For Quick Alerts
ALLOW NOTIFICATIONS  
For Daily Alerts

ದಿನಾ ಮೊಟ್ಟೆ ತಿಂದರೆ ಮಧುಮೇಹ ಬರುವ ಸಾಧ್ಯತೆ ಹೆಚ್ಚಿದೆಯೇ?

|

ತುಂಬಾ ಜನರಿಗೆ ದಿನಕ್ಕೊಂದು ಮೊಟ್ಟೆ ತಿನ್ನುವ ಅಭ್ಯಾಸ ಇರುತ್ತದೆ, ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಮೊಟ್ಟೆ ಒಳ್ಳೆಯದು ಎಂದು ಹೇಳಲಾಗುವುದು. ಇನ್ನು ಜಿಮ್‌ಗೆ ಹೋಗುವವರು, ತುಂಬಾ ವರ್ಕೌಟ್‌ ಮಾಡುವವರು ಪ್ರತಿದಿನ ಮೊಟ್ಟೆ ಸೇವಿಸುತ್ತಾರೆ.

ಮೊಟ್ಟೆಯಲ್ಲಿರುವ ಪ್ರೊಟೀನ್ ಹಾಗೂ ಇತರ ಪೋಷಕಾಂಶಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ಪ್ರತಿದಿನ ಮೊಟ್ಟೆ ಸೇವಿಸುವವರಿಗೆ ಒಂದು ಶಾಂಕಿಂಗ್ ವಿಷಯ ಅದೇನೆಂದರೆ ದಿನಾ ಮೊಟ್ಟೆ ತಿಂದರೆ ಮಧುಮೇಹದ ಸಾಧ್ಯತೆ ಹೆಚ್ಚುವುದು ಎಂದು ಅಧ್ಯಯನ ವರದಿ ಹೇಳಿದೆ. ಇದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ:

ಅಧ್ಯಯನ ವರದಿ ಏನು ಹೇಳಿದೆ?

ಅಧ್ಯಯನ ವರದಿ ಏನು ಹೇಳಿದೆ?

ಚೈನಾ ಮೆಡಿಕಲ್ ಯೂನಿವರ್ಸಿಟಿ ಹಾಗೂ ಕತಾರ್ ಯೂನಿವರ್ಸಿಟಿಯಲ್ಲಿ 1991ರಿಂದ 2009ರವರೆಗೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಸಂಶೋಧನೆ ವರದಿ ಪ್ರಕಾರ ಯಾರು ಪ್ರತಿದಿನ ಮೊಟ್ಟೆ ತಿನ್ನುವವರಿಗೆ ಮಧುಮೇಹದ ಅಪಾಯ ಹೆಚ್ಚು ಎಂದು ತಿಳಿದು ಬಂದಿದೆ, ಅದರಲ್ಲೂ ಮಹಿಳೆಯರಿಗೆ ಪುರುಷರಿಗಿಂತ ಶೇ.60 ಮಧುಮೇಹದ ಸಾಧ್ಯತೆ ಹೆಚ್ಚು.

ಮಧುಮೇಹ ಹೆಚ್ಚುವುದರಲ್ಲಿ ಆಹಾರಕ್ರಮವೂ ಪ್ರಮುಖವಾಗಿದೆ

ಮಧುಮೇಹ ಹೆಚ್ಚುವುದರಲ್ಲಿ ಆಹಾರಕ್ರಮವೂ ಪ್ರಮುಖವಾಗಿದೆ

ಇತ್ತೀಚಿನ ದಿನಗಳಲ್ಲಿ ಮಧುಮೇಹದ ಸಮಸ್ಯೆ ಹೆಚ್ಚುತ್ತಿದೆ, ನಮ್ಮ ಆಹಾರಕ್ರಮದ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳುವುದರಿಂದ ಟೈಪ್‌ 2 ಮಧುಮೇಹ ಬರುವುದನ್ನು ತಪ್ಪಿಸಬಹುದು. ಚೀನಾದಲ್ಲಿ ಹೆಚ್ಚಿನವರು ಕೆಲವು ದಶಕಗಳಿಂದ ಮೂಲ ಆಹಾರಕ್ರಮದಿಂದ ದೂರ ಸರಿದು ಸಂಸ್ಕರಿಸಿದ ಆಹಾರ, ಮಾಂಸ, ಹಾವು ಮುಂತಾದ ಕೊಬ್ಬಿನ ಆಹಾರಗಳ ಸೇವನೆ ಮಾಡುತ್ತಿದ್ದಾರೆ, ತರಕಾರಿಗಳು ಆಹಾರಕ್ರಮದಲ್ಲಿ ಕಡಿಮೆಯಾಗಿದೆ, ಇದರಿಂದ ಮಧುಮೇಹದಂಥ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಅಧ್ಯಯನ ವರದಿ ಹೇಳಿದೆ.

ಮಧುಮೇಹ ಮತ್ತು ಮೊಟ್ಟೆ ಸೇವನೆ

ಮಧುಮೇಹ ಮತ್ತು ಮೊಟ್ಟೆ ಸೇವನೆ

1991ರಿಂದ-2009ರವರೆಗೆ ನಡೆಸಿದ ಅಧ್ಯಯನ ವರದಿಯಲ್ಲಿ ಚೀನಾದಲ್ಲಿ ಮೊಟ್ಟೆ ಸೇವನೆ ಹಿಂದಿಗಿಂತಲೂ ಹೆಚ್ಚಾಗಿದೆ ಎಂದು ಆ ಅಧ್ಯಯನ ವರದಿ ಹೇಳಿದೆ. ಮೊಟ್ಟೆಗೂ ಮಧುಮೇಹಕ್ಕೂ ಸಂಬಂಧವಿದೆಯೇ ಎಂಬುವುದರ ಕುರಿತು ಅನೇಕ ಚರ್ಚೆಗಳು ನಡೆಯುತ್ತಲೇ ಇವೆ, ಆದರೆ ಮೊಟ್ಟೆ ತಿಂದಾಗ ರಕ್ತದಲ್ಲಿ ಗ್ಲೂಕೋಸ್ ಹೆಚ್ಚಾಗುವುದು. ಯಾರು ಪ್ರತಿದಿನ ಸಾಕಷ್ಟು ಮೊಟ್ಟೆ ತಿನ್ನುತ್ತಾರೋ ಅವರಲ್ಲಿ ಮಧುಮೇಹದ ಸಾಧ್ಯತೆ ಶೇ.60ರಷ್ಟು ಹೆಚ್ಚಿದೆ.

ಹೆಚ್ಚು ಮೊಟ್ಟೆ ಮತ್ತು ಅಥವಾ ಪ್ರತಿನಿತ್ಯ ಮೊಟ್ಟೆ ತಿಂದರೆ ಆರೋಗ್ಯಕ್ಕೆ ಹಾನಿಯೇ?

ಹೆಚ್ಚು ಮೊಟ್ಟೆ ಮತ್ತು ಅಥವಾ ಪ್ರತಿನಿತ್ಯ ಮೊಟ್ಟೆ ತಿಂದರೆ ಆರೋಗ್ಯಕ್ಕೆ ಹಾನಿಯೇ?

ಹೆಚ್ಚು ಮೊಟ್ಟೆ ಮತ್ತು ಅಥವಾ ಪ್ರತಿನಿತ್ಯ ಮೊಟ್ಟೆ ತಿಂದರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದು.

ಪ್ರತಿದಿನ ಅಥವಾ ಹೆಚ್ಚು ಮೊಟ್ಟೆ ತಿನ್ನುವುದರಿಂದ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ಎಂದು ಹೇಳಿದೆ. ಯಾರು ಪ್ರತಿನಿತ್ಯ ಮೊಟ್ಟೆ ತಿನ್ನುತ್ತಾರೋ ಅವರಲ್ಲಿ ಮಧುಮೇಹದ ಸಮಸ್ಯೆ ಹೆಚ್ಚುತ್ತಿದೆ ಎಂದು ಅಧ್ಯಯನ ವರದಿ ಹೇಳಿದೆ. ಆದರೆ ಇದರ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ಆಗ ಬೇಕಾಗಿದೆ.

English summary

Excess egg consumption can trigger diabetes, says new research; Details in Kannada

According to the latest research, those who consumed one or more eggs per day (equivalent to 50 grams) increased their risk of diabetes by 60 per cent and the effect was more pronounced in women than in men. Know details in kannada.
X
Desktop Bottom Promotion