For Quick Alerts
ALLOW NOTIFICATIONS  
For Daily Alerts

ಡಯಾಬಿಟಿಸ್ ಸಮಸ್ಯೆ ಇದ್ದವರು ಮಟನ್ ಬಿರಿಯಾನಿ ತಿನ್ನಬಹುದೇ? ಇದರಿಂದ ಏನಾದರೂ ಸಮಸ್ಯೆ ಇದೆಯೇ?

|

ಯಾವುದೇ ಭಾರತೀಯ ಮಾಂಸಾಹಾರಿ ಹೋಟೆಲಿಗೆ ಭೇಟಿ ನೀಡಿದರೆ ಅಲ್ಲಿ ಕೋಳಿಮಾಂಸದಷ್ಟೇ ಕುರಿಮಾಂಸದ ಖಾದ್ಯಗಳೂ ಇರುವುದನ್ನು ಕಾಣಬಹುದು. ಮಟನ್ ಮಸಾಲಾ, ರೋಗನ್ ಗೋಶ್, ಲಾಲ್ ಮಾಸ್, ನಲ್ಲಿ ನಿಹಾರಿ, ಮಟನ್ ಕೋರ್ಮಾ ಮೊದಲಾದ ಸ್ವಾದಿಷ್ಟ ಖಾದ್ಯಗಳ ಜೊತೆಗೇ ಮಟನ್ ಬಿರಿಯಾನಿ ಸಹಾ ತಪ್ಪದೇ ಹೋಟೆಲಿನ ಅಂದಿನ ಲಭ್ಯ ಆಹಾರಗಳ ಪಟ್ಟಿಯಲ್ಲಿರುತ್ತದೆ.

ಆದರೆ, ಮಧುಮೇಹಿಗಳಿಗೆ ಕೆಂಪು ಮಾಂಸದ ಸೇವನೆಯನ್ನು ಕನಿಷ್ಟಕ್ಕಿಳಿಸಬೇಕು, ಬದಲಿಗೆ ವರ್ಜಿಸಿದರೆ ಇನ್ನೂ ಉತ್ತಮ ಎಂದು ವೈದ್ಯರು ಸಲಹೆ ಮಾಡುತ್ತಾರೆ. ಆದರೆ ಈ ನಿಯಮಕ್ಕೆ ಕುರಿಮಾಂಸ ಅನ್ವಯವಾಗುತ್ತದೆಯೇ? ನೋಡೋಣ....

ಕೆಂಪು ಮಾಂಸ ಮತ್ತು ಮಧುಮೇಹ

ಕೆಂಪು ಮಾಂಸ ಮತ್ತು ಮಧುಮೇಹ

ಕೆಂಪು ಮಾಂಸ ಎಂದರೆ ಕುರಿ, ಎತ್ತು, ಆಡು, ಮೇಕೆ ಹಾಗೂ ಹಂದಿ ಮಾಂಸಗಳನ್ನು ಒಟ್ಟಾಗಿ ಕರೆಯುವುದಾಗಿದೆ. ಇದರಲ್ಲಿ ಭಾರತದಲ್ಲಿ ಅತಿ ಹೆಚ್ಚಾಗಿ ಸೇವಿಸಲ್ಪಡುವ ಮಾಂಸವೆಂದರೆ ಕುರಿ ಮಾಂಸ. ಹಾಗಾಗಿ ಮಟನ್ ಎಂದರೆ ಭಾರತೀಯ ತಳಿಯ ಕುರಿ ಎಂದೇ ತಿಳಿದುಕೊಳ್ಳಬೇಕೇ ವಿನಃ ವಿದೇಶೀ ತಳಿಗಳನ್ನಲ್ಲ (sheep)

ಕುರಿಮಾಂಸದಲ್ಲಿರುವ ಪೋಷಕಾಂಶಗಳು

ಕುರಿಮಾಂಸದಲ್ಲಿರುವ ಪೋಷಕಾಂಶಗಳು

ಕುರಿಮಾಂಸ ಸ್ವಾದಿಷ್ಟವಾಗಿರುವುದರ ಜೊತೆಗೇ ಇದರಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳೂ ಇವೆ. ಪ್ರಮುಖವಾದವು ಎಂದರೆ:

* ಕಬ್ಬಿಣ

* ಸತು

* ಗಂಧಕ

* ರೈಬೋಫ್ಲೇವಿನ್

* ಥಿಯಾಮಿನ್

* ನಿಯಾಸಿನ್

* ಕ್ರಿಯಾಟಿನ್

* ವಿಟಮಿನ್ ಬಿ12

ಮಧುಮೇಹಿಗಳು ಮಟನ್ ಆಹಾರ ಸೇವಿಸಿದರೆ ಎದುರಿಸಬೇಕಾದ ಅಪಾಯಗಳು

ಮಧುಮೇಹಿಗಳು ಮಟನ್ ಆಹಾರ ಸೇವಿಸಿದರೆ ಎದುರಿಸಬೇಕಾದ ಅಪಾಯಗಳು

ಮಧುಮೇಹಿಗಳಿಗೆ ಮಧುಮೇಹದ ಜೊತೆಗೇ ಹೃದಯದ ಆರೋಗ್ಯದ ಮೇಲೂ ಕೆಂಪು ಮಾಂಸ ಪ್ರಭಾವ ಬೀರುತ್ತದೆ. ಏಕೆಂದರೆ:

* ಇದರಲ್ಲಿನ ಸಂತೃಪ್ತ ಕೊಬ್ಬು ಜಿಡ್ದಿನ ರೂಪದಲ್ಲಿದ್ದು ರಕ್ತನಾಳಗಳ ಒಳಗೆ ಅಂಟಿಕೊಂಡು ಹೃದಯದ ಮೇಲಿನ ಒತ್ತಡ ಹೆಚ್ಚಿಸಿ ಹೃದ್ರೋಗಗಳಿಗೆ ಆಹ್ವಾನ ನೀಡಬಹುದು

* ಮಧುಮೇಹಿಗಳ ದೇಹದಲ್ಲಿ ಇನ್ಸುಲಿನ್ ಪ್ರತಿರೋಧತೆ ಹಾಗೂ ಟೈಪ್-2- ವಿಧದ ಮಧುಮೇಹ ಆವರಿಸಲು ಇದರಲ್ಲಿರುವ ಸೋಡಿಯಂ ಮತ್ತು ನೈಟ್ರೇಟುಗಳು ಕಾರಣವಾಗಬಹುದು

* ಈ ಮಾಂಸಕ್ಕೆ ಪ್ರಬಲ ಉರಿಯೂತ ನೀಡುವ ಗುಣವಿದ್ದು ಕೆಲವು ಕ್ಯಾನ್ಸರ್ ಉಂಟಾಗಲು ಪ್ರಚೋದನೆ ದೊರಕಬಹುದು

 ಆದರೆ ಈ ಅಪಾಯಗಳು ಕುರಿಮಾಂಸದಲ್ಲಿ ಅತಿ ಕಡಿಮೆ ಇರುತ್ತವೆ ಹಾಗಾದರೆ ಕುರಿಮಾಂಸವೇ ಏಕೆ?

ಆದರೆ ಈ ಅಪಾಯಗಳು ಕುರಿಮಾಂಸದಲ್ಲಿ ಅತಿ ಕಡಿಮೆ ಇರುತ್ತವೆ ಹಾಗಾದರೆ ಕುರಿಮಾಂಸವೇ ಏಕೆ?

ಭಾರತೀಯ ಮಾಂಸಾಹಾರಿಗಳು ಕೋಳಿಮಾಂಸವನ್ನೇ ಹೆಚ್ಚಾಗಿ ನೆಚ್ಚಿಕೊಳ್ಳಲು ಪ್ರಮುಖ ಕಾರಣವೆಂದರೆ ಇದು ಅಗ್ಗ ಎಂಬ ಕಾರಣ! ಆದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ ಕೋಳಿಮಾಂಸಕ್ಕಿಂತಲೂ ಕುರಿಮಾಂಸ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ ಹಾಗೂ ಹೆಚ್ಚು ಆರೋಗ್ಯಕರವಾಗಿದೆ. ಅಲ್ಲದೇ ಕೆಂಪುಮಾಂಸದ ಇತರ ಯವುದೇ ವಿಧಕ್ಕಿಂತಲೂ ಕುರಿಮಾಂಸವೇ ಸುರಕ್ಷಿತ ಪರ್ಯಾಯವಾಗಿದೆ.

Most Read:ನೀವು ತಿಳಿದಿರುವ ಕೆಲವೊಂದು ಆರೋಗ್ಯ ಸಲಹೆಗಳು ಸುಳ್ಳಾಗಿರಬಹುದು!

ಕುರಿಮಾಂಸದ ಸೇವನೆಯ ಪ್ರಯೋಜನಗಳು

ಕುರಿಮಾಂಸದ ಸೇವನೆಯ ಪ್ರಯೋಜನಗಳು

* ಇದರಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಇದೆ ಹಾಗೂ ರಸದೂತಗಳ ಏರುಪೇರನ್ನು ಸರಿಪಡಿಸುವ ಅಮೈನೋ ಆಮ್ಲಗಳಿವೆ

* ಇತರ ಕೆಂಪು ಮಾಂಸಗಳಿಗೆ ಹೋಲಿಸಿದರೆ ಅತಿ ಕಡಿಮೆ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಹೊಂದಿದೆ.

* ಇದರಲ್ಲಿರುವ ವಿಟಮಿನ್ ಬಿ12 ಸಸ್ಯಾಹಾರದಿಂದ ದೊರಕಲು ಸಾಧ್ಯವಿಲ್ಲ.

* ಅಧಿಕ ಪ್ರಮಾಣದ ಕಬ್ಬಿಣ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಅತ್ಯುತ್ತಮವಾಗಿದೆ.

ಮಧುಮೇಹಿಗಳು ಮಟನ್ ಬಿರಿಯಾನಿ ಸವಿಯಬಹುದೇ?

ಮಧುಮೇಹಿಗಳು ಮಟನ್ ಬಿರಿಯಾನಿ ಸವಿಯಬಹುದೇ?

ಈ ಮಾಂಸದ ಸೇವನೆಯಿಂದ ಪಡೆಯಬಹುದಾದ ಪ್ರಯೋಜನಗಳು ಮತ್ತು ಅಪಾಯದ ಸಾಧ್ಯತೆಗಳನ್ನು ಒಟ್ಟಾಗಿ ಪರಿಗಣಿಸಿದರೆ ಅಲ್ಪ ಪ್ರಮಾಣದ ಸೇವನೆ ಮಧುಮೇಹಿಗಳಿಗೂ ಸಹ್ಯ ಎಂದು ಹೇಳ ಬಹುದು. ಆದರೆ ಇದಕ್ಕೂ ಮುನ್ನ ಮಧುಮೇಹಿಗಳು ತಮ್ಮ ಅಂತಃ ಸ್ರಾವಶಾಸ್ತ್ರಜ್ಞ (endocrinologist) ಅಥವಾ ಕುಟುಂಬ ವೈದ್ಯರನ್ನು ಸಂಪರ್ಕಿಸಿ ಹೃದಯದ ಆರೋಗ್ಯ ಮತ್ತು ದೇಹದ ಪ್ರೋಟೀನ್ ಅಗತ್ಯತೆಯನ್ನು ಪರಿಗಣಿಸಿ ಅವರು ನೀಡುವ ಒಪ್ಪಿಗೆಯಷ್ಟೇ ಪ್ರಮಾಣವನ್ನು ಸೇವಿಸುವುದು ಸೂಕ್ತ.

ಮಟನ್ ಬಿರಿಯಾನಿ

ಮಟನ್ ಬಿರಿಯಾನಿ

ಊಟದ ಮೇಜಿನ ಮೇಲೆ ಮಟನ್ ಬಿರಿಯಾನಿ ಎಂದು ಇಟ್ಟ ಪಾತ್ರೆ ಇತರ ಯಾವುದೇ ಖಾದ್ಯಗಳಿಗಿಂತ ಬೇಗನೇ ಖಾಲಿಯಾಗುವುದು ಇದಕ್ಕಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಏಕೆಂದರೆ ಇದರ ಪರಿಮಳ, ಸ್ವಾದ ಹಾಗೂ ಪೋಷಕಾಂಶಗಳನ್ನು ಯಾವುದೇ ಮಾಂಸಾಹಾರಿಗೆ ಉಪೇಕ್ಷಿಸಲು ಸಾಧ್ಯವೇ ಇಲ್ಲ. ಅಲ್ಲದೇ ಹಸಿದಿರುವ ಹೊಟ್ಟೆಗೆ ಮಟನ್ ಬಿರಿಯಾನಿ ನೀಡಿದಷ್ಟು ತೃಪ್ತಿಯನ್ನು ಬೇರೆ ಆಹಾರ ನೀಡಲು ಸಾಧ್ಯವಿಲ್ಲ. ಆದರೆ ಮಧುಮೇಹಿಗಳು ಅಲ್ಪ ಪ್ರಮಾಣದಲ್ಲಿ ಮಾತ್ರ ಸೇವಿಸಬಹುದು. ಮಟನ್ ಬಿರಿಯಾನಿ ತಯಾರಿಸಲು ಹಲವು ಬಗೆಯ ಮಸಾಲೆಗಳ ಜೊತೆಗೇ ಎಣ್ಣೆಯೂ ಬೇಕಾಗಿರುವುದರಿಂದ ಈ ಬಗ್ಗೆ ಮಧುಮೇಹಿಗಳು ಕೊಂಚ ಎಚ್ಚರ ವಹಿಸಬೇಕು. ಹೋಟೆಲಿನಲ್ಲಿ ತಯಾರಿಸಿದ ಮಟನ್ ಬಿರಿಯಾನಿ ಸ್ವಾದಿಷ್ಟವಾಗಿದ್ದರೂ, ಇವರು ಬಳಸುವ ಎಣ್ಣೆ ಅಷ್ಟೊಂದು ಉತ್ತಮ ಗುಣಮಟ್ಟದ್ದಾಗಿರಲಿಕ್ಕಿಲ್ಲ. ಅಲ್ಲದೇ ಇಲ್ಲಿ ಬಿಳಿಯ ಬಾಸ್ಮತಿ ಅಕ್ಕಿಯನ್ನು ಬಳಸುತ್ತಾರೆ. ಹಾಗಾಗಿ ಮನೆಯಲ್ಲಿ, ಆರೋಗ್ಯಕರ ಎಣ್ಣೆ ಮತ್ತು ಕಂದು ಬಾಸ್ಮರಿ ಅಕ್ಕಿಯಿಂದ ತಯಾರಿಸಿದ ಬಿರಿಯಾನಿ ಮಧುಮೇಹಿಗಳ ಸೇವನೆಗೆ ಆರೋಗ್ಯಕರವಾಗಿದೆ.

ಮಟನ್ ಬಿರಿಯಾನಿಯಲ್ಲಿರುವ ಪೋಷಕಾಂಶಗಳ ವಿವರ

ಮಟನ್ ಬಿರಿಯಾನಿಯಲ್ಲಿರುವ ಪೋಷಕಾಂಶಗಳ ವಿವರ

ಇಂದಿನ ದಿನಗಳಲ್ಲಿ ಆರೋಗ್ಯದ ಕಾಳಜಿಯನ್ನು ತಾವು ಸೇವಿಸುವ ಆಹಾರದ ಕ್ಯಾಲೋರಿಗಳ ಮೂಲಕ ಆಳೆಯುವ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ. ಇವರಿಗಾಗಿ ಸುಮಾರು ಕಾಲು ಕೇಜಿಯಷ್ಟು ಮಟನ್ ಬಿರಿಯಾನಿಯಲ್ಲಿರುವ ಪೋಷಕಾಂಶಗಳ ವಿವರ ಹೀಗಿದೆ:

ಮಟನ್ ಬಿರಿಯಾನಿಯಲ್ಲಿರುವ ಪೋಷಕಾಂಶಗಳ ವಿವರ

ಮಟನ್ ಬಿರಿಯಾನಿಯಲ್ಲಿರುವ ಪೋಷಕಾಂಶಗಳ ವಿವರ

*ಕ್ಯಾಲೋರಿಗಳು: 415. 9 ಕಿಲೋಕ್ಯಾಲೋರಿ

*ಪ್ರೋಟೀನ್: 16.23 ಗ್ರಾಂ

*ಕೊಬ್ಬು:17.51 ಗ್ರಾಂ

*ಸಂತೃಪ್ತ ಕೊಬ್ಬು: 3.31 ಗ್ರಾಂ

*ಕಾರ್ಬೋಹೈರ್ಡ್ರೇಟುಗಳು: 47.32 ಗ್ರಾಂ

*ಸೋಡಿಯಂ: 28.2 ಮಿಲಿಗ್ರಾಂ

*ಪೊಟ್ಯಾಶಿಯಂ: 341.31 ಮಿಲಿಗ್ರಾಂ

*ಕ್ಯಾಲ್ಸಿಯಂ: 124.24 ಮಿಲಿಗ್ರಾಂ

*ಸತು: 0.89 ಮಿಲಿಗ್ರಾಂ

*ಕಬ್ಬಿಣ: 2.42 ಮಿಲಿಗ್ರಾಂ

Most Read:ಆರೋಗ್ಯ ಟಿಪ್ಸ್: ಚೈನೀಸ್ ಚಿಕನ್ ಫ್ರೈಡ್ ರೈಸ್‌ನಲ್ಲಿರುವ ಪೋಷಕಾಂಶಗಳು

250 ಗ್ರಾಂ.ಮಟನ್ ಬಿರಿಯಾನಿಯಲ್ಲಿರುವ ವಿಟಮಿನ್ ಗಳ ವಿವರ

250 ಗ್ರಾಂ.ಮಟನ್ ಬಿರಿಯಾನಿಯಲ್ಲಿರುವ ವಿಟಮಿನ್ ಗಳ ವಿವರ

*ವಿಟಮಿನ್ A: 8.79 ಮೈಕ್ರೋಗ್ರಾಂ

*ವಿಟಮಿನ್ B2 0.15 ಮಿಲಿಗ್ರಾಂ

*ವಿಟಮಿನ್ B6: 3.97 ಮಿಲಿಗ್ರಾಂ.

*ವಿಟಮಿನ್ B9:24. 1 ಮೈಕ್ರೋಗ್ರಾಂ

*ವಿಟಮಿನ್ C: 6.94 ಮಿಲಿಗ್ರಾಂ

*ಕ್ಯಾರೋಟಿನಾಯ್ಡ್: 597. 31 ಮೈಕ್ರೋಗ್ರಾಂ

ಮಟನ್ ಬಿರಿಯಾನಿ ಸೇವಿಸುವ ಮಧುಮೇಹಿಗಳಿಗೆ ಕೆಲವು ಸಲಹೆಗಳು

ಮಟನ್ ಬಿರಿಯಾನಿ ಸೇವಿಸುವ ಮಧುಮೇಹಿಗಳಿಗೆ ಕೆಲವು ಸಲಹೆಗಳು

* ನೀವು ಸೇವಿಸುವ ಬಿರಿಯಾನಿ ಮಿತ ಪ್ರಮಾಣದಲ್ಲಿರಲಿ. ಸುಮಾರು ಇನ್ನೂರೈವತ್ತು ಗ್ರಾಂ ಬೇಕಾದಷ್ಟಾಯಿತು. ಆದರೆ ವಾರದಲ್ಲಿ ಒಟ್ಟು ಪ್ರಮಾಣ ನಾನೂರೈವತ್ತು ಗ್ರಾಂ ಮೀರಬಾರದು! ಆದರೆ ಈ ಮಿತಿಗಳು ಸರಾಸರಿಯೇ ಹೊರತು ಪ್ರತಿ ವ್ಯಕ್ತಿಯ ಆರೋಗ್ಯ ಮತ್ತು ವ್ಯಾಯಾಮಗಳನ್ನು ಆಧರಿಸಿ ಕೊಂಚ ಹೆಚ್ಚು ಕಡಿಮೆಯಾಗಬಹುದು. ನಿಮ್ಮ ಕುಟುಂಬ ವೈದ್ಯರು ಅಥವಾ ತಜ್ಞವೈದ್ಯರು ಅಥವಾ ಆಹಾರತಜ್ಞರು ನೀಡುವ ವಿವರಗಳನ್ನು ಪರಿಗಣಿಸಿ ಆ ಮಿತಿಯೊಳಗಿನ ಪ್ರಮಾಣಕ್ಕೆ ಬದ್ದರಾಗುವುದು ಮುಖ್ಯ.

* ಮಟನ್ ಬಿರಿಯಾನಿಯನ್ನು ಬೆಳಗ್ಗಿನ ಉಪಾಹಾರ ಅಥವಾ ಮದ್ಯಾಹ್ನದ ಊಟಕ್ಕೆ ಸೇವಿಸುವುದು ಉತ್ತಮ. ರಾತ್ರಿಯೂಟಕ್ಕೆ

ತಕ್ಕುದಲ್ಲ. ಏಕೆಂದರೆ ಇದರಲ್ಲಿರುವ ಪ್ರೋಟೀನುಗಳು ಹಗಲಿನ ಸಮಯದಲ್ಲಿ ಹೆಚ್ಚು ಬಳಕೆಗೊಳ್ಳುತ್ತವೆ.

* ಈ ಆಹಾರದ ಸೇವನೆಯಿಂದ ಲಭಿಸಿದ ಪ್ರೋಟೀನುಗಳನ್ನು ಅಂದೇ ದಹಿಸುವ ಮೂಲಕ ತೂಕ ಏರದಂತೆ ತಡೆಗಟ್ಟಬಹುದು. ಹಾಗಾಗಿ ಸಾಕಷ್ಟು ವ್ಯಾಯಾಮ ಅಗತ್ಯ.

ಮಟನ್ ಬಿರಿಯಾನಿ ಸೇವಿಸುವ ಮಧುಮೇಹಿಗಳಿಗೆ ಕೆಲವು ಸಲಹೆಗಳು

ಮಟನ್ ಬಿರಿಯಾನಿ ಸೇವಿಸುವ ಮಧುಮೇಹಿಗಳಿಗೆ ಕೆಲವು ಸಲಹೆಗಳು

* ಮಾಂಸದ ತುಂಡುಗಳು ಆದಷ್ಟೂ ಚಿಕ್ಕದಾಗಿರಲಿ

* ಬಿರಿಯಾನಿ ತಯಾರಿಸುವಾಗ ಚಿಕ್ಕ ಉರಿಯಲ್ಲಿ ತಯಾರಿಸಿದ, ಬೇಯಿಸಿದ, ಹಬೆಯಲ್ಲಿ ಬೇಯಿಸಿದ, ನೀರಿನಲ್ಲಿ ಕುದಿಸಿದ ಬಳಿಕ ಬಳಸಿದ ಮಾಂಸದ ಬಳಕೆ ಉತ್ತಮ.

* ಬೇಯಿಸುವ ಮುನ್ನ ಕುರಿಮಾಂಸಕ್ಕೆ ಲಿಂಬೆರಸ, ಆಲಿವ್ ಎಣ್ಣೆ ಮತ್ತು ಬೆಳ್ಳುಳ್ಳಿಗಳ ಮಿಶ್ರಣವನ್ನು ಲೇಪಿಸಿ ಕೊಂಚ ಕಾಲ ಹಾಗೇ ಬಿಟ್ಟು ಹೀರಿಕೊಳ್ಳುವಂತೆ ಮಾಡುವ ಮೂಲಕ ಇದರಲ್ಲಿರುವ ಹಾನಿಕರ ರಾಸಾಯನಿಕಗಳ ಪ್ರಭಾವವನ್ನು ತಗ್ಗಿಸಬಹುದು.

* ಬಿರಿಯಾನಿ ಸೇವಿಸಿದ ಬಳಿಕ ಗಿಡಮೂಲಿಕೆಗಳ ಅಥವಾ ಹಸಿರು ಟೀ ಅಥವಾ ಕಾಫಿ ಕುಡಿಯಿರಿ, ಇದರಿಂದ ಬಿರಿಯಾನಿಯಲ್ಲಿರುವ ಕಬ್ಬಿಣ ನಿಧಾನವಾಗಿ ಹೀರಲ್ಪಡುತ್ತದೆ.

English summary

Can people with diabetes eat mutton biryani?

Walk into any Indian restaurant, and you’ll find as many mutton dishes as there are of chicken. Delicious and filled with masala, dishes like Rogan Josh, Laal Maas, Nalli Nihari, Mutton Korma, and of course mutton biryani are most preferred.But, red meat is the first thing you are asked to avoid in diabetes.Is mutton really so bad that you have to exclude from your diabetes diet? Let’s find out!
X
Desktop Bottom Promotion