For Quick Alerts
ALLOW NOTIFICATIONS  
For Daily Alerts

ಮೌತ್ ವಾಶ್ ಬಳಸಿದರೆ ಮಧುಮೇಹ ರೋಗ ಖಚಿತ!

By Lekhaka
|

ಬಾಯಿಯಿಂದ ದುರ್ಗಂಧ ಬರುತ್ತಿದೆ. ಅದರಿಂದ ಜನರ ಮುಂದೆ ಹೋಗಲು ತುಂಬಾ ಮುಜುಗರವಾಗುತ್ತಿದೆ ಎಂದು ಭಾವಿಸಿಕೊಂಡು ಮೆಡಿಕಲ್ ಗೆ ಹೋಗಿ ಒಂದು ಮೌಥ್ ವಾಶ್ ತೆಗೆದುಕೊಂಡು ಬರುತ್ತೀರಿ. ಅದನ್ನು ಪ್ರತಿನಿತ್ಯ ಎರಡು ಸಲ ಬಳಸುತ್ತೀರಿ. ಮೂರು ವರ್ಷ ಇದೇ ರೀತಿಯಲ್ಲಿ ನೀವು ಮೌಥ್ ವಾಶ್ ಬಳಸಿಕೊಂಡರೆ ಅದರಿಂದ ನಿಮಗೆ ಮಧುಮೇಹ ಬರುವುದು ಎಂದು ಅಧ್ಯಯನಗಳು ಹೇಳಿವೆ. ಮೌತ್‌ವಾಶ್‌ನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿಗಳು ಬಾಯಿಯಲ್ಲಿ ಇರುವ ಮಧುಮೇಹ ಮತ್ತು ಬೊಜ್ಜಿಗೆ ನೆರವಾಗುವಂತಹ ಸೂಕ್ಷ್ಮಾಣುಜೀವಿಗಳನ್ನು ಕೂಡ ಕೊಂದು ಹಾಕುತ್ತದೆ ಎಂದು ಅಮೆರಿಕಾದ ಹಾವರ್ಡ್ ಯೂನಿವರ್ಸಿಟಿ ನಡೆಸಿರುವ ಅಧ್ಯಯನವು ಹೇಳಿದೆ.

ದಿನದಲ್ಲಿ ಎರಡು ಸಲ ಮೌತ್‌ವಾಶ್ ಬಳಸಿದರೆ ಅಂತಹ ಜನರಲ್ಲಿ ಮಧುಮೇಹ ಅಥವಾ ರಕ್ತದಲ್ಲಿ ಸಕ್ಕರೆ ಮಟ್ಟವು ಹೆಚ್ಚಾಗುವಂತಹ ಸಾಧ್ಯತೆಯು ಶೇ. 55ರಷ್ಟು ಇರುವುದು. ಇದರಲ್ಲಿ ಇರುವಂತಹ ಕೆಲವೊಂದು ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಒಳ್ಳೆಯ ರೀತಿಯದ್ದಲ್ಲ ಎಂದು ಹಾವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ ಪ್ರಾಧ್ಯಾಪಕ ಕೌಮುದಿ ಜೋಶಿಪುರ ತಿಳಿಸಿದ್ದಾರೆ.

ಬಾಯಿ ವಾಸನೆ? ಇಲ್ಲಿದೆ ನೈಸರ್ಗಿಕ ಮೌತ್ ವಾಶ್

ಮೌತ್‌ವಾಶ್‌ನಲ್ಲಿ ಇರುವ ಬ್ಯಾಕ್ಟೀರಿಯ ವಿರೋಧಿ ಗುಣಗಳು ಯಾವುದೇ ನಿರ್ದಿಷ್ಟ ಬ್ಯಾಕ್ಟೀರಿಯಾ ಮೇಲೆ ದಾಳಿ ಮಾಡಲ್ಲ ಮತ್ತು ಇದು ಸಂಪೂರ್ಣ ಬ್ಯಾಕ್ಟೀರಿಯಾ ಸಮೂಹದ ಮೇಲೆ ದಾಳಿ ಮಾಡುವುದು ಎಂದು ಜೋಶಿಪುರ ತಿಳಿಸಿದ್ದಾರೆ. ಅಧ್ಯಯನಕ್ಕಾಗಿ 40-65 ವರ್ಷ ವಯಸ್ಸಿನ ಸುಮಾರು 1,206 ಜನರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಅಧ್ಯಯನ ಪ್ರಕಾರ ಶೇ.17ರಷ್ಟು ಜನರಿಗೆ ಮಧುಮೇಹ ಅಥವಾ ಮಧುಮೇಹದ ಲಕ್ಷಣಗಳು ಕಾಣಿಸಿಕೊಂಡಿವೆ.

ದಿನದಲ್ಲಿ ಒಂದು ಸಲ ಇದನ್ನು ಬಳಕೆ ಮಾಡುವವರಲ್ಲಿ ಇದು ಶೇ. 20ರಷ್ಟು ಮತ್ತು ಎರಡು ಸಲ ಬಳಕೆ ಮಾಡುವವರಲ್ಲಿ ಶೇ. 30ರಷ್ಟು ಮಧುಮೇಹ ಬರುವ ಸಾಧ್ಯತೆಗಳು ಇವೆ ಎಂದು ಅಧ್ಯಯನವು ಕಂಡುಕೊಂಡಿದೆ. ಬಾಯಿಯಲ್ಲಿರುವ ಕೆಲವೊಂದು ಬ್ಯಾಕ್ಟೀರಿಯಾಗಳು ಮಧುಮೇಹ ಮತ್ತು ಬೊಜ್ಜು ಬರದಂತೆ ತಡೆಯುವ ಸಾಮರ್ಥ್ಯ ಹೊಂದಿವೆ. ಕೆಲವೊಂದು ಸೂಕ್ಷ್ಮಾಣು ಜೀವಿಗಳು ನೈಟ್ರಿಕ್ ಆಕ್ಸೈಡ್ ಬಿಡುಗಡೆ ಮಾಡುವುದು. ಇದು ಇನ್ಸುಲಿನ್ ಮಟ್ಟವನ್ನು ಕಾಪಾಡುತ್ತದೆ.

ನೈಟ್ರಿಕ್ ಆಕ್ಸೈಡ್ ಚಯಾಪಚಯ, ಶಕ್ತಿಯ ಸಮತೋಲನ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಕಾಯ್ದುಕೊಳ್ಳಲು ಅತೀ ಅಗತ್ಯವಾಗಿರುವುದು. ಇದರ ಬಗ್ಗೆ ನೈಟ್ರಿಕ್ ಆಕ್ಸೈಡ್ ಜರ್ನಲ್ ನಲ್ಲಿ ವರದಿಯೊಂದು ಪ್ರಕಟಗೊಂಡಿದೆ. ರಾಸಾಯನಿಕಯುಕ್ತ ಮೌತ್‌ವಾಶ್ ಬಳಕೆ ಮಾಡುವ ಬದಲು ನೀವು ಮನೆಯಲ್ಲಿ ತಯಾರಿಸಿದ ಮೌಥ್ ವಾಶ್ ಬಳಸಿದರೆ ಬಾಯಿ ದುರ್ಗಂಧ ಹೋಗಲಾಡಿಸಬಹುದು....

ಜೀರಿಗೆ

ಜೀರಿಗೆ

ಜೀರಿಗೆಯಲ್ಲಿ ಸೂಕ್ಷ್ಮಾಣುಜೀವಿ ವಿರೋಧಿ ಗುಣಗಳು ಇವೆ. ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವುದು. ಸ್ವಲ್ಪ ಜೀರಿಗೆ ತೆಗೆದುಕೊಂಡು ಬಾಯಿಗೆ ಹಾಕಿ ಜಗಿಯಿರಿ. ಇದು ಬಾಯಿಯ ದುರ್ವಾಸನೆ ನಿವಾರಣೆ ಮಾಡುವ ಜತೆಗೆ ಜೊಲ್ಲುರಸ ಬಿಡುಗಡೆ ಹೆಚ್ಚಿಸುವುದು. ಜೀರಿಗೆ ಚಹಾ ಮಾಡಿಕೊಂಡು ಅದನ್ನು ದಿನದಲ್ಲಿ 2-3 ಸಲ ಕುಡಿಯಬಹುದು. ಬಿಸಿ ನೀರಿನ ಕಪ್‌ಗೆ ಒಂದು ಚಮಚ ಜೀರಿಗೆ ಹಾಖಿ. ಐದು ನಿಮಿಷ ಹಾಗೆ ಬಿಟ್ಟು ಬಳಿಕ ಸೋಸಿಕೊಂಡು ನೀರು ಕುಡಿಯಿರಿ.

ಲವಂಗ

ಲವಂಗ

ಲವಂಗದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ನೀವು ಎರಡು ಮೂರು ಲವಂಗವನ್ನು ಬಾಯಿಗೆ ಹಾಕಿಕೊಂಡು ಜಗಿದರೆ ಅದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ಕೆಟ್ಟ ದುರ್ವಾಸನೆ ವಿರುದ್ಧ ಹೋರಾಡುವುದು.

ದಾಲ್ಚಿನ್ನಿ

ದಾಲ್ಚಿನ್ನಿ

ದಾಲ್ಚಿನ್ನಿ ಚಕ್ಕೆಯಲ್ಲಿ ಸಿನ್ನಾಮಿಕ್ ಅಲ್ಡಿಹೈಡ್ ಎನ್ನುವ ಅಂಶವಿದೆ. ಇದು ಬಾಯಿಯಲ್ಲಿ ದುರ್ಗಂಧ ಮತ್ತು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವುದು. ಒಂದು ಲೋಟ ನೀರು ಬಿಸಿ ಮಾಡಿ ಅದಕ್ಕೆ ಒಂದು ಚಮಚ ದಾಲ್ಚಿನಿ ಚಕ್ಕೆ ಹುಡಿ ಬೆರೆಸಿ. ಇದು ತಣ್ಣಗಾದ ಬಳಿಕ ಅದರಿಂದ ಬಾಯಿ ಮುಕ್ಕಳಿಸಿಕೊಳ್ಳಿ.

ಲಿಂಬೆರಸ

ಲಿಂಬೆರಸ

ಲಿಂಬೆಯಲ್ಲಿ ಇರುವಂತಹ ಆಮ್ಲೀಯ ಗುಣವು ಬಾಯಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳು ಬೆಳೆಯದಂತೆ ನೋಡಿಕೊಳ್ಳುವುದು. ಒಂದು ಚಮಚ ಲಿಂಬೆರಸವನ್ನು ಒಂದು ಲೋಟ ನೀರಿಗೆ ಹಾಕಿಕೊಳ್ಳಿ. ಇದನ್ನು ಬಾಯಿ ಮುಕ್ಕಳಿಸಿಕೊಳ್ಳಲು ಬಳಸಿ.

ಅಲೊವೇರಾ, ಬೇಕಿಂಗ್ ಸೋಡಾ, ಪುದೀನಾ ಎಣ್ಣೆ ಮತ್ತು ನೀರು

ಅಲೊವೇರಾ, ಬೇಕಿಂಗ್ ಸೋಡಾ, ಪುದೀನಾ ಎಣ್ಣೆ ಮತ್ತು ನೀರು

ಈ ಮಿಶ್ರಣವು ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿಸುತ್ತದೆ ಮತ್ತು ಹಾನಿಕಾರಕ ಮೈಕ್ರೊಬ್ಸ್‎ಗಳನ್ನು ನಿವಾರಿಸುತ್ತದೆ. ಉರಿಯೂತ ನಿವಾರಕ ಗುಣವನ್ನು ಹೊಂದಿರುವ ಅಲೊವೇರಾ ವಸಡುಗಳನ್ನು ಆರೋಗ್ಯವಾಗಿರಿಸುತ್ತದೆ ಅಂತೆಯೇ ಈ ದ್ರಾವಣದಲ್ಲಿರುವ ಪುದೀನಾ ಸುವಾಸನೆ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ.

ಮಾಡುವ ವಿಧಾನ

2 ಚಮಚದಷ್ಟು ಬೇಕಿಂಗ್ ಸೋಡಾವನ್ನು ತೆಗೆದುಕೊಳ್ಳಿ ಇದಕ್ಕೆ ಪುದೀನಾ ಎಣ್ಣೆ ಮತ್ತು ಅಲೊವೇರಾವನ್ನು ಸೇರಿಸಿ.

ಉಗರು ಬೆಚ್ಚನೆಯ ನೀರನ್ನು ಸೇರಿಸಿಕೊಂಡು ಚೆನ್ನಾಗಿ ಕಲಸಿ ನಿಮ್ಮ ಬಾಯಿಯನ್ನು ಈ ಮಿಶ್ರಣದೊಂದಿಗೆ ತೊಳೆದುಕೊಳ್ಳಿ ಮತ್ತು ಉತ್ತಮ ಫಲಿತಾಂಶಕ್ಕಾಗಿ ಇದನ್ನು ನಿತ್ಯವೂ ಬಳಸಿ.

ಬೇವಿನ ರಸ, ಪುದೀನಾ ಎಣ್ಣೆ ಮತ್ತು ನೀರು

ಬೇವಿನ ರಸ, ಪುದೀನಾ ಎಣ್ಣೆ ಮತ್ತು ನೀರು

ಬೇವಿನ ರಸ, ಪುದೀನಾ ಎಣ್ಣೆ ಮತ್ತು ನೀರು ಆಂಟಿಸೆಪ್ಟಿಕ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಒಳಗೊಂಡಿರುವ ಬೇವು ಬಾಯಿಯಲ್ಲಿರುವ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ತೊಡೆದು ಹಾಕುತ್ತದೆ. ಆದ್ದರಿಂದ ಈ ಮೌತ್‎ವಾಶ್ ಸೋಂಕು ನಿವಾರಕದಂತೆ ವರ್ತಿಸಿ, ನಿಮಗೆ ತಾಜಾ ಮತ್ತು ಪುದೀನಾ ಸುಗಂಧವನ್ನು ಒದಗಿಸುತ್ತದೆ.

ತಯಾರಿಸುವ ವಿಧಾನ

ಬೇವಿನ ಎಲೆಗಳನ್ನು ಮಿಕ್ಸರ್‎ನಲ್ಲಿ ಗ್ರೈಂಡ್ ಮಾಡಿಕೊಳ್ಳಿ.

ಎರಡು ಚಮಚದಷ್ಟು ಬೇವಿನ ರಸ, 2 ಚಮಚ ಪುದೀನಾ ಎಣ್ಣೆ ಮತ್ತು ಬೆಚ್ಚನೆಯ ನೀರನ್ನು ಕಪ್‎ನಲ್ಲಿ ಹಾಕಿ.

ಈ ಸಾಮಾಗ್ರಿಗಳನ್ನು ಚೆನ್ನಾಗಿ ಕಲಸಿಕೊಳ್ಳಿಮೌತ್‎ವಾಶ್ ಬಳಸಲು ಸಿದ್ಧವಾಗಿದೆ.

ಉತ್ತಮ ಫಲಿತಾಂಶಕ್ಕಾಗಿ ದಿನಕ್ಕೆರಡು ಬಾರಿ ಇದನ್ನು ಬಳಸಿ

ಲವಂಗದೆಣ್ಣೆ: ದಾಲ್ಚಿನ್ನಿ ಮತ್ತು ನೀರು

ಲವಂಗದೆಣ್ಣೆ: ದಾಲ್ಚಿನ್ನಿ ಮತ್ತು ನೀರು

ಈ ನೈಸರ್ಗಿಕ ಮೌತ್‎ವಾಶ್ ಸುಗಂಧಿತ ಪರಿಮಳದೊಂದಿಗೆ ನಿಮ್ಮ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಈ ಎಣ್ಣೆಗಳಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಸೋಂಕುಗಳು ಮತ್ತು ಹುಳುಕನ್ನು ಬೇರಿನಿಂದಲೇ ಕಿತ್ತೊಗೆಯುತ್ತದೆ.

ತಯಾರಿಸುವ ವಿಧಾನ

ಉಗುರು ಬೆಚ್ಚನೆಯ ನೀರಿನಲ್ಲಿ 2 ಚಮಚದಷ್ಟು ಎಣ್ಣೆಗಳನ್ನು ಮಿಶ್ರ ಮಾಡಿಕೊಳ್ಳಿ ಕಪ್‎ನಲ್ಲಿ ಈ ದ್ರಾವಣವನ್ನು ತೆಗೆದುಕೊಂಡು ಚೆನ್ನಾಗಿ ಕಲಕಿ. ಬಳಸಲು ನಿಮ್ಮ ಮೌತ್‎ವಾಶ್ ಈಗ ಸಿದ್ಧವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಈ ದ್ರಾವಣವನ್ನು ಸಿದ್ಧಪಡಿಸಿ ತಂಪಾದ, ಒಣ ಜಾಗದಲ್ಲಿ ಇದನ್ನು ಇರಿಸಿಕೊಳ್ಳಬಹುದಾಗಿದೆ.

English summary

Beware Of Mouthwash Use, It Can Raise Diabetes Risk

According to Joshipura, helpful bacteria in the mouth can protect against diabetes and obesity, including microbes which help the body produce nitric oxide, which regulates insulin levels. Nitric oxide is also important for regulating the metabolism, balancing energy and keeping blood sugar levels in check. The study was recently published in the journal Nitric Oxide. Meanwhile, check out for these home remedies that helps in preventing bad mouth odour. Take a look.
X
Desktop Bottom Promotion