For Quick Alerts
ALLOW NOTIFICATIONS  
For Daily Alerts

ಮಧುಮೇಹ ನಿಯಂತ್ರಣಕ್ಕೆ ಅಮೃತಬಳ್ಳಿ: ಸಕ್ಕರೆಯಂಶ ನಿಯಂತ್ರಣಕ್ಕೆ ಹೇಗೆ ಬಳಸಬೇಕು?

|

ಮನೆಯಲ್ಲಿ ಒಂದು ಅಮೃತಬಳ್ಳಿ ಗಿಡವಿದ್ದರೆ ಇದರಿಂದ ಹತ್ತಾರು ರೋಗಗಳನ್ನು ಗುಣ ಪಡಿಸಬಹುದು. ಡೆಂಗ್ಯೂ, ಚಿಕನ್‌ಗುನ್ಯಾ, ಹೆಚ್‌1ಎನ್‌1ನಂಥ ರೋಗಗಳನ್ನು ಗುಣಪಡಿಸುವಲ್ಲಿ ಅಮೃತಬಳ್ಳಿ ಪರಿಣಾಮಕಾರಿಯಾಗಿದೆ. ಇದನ್ನು ಆಯುರ್ವೇದಲ್ಲಿ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುವುದು.

ಮಧುಮೇಹ ನಿಯಂತ್ರಣಕ್ಕೆ ಅಮೃತಬಳ್ಳಿ ಹೇಗೆ ಬಳಸಬೇಕು? | Giloy For Diabetics Boldsky Kannada
Giloy For Diabetics: How To Use To Control Blood Sugar

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಮೃತಬಳ್ಳಿ ಪರಿಣಾಮಕಾರಿಯಾಗಿದ್ದು ಆಯುಷ್ ಇಲಾಖೆ ಕೂಡ ಇದರ ಕಷಾಯ ಮಾಡಿ ಕುಡಿಯುವಂತೆ ಸಲಹೆ ನೀಡಿದೆ. ಮಲೇರಿಯಾ ರೋಗವನ್ನು ತಡೆಗಟ್ಟಲು ಅಶ್ವಗಂಧ, ಅಮೃತಬಳ್ಳಿ, ಯಷ್ಠಿಮಧು ಇದರ ಕಷಾಯ ಪರಿಣಾಮಕಾರಿಯಾಗಿದೆ. ಇನ್ನು ಕೊರೊನಾವೈರಸ್‌ ತಡೆಗಟ್ಟುವಲ್ಲಿ ಇದು ಎಷ್ಟು ಪರಿಣಾಮಕಾರಿ ಎಂಬುವುದರ ಬಗ್ಗೆ ಅಧ್ಯಯನ ನಡೆಯುತ್ತಿದೆ.

ಇಷ್ಟೆಲ್ಲಾ ಗುಣಗಳಿರುವ ಅಮೃತಬಳ್ಳಿ ವರ್ಷದಿಂದ ವರ್ಷಕ್ಕೆ ಭಾರತದ ಹೆಚ್ಚಾಗುತ್ತಿರುವ ಮಧುಮೇಹ ಕಾಯಿಲೆಯನ್ನು ನಿಯಂತ್ರಣದಲ್ಲಿಡುವಲ್ಲಿ ಪರಿಣಾಮಕಾರಿಯಾಗಿದೆ. ಬದಲಾಗಿರುವ ಜೀವನಶೈಲಿ, ಆಹಾರಶೈಲಿ, ಒತ್ತಡದ ಬದುಕು ಇವೆಲ್ಲಾ ಮಧುಮೇಹ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಟೈಪ್‌ 2 ಮಧುಮೇಹ ಬಂದರೆ ನಿಯಂತ್ರಣದಲ್ಲಿಡಬಹುದೇ ಹೊರತು ಗುಣಪಡಿಸಲು ಸಾಧ್ಯವಿಲ್ಲ. ಟೈಪ್ 1 ಮಧುಮೇಹ ಯಾವುದೇ ವಯಸ್ಸಿನಲ್ಲಿ ಕಂಡು ಬರಬಹುದು, ಆದರೆ ಟೈಪ್ 2 ಮಧುಮೇಹ ಸಾನಾನ್ಯವಾಗಿ 40 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.

ಮಧು ಮೇಹ ಬಂದಾಗ ದೇಹ ಇನ್ಸುಲಿನ್ ಉತ್ಪತ್ತಿ ಮಾಡಲು ಅಸಮರ್ಥವಾಗುತ್ತದೆ. ಆಗ ಔಷಧಿ ಅಥವಾ ಚುಚ್ಚುಮದ್ದಿನ ಮೂಲದ ದೇಹಕ್ಕೆ ಇನ್ಸುಲಿನ್ ಸಿಗುವಂತೆ ಮಾಡಬೇಕಾಗುತ್ತದೆ. ಪ್ರತಿದಿನ ವ್ಯಾಯಾಮ ಮಾಡುವುದು, ಸಮತೋಲನ ಆಹಾರ ಪದ್ಧತಿ ಇವೆಲ್ಲಾ ಒಟ್ಟು ಮೊತ್ತ ಆರೋಗ್ಯಕ್ಕೆ ತುಂಬಾನೇ ಸಹಕಾರಿ. ಆಯುರ್ವೇದದಲ್ಲಿ ಮಧುಮೇಹ ನಿಯಂತ್ರಿಸಲು ಅನೇಕ ಗಿಡಮೂಲಿಕೆಗಳಿವೆ, ಅದರಲ್ಲೊಂದು ಅಮೃತಬಳ್ಳಿ.

ಮಧುನಾಶಿ ಎಂದು ಕರೆಯಲ್ಪಡುವ ಅಮೃತಬಳ್ಳಿ

ಮಧುನಾಶಿ ಎಂದು ಕರೆಯಲ್ಪಡುವ ಅಮೃತಬಳ್ಳಿ

ಅಮೃತಬಳ್ಳಿಯನ್ನು ಮಧುನಾಶಿಯೆಂದು ಕರೆಯುತ್ತಾರೆ. ಮಧುಮೇಹವನ್ನು ತಡೆಗಟ್ಟುವ ಶಕ್ತಿ ಈ ಬಳ್ಳಿಗೆ ಇರುವುದರಿಂದ ಇದನ್ನು ಹಾಗೇ ಕರೆಯಲಾಗುತ್ತದೆ. ಇದನ್ನು ಬೊಜ್ಜು ಕರಗಿಸಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಉರಿಯೂತ ಕಡಿಮೆ ಮಾಡಲು, ಸಂಧಿವಾತ ನಿವಾರಿಸಲು, ಅಲರ್ಜಿ ಸಮಸ್ಯೆ ಹೋಗಲಾಡಿಸಲು ಹೀಗೆ ಹತ್ತಾರು ಸಮಸ್ಯೆಗಳನ್ನು ಹೋಗಲಾಡಿಸಲು ಆಯುರ್ವೇದಲ್ಲಿ ಬಳಸಲಾಗುತ್ತಿದೆ.

ಅಮೃತಬಳ್ಳಿ ಮಧುಮೇಹ ನಿಯಂತ್ರಣಕ್ಕೆ ಹೇಗೆ ಸಹಕಾರಿ

ಅಮೃತಬಳ್ಳಿ ಮಧುಮೇಹ ನಿಯಂತ್ರಣಕ್ಕೆ ಹೇಗೆ ಸಹಕಾರಿ

ಅಮೃತಬಳ್ಳಿ ದೇಹದಲಲ್ಇ ಇನ್ಸುಲಿನ್ ಉತ್ಪತ್ತಿ ಹೆಚ್ಚಿಸಲು ತುಂಬಾನೇ ಸಹಕಾರಿ. ಇದು ದೇಹದಲ್ಲಿರುವ ಅಧಿಕ ಗ್ಲೂಕೋಸ್ ಕರಗಿಸುತ್ತದೆ ಹಾಗೂ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಇಡುತ್ತದೆ. ಅಮೃತ ಬಳ್ಳಿ ಹೈಪೋಗ್ಲೈಸೆಮಿಕ್ ಏಜೆಂಟ್ ರೀತಿ ದೇಹದಲ್ಲಿ ಕಾರ್ಯ ನಿರ್ವಹಿಸುತ್ತದೆ.

ಅಧ್ಯಯನದಿಂದ ಸಾಬೀತಾಗಿದೆ ಅಮೃತಬಳ್ಳಿ ಗುಣ

ಅಧ್ಯಯನದಿಂದ ಸಾಬೀತಾಗಿದೆ ಅಮೃತಬಳ್ಳಿ ಗುಣ

ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನೋಲಾಜಿ ಇನ್‌ಫಾರ್ಮೇಷನ್ (ಜೈವಿಕ ತಂತ್ರಜ್ಞಾನ ಮಾಹಿತಿಯ ರಾಷ್ಟ್ರೀಯ ಕೇಂದ್ರ) ಅಧ್ಯಯನ ನಡೆಸಿ ಅಮೃತಬಳ್ಳಿಯನ್ನು ಇನ್ಸುಲಿನ್‌ಗೆ ಹೋಲಿಸಿದರೆ ಶೇ. 40-80ರಷ್ಟು ಸಕ್ಕರೆಯಂಶ ನಿಯಂತ್ರಿಸುವ ಸಾಮಾರ್ಥ್ಯವಿದೆ ಎಂದು ಹೇಳಿದೆ.

ಮಧುಮೇಹ ಹೇಗೆ ನಿಯಂತ್ರಿಸುತ್ತದೆ?

ಮಧುಮೇಹ ಹೇಗೆ ನಿಯಂತ್ರಿಸುತ್ತದೆ?

ಅಮೃತ ಬಳ್ಳಿ ಜೀರ್ಣಕ್ರಿಯೆ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವವಹಿಸುವಂತೆ ಮಾಡುವುದರಿಂದ ಮಧುಮೇಹ ನಿಯಂತ್ರಣಕ್ಕೆ ತುಂಬಾನೇ ಸಹಕಾರಿಯಾಗಿದೆ. ಅಲ್ಲದೆ ಇದು ಹೊಟ್ಟೆ ಆರೋಗ್ಯವನ್ನೂ ವೃದ್ಧಿಸುತ್ತದೆ.

ಅಮೃತಬಳ್ಳಿ ಹೇಗೆ ಬಳಸಬೇಕು?

ಅಮೃತಬಳ್ಳಿ ಹೇಗೆ ಬಳಸಬೇಕು?

ಅಮೃತಬಳ್ಳಿ ಹಾಗೂ ಅದರ ಕಾಂಡವನ್ನು ಸ್ವಲ್ಪ ನೀರು ಸೇರಿಸಿ ರುಬ್ಬಬೇಕು. ನಂತರ ಆ ನೀರನ್ನು ಸೋಸಿ, ರುಚಿಗೋಸ್ಕರ ಸ್ವಲ್ಪ ನಿಂಬೆರಸ ಸೇರಿಸಿ ಕುಡಿಯಿರಿ. ಪ್ರತಿದಿನ ಹೀಗೆ ಕುಡಿಯುತ್ತಿದ್ದರೆ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

ಅಮೃತ ಬಳ್ಳಿ ಅಡ್ಡಪರಿಣಾಮಗಳು

ಅಮೃತ ಬಳ್ಳಿ ಅಡ್ಡಪರಿಣಾಮಗಳು

  • ಕೆಲವರಿಗೆ ಅಮೃತಬಳ್ಳಿ ಸೇವಿಸಿದರೆ ಮಲಬದ್ಧತೆ ಸಮಸ್ಯೆ ಉಂಟಾಗಬಹುದು.
  • ಅಮೃತಬಳ್ಳಿಯನ್ನು ಮಧುಮೇಹ ನಿಯಂತ್ರಣಕ್ಕೆ ಬಳಸುವುದಾದರೆ ತುಂಬಾ ಎಚ್ಚರಿಕೆಯಿಂದ ಬಳಸಬೇಕು. ಆದ್ದರಿಂದ ಇದನ್ನು ಬಳಸುವವರು ಆಯುರ್ವೇದ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಬಳಸಿ. ಏಕೆಂದರೆ ಇದನ್ನು ತೆಗೆದುಕೊಳ್ಳುವ ಪ್ರಮಾಣದಲ್ಲಿ ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವ್ಯತ್ಯಾಸ ಇರಬಹುದು.
  • ಇನ್ನು ಅಟೋ ಇಮ್ಯೂನೆ ಡಿಸೀಜ್ (ರೋಗ ನಿರೋಧಕ ವ್ಯವಸ್ಥೆಯ ಅಸಮತೋಲನ) ಈ ಸಮಸ್ಯೆಯಿಂದ ಬಳಲುತ್ತಿರುವವರು ಅಮೃತಬಳ್ಳಿ ಸೇವಿಸಲು ಹೋಗಬೇಡಿ.
  • ಯಾವುದಾದರೂ ಸರ್ಜರಿ ಮಾಡಿಸುವುದಾದರೆ, ಮಾಡಿಸುವ 2 ವಾರಗಳಿಗೆ ಮುಂಚೆ ಅಮೃತಬಳ್ಳಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ ಒಳ್ಳೆಯದು.
  • ಗರ್ಭಿಣಿಯರು, ಮಗುವಿಗೆ ಎದೆಹಾಲುಣಿಸುವ ತಾಯಂದಿರು ಇದನ್ನು ಬಳಸಬೇಡಿ.
  • ಕೊನೆಯದಾಗಿ:

    ನೀವು ಅಮೃತಬಳ್ಳಿಯನ್ನು ಮನೆಮದ್ದಾಗಿ ಬಳಸಬಹುದು, ಆದರೆ ಬಳಸುವ ಮುನ್ನ ತಜ್ಞರ ಸಲಹೆ ಪಡೆದ ಬಳಿಕವಷ್ಟೇ ಬಳಸಿ, ಇದರಿಂದ ಇದರ ಗುಣಗಳನ್ನು ಸರಿಯಾದ ರೀತಿಯಲ್ಲಿ ಬಳಸಬಹುದು.

English summary

Giloy For Diabetics: How To Use Giloy To Control Blood Sugar levels in Kannada

In India diabetic patient number increasing every year. Lifestyle is the one of the main reason for diabetic. here are how to use giloy to control blood sugar, Take a look.
X
Desktop Bottom Promotion