಪೂರ್ಣ ಗುಣಮುಖರಾಗಲು ಸಾಧ್ಯವಿಲ್ಲ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ನಮ್ಮ ಪರಿಸರದಲ್ಲಿರುವ ಅನೇಕ ಸಸ್ಯಗಳು ಸಹಕಾರಿ. ಉದಾಹರಣೆಗೆ ಅಮೃತ ಬಳ್ಳಿ, ಕಹಿಬೇವು , ಸೀಬೆಕಾಯಿ ಎಲೆ ಮುಂತಾದೆವುಗಳು...

ಈ ಲೇಖನದಲ್ಲಿ ಸೀಬೆಕಾಯಿ ಎಲೆ ಮಧುಮೇಹ ಹಾಗೂ ಕೊಲೆಸ್ಟ್ರಾಲ್‌ ನಿಯಂತ್ರಿಸುವಲ್ಲಿ ಹೇಗೆ ಸಹಕಾರಿ, ಇದನ್ನು ಹೇಗೆ ಬಳಸಬೇಕು, ಏನಾದರೂ ಅಡ್ಡಪರಿಣಾಮವಿದೆಯೇ ಎಂಬುವುದನ್ನು ವಿವರವಾಗಿ ಹೇಳಲಾಗಿದೆ ನೋಡಿ:

ಸೀಬೆಕಾಯಿ ಎಲೆ ಮಧುಮೇಹ ನಿಯಂತ್ರಣಕ್ಕೆ ಪರಿಣಾಮಕಾರಿಯೇ?

ಸೀಬೆಕಾಯಿ ಎಲೆ ಮಧುಮೇಹ ನಿಯಂತ್ರಣಕ್ಕೆ ಪರಿಣಾಮಕಾರಿಯೇ?

ಸೀಬೆಕಾಯಿ ಎಲೆಯನ್ನು ಹಲವು ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿ ಹಿಂದಿನಿಂದಲೂ ಬಳಸುತ್ತಾ ಬಂದಿದ್ದಾರೆ. ಜ್ವರ, ಬೇಧಿ, ಉರಿಯೂತ ಇಂಥ ಸಮಸ್ಯೆಗಳಿಗೆ ಇದನ್ನು ಮನೆಮದ್ದಾಗಿ ಬಳಸಲಾಗುವುದು. ಸೀಬೆಕಾಯಿ ಎಲೆಯನ್ನು ಮಧುಮೇಹ ಹಾಗೂ ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೂ ಬಳಸಬಹುದು.

ಮಧುಮೇಹ ನಿಯಂತ್ರಣಕ್ಕೆ ಸೀಬೆಕಾಯಿ ಎಲೆ ಪರಿಣಾಮಕಾರಿ ಎಂಬುವುದು ಅಧ್ಯಯನಗಳಿಂದಲೂ ಸಾಬೀತಾಗಿದೆ. Nutrition and Metabolism ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯು ಸೀಬೆಕಾಯಿ ಎಲೆ ಊಟದ ಬಳಿಕ ದೇಹದ ರಕ್ತದಲ್ಲಿ ಸಕ್ಕರೆಯಂಶ ತಡೆಗಟ್ಟಲು ಸಹಕಾರಿ ಎಂದು ಹೇಳಿದೆ.

ಮಧುಮೇಹಿಗಳಲ್ಲಿ ಈ ಸಮಸ್ಯೆಗಳನ್ನು ತಡೆಗಟ್ಟುತ್ತೆ

ಮಧುಮೇಹಿಗಳಲ್ಲಿ ಈ ಸಮಸ್ಯೆಗಳನ್ನು ತಡೆಗಟ್ಟುತ್ತೆ

ಊಟವಾದ ಬಳಿಕ ಸೀಬೆಕಾಯಿ ಎಲೆ ಹಾಕಿ ಕುದಿಸಿದ ನೀರನ್ನು ಕುಡಿದರೆ ಮಧುಮೇಹಿಗಳಲ್ಲಿ ಕಂಡು ಬರುವ ಹೈಪರ್ಗ್ಲೈಸೀಮಿಯಾ, ಹೈಪರ್ಇನ್ಸುಲಿನೆಮಿಯಾ, ಇನ್ಸುಲಿನ್ ಪ್ರತಿರೋಧ ಹಾಗೂ ಹೈಪರ್ಲಿಪಿಡೆಮಿಯಾ ಲಕ್ಷಣಗಳನ್ನು ತಡೆಗಟ್ಟಲು ಸಹಕಾರಿ. ಇದು ಮಧುಮೇಹವನ್ನು ನಿಯಂತ್ರಿಸುವುದು ಮಾತ್ರವಲ್ಲ ಕೆಟ್ಟ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುವುದು.

ಸೀಬೆಕಾಯಿ ಎಲೆಯ ನೀರು ಕುಡಿಯುವುದರಿಂದ ಏನಾದರೂ ಅಡ್ಡಪರಿಣಾಮವಿದೆಯೇ?

ಸೀಬೆಕಾಯಿ ಎಲೆಯ ನೀರು ಕುಡಿಯುವುದರಿಂದ ಏನಾದರೂ ಅಡ್ಡಪರಿಣಾಮವಿದೆಯೇ?

ಸೀಬೆಕಾಯಿ ಎಲೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂಬುವುದು ಅಧ್ಯಯನಗಳಿಂದಲೂ ಸಾಬೀತಾಗಿದೆ. ಸೀಬೆಕಾಯಿ ಎಲೆಯಲ್ಲಿ ಯಾವುದೇ ವಿಷಾಂಶಗಳಿಲ್ಲ ಎಂಬುವುದು ಸಾಬೀತಾಗಿದೆ.

ಸೀಬೆಕಾಯಿ ಎಲೆಯನ್ನು ಬಳಸುವುದು ಹೇಗೆ?

ಸೀಬೆಕಾಯಿ ಎಲೆಯನ್ನು ಬಳಸುವುದು ಹೇಗೆ?

* ಸ್ವಲ್ಪ ಎಲೆಗಳನ್ನು ಕಿತ್ತು ತಂದು ತೊಳೆದು ಸ್ವಚ್ಛ ಮಾಡಿ.

* ನಂತರ 2 ಕಪ್‌ ನೀರು ಹಾಕಿ ಕುದಿಸಿ.

* ನಂತರ ಸೋಸಿ ಊಟವಾದ ಬಳಿಕ ಕುಡಿಯಿರಿ.

ನೆನಪಿಡಿ: ಈ ಮನೆಮದ್ದು ಕೆಲ ಮಧುಮೇಹಿಗಳಲ್ಲಿ ಯಾವುದೇ ಪರಿಣಾಮ ಬೀರದೇ ಇರಬಹುದು. ನಿಮ್ಮ ಸಕ್ಕರೆಯಂಶ ಎಷ್ಟಿದೆ ಎಂದು ನಿಯಮಿತವಾಗಿ ಪರೀಕ್ಷಿಸಿ ವೈದ್ಯರ ಸಲಹೆ ಸೂಚನೆ ಪಡೆಯಿರಿ.

FAQ's
  • ಸೀಬೆಕಾಯಿ ಎಲೆ ಯಾವುದಕ್ಕೆ ಒಳ್ಳೆಯದು?

    ಸೀಬೆಕಾಯಿ ಎಲೆ ಬೇಧಿ, ಹೊಟ್ಟೆ ನೋವು, ಮಧುಮೇಹ, ಗಾಯ ಒಣಗಲು, ಕೊಲೆಸ್ಟ್ರಾಲ್‌ ನಿಯಂತ್ರಿಸಲು ಅತ್ಯುತ್ತಮವಾದ ಮನೆಮದ್ದಾಗಿದೆ.

  • ಸೀಬೆಕಾಯಿ ಎಲೆಯ ಟೀಯ ಪ್ರಯೋಜನವೇನು?

    ಸೀಬೆಕಾಯಿ ಎಲೆ ಹಾಕಿದ ಟೀ ಕುಡಿಯುವುದರಿಂದ ಬೇಧಿ ನಿಲ್ಲುತ್ತೆ. ಕೆಮ್ಮು, ಕಫ ಕಡಿಮೆಯಾಗುವುದು, ಕೊಲೆಸ್ಟ್ರಾಲ್‌ ನಿಯಂತ್ರಣದಲ್ಲಿರುತ್ತದೆ, ಮಧುಮೇಹ ನಿಯಂತ್ರಣದಲ್ಲಿರುತ್ತದೆ ಅಲ್ಲದೆ ಕ್ಯಾನ್ಸರ್‌ ಕಣಗಳು ಉಂಟಾಗುವುದನ್ನು ತಡೆಯುವುದು.

English summary

Guava Leaf Remedy to Control Diabetes and Blood Cholesterol Level in Kannada

Guava leaf remedy to control diabetes and blood cholesterol level in Kannada, Read on...
X
Desktop Bottom Promotion