For Quick Alerts
ALLOW NOTIFICATIONS  
For Daily Alerts

ಕಾಲಿನಲ್ಲಿ ಈ 10 ಲಕ್ಷಣಗಳು ಕಂಡು ಬಂದರೆ ಹುಷಾರು! ಮಧುಮೇಹ ತುಂಬಾ ಹೆಚ್ಚಿದೆ ಎಂದು ಸೂಚಿಸುವ ಲಕ್ಷಣಗಳಿವು

|

ಮಧುಮೇಹ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ತುಂಬಾ ಚಿಕ್ಕ ಪ್ರಾಯಕ್ಕೇ ಮಧುಮೇಹದ ಸಮಸ್ಯೆ ಕಂಡು ಬರುತ್ತಿದೆ. ಬದಲಾದ ಜೀವನಶೈಲಿ ಕೂಡ ಮಧುಮೇಹ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಯಾವುದೇ ದೈಹಿಕ ವ್ಯಾಯಾಮವಿಲ್ಲ, ಒಂದೇ ಕಡೆ ತುಂಬಾ ಹೊತ್ತು ಕೂರುವುದು, ಅನಾರೋಗ್ಯಕರ ಆಹಾರಗಳ ಸೇವನೆ ಇವೆಲ್ಲಾ ಮಧುಮೇಹಕ್ಕೆ ಆಹ್ವಾನ ನೀಡುತ್ತಿದೆ.

diabetic foot

ಮಧುಮೇಹ ಒಂದು ಸಮಸ್ಯೆ ಬಂದರೆ ಸಾಕು ಅದರಿಂದ ನಾನಾ ಸಮಸ್ಯೆಗಳು ಹುಟ್ಟಿಕೊಳ್ಳುತ್ತದೆ. ಮಧುಮೇಹ ಬಂದಾಗ ನಮ್ಮ ದೇಹವು ಸಕ್ಕರೆಯಂಶ ಹೆಚ್ಚಾಗಿದೆ ಎಂಬ ಕ್ಲೂ ಕೊಡುತ್ತದೆ ಅಂದರೆ ತುಂಬಾ ಬಾಯಾರಿಕೆಯಾಗುವುದು, ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು ಹೀಗೆ ಅನೇಕ ಲಕ್ಷಣಗಳನ್ನು ಸೂಚಿಸುತ್ತದೆ, ಜೊತೆಗೆ ಕಾಲುಗಳಲ್ಲಿ ಕೆಲವೊಂದು ಬದಲಾವಣೆ ಕಂಡು ಬರುತ್ತದೆ.

ಇದನ್ನು ಡಯಾಬಿಟಿಕ್ ಫೂಟ್‌ ಎಂದು ಕರೆಯುತ್ತಾರೆ, ಅದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ ನೋಡಿ:

ಡಯಾಬಿಟಿಕ್‌ ಫೂಟ್‌ (ಮಧುಮೇಹ ಕಾಲು) ಎಂದರೇನು?

ಡಯಾಬಿಟಿಕ್‌ ಫೂಟ್‌ (ಮಧುಮೇಹ ಕಾಲು) ಎಂದರೇನು?

ಮಧುಮೇಹವಿದ್ದರೆ ಕಾಲಿಗೆ ಎರಡು ರೀತಿಯಲ್ಲಿ ತೊಂದರೆ ಉಂಟಾಗುತ್ತದೆ. ರಕ್ತದಲ್ಲಿ ಅತ್ಯಧಿಕ ಸಕ್ಕರೆಯಂಶ ನರಗಳಿಗೆ ಹಾನಿಯುಂಟು ಮಾಡಿ, ಕಾಲುಗಳು ಮರಗಟ್ಟಿದಂತಾಗುವುದು, ಸ್ಪರ್ಶ ಜ್ಞಾನ ಕಡಮೆಯಾಗುವುದು. ಈ ಡಯಾಬಿಟಿಕ್ ಫೂಟ್‌ನ ಅಪಾಯಕಾರಿ ಅಂಶವೆಂದರೆ ಮೊದಲಿಗೆ ಕಾಲುಗಳಲ್ಲಿ ಯಾವುದೇ ನೋವು ಕಂಡು ಬರಲ್ಲ. ಆದರೆ ಗಾಯವಾಗುತ್ತದೆ, ಆ ಗಾಯ ದೊಡ್ಡದಾಗುತ್ತಾ ಹೋಗುವುದು. ಅಲ್ಲದೆ ಮಧುಮೇಹಿಗಳ ಕಾಲಿಗೆ ರಕ್ತ ಸಂಚಾರ ಕಡಿಮೆಯಾಗುವುದರಿಂದ ಏನಾದರೂ ಚಿಕ್ಕ ಗಾಯವಾದರೂ ಬೇಗನೆ ಒಣಗುವುದಿಲ್ಲ, ಗಾಯ ಒಣಗದೆ ಅಲ್ಸರ್, ಗ್ಯಾಂಗ್ರೀನ್ ಕೂಡ ಉಂಟಾಗಬಹುದು.

ಡಯಾಬಿಟಿಕ್‌ ಫೂಟ್‌ ಈ ಲಕ್ಷಣಗಳ ಕಡೆ ಗಮನ ನೀಡಿ

ಡಯಾಬಿಟಿಕ್‌ ಫೂಟ್‌ ಈ ಲಕ್ಷಣಗಳ ಕಡೆ ಗಮನ ನೀಡಿ

1. ಯಾವುದೇ ದೈಹಿಕ ವ್ಯಾಯಾಮ ಮಾಡುವಾಗ ಅಥವಾ ಬೈಕ್ ಏರುವಾಗ ಸ್ನಾಯು ಹಿಡಿದುಕೊಂಡಂತೆ ಆಗುವುದು, ಹಿಂಬದಿ, ತೊಡೆಗಳಲ್ಲಿ ಸೆಳೆತ.

2. ಪಾದಗಳಲ್ಲಿ ಉರಿಯೂತ, ನೋವು

3. ಸ್ವಲ್ಪ ಸಮಯ ಕಳೆದ ಮೇಲೆ ಕಾಲಿನ ಆಕಾರದಲ್ಲಿ ವ್ಯತ್ಯಾಸ ಕಂಡು ಬರುವುದು

4 ತ್ವಚೆ ತುಂಬಾ ಡ್ರೈಯಾಗುವುದು

5. ಪಾದಗಳಲ್ಲಿ ಬಣ್ಣ ಬದಲಾವಣೆ

ಡಯಾಬಿಟಿಕ್‌ ಫೂಟ್‌ ಈ ಲಕ್ಷಣಗಳ ಕಡೆ ಗಮನ ನೀಡಿ

ಡಯಾಬಿಟಿಕ್‌ ಫೂಟ್‌ ಈ ಲಕ್ಷಣಗಳ ಕಡೆ ಗಮನ ನೀಡಿ

6. ಉಗುರುಗಳು ಹಳದಿ ಬಣ್ಣಕ್ಕೆ ತಿರುಗುವುದು

7. ಬೆರಳುಗಳ ಮಧ್ಯ ಫಂಗಸ್ (ಕೆಸರು ಕಜ್ಜಿ)

8. ಗಾಯವಾಗಿ ಹುಣ್ಣಾಗುವುದು ಅಥವಾ ಹೆಬ್ಬರಳಿನ ಉಗುರು ಹಾಳಾಗುವುದು

9. ಕಾಲಿನ ಉಗುರುಗಳಲ್ಲಿರುವ ರೋಮ ಉದುರುವುದು, ಅಥವಾ ಕಾಲಿನ ರೋಮ ಕಡಿಮೆಯಾಗುವುದು

10. ಕಾಲುಗಳು ಮರಗಟ್ಟಿದಂತಾಗುವುದು

ಈ ರಿತಿಯ ಲಕ್ಷಣಗಳು ಖಂಡು ಬಂದರೆ ಕೂಡಲೇ ಡಾಕ್ಟರ್ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು, ಇಲ್ಲದಿದ್ದರೆ ಕಾಲು ಕತ್ತರಿಸುವ ಪರಿಸ್ಥಿತಿ ಬರಬಹುದು.

ಡಯಾಬಿಟಿಕ್‌ ಫೂಟ್‌ಯಿದ್ದರೆ ಹೇಗೆ ಆರೈಕೆ ಮಾಡಬೇಕು?

ಡಯಾಬಿಟಿಕ್‌ ಫೂಟ್‌ಯಿದ್ದರೆ ಹೇಗೆ ಆರೈಕೆ ಮಾಡಬೇಕು?

1. ಸರಿಯಾದ ಸೈಜ್‌ನ ಶೂ ಬಳಸಿ: ನಿಮಗೆ ಫಿಟ್‌ ಆಗಿರುವ ಶೂ ಬಳಸಿ, ಶೂ ಹಾಕುವಾಗ ಸಾಕ್ಸ್ ಹಾಕಿ ಬಳಸುವುದು ಒಳ್ಳೆಯದು

2. ಕಾಲುಗಳನ್ನು ಸ್ವಚ್ಛವಾಗಿಡಿ: ಕಾಲುಗಳಿಗೆ ಸೋಪು ಹಚ್ಚಿ ಚೆನ್ನಾಗಿ ತೊಳೆದು ನಂತರ ಟವಲ್‌ನಿಂದ ಒರೆಸಿ. ನೀವು ಕಾಲುಗಳನ್ನು ಸ್ವಲ್ಪ ಹೊತ್ತಿ ಹದ ಬಿಸಿ ನೀರಿನಲ್ಲಿಟ್ಟು ನಂತರ ತೊಳೆದರೆ ಇನ್ನೂ ಒಳ್ಳೆಯದು.

3. ಯಾವುದಾದರೂ ಹುಣ್ಣು, ಗಾಯವಿದೆಯೇ ಪರೀಕ್ಷಿಸಿ

ಏನಾದರೂ ಗಾಯವಿದ್ದರೆ ಗೂಡಲೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ

4. ಉಗುರನ್ನು ಕತ್ತರಿಸಿ, ಆದರೆ ಉಗುರಿನ ತುದಿ ಶಾರ್ಪ್ ಇರಬಾರದು, ಇದ್ದರೆ ಅದು ತಾಗಿ ಗಾಯವಾದರೂ ಗಾಯ ದೊಡ್ಡದಾಗಿ ಒಣಗುವುದು ಕಷ್ಟವಾಗುವುದು.

5. ಏನಾದರೂ ಹುಣ್ಣು ಬಂದರೆ ನೀವೇ ಚಿಕಿತ್ಸೆ ಮಾಡಬೇಡಿ, ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಿರಿ.

English summary

Diabetes symptoms in your feet: Signs that indicate high blood sugar levels in Kannada

These are signs that indicate you have diabetic foot, how to take care, read on
Story first published: Friday, August 19, 2022, 9:04 [IST]
X
Desktop Bottom Promotion