For Quick Alerts
ALLOW NOTIFICATIONS  
For Daily Alerts

ಮಧುಮೇಹ ನಿಯಂತ್ರಣಕ್ಕೆ ನೆರವಾಗುವ ನೈಸರ್ಗಿಕ ಗಿಡಮೂಲಿಕೆ ಚಹಾಗಳು

|

ರಕ್ತದಲ್ಲಿ ಸಕ್ಕರೆ ಬಳಕೆಯಾಗದೇ ಹೋಗುವ ಮೂಲಕ ಸಕ್ಕರೆಯ ಮಟ್ಟ ಹೆಚ್ಚುವುದೇ ಮಧುಮೇಹ. ಮಧುಮೇಹವನ್ನು ನಿಯಂತ್ರಿಸಲು ಔಷಧಿಗಳ ಸೇವನೆಯ ಹೊರತಾಗಿ ವೈದ್ಯರು ಕೆಲವು ಆಹಾರಕ್ರಮದಲ್ಲಿ ಬದಲಾವಣೆಗಳನ್ನು ಸೂಚಿಸುತ್ತಾರೆ. ಮಧುಮೇಹ ಬಂದ ಬಳಿಕವೂ ಆರೋಗ್ಯಕರ ಆಹಾರಕ್ರಮ, ಜೀವನಕ್ರಮ, ದ್ರವಾಹಾರ ಸೇವನಾ ಕ್ರಮ ಹಾಗೂ ಸಾಕಷ್ಟು ವ್ಯಾಯಾಮದ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿರಿಸಿ ದೀರ್ಘ ಕಾಲ ಜೀವಿಸಬಹುದು.

ಸಾಮಾನ್ಯವಾಗಿ ಮಧುಮೇಹ ಎಂದಾಕ್ಷಣ ಹೆಚ್ಚಿನವರು ಈ ವ್ಯಕ್ತಿಗಳು ಸಕ್ಕರೆ ತಿನ್ನುವಂತಿಲ್ಲ ಎಂಬ ಭಾವನೆಗೆ ಒಳಗಾಗುತ್ತಾರೆ. ಅಷ್ಟೇ ಅಲ್ಲ, ಸಂಸ್ಕರಿತ ಕಾರ್ಬೋಹೈಡ್ರೇಟುಗಳು, ಸಂತೃಪ್ತ ಮತ್ತು ಟ್ರಾನ್ಸ್ ಕೊಬ್ಬು ಇರುವ ಆಹಾರಗಳನ್ನು ಕಡಿಮೆ ಮಾಡುವಂತೆ ಈ ವ್ಯಕ್ತಿಗಳಿಗೆ ವೈದ್ಯರೇ ಸಲಹೆ ನೀಡುತ್ತಾರೆ. ಮೈದಾ ಬದಲಿಗೆ ಇಡಿಯ ಗೋಧಿಯ ಹಿಟ್ಟಿನ ಆಹಾರಗಳನ್ನು ಸೇವಿಸುವಂತೆ ಆಹಾರಕ್ರಮದಲ್ಲಿ ಬದಲಾವಣೆಯನ್ನು ತರಬೇಕಾಗುತ್ತದೆ. ಈ ಬದಲಾವಣೆಗಳ ಜೊತೆಗೇ ಕೆಲವು ಗಿಡಮೂಲಿಕೆಗಳಿಂದ ತಯಾರಿಸಿದ ಟೀ ಕುಡಿಯುವ ಮೂಲಕವೂ ಮಧುಮೇಹವನ್ನು ನಿಯಂತ್ರಣದಲ್ಲಿರಿಸುವುದು ಇನ್ನಷ್ಟು ಸುಲಭವಾಗುತ್ತದೆ. ಸಾಮಾನ್ಯವಾಗಿ ಟೀ ಎಂದರೆ ಟೀಪುಡಿ ಕುದಿಸಿ ತಯಾರಿಸಿದ ಪೇಯವೆಂದೇ ನಾವೆಲ್ಲಾ ತಿಳಿದುಕೊಂಡಿದ್ದೇವೆ. ವಾಸ್ತವವಾಗಿ, ಯಾವುದೇ ಮೂಲಿಕೆ ಅಥವಾ ನೈಸರ್ಗಿಕ ಸಾಮಾಗ್ರಿಯನ್ನು ನೀರಿನಲ್ಲಿ ಕುದಿಸಿದಾಗ ಇದರ ಪೋಷಕಾಂಶಗಳು ಕುದಿನೀರಿನಲ್ಲಿ ಕರಗಿದ ಬಳಿಕ ಈ ನೀರನ್ನು ಆಯಾ ಮೂಲಿಕೆಯ ಹೆಸರಿನೊಂದಿಗೆ ಟೀ ಎಂಬ ವಿಶೇಷಣ ಸೇರಿಸಿಯೇ ಹೇಳಲಾಗುತ್ತದೆಯೇ ಹೊರತು ಟೀಪುಡಿ ಸೇರಿಸುವ ಅಗತ್ಯವಿಲ್ಲ.

Herbal Teas

ಮಧುಮೇಹಿಗಳು ನಿತ್ಯವೂ ತಾವು ಕುಡಿಯುವ ದ್ರವಾಹಾರದಲ್ಲಿ ಕೆಳಗಿನ ಪಟ್ಟಿಯಲ್ಲಿ ವಿವರಿಸಲಾಗಿರುವ ಮೂಲಿಕೆಗಳಲ್ಲೊಂದರಿಂದ ತಯಾರಿಸಿದ ಟೀಯನ್ನು ಸುಮಾರು ದಿನಕ್ಕೆ ಎರಡು ಕಪ್ ನಷ್ಟು ಪ್ರಮಾಣದಲ್ಲಿ ಕುಡಿಯುವ ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗುತ್ತದೆ. ಯಾವುದಕ್ಕೂ, ಈ ಅಭ್ಯಾಸವನ್ನು ರೂಢಿಯಾಗಿಸುವ ಮುನ್ನ ನಿಮ್ಮ ಕುಟುಂಬವೈದ್ಯರನ್ನು ಭೇಟಿಯಾಗಿ ಅವರ ಸಲಹೆ ಪಡೆದು ಮುಂದುವರೆಯುವುದು ಸೂಕ್ತ. ಬನ್ನಿ, ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಸಮರ್ಥವಾಗಿರುವ ಎಂಟು ಮೂಲಿಕಾ ಟೀಗಳ ಬಗ್ಗೆ ಅರಿಯೋಣ.

ಜಿನ್ಸೆಂಗ್ ಟೀ

ನಮ್ಮ ಹಸಿಶುಂಠಿಯನ್ನೇ ಹೋಲುವ ಈ ಚೀನಾ ಮೂಲಕ ಗಡ್ಡೆಯಲ್ಲಿರುವ ಪೋಷಕಾಂಶಗಳು ಕಾರ್ಬೋಹೈಡ್ರೇಟುಗಳ ಹೀರುವಿಕೆಯನ್ನು ನಿಧಾನಗೊಳಿಸಿ ಮೇದೋಜೀರಕ ಗ್ರಂಥಿ ಹೆಚ್ಚು ಪ್ರಮಾಣದ ಇನ್ಸುಲಿನ್ ಅನ್ನು ಸ್ರವಿಸಲು ನೆರವಾಗುತ್ತದೆ. ನಿತ್ಯವೂ ಮೊದಲ ಆಹಾರವಾಗಿ ಮುಂಜಾನೆ ಒಂದು ಕಪ್ ಜಿನ್ಸೆಂಗ್ ಟೀ ಕುಡಿಯುವುದು ಅತ್ಯುತ್ತಮವಾದ ಅಭ್ಯಾಸವಾಗಿದೆ ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗುತ್ತದೆ. ಈ ಮೂಲಿಕೆ ಮಾತ್ರೆ ಅಥವಾ ಪುಡಿಯ ರೂಪದಲ್ಲಿ ಲಭ್ಯವಿದ್ದರೂ, ಹಸಿಯಾದ ತಾಜಾ ಗಡ್ಡೆಯನ್ನು ತುರಿದು ಕುದಿಸಿ ತಯಾರಿಸಿದ ಟೀ ಅತ್ಯುತ್ತಮವಾಗಿದೆ.

ಬಿಲ್ಬೆರಿ ಟೀ (Bilberry Tea)

ಬೆರ್‍ರಿ ಹಣ್ಣುಗಳ ಜಾತಿಗೆ ಸೇರಿದ ಬಿಲ್ಬೆರಿಯಿಂದ ಪ್ರತ್ಯೇಕಿಸಲ್ಪಟ್ಟ ಪೋಷಕಾಂಶಗಳು ಮಧುಮೇಹದ ಚಿಕಿತ್ಸೆಗಾಗಿ ಪರಿಗಣಿಸಲ್ಪಟ್ಟಿಲ್ಲ. ಆದರೆ, ಇದರ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾಗುವ ಮೂಲಕ ಪರೋಕ್ಷವಾಗಿ ಇದು ನೆರವನ್ನೇ ನೀಡುತ್ತದೆ. ಇದಕ್ಕಾಗಿ ಒಂದು ಕಪ್ ಕುದಿಯುವ ನೀರಿಗೆ ಒಂದರಿಂದ ಮೂರು ಚಿಕ್ಕ ಚಮಚದಷ್ಟು ಈ ಹಣ್ಣಿನ ಪುಡಿಯನ್ನು ಬೆರೆಸಿ ಸುಮಾರು ಹತ್ತರಿಂದ ಹದಿನೈದು ನಿಮಿಷ ಹಾಗೇ ಬಿಟ್ಟು ಬಳಿಕ ಸೋಸಿ ಕುಡಿಯಬೇಕು.

Herbal Teas

ಆಲೋವೆರಾ ಟೀ (Aloe Vera Tea)

ಲೋಳೆಸರ ಅಥವಾ ಆಲೋವೆರಾವನ್ನು ನೂರಾರು ವರ್ಷಗಳಿಂದ ಹಲವಾರು ಬಗೆಯ ಔಷಧಿಗಳ ರೂಪದಲ್ಲಿ ಬಳಸಲಾಗುತ್ತಿದೆ. ಇತ್ತೀಚಿನ ಸಂಶೋಧನೆಗಳು ಸಹಾ ಲೋಳೆಸರ ಟೈಪ್ 2 ಮಧುಮೇಹದ ವಿರುದ್ದ ಹೋರಾಡುವ ಶಕ್ತಿ ಹೊಂದಿದೆ ಹಾಗೂ ಉಪವಾಸದ ಬಳಿಕ ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸುತ್ತದೆ ಎಂದು ಸಾಬೀತುಪಡಿಸಿವೆ. ವಿಶೇಷವಾಗಿ ಮಧುಮೇಹ ನಿಧಾನವಾಗಿ ಆವರಿಸುತ್ತಿರುವವರಿಗೆ ಉತ್ತಮವಾಗಿದೆ. ಇದಕ್ಕಾಗಿ ಒಂದು ಕಪ್ ಹಸಿರು ಅಥವಾ ಕಪ್ಪು ಟೀ ಕುದಿಸಿದ ನೀರಿನಲ್ಲಿ ಒಂದು ಚಿಕ್ಕ ಚಮಚ ಲೋಳೆಸರದ ತಿರುಳನ್ನು ಬೆರೆಸಿ ಕುಡಿಯಿರಿ. ಇದು ಸಾಧ್ಯವಾಗದಿದ್ದರೆ ಮಾರುಕಟ್ಟೆಯಲ್ಲಿ ಸಿಗುವ ಸಿದ್ಧರೂಪದಪ ಲೋಳೆಸರದ ಟೀ ಬ್ಯಾಗ್ ಗಳನ್ನೂ ಬಳಸಬಹುದು.

ಸೇಜ್ ಎಲೆಗಳ ಟೀ (Sage Tea)

ಈ ಎಲೆಗಳಿಗೆ ಮಧುಮೇಹಿಗಳಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವ ಗುಣವಿದೆ. ಒಂದು ಕಪ್ ನಷ್ಟು ಕುದಿಯುವ ನೀರಿನಲ್ಲಿ ಸುಮಾರು ಒಂದು ಕಪ್ ನಷ್ಟೇ ಎಲೆಗಳನ್ನು ಕುದಿಸಿ ಸೋಸಿ ಕುಡಿಯಿರಿ.

ಹಸಿರು ಟೀ

ಈ ಟೀ ಸೇವನೆಯಿಂದ ದೊರಕುವ ಹಲವಾರು ಪ್ರಯೋಜನಗಳಲ್ಲಿ ಅಧಿಕ ರಕ್ತದೊತ್ತಡ ತಗ್ಗಿಸುವುದು ಹಾಗೂ ಕೆಟ್ಟ ಕೊಲೆಸ್ಟ್ರಾಲ್ (ಎಲ್.ಡಿ.ಎಲ್) ಮಟ್ಟವನ್ನು ತಗ್ಗಿಸುವುದೂ ಆಗಿದೆ. ಕೆಲವು ಅಧ್ಯಯನಗಳ ಪ್ರಕಾರ ದಿನಕ್ಕೆ ಸುಮಾರು ಆರು ಕಪ್ ನಷ್ಟು ಹಸಿರು ಟೀ ಸೇವಿಸಿದವರಲ್ಲಿ ಟೈಪ್ ೨ ಮಧುಮೇಹ ಆವರಿಸುವ ಸಾಧ್ಯತೆ ಕಡಿಮೆ. ಆದರೂ ಈ ಮಾಹಿತಿಯನ್ನು ಸಂಶೋಧನೆಗಳ ಮೂಲಕ ಇನ್ನೂ ದೃಢೀಕರಿಸಬೇಕಷ್ಟೇ. ಈ ಕಹಿಯಾದ ಟೀಯನ್ನು ಸಿಹಿಯಾಗಿಸದೇ, ಕೊಂಚ ಲಿಂಬೆರಸ ಬೆರೆಸಿ ಸೇವಿಸಬಹುದು. ಪರ್ಯಾಯವಾಗಿ ಅರ್ಲ್ ಗ್ರೇ ಅಥವಾ ಜಾಸ್ಮಿನ್ ಟೀ ಗಳನ್ನು ಪ್ರಯತ್ನಿಸಬಹುದು.

Herbal Teas

ಮೆಂತೆಯ ಟೀ

ಆಕರ್ಷಕ ಪರಿಮಳ ಹಾಗೂ ಔಷಧೀಯ ಗುಣಗಳುಳ್ಳ ಈ ಸಾಮಾಗ್ರಿಯನ್ನು ನೂರಾರು ವರ್ಷಗಳಿಂದ ಆಹಾರ ಹಾಗೂ ಔಷಧೀಯ ಬಳಕೆಗಾಗಿ ಬಳಸಲಾಗುತ್ತಿದೆ. ಆಯುರ್ವೇದ ಹಾಗೂ ಚೀನೀ ವೈದ್ಯಪದ್ದತಿಯಲ್ಲಿ ಮೆಂತೆಯನ್ನು ಬಳಸಲಾಗುತ್ತಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕರಗುವ ನಾರು ಇದ್ದು ಜೀರ್ಣಕ್ರಿಯೆ ನಿಧಾನಗೊಳಿಸುವ ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟ ಥಟ್ಟನೇ ಏರುವುದನ್ನು ತಡೆಯುತ್ತದೆ ಹಾಗೂ ಕಾರ್ಬೋಹೈಡ್ರೇಟುಗಳನ್ನು ಹೀರಿಕೊಳ್ಳುವ ಗತಿಯನ್ನೂ ನಿಧಾನವಾಗಿಸುತ್ತದೆ. ಕೆಲವಾರು ವೈದ್ಯಕೀಯ ಅಧ್ಯಯನಗಳ ಪ್ರಕಾರ ಮೆಂತೆಕಾಳುಗಳ ಸೇವನೆಯ ಮೂಲಕ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ. ತನ್ಮೂಲಕ ಗ್ಲುಕೋಸ್ ತಾಳಿಕೊಳ್ಳುವಿಕೆಯನ್ನು ಉತ್ತಮಗೊಳಿಸುತ್ತದೆ ಮತ್ತು ರಕ್ತದಲ್ಲಿ ಗ್ಲುಕೋಸ್ ಮಟ್ಟಗಳನ್ನು ಕಡಿಮೆ ಮಾಡುವ ಮೂಲಕ ಟೈಪ್ ೧ ಮತ್ತು ೨ ಬಗೆಗಳನ್ನು ನಿಯಂತ್ರಿಸಲು ನೆರವಾಗುತ್ತದೆ. ಅಲ್ಲದೇ ಮೆಂತೆಯಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು, ವಿಟಮಿನ್ನುಗಳು ಹಾಗೂ ಖನಿಜಗಳೂ ಇವೆ.

Herbal Teas

ಡ್ಯಾಂಡೆಲಿಯಾನ್ ಟೀ

ಈ ಅಲಂಕಾರಿಕ ಪುಷ್ಪದ ಬೇರು ಮತ್ತು ಎಲೆಗಳನ್ನು ಚೀನೀ ವೈದ್ಯಪದ್ದತಿಯಲ್ಲಿ ನೂರಾರು ವರ್ಷಗಳಿಂದ ಔಷಧಿ ಮತ್ತು ಆರೋಗ್ಯವೃದ್ದಿಗಾಗಿ ಬಳಸಲಾಗುತ್ತಾ ಬರಲಾಗಿದೆ. ಈ ಸಸ್ಯದಲ್ಲಿರುವ ಕ್ರಿಯಾತ್ಮಕ ಪೋಷಕಾಂಶಗಳು ಮಧುಮೇಹ ನಿಯಂತ್ರಣಾ ಗುಣಗಳನ್ನು ಹೊಂದಿವೆ. ಅಧ್ಯಯನಗಳ ಮೂಲಕ ಗಮನಿಸಲ್ಪಟ್ಟ ಮಾಹಿತಿ ಎಂದರೆ ಈ ಸಸ್ಯದ ಎಲೆ ಮತ್ತು ಬೇರುಗಳ ಪುಡಿಯನ್ನು ಸೇವಿಸುವ ಮೂಲಕ ಟೈಪ್ ೨ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯ ಮಟ್ಟ ಇಳಿಕೆಯಾಗುತ್ತದೆ.

ಊಲಾಂಗ್ ಟೀ

ಇದೊಂದು ಚೀನೀ ಟೀ ಆಗಿದ್ದು ಇದರಲ್ಲಿರುವ ಕೆಫೇನ್ ಟೈಪ್ ೨ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಇಳಿಸಲು ನೆರವಾಗುತ್ತದೆ. ಒಂದು ಕಪ್ ಬಿಸಿನೀರಿಗೆ ಎರಡು ಚಿಕ್ಕ ಚಮಚ ಊಲಾಂಗ್ ಟೀ ಪುಡಿಯನ್ನು ಬೆರೆಸಿ ಸುಮಾರು ಒಂದರಿಂದ ಐದು ನಿಮಿಷ ಹಾಗೇ ಬಿಡಿ. ಕುದಿಯುವ ನೀರನ್ನು ಬಳಸದಿರಿ. ಬಳಿಕ ಸೋಸಿ ಕುಡಿಯಿರಿ.

English summary

Natural Herbal Teas To Help Manage Diabetes

Diabetes is a condition that causes high blood sugar levels in blood. Apart from medication, doctors prescribe to follow a healthy lifestyle to keep this condition under control. There are many who live a healthy life for years even with diabetes, simply with slight modifications to their regular eating and drinking habits. Patients are mostly advised to cut down sugar, refined carbohydrates, saturated and trans fats from their diet and switch to whole wheat.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more