For Quick Alerts
ALLOW NOTIFICATIONS  
For Daily Alerts

ಪದೇ ಪದೇ ಆಯಾಸ ಆಗುತ್ತಿದ್ದರೆ-ಮಧುಮೇಹ ರೋಗವಿದೆ ಎಂದರ್ಥ!

|

ಎಷ್ಟೇ ಆರೋಗ್ಯವಂತರಾಗಿರಲಿ, ಎಂದಾದರೊಮ್ಮೆ ಆಯಾಸವನ್ನು ಅನುಭವಿಸಿಯೇ ಇರುತ್ತಾರೆ. ಇದಕ್ಕೆ ಕೆಲವಾರು ಕಾರಣಗಳನ್ನು ಒದಗಿಸಬಹುದು. ಉತ್ತಮ ಆರೋಗ್ಯವಿದ್ದಾಗಲೂ, ಕೆಲವೊಮ್ಮೆ ವಿಪರೀತವಾಗಿ ದಣಿಯುವಂತಹ ಕೆಲಸ ಮಾಡಿದಾಗ, ಅತಿಯಾದ ಮಾನಸಿಕ ಒತ್ತಡವಿದ್ದಾಗ ಸಹಾ ಸುಸ್ತು ಎದುರಾಗಬಹುದು. ಒಂದು ವೇಳೆ ಸೂಕ್ತ ಕಾರಣವಿಲ್ಲದೇ ಆಗಾಗ ಸುಸ್ತಾಗುತ್ತಿದ್ದರೆ ಅಥವಾ ಆಯಾಸ ಆಗುತ್ತಿದ್ದರೆ ಇದು ಯಾವುದೋ ಒಂದು ಅನಾರೋಗ್ಯದ ಸೂಚನೆಯಾಗಿರಬಹುದು!

ವಾಸ್ತವದಲ್ಲಿ, ಮಾನಸಿಕವೇ ಆಗಲಿ, ದೈಹಿಕವೇ ಆಗಲಿ, ಯಾವುದೇ ಕಾಯಿಲೆಯಿಂದ ಸುಸ್ತಾಗುವುದು ಮೊದಲಾಗಿ ಎಲ್ಲರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ವ್ಯಕ್ತಿಯೊಬ್ಬರಿಗೆ ಅತೀವವಾದ ತಲೆನೋವು ಇದೆ ಎಂದರೆ ಈ ಸಮಯದಲ್ಲಿ ದಣಿಯುವಂತಯ ಯಾವುದೇ ಕೆಲಸ ಮಾಡದೇ ಇದ್ದರೂ ಸುಸ್ತು ಆವರಿಸುತ್ತದೆ. ಹೃದ್ರೋಗಿಗಳು, ಕ್ಯಾನ್ಸರ್ ಹಾಗೂ ಮಧುಮೇಹ ಇರುವ ವ್ಯಕ್ತಿಗಳಿಗೂ ಬೇಗನೇ ಆಯಾಸವಾಗುತ್ತದೆ.

diabetes symptoms

ಒಂದು ವೇಳೆ ಈ ಸುಸ್ತು ಸತತವಾಗಿದ್ದರೆ ಇದಕ್ಕೆ ಕಾರಣವನ್ನು ಹುಡುಕುವುದು ಕಷ್ಟಕರವಾಗುತ್ತದೆ. ಏಕೆಂದರೆ ಸುಸ್ತು ಹಲವಾರು ಕಾಯಿಲೆಗಳ ಸಮಾನ ಲಕ್ಷಣವಾಗಿದ್ದು ಈ ಸುಸ್ತು ಆವರಿಸಲು ಯಾವ ಕಾಯಿಲೆ ಕಾರಣ ಎಂದು ಕಂಡುಕೊಳ್ಳುವುದು ವೈದ್ಯರಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ.

ಇಂದು, ಮಧುಮೇಹ ಎಂದರೆ ಸಾಮಾನ್ಯವಾದ ಜೀವರಾಸಾಯನಿಕ ಅಸ್ವಸ್ಥತೆಯಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವ್ಯಕ್ತಿಗಳನ್ನು ಆವರಿಸುತ್ತಿದೆ. ಇತ್ತೀಚಿನ ಅಧ್ಯಯನಗಳಲ್ಲಿ ಒಂದು ವೇಳೆ ವ್ಯಕ್ತಿಗೆ ಈಗಾಗಲೇ ಮಧುಮೇಹ ಆವರಿಸಿದ್ದರೆ ಇದರ ಪರಿಣಾಮವಾಗಿ ದಿನದ ಒಂದು ನಿರ್ದಿಷ್ಟ ಅವಧಿಯಲ್ಲಿ ಹೆಚ್ಚಿನ ಸುಸ್ತು ಎದುರಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ. ಆ ಪ್ರಕಾರ ಒಂದು ವೇಳೆ ಬೇರಾವ ಕಾರಣವಿಲ್ಲದಿದ್ದರೂ ದಿನದ ಒಂದೇ ಸಮಯದಲ್ಲಿ ಸುಸ್ತಾಗುತ್ತಿದ್ದರೆ ಇದು ಮಧುಮೇಹದ ಇರುವಿಕೆಯನ್ನು ಸ್ಪಷ್ಟಪಡಿಸುತ್ತದೆ. ಏಕೆ ಹೀಗೆ? ತಿಳಿಯಲು ಇಂದಿನ ಲೇಖನದಲ್ಲಿ ಅಮೂಲ್ಯ ಮಾಹಿತಿಗಳನ್ನು ಒದಗಿಸಲಾಗಿದೆ:

ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸೀಬೆಹಣ್ಣಿನ ಎಲೆಗಳು ನೆರವಾಗಲಿದೆ!

• ಮಧುಮೇಹ ಎಂದರೇನು?
• ಮಧುಮೇಹಕ್ಕೂ, ನಡುಮಧ್ಯಾಹ್ನ ಆವರಿಸುವ ಸುಸ್ತಿಗೂ ಏನು ಸಂಬಂಧ?
• ಮಧುಮೇಹ ಇರುವುದು ಖಚಿತವಾದರೆ ಏನು ಮಾಡಬೇಕು?

ಮಧುಮೇಹ ಎಂದರೇನು?

ಸಾಮಾನ್ಯವಾದ ಜೀವರಾಸಾಯನಿಕ ಅಸ್ವಸ್ಥತೆ ಎಂದು ಮಧುಮೇಹವನ್ನು ಸರಳಪದಗಳಲ್ಲಿ ವಿವರಿಸಬಹುದು. ಅಂದರೆ ಜೀವರಾಸಾಯನಿಕ ಕ್ರಿಯೆ ಪೂರ್ಣವಾಗದ ಅಸಾಮರ್ಥ್ಯತೆ ಎಂದು ಹೇಳಬಹುದು. ಈ ಸ್ಥಿತಿ ಎದುರಾದಾಗ ಇನ್ಸುಲಿನ್ ಎಂಬ ರಸದೂತದ ಏರಿಳಿತದ ಪರಿಣಾಮವಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟ ಏರುತ್ತದೆ ಹಾಗೂ ಮೂತ್ರದ ಮೂಲಕ ಸಕ್ಕರೆಯೂ ವಿಸರ್ಜನೆಗೊಳ್ಳುತ್ತದೆ. ಹಿಂದಿನ ದಿನಗಳಲ್ಲಿ, ಮಧುಮೇಹಿಗಳು ವಿಸರ್ಜಿಸಿದ ಈ ಮೂತ್ರಕ್ಕೆ ಇರುವೆಗಳು ಮುತ್ತುತ್ತಿದ್ದುದರಿಂದಲೇ ಇದಕ್ಕೆ 'ಸಕ್ಕರೆ ಕಾಯಿಲೆ' ಎಂದು ನಮ್ಮ ಹಿರಿಯರು ಕರೆದರು. ಈ ಸ್ಥಿತಿ ಎದುರಾದ ಬಳಿಕ ಇದನ್ನು ಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಇದರ ಪರಿಣಾಮಗಳನ್ನು ಕಂಡುಕೊಂಡು ಸೂಕ್ತ ಔಷಧಿ ಹಾಗೂ ಜೀವನಕ್ರಮದಲ್ಲಿ ಬದಲಾವಣೆಯ ಮೂಲಕ ನಿಯಂತ್ರಣದಲ್ಲಿರಿಸಲು ಮಾತ್ರವೇ ಸಾಧ್ಯ.

ಮಧುಮೇಹಕ್ಕೂ, ನಡುಮಧ್ಯಾಹ್ನ ಆವರಿಸುವ ಸುಸ್ತಿಗೂ ಏನು ಸಂಬಂಧ?

ಒಂದು ವೇಳೆ ವ್ಯಕ್ತಿಯೊಬ್ಬರಿಗೆ ಮಧುಮೇಹ ಆವರಿಸಿದರೆ ಇವರ ರಕ್ತದಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಸಕ್ಕರೆ ಇರುತ್ತದೆ ಹಾಗೂ ಈ ತೊಂದರೆ ಇತರ ಹಲವಾರು ಅನಾರೋಗ್ಯಗಳಿಗೆ ಕಾರಣವಾಗುತ್ತದೆ. ಒಂದು ವೇಳೆ ನಿತ್ಯವೂ ನಡುಮದ್ಯಾಹ್ನ ಅಂದರೆ ಒಂದು ಘಂಟೆಯಿಂದ ನಾಲ್ಕು ಘಂಟೆಯವರೆಗೆ ಅಪಾರ ಸುಸ್ತು ಅನುಭವಿಸುತ್ತಿದ್ದರೆ, ವಿಶೇಷವಾಗಿ ಮಧ್ಯಾಹ್ನದ ಊಟದ ಬಳಿಕ ಈ ಸುಸ್ತು ಆವರಿಸುತ್ತಿದ್ದರೆ ಇದು ಮಧುಮೇಹದ ಇರುವಿಕೆಯನ್ನು ಸಾದರಪಡಿಸುತ್ತಿರಬಹುದು.

ಈ ಸ್ಥಿತಿಗೆ ಕಾರಣವೇನೆಂದರೆ, ದಿನದ ಈ ಅವಧಿಯಲ್ಲಿ, ವಿಶೇಷವಾಗಿ ಮಧ್ಯಾಹ್ನದ ಊಟದ ಬಳಿಕ ದೇಹದ ರಕ್ತದಲ್ಲಿ ಈಗಾಗಲೇ ಇರುವ ಸಕ್ಕರೆಯೊಂದಿಗೆ ಈಗತಾನೇ ಮಾಡಿದ ಊಟದ ಮೂಲಕ ಆಗಮಿಸಿದ ಸಕ್ಕರೆಯೂ ರಕ್ತಕ್ಕೆ ಆಗಮಿಸುತ್ತದೆ. ಈ ಆಗಾಧ ಪ್ರಮಾಣದ ಸಕ್ಕರೆಯನ್ನು ಸಂಸ್ಕರಿಸಲು ದೇಹಕ್ಕೆ ವಿಪರೀತವಾದ ಒತ್ತಡ ಎದುರಾಗುತ್ತದೆ. ಮಧುಮೇಹಿಗಳಲ್ಲಿ ಈ ಸಕ್ಕರೆಯನ್ನು ಬಳಸಿಕೊಳ್ಳಲು ಇನ್ಸುಲಿನ್ ಎಂಬ ರಸದೂತ ಅಲ್ಪ ಪ್ರಮಾಣದಲ್ಲಿರುವುದು (ಟೈಪ್ ೧) ಅಥವಾ ಇದ್ದರೂ ಬಳಸಿಕೊಳ್ಳಲಾಗದ ಅಸಾಮರ್ಥ್ಯತೆ (ಟೈಪ್ ೨) ಯ ಕಾರಣದಿಂದ ಈ ಅಗಾಧ ಸಕ್ಕರೆಯಿಂದಾಗಿ ಸುಸ್ತು ಆವರಿಸುತ್ತದೆ. ಊಟದ ಬಳಿಕ ಯಾವುದೇ ಸುಸ್ತಾಗುವಂತಹ ಚಟುವಟಿಕೆ ಇಲ್ಲದಿದ್ದರೂ ಮಧುಮೇಹವಿದ್ದರೆ ಸುಸ್ತು ಆವರಿಸುತ್ತದೆ.

ಒಂದರ್ಥದಲ್ಲಿ ಮಧುಮೇಹಿಗಳಿಗೆ ದಿನದ ಯಾವುದೇ ಅವಧಿಯಲ್ಲಿ ಸೇವಿಸಿದ ಆಹಾರದಿಂದಲೂ ಆಗಮಿಸುವ ಹೆಚ್ಚುವರಿ ಸಕ್ಕರೆಯಿಂದಾಗಿ ಸುಸ್ತು ಎದುರಾಗುತ್ತದೆ. ಆದರೆ ಇತರ ಸಮಯಕ್ಕಿಂತಲೂ ಮಧ್ಯಾಹ್ನದ ಊಟದ ಬಳಿಕ ಎದುರಾಗುವ ಸುಸ್ತು ಅತಿ ಹೆಚ್ಚಾಗಿರುವುದರಿಂದ ಈ ಸುಸ್ತು ಹೆಚ್ಚು ಪ್ರಕಟಗೊಳ್ಳುತ್ತದೆ ಹಾಗೂ ಮಧುಮೇಹದ ಇರುವಿಕೆಯ ಸ್ಪಷ್ಟ ಸಂಕೇತವನ್ನು ನೀಡುತ್ತದೆ.

ಮಧುಮೇಹಿಗಳು ಈ ಎಂಟು ಬಗೆಯ 'ಹೃದಯ ಪರೀಕ್ಷೆ' ಗಳನ್ನು ಮಾಡಿಸಿಕೊಳ್ಳಲೇಬೇಕು!

ಇದು ಏಕೆಂದರೆ, ಮಧುಮೇಹ ಇಲ್ಲದಿರುವ ವ್ಯಕ್ತಿಗಳಲ್ಲಿ ದಿನದ ಚಟುವಟಿಕೆಯಿಂದಾಗಿ ಸಕ್ಕರೆ ಬಳಕೆಗೊಂಡಿರುತ್ತದೆ ಹಾಗೂ ಈಗ ಮಧ್ಯಾಹ್ನದ ಊಟದ ಬಳಿಕವೂ ಆಗಮಿಸಿದ ಸಕ್ಕರೆಯನ್ನು ಇವರ ದೇಹದಲ್ಲಿರುವ ಇನ್ಸುಲಿನ್ ನಿರ್ವಹಿಸುತ್ತದೆ ಹಾಗೂ ಸುಸ್ತು ಎದುರಾಗುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ಊಟದ ಬಳಿಕ ಸುಸ್ತು ಎದುರಾದರೆ ಈ ವ್ಯಕ್ತಿ ಮಧುಮೇಹದಿಂದ ಪೀಡಿತನಾಗಿರಬಹುದು ಎಂಬ ಸೂಚನೆಯಾಗಿದೆ.

ಆದರೂ, ಕೇವಲ ಮಧ್ಯಾಹ್ನದ ಊಟದ ಬಳಿಕ ಸುಸ್ತಾಗುತ್ತದೆ ಎಂಬ ಏಕಮಾತ್ರ ಸೂಚನೆಯನ್ನೇ ಮಧುಮೇಹದ ಇರುವಿಕೆಯ ಸೂಚನೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಓರ್ವ ವ್ಯಕ್ತಿ ಮಧುಮೇಹಿ ಎಂದು ಖಚಿತಪಡಿಸಿಕೊಳ್ಳಲು ಕನಿಷ್ಟ ಇನ್ನೂ ಎರಡಾದರೂ ಸೂಚನೆಗಳನ್ನು ಖಚಿತಪಡಿಸಬೇಕಾಗುತ್ತದೆ. ಹಾಗಾಗಿ ವೈದ್ಯರು ಈ ಸೂಚನೆಯನ್ನೇ ಅಂತಿಮ ಎಂದು ಪರಿಗಣಿಸದೇ ಇತರ ಪರೀಕ್ಷೆಗಳನ್ನೂ ನಡೆಸುತ್ತಾರೆ.

ಮಧುಮೇಹ ಆವರಿಸಿದಾಗ ಎದುರಾಗುವ ಲಕ್ಷಣಗಳಲ್ಲಿ ಪ್ರಮುಖವಾದ ಕೆಲವನ್ನು ಇಲ್ಲಿ ಪಟ್ಟಿ ಮಾಡಿದ್ದು ಮಧ್ಯಾಹ್ನದ ಸುಸ್ತಿನೊಂದಿಗೇ ಈ ಲಕ್ಷಣಗಳೂ ಆವರಿಸಿದ್ದರೆ ಮಧುಮೇಹದ ಇರುವಿಕೆಯನ್ನು ಸ್ಪಷ್ಟಪಡಿಸಲು ನೆರವಾಗುತ್ತದೆ.

• ಅತಿಯಾದ ಬಾಯಾರಿಕೆ
• ಸತತವಾಗಿ ಮೂತ್ರವಿಸರ್ಜನೆಗೆ ಅವಸರವಾಗುತ್ತಿರುವುದು
• ಥಟ್ಟನೇ, ಅನಿರೀಕ್ಷಿತವಾಗಿ ತೂಕ ಇಳಿಯುವುದು
• ದೃಷ್ಟಿ ಮಂಜಾಗುವುದು
• ಹಸಿವಿನಲ್ಲಿ ಏರಿಳಿತಗಳು
• ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುವುದು
• ಗಾಯಗಳು ಮಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು
• ಕಾಯಿಲೆ ಗುಣಹೊಂದಲು ಹೆಚ್ಚು ಸಮಯದ ತೆಗೆದುಕೊಳ್ಳುವುದು
• ಜೀವರಾಸಾಯನಿಕ ಕ್ರಿಯೆ ಕುಂಠಿತಗೊಳ್ಳುವುದು
• ಸಿಡುಕುತನ ಆವರಿಸುವುದು
• ತ್ವಚೆಯಲ್ಲಿ ಆಗಾಗ ತುರಿಕೆ ಕಾಣಿಸಿಕೊಳ್ಳುವುದು
• ಸತತವಾಗಿ ಶಿಲೀಂಧ್ರದ ಸೋಂಕು ಕಾಣಿಸಿಕೊಳ್ಳುವುದು
• ಒಸಡುಗಳು ಊದಿಕೊಳ್ಳುವುದು ಹಾಗೂ ಒಸಡುಗಳ ಅಂಚು ಕಡಿಮೆಯಾಗುತ್ತಾ ಸಾಗುವುದು
• ಆಗಾಗ ಎದುರಾಗುವ ಒಸಡುಗಳ ಸೋಂಕು
• ಲೈಂಗಿಕ ಶಕ್ತಿಯ ಕೊರತೆ ಎದುರಾಗುವುದು, ವಿಶೇಷವಾಗಿ ಪುರುಷರಲ್ಲಿ ಲೈಂಗಿಕ ನಿರಾಸಕ್ತಿ ಎದುರಾಗುವುದು
• ಹಸ್ತ ಮತ್ತು ಪಾದಗಳಲ್ಲಿ ಜೊಂಪು ಹಿಡಿಯುವುದು ಮತ್ತು ಒಳಭಾಗದಲ್ಲಿ ಚಿಕ್ಕದಾಗಿ ಸೂಜಿ ಚುಚ್ಚಿದಂತಹ ಅನುಭವವಾಗುವುದು
• ವಾಯುಪ್ರಕೋಪದ ತೊಂದರೆ ಹೆಚ್ಚುವುದು

ಮಧುಮೇಹ ಇರುವುದು ಖಚಿತವಾದರೆ ಏನು ಮಾಡಬೇಕು?

ಒಂದು ವೇಳೆ ಮೇಲೆ ತಿಳಿಸಿದ ಲಕ್ಷಣಗಳಲ್ಲಿ ಕೆಲವಾದರೂ ನಿಮಗೆ ಅನುಭವವಾಗಿದ್ದರೆ ಹಾಗೂ ಇದರೊಂದಿಗೆ ಮಧ್ಯಾಹ್ನದ ಸುಸ್ತು ಸಹಾ ಪ್ರತಿದಿನ ಆವರಿಸುತ್ತಿದ್ದರೆ ವೈದ್ಯರು ತಕ್ಷಣವೇ ನಿಮಗೆ ಕೆಲವು ಚಿಕಿತ್ಸೆಗಳನ್ನು ಪ್ರಾರಂಭಿಸಲು ಸಲಹೆ ಮಾಡಬಹುದು. ಇದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿದ್ದು ಈ ಲಕ್ಷಣಗಳಿಂದ ದೂರವಿರುವಂತೆ ಮಾಡಲು ಸಾಧ್ಯವಾಗುತ್ತದೆ. ಇದರೊಂದಿಗೆ ಜೀವನಕ್ರಮದಲ್ಲಿಯೂ ಅನಿವಾರ್ಯವಾಗಿ ಕೆಲವು ಮಾರ್ಪಾಡುಗಳನ್ನು ಮಾಡಬೇಕಾಗಿ ಬರಬಹುದು. ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಕೆಲವು ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದ್ದು ಇವುಗಳಲ್ಲಿ ಪ್ರಮುಖವಾದವು ಇಂತಿವೆ:

* ಕೇವಲ ಆರೋಗ್ಯಕರ ಆಹಾರಕ್ರಮವನ್ನೇ ಅನುಸರಿಸುವುದು, ಸಕ್ಕರೆ ಅಥವಾ ಗ್ಲೂಕೋಸ್ ಪ್ರಮಾಣ ಹೆಚ್ಚಿರುವ ಆಹಾರಗಳನ್ನು ವರ್ಜಿಸುವುದು
* ನಿತ್ಯವೂ, ರಜಾದಿನಗಳನ್ನೂ ಬಿಡದೇ ದಿನದ ಒಂದು ನಿರ್ದಿಷ್ಟ ಹೊತ್ತಿನಲ್ಲಿ ಮಧ್ಯಮ ಪ್ರಮಾಣದ ವ್ಯಾಯಾಮವನ್ನು ಮಾಡುವುದು ಹಾಗೂ ಆರೋಗ್ಯಕರ ಮಿತಿಯ ತೂಕವನ್ನು ಹೊಂದುವುದು
* ಎಂದಿಗೂ ಆರೋಗ್ಯಕ್ಕೆ ಮಾರಕವೇ ಆಗಿರುವ ಧೂಮಪಾನ ಮತ್ತು ಮದ್ಯಪಾನಗಳನ್ನು ಪೂರ್ಣವಾಗಿ ಬಿಡುವತ್ತ ದೃಢ ನಿಶ್ಚಯ ಹೊಂದಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು.
* ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟಗಳು ಆರೋಗ್ಯಕರ ಮಿತಿಗಳಲ್ಲಿರುವಂತೆ ಎಚ್ಚರ ವಹಿಸುವುದು
* ವೈದ್ಯರು ಸೂಚಿಸಿರುವ ಔಷಧಿಗಳನ್ನು ಚಾಚೂ ತಪ್ಪದೇ ಸೇವಿಸುವುದು ಹಾಗೂ ಮಧುಮೇಹಿಗಳಿಗೆ ಸೂಕ್ತವಾದಂತಹ ನೈಸರ್ಗಿಕ, ಸಕ್ಕರೆಯಿಲ್ಲದ ಹಾಗೂ ಮಿತಪ್ರಮಾಣದ ಆಹಾರಗಳನ್ನೇ ಸೇವಿಸಬೇಕು ಹಾಗೂ ದಿನದಲ್ಲಿ ಎದುರಾಗುವ ಸುಸ್ತು ಮತ್ತು ಇತರ ಲಕ್ಷಣಗಳನ್ನು ಕಡಿಮೆಗೊಳಿಸಲು ಯತ್ನಿಸಬೇಕು.
* ಅತಿ ಕನಿಷ್ಟ ಪ್ರಮಾಣದಲ್ಲಿ ಮಾತ್ರವೇ ಹೆಚ್ಚಿನ ಕೊಬ್ಬು ಮತ್ತು ಕಾರ್ಬೋಹೈಡ್ರೇಟುಗಳನ್ನೊಳಗೊಂಡ ಆಹಾರಗಳನ್ನು ಸೇವಿಸಬೇಕು.

English summary

Feeling Tired At This Time Indicates Diabetes!

Diabetes is a metabolic disorder in which the blood sugar levels of the body become very high, due to the fluctuations of the insulin hormone being produced. Diabetes has a number of symptoms, such as excessive thirst, low immunity, etc., including fatigue.Especially, feeling very tired at one particular point of the day can indicate
Story first published: Friday, August 31, 2018, 17:22 [IST]
X
Desktop Bottom Promotion