For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಕೃತಕ ಸಿಹಿಯಿಂದ ಟೈಪ್-2 ಮಧುಮೇಹದ ಅಪಾಯ ಹೆಚ್ಚು!

By Manu
|

ಸಕ್ಕರೆ ಸೇವನೆ ಕಡಿಮೆ ಮಾಡುವ ಉದ್ದೇಶದಿಂದ ನೀವು ಕೃತಕ ಸಿಹಿ ಬಳಸುತ್ತಾ ಇದ್ದರೆ ಅದು ಖಂಡಿತವಾಗಿಯೂ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಯಾಕೆಂದರೆ ಕೃತಕ ಸಿಹಿಯಿಂದ ಟೈಪ್ 2 ಮಧುಮೇಹ ಬರುವುದು ಎಂದು ಅಧ್ಯಯನಗಳು ಹೇಳಿವೆ. ಕೃತಕ ಸಿಹಿಯು ಎರಡನೇ ಹಂತದ ಮಧುಮೇಹದ ಅಪಾಯ ಹೆಚ್ಚಿಸುವುದು ಎಂದು ಆಸ್ಟ್ರೇಲಿಯಾದ ಅಡಿಲೇಟ್ ವಿಶ್ವವಿದ್ಯಾನಿಲಯವು ನಡೆಸಿರುವ ಅಧ್ಯಯನವು ಹೇಳಿದೆ.

sweeteners

ಕೇವಲ ಎರಡು ವಾರಗಳ ಕಾಲ ಕೃತಕ ಸಿಹಿ ಸೇವನೆ ಮಾಡಿದರೆ ಗ್ಲೂಕೋಸ್‌ಗೆ ದೇಹವು ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂದು ತಿಳಿದುಬಂದಿದೆ ಎಂದು ಅಧ್ಯಯನಗಳು ತಿಳಿಸಿವೆ. ಈ ಅಧ್ಯಯನಕ್ಕಾಗಿ ಸುಮಾರು 27 ಮಂದಿ ಆರೋಗ್ಯವಂತ ಜನರನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ತಿಂಗಳೊಳಗೆ 'ಟೈಪ್-2 ಮಧುಮೇಹ' ನಿಯಂತ್ರಣಕ್ಕೆ! ಇಲ್ಲಿದೆ ನೋಡಿ ಟಿಪ್ಸ್

ಇವರಿಗೆ ಪ್ರತೀ ದಿನ 1.5 ಲೀ.ನಷ್ಟು ಎರಡು ಬಗೆಯ ಕೃತಕ ಸಿಹಿ ನೀಡಲಾಯಿತು. ಕೃತಕ ಸಿಹಿಯನ್ನು ಮಾತ್ರೆಗಳ ಮೂಲಕ ದಿನಕ್ಕೆ ಮೂರು ಸಲ ಎರಡು ವಾರ ತನಕ ನೀಡಲಾಯಿತು. ಎರಡು ವಾರ ಬಳಿಕ ಗ್ಲೂಕೋಸ್‌ಗೆ ದೇಹವು ಹೇಗೆ ಪ್ರತಿಕ್ರಿಯಿಸಿದೆ ಎಂದು ಪರೀಕ್ಷಿಸಲಾಯಿತು.

ಕೃತಕ ಸಿಹಿಯಿಂದಾಗಿ ಗ್ಲೂಕೋಸ್ ಹೀರಿಕೆಯ ಮಟ್ಟವು ಹೆಚ್ಚಾಗಿದೆ. ಊಟದ ಬಳಿಕ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಹೆಚ್ಚಾಗುವುದನ್ನು ನಿಯಂತ್ರಿಸುವ ಶಕ್ತಿಯು ಕಡಿಮೆಯಾಗಿದೆ ಎಂದು ಅಧ್ಯಯನಗಳು ತಿಳಿಸಿವೆ. ಅಧ್ಯಯನದ ವರದಿಯನ್ನು ಇತ್ತೀಚೆಗೆ ಪೂರ್ಚುಗಲ್‌ನ ಲಿಸ್ಬೇನ್ ನಲ್ಲಿರುವ ಯುರೋಪಿಯನ್ ಅಸೋಸಿಯೇಷನ್ ಫಾರ್‌ದ ಸ್ಟಡಿ ಆಫ್ ಡಯಾಬಿಟಿಸ್‌ನ ವಾರ್ಷಿಕ ಸಭೆಯಲ್ಲಿ ಮಂಡಿಸಲಾಯಿತು.

English summary

Artificial sweeteners increases type two diabetes risk

If you think switching off to artificial sweeteners is a good option to cut down on your sugar intake then you might be wrong. According to a new study it has been found that artificial sweeteners can actually increase the risk of Type 2 diabetes. During the study, that was led by researchers at the University of Adelaide, Australia, they found that consuming artificial sweeteners for just two weeks was enough to change the body's reaction to glucose.
X
Desktop Bottom Promotion