For Quick Alerts
ALLOW NOTIFICATIONS  
For Daily Alerts

PCOS ಇರುವವರು ಗರ್ಭನಿರೋಧಕ ಮಾತ್ರೆಗಳಿಂದ ಮಧುಮೇಹ ತಡೆಗಟ್ಟಬಹುದು

|

ಈಗಲೇ ಗರ್ಭಧಾರಣೆ ಬೇಡ ಸ್ವಲ್ಪ ಮುಂದೋಡಣ ಎಂದು ಬಯಸುವವರು, ಗರ್ಭಧಾರಣೆ ಬಯಸದೇ ಇರುವವರು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಈ ಗರ್ಭನಿರೋಧಕ ಮಾತ್ರೆಗಳು ಶೇ.90ರಷ್ಟು ಗರ್ಭಧಾರಣೆ ತಡೆಗಟ್ಟುತ್ತೆ. ಇನ್ನು ಈ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಮಹಿಳೆಯರ ಮೇಲೆ ಉಂಟಾಗುವ ಪರಿಣಾಮ, ಅಡ್ಡಪರಿಣಾಮ ಇವುಗಳ ಬಗ್ಗೆ ಅನೇಕ ಸಂಶೋಧನೆಗಳು ನಡೆಯುತ್ತಲೇ ಇವೆ.

ಇದೀಗ ಒಂದು ಒಳ್ಳೆಯ ಅಂಶ ಬೆಳಕಿಗೆ ಬಂದಿದೆ. ಪಿಸಿಒಎಸ್‌ ಸಮಸ್ಯೆಯಿದ್ದು ಗರ್ಭನಿರೋಧಕ ಸೇವಿಸುವ ಮಹಿಳೆಯರಿಗೆ ಟೈಪ್‌ 2 ಮಧುಮೇಹ ಬರುವುದಿಲ್ಲ ಎಂಬ ಅಂಶ ತಿಳಿದು ಬಂದಿದೆ.

ಅಧ್ಯಯನ ವರದಿ

ಅಧ್ಯಯನ ವರದಿ

ಡಯಾಬಿಟಿಸ್‌ ಕೇರ್‌ ಜರ್ನಲ್‌ನಲ್ಲಿ ಬಿಡುಗಡೆಯಾದ ವರದಿಯು ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿರುವವರಿಗೆ ಟೈಪ್‌ 2 ಮಧುಮೇಹ ಬರಲ್ಲ ಎಂಬುವುದು ತಿಳಿದು ಬಂದಿದೆ. ಪಿಸಿಒಎಸ್‌ ಸಮಸ್ಯೆ ಇರುವ ಮಹಿಳೆಯರಲ್ಲಿ ಟೈಪ್‌ 2 ಮಧುಮೇಹದ ಅಪಾಯ ಎರಡು ಪಟ್ಟು ಅಧಿಕ. ಇದನ್ನು ತಡೆಗಟ್ಟಲು ಪಿಸಿಒಎಸ್‌ ಇರುವ ಮಹಿಳೆಯರು ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುವುದು ಒಳ್ಳೆಯದು ಎಂಬುವುದು ತಿಳಿದು ಬಂದಿದೆ.

ಪಿಸಿಒಎಸ್ ಇರುವವರಿಗೆ ಈ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು

ಪಿಸಿಒಎಸ್ ಇರುವವರಿಗೆ ಈ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು

ಪಿಸಿಒಎಸ್ ಸಮಸ್ಯೆ ಸಮಸ್ಯೆ ಇರುವವರಿಗೆ ಮಧುಮೇಹ ಬರುವ ಸಾಧ್ಯತೆ ತುಂಬಾನೇ ಇದೆ. ಇದರ ಜೊತೆಗೆ ಎಂಡೋಮೆಟಿರಿಯಲ್ ಕ್ಯಾನ್ಸರ್, ಹೃದಯ ಸಂಬಂಧಿ ಸಮಸ್ಯೆ, ನಾನ್‌ ಆಲ್ಕೋಹಾಲ್‌ ಫ್ಯಾಟಿ ಲಿವರ್‌ ಸಮಸ್ಯೆ ಕಂಡು ಬರುವುದು.

ಪಿಸಿಒಎಸ್ ಸಮಸ್ಯೆಯ ಲಕ್ಷಣಗಳು

ಪಿಸಿಒಎಸ್ ಸಮಸ್ಯೆಯ ಲಕ್ಷಣಗಳು

* ಅನಿಯಮಿತ ಮುಟ್ಟು: ಇದರಿಂದ ಸಂತಾನೋತ್ಪತ್ತಿಗೆ ತೊಂದರೆ ಉಂಟಾಗುವುದು

* ಬೇಡದ ಕೂದಲಿನ ಬೆಳವಣಿಗೆ, ಮುಖದಲ್ಲಿ ಕೂಡ ಕೂದಲು ಬೆಳೆಯುವುದು

* ಕೂದಲು ಉದುರುವುದು

* ಎಣ್ಣೆ ತ್ವಚೆ ಅಥವಾ ಮೊಡವೆ

ದೇಹದಲ್ಲಿ ಆಂಡ್ರೋಜಿನ್ ಹಾರ್ಮೋನ್‌ಗಳ ಉತ್ಪತ್ತಿ ಅಧಿಕವಾದಾಗ ಕಂಡು ಬರುವುದು.

ಇನ್ನು ಪಿಸಿಒಎಸ್‌ ಸಮಸ್ಯೆ ಇರುವವಲ್ಲಿ ಮೈ ತೂಕ ಕೂಡ ಹೆಚ್ಚಾಗುವುದು.

ಪಿಸಿಒಎಸ್‌ ಮತ್ತು ಮಧುಮೇಹ

ಪಿಸಿಒಎಸ್‌ ಮತ್ತು ಮಧುಮೇಹ

ಪಿಸಿಒಎಸ್ ಹಾಗೂ ಮಧುಮೇಹಕ್ಕೆ ಒಂದಕ್ಕೊಂದು ಸಂಬಂಧಿವಿದೆ. ಪಿಸಿಒಎಸ್ ಸಮಸ್ಯೆ ಇರುವವರು ಮಧುಮೇಹ ಪರೀಕ್ಷೆಯನ್ನೂ ಮಾಡಿಸಬೇಕಾಗುತ್ತದೆ.

ಪಿಸಿಒಎಸ್ ಜೊತೆಗೆ ಈ ಲಕ್ಷಣಗಳು ಕಂಡು ಬಂದರೆ ಅದು ಮಧುಮೇಹವಿರಬಹುದು

* ತುಂಬಾ ಸುಸ್ತು

* ಕಣ್ಣುಗಳು ಮಂಜಾಗುವುದು

* ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು, ಅದರಲ್ಲೂ ರಾತ್ರಿ ಹೊತ್ತು ಮೂತ್ರ ವಿಸರ್ಜನೆಗೆ ಹೀಗುವುದು

* ತುಂಬಾ ಬಾಯಾರಿಕೆ

* ತುಂಬಾ ಹಸಿವು

* ಮುಖದಲ್ಲಿ ಡಾರ್ಕ್‌ ಪ್ಯಾಚ್‌

* ಏನಾದರೂ ಗಾಯವಾದರೆ ಒಣಗಲು ತುಂಬಾ ಸಮಯ ತೆಗೆದುಕೊಳ್ಳುವುದು

* ಕೈ, ಕಾಲುಗಳು ಮರಗಟ್ಟುವುದು

ಪಿಸಿಒಎಸ್‌ ಸಮಸ್ಯೆ ಇರುವವರು ಮಧುಮೇಹ ತಡೆಗಟ್ಟುವುದು ಹೇಗೆ?

ಪಿಸಿಒಎಸ್‌ ಸಮಸ್ಯೆ ಇರುವವರು ಮಧುಮೇಹ ತಡೆಗಟ್ಟುವುದು ಹೇಗೆ?

ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಮಧುಮೇಹದ ಅಪಾಯವನ್ನು ತಪ್ಪಿಸಬಹುದಾಗಿದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೋಡುವುದಾದರೆ ಈ ಮಾತ್ರೆಯಲ್ಲಿ ಆಸ್ಟ್ರೆಜೆನ್ಸ್‌ ಇದ್ದು ಇದು ರಕ್ತ ಕಣದ ಸೆಕ್ಸ್‌ ಹಾರ್ಮೋನ್‌ಗಳಲ್ಲಿರುವ (SHBG)ಪ್ರೊಟೀನ್ ಹೆಚ್ಚಿಸುತ್ತದೆ. ಇದು ಆಂಡ್ರೋಜಿನ್ ಚಟುವಟಿಕೆ ನಿಯಂತ್ರಿಸುತ್ತದೆ, ಇದರಿಂದಾಗಿ ಇನ್ಸುಲಿನ್ ಸಮಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ, ಹಾಗಾಗಿ ಮಧುಮೇಹ ನಿಯಂತ್ರಿಸಬಹುದು.

English summary

Contraceptive pill can reduce type 2 diabetes risk in women with PCOS: Study

Contraceptive pill can reduce type 2 diabetes risk in women with PCOS: Study...
Story first published: Tuesday, October 19, 2021, 10:22 [IST]
X
Desktop Bottom Promotion