For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳು ಬೆಲ್ಲವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?

By Divya Pandith
|

ಇಂದಿನ ಜಗತ್ತು ಫಾಸ್ಟ್ ಫುಡ್ ಸಂಸ್ಕೃತಿಯ ಮೇಲೆ ನಿಂತಿದೆ. ಇದರಿಂದ ವಿವಿಧ ಬಗೆಯ ರೋಗಗಳು ಮನುಷ್ಯರನ್ನು ಕಾಡುತ್ತಿದೆ. ಸಂಸ್ಕರಿಸಿದ ಹಿಟ್ಟು, ಕೆಟ್ಟ ಕೊಬ್ಬಿನಂಶದಿಂದ ಕೂಡಿದ ಎಣ್ಣೆಗಳು ಅನಾರೋಗ್ಯವನ್ನು ಹುಟ್ಟಿಸುತ್ತವೆ. ನಗರವಾಸಿಗಳಿಗೆ ಹಾಗೂ ಮಾಲಿನ್ಯದಿಂದ ಕೂಡಿರುವ ಪ್ರದೇಶದಲ್ಲಿ ವಾಸಿಸುವವರಿಗೆ ರಕ್ತದೊತ್ತಡ ಮತ್ತು ಮಧುಮೇಹವು ಸಾಮಾನ್ಯವಾದ ರೋಗ ಎಂದು ಹೇಳಬಹುದು.

ವಿಶ್ವದಲ್ಲಿಯೇ ಅತಿಹೆಚ್ಚು ಮಧುಮೇಹಿಗಳನ್ನು ಹೊಂದಿರುವ ದೇಶ ಎನ್ನುವ ಆಘಾತಕಾರಿ ಸುದ್ದಿಯು ನಮ್ಮನ್ನು ಒಮ್ಮೆ ಆಶ್ಚರ್ಯ ಗೊಳಿಸುವುದು ಸುಳ್ಳಲ್ಲ. ಅನೇಕ ಮಂದಿ ಮಧುಮೇಹದ ಸಮಸ್ಯೆಯಿಂದಲೇ ಸಾವನ್ನಪ್ಪುತ್ತಿದ್ದಾರೆ ಎಂಬುದು ವರದಿಯಾಗಿದೆ. ಅನಾರೋಗ್ಯಕರ ಜೀವನ ಶೈಲಿಯಿಂದ ಉಂಟಾಗುವ ರೋಗ ಮಧುಮೇಹ. ದೇಹದಲ್ಲಿರುವ ಇನ್ಸುಲಿನ್ ನಮ್ಮ ಆಹಾರವನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ. ಯಾವಾಗ ನಮ್ಮ ದೇಹದಲ್ಲಿ ಇನ್ಸುಲಿನ್ ಸ್ರವಿಕೆ ಉಂಟಾಗುವುದಿಲ್ಲವೋ ಆಗ ಆಹಾರದಲ್ಲಿರುವ ಸಕ್ಕರೆ ಅಂಶವು ಗ್ಲೂಕೋಸ್‍ಆಗಿ ಪರಿವರ್ತನೆಗೊಳ್ಳುತ್ತದೆ. ಆಗ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

Jaggery

ಇದು ನಿಧಾನವಾಗಿ ನಮ್ಮ ಆಂತರಿಕ ಅಂಗಗಳಾದ ಅಪಧಮನಿ, ಹೃದಯ, ಮೂತ್ರಪಿಂಡ ಸೇರಿದಂತೆ ಅನೇಕ ಭಾಗಗಳು ಹಾನಿ ಗೊಳಗಾಗುತ್ತವೆ. ಕೆಲವೊಮ್ಮೆ ಇವುಗಳ ಕಾರ್ಯ ವಿಫಲಗೊಂಡು ಮರಣ ಹೊಂದುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಮಧುಮೇಹ ಹೊಂದಿರುವ ವ್ಯಕ್ತಿಗಳು ತಿಂಗಳಿಗೊಮ್ಮೆ ತಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಎಷ್ಟಿದೆ? ಎನ್ನುವುದನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು. ಜೊತೆಗೆ ಸಕ್ಕರೆ ಅಂಶ ಇಲ್ಲದ ಆಹಾರವನ್ನು ಸೇವಿಸಬೇಕು. ಹಾಗೊಮ್ಮೆ ಸಿಹಿ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಿದರೆ ದೇಹದಲ್ಲಿ ಸಕ್ಕರೆ ಪ್ರಮಾಣವು ಅಧಿಕಗೊಳ್ಳುವುದು.

ಕಡಿಮೆ ಗ್ಲೈಸೆಮಿಕ್ ಆಹಾರವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯು ನಿಧಾನವಾಗಿ ಜೀರ್ಣವಾಗುತ್ತದೆ. ಜೊತೆಗೆ ರಕ್ತದಲ್ಲಿ ಸಕ್ಕರೆ ಪ್ರಮಾಣವೂ ಸಮತೋಲನದಲ್ಲಿ ಇರುತ್ತದೆ. ದೇಶದಲ್ಲಿ ಹೆಚ್ಚು ಮಧುಮೇಹಿಗಳಿರುವುದರಿಂದ ಕೃತಕ ಸಿಹಿಯಿಂದ ತಯಾರಿಸಿದ ಆಹಾರೋತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವು ಮಧುಮೇಹಿಗಳ ದೇಹಕ್ಕೆ ಒಗ್ಗುವುದರಿಂದ ಮಾರಾಟವೂ ಜೋರಾಗಿಯೇ ನಡೆಯುತ್ತದೆ. ಮಧುಮೇಹಿಗಳಿಗೆ ನೈಸರ್ಗಿಕವಾಗಿ ತಯಾರಿಸುವ ಜೇನುತುಪ್ಪ ಮತ್ತು ಬೆಲ್ಲವನ್ನು ಸಕ್ಕರೆಯ ಬದಲಿಗೆ ಬಳಸಿ, ಸೇವಿಸಬಹುದು ಎನ್ನುತ್ತಾರೆ...ಇದು ನಿಜಾನಾ?

ಮಧುಮೇಹಕ್ಕೆ ಬೆಲ್ಲ ಸುರಕ್ಷಿತವಾಗಿದೆಯೇ?
ಬೆಲ್ಲವನ್ನು ಕಬ್ಬಿನ ರಸವನ್ನು ಕುದಿಸಿ ತಯಾರಿಸುವ ಉತ್ಪನ್ನ. ಸಕ್ಕರೆ ಮತ್ತು ಬೆಲ್ಲವನ್ನು ಒಂದೇ ವಿಧಾನದಲ್ಲಿ ತಯಾರಿಸುತ್ತಾರೆ. ಆದರೆ ಸಕ್ಕರೆಯನ್ನು ಹೆಚ್ಚು ಸಂಸ್ಕರಿಸಲಾಗುತ್ತದೆ ಅಷ್ಟೆ. ಬೆಲ್ಲ ಸಂಸ್ಕರಿಸಿದ ಮತ್ತು ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಎಲ್ಲಾ ಅಗತ್ಯ ಪೌಷ್ಟಿಕಾಂಶವನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ಉತ್ತಮವಗಿದ್ದಾದರೂ ಸಹ ಸಕ್ಕರೆಯಂತಹ ಪರಿಣಾಮವನ್ನೇ ಉಂಟು ಮಾಡುತ್ತದೆ. ಬೆಲ್ಲದಲ್ಲಿರುವ ಕೆಲವು ಆರೋಗ್ಯಕರ ಉತ್ಪನ್ನಗಳ ಕಾರಣದಿಂದ ಆಯುರ್ವೇದದಲ್ಲಿ ಔಷಧದ ರೂಪದಲ್ಲಿಯೂ ಬಳಸುತ್ತಾರೆ. ಆದರೆ ಮಧುಮೇಹಿಗಳಿಗೆ ಖಂಡಿತವಾಗಿಯೂ ಉತ್ತಮವಾದುದ್ದಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ ಸಕ್ಕರೆ ಹಾಗೂ ಅದರ ಪರ್ಯಾಯ ಪದಾರ್ಥಗಳಾಗಿ ಕೊಂಚ ಬಳಕೆ ಮಾಡಬಹುದಷ್ಟೆ. ಬೆಲ್ಲವು ಸಕ್ಕರೆಗಿಂತ ಸ್ವಲ್ಪ ವ್ಯತ್ಯಾಸವನ್ನು ಪಡೆದುಕೊಂಡಿದೆ. ಬೆಲ್ಲದ ಪ್ರತಿ 10 ಗ್ರಾಂ. ಗೆ 38.3 ಕ್ಯಾಲೋರಿಗಳಿರುತ್ತವೆ. ಶೇ.97ರಷ್ಟು ಸಕ್ಕರೆ ಅಂಶವಿರುತ್ತದೆ. ಸೂಕ್ತ ಮಾಹಿತಿಯ ಕೊರತೆಯನ್ನು ಹೊಂದಿರುವ ಮಧುಮೇಹ ವ್ಯಕ್ತಿಗಳು ಸಕ್ಕರೆಯ ಬದಲಿಗೆ ಬೆಲ್ಲವನ್ನು ಬಳಸಿಕೊಂಡು ಸೇವಿಸುತ್ತಾರೆ. ಅಪರೂಪಕ್ಕೆ ಸ್ವಲ್ಪ ಬೆಲ್ಲವನ್ನು ಸೇವಿಸಬಹುದು. ಹಾಗೊಮ್ಮೆ ಸೇವಿಸಿದ ನಂತರ 15 ನಿಮಿಷಗಳ ಕಾಲ ಚುರುಕಾದ ವಾಕಿಂಗ್ ಮಾಡಬೇಕು. ಸಂಸ್ಕರಿಸಿದ ಸಕ್ಕರೆಗಿಂತ ಇದು ಆರೋಗ್ಯಕರವಾದ ವಸ್ತು

ಬೆಲ್ಲದ ಇತರ ಆರೋಗ್ಯಕರವಾದ ಪ್ರಯೋಜನಗಳು
1. ಬೆಲ್ಲವು ಮಲಬದ್ಧತೆಯನ್ನು ನಿವಾರಿಸುತ್ತದೆ. ಇದು ದೇಹದಲ್ಲಿ ಕೆಲವು ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ. ಅವು ಜೀರ್ಣಕ್ಕೆ ಸಹಾಯ ಮಾಡುವುದು.
2. ಕಬ್ಬಿಣಂಶ ಅಧಿಕವಾಗಿರುವುದರಿಂದ ರಕ್ತ ಹೀನತೆಯನ್ನು ನಿವಾರಿಸುತ್ತದೆ.
3. ಶುದ್ಧೀಕರಿಸುವ ಗುಣವನ್ನು ಹೊಂದಿರುವುದರಿಂದ ಯಕೃತ್ತನ್ನು ನಿರ್ವಿಷಗೊಳಿಸುತ್ತದೆ. ಜೀವಾಣುಗಳ ಚದುರುವಿಕೆಗೆ ಸಹಾಯ ಮಾಡುವುದು.
4. ದೇಹವು ಪ್ರತಿರೋಧಕಗಳನ್ನು ಹೆಚ್ಚಿಸುವುದರಲ್ಲಿಯೂ ಸಹ ಪ್ರಯೋಜನಕಾರಿಯಾಗಿದೆ ಮತ್ತು ರಾಡಿಕಲ್ ಡ್ಯಾಮೇಜ್‍ಗಳ ವಿರುದ್ಧ ಹೋರಾಡುತ್ತದೆ.
5. ಕೆಮ್ಮು ಮತ್ತು ಶೀತಗಳನ್ನು ಉತ್ತಮ ರೀತಿಯಲ್ಲಿ ಗುಣಪಡಿಸುತ್ತದೆ. ಬೆಲ್ಲವನ್ನು ಕಚ್ಚಾರೂಪದಲ್ಲಿರುವಾಗಲೇ ಸೇವಿಸಬಹುದು. ಕೆಲವರು ಊಟದ ನಂತರ ಸಣ್ಣ ತುಣುಕನ್ನು ತಿನ್ನುತ್ತಾರೆ. ಮಧುಮೇಹಿಗಳು ಅಧಿಕ ವ್ಯಾಯಾಮ ಮಾಡುವುದರ ಬಗ್ಗೆ ಹೆಚ್ಚು ಕಚಿತತೆಯನ್ನು ಪಡೆದುಕೊಳ್ಳಬೇಕು. ಮಧುಮೇಹವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಿಕೊಂಡಿದ್ದರೆ ಮಧುಮೇಹಿಗಳು ಆರೋಗ್ಯಕರವಾಗಿ ಇರಬಹುದು.

English summary

Can You Eat Jaggery If You Are Suffering From Diabetes?

In today's world where Fast food culture is prevalent, Life style diseases are on a rise. Heavy dependence on unhealthy foods filled with refined flour and fattening oils are the main reason for life style diseases like Diabetes and high blood pressure. It is a known fact that our country has the highest number of Diabetics in the world and the shocking part is that this number is slowly increasing. Also on rise is the number of deaths due to diabetes.
X
Desktop Bottom Promotion