For Quick Alerts
ALLOW NOTIFICATIONS  
For Daily Alerts

ಮಧುಮೇಹ, ಅಸ್ತಮಾ ನಿಯಂತ್ರಣಕ್ಕೆ ಬೆಂಡೆಕಾಯಿ ರಾಮಬಾಣ

By Manjula Balaraj
|

ಪ್ರಮುಖವಾಗಿ ಸಸ್ಯಾಹಾರಿಗಳಿಗೆ ತಮ್ಮ ಆರೋಗ್ಯದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ತರಕಾರಿ ಪ್ರಮುಖ, ಯಾಕೆಂದರೆ ಇವರು ಮಾಂಸದ ಮೊರೆ ಹೋಗುವುದಿಲ್ಲ. ಮಧುಮೇಹ, ಅಸ್ತಮಾ ಮತ್ತು ಇತರ ಕಾಯಿಲೆಗಳಿಗೆ ತರಕಾರಿ ಹೇಗೆ ಉಪಯೋಗವಾಗಬಲ್ಲದು ಎನ್ನುವುದನ್ನು ಈ ಲೇಖನದಲ್ಲಿ ಹೇಳಲಾಗಿದೆ.

ಪೋಷಕರು ತಮ್ಮ ಮಕ್ಕಳಿಗೆ ಮೊದಲಿನಿಂದಲೂ ತರಕಾರಿಗಳ ಮಹತ್ವದ ಬಗ್ಗೆ ತಿಳಿಸುತ್ತಲೇ ಬರುತ್ತಿದ್ದಾರೆ. ಆದರೆ ಮಕ್ಕಳು ಮಾತ್ರ ತರಕಾರಿಗೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಚಿಪ್ಸ್ ಅಥವಾ ಚಾಕಲೇಟುಗಳಿಗೆ ಮಾರುಹೋಗುತ್ತಿರುವುದು ಸಾಮಾನ್ಯ. ನಾವು ದೊಡ್ಡವರಾದಾಗಲೇ ನಮಗೆ ತರಕಾರಿಗಳಲ್ಲಿರುವ ಪೋಷಕಾಂಶದ ಬಗ್ಗೆ ಮತ್ತು ಅದರಿಂದಾಗುವ ಉಪಯೋಗದ ಬಗ್ಗೆ ತಿಳಿಯುವುದು. ಆದ್ದರಿಂದ ನಾವು ನಮ್ಮ ದೈನಂದಿನ ಆಹಾರ ಪದ್ದತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಯನ್ನು ಬಳಸಲು ಪ್ರಯತ್ನ ಮಾಡಬೇಕು.

ತರಕಾರಿಗಳು ಮತ್ತು ಹಣ್ಣುಗಳು ನಮಗೆ ಆರೋಗ್ಯದ ದೃಷ್ಟಿಯಿಂದ ಬಹಳ ಅವಶ್ಯಕ ಮತ್ತು ಯಾಕೆಂದರೆ ಇವು ಅನೇಕ ಪೋಷಕಾಂಶಗಳನ್ನು ಹೊಂದಿದೆ. ಇದರ ಉಪಯುಕ್ತತೆ ತುಂಬಾ ಜನರಿಗೆ ಆರೋಗ್ಯದ ದೃಷ್ಟಿಯಿಂದ ಪ್ರಯೋಜನಕಾರಿ ಎನ್ನುವುದರ ಬಗ್ಗೆ ಅರಿವಿದೆ. ತರಕಾರಿಗಳಲ್ಲಿ ರೋಗನಿರೋಧಕ ಜೀವಸತ್ವಗಳು ಮತ್ತು ಖನಿಜಗಳ ಅಂಶಗಳು ಹೇರಳವಾಗಿದ್ದು ಇವು ಆರೋಗ್ಯ ಕಾಪಾಡಲು ಸಹಾಯಕಾರಿಯಾಗಿದೆ.

ಪ್ರಾಚೀನ ಕಾಲದಲ್ಲಿ, ಜನರು ವಿವಿಧ ಕಾಯಿಲೆಗಳನ್ನು ಗುಣಪಡಿಸಲು ತರಕಾರಿಯಿಂದ ತಯಾರಿಸಲಾದ ಹಲವು ಬಗೆಯ ಮದ್ದುಗಳನ್ನು ಬಳಸುತ್ತಿದ್ದರು, ಇಂದಿಗೂ ಕೂಡ ಆಯುರ್ವೇದ ಔಷಧಿಗಳಲ್ಲಿ ವಿವಿಧ ತರಕಾರಿಗಳ ಸಾರಗಳನ್ನು ಉಪಯೋಗಿಸಿ ಕೆಲವು ಕಾಯಿಲೆಗಳ ಲಕ್ಷಣಗಳನ್ನು ದೂರಗೊಳಿಸುವಲ್ಲಿ ಉಪಯೋಗಿಸಲ್ಪಡುತ್ತದೆ. ತರಕಾರಿಗಳಿಂದಾಗುವ ವಿಧವಿಧವಾದ ಪ್ರಯೋಜನಗಳನ್ನು ಕಂಡು ಹಿಡಿಯಲು ಕೆಲವು ಮಿಲಿಯನ್ ಡಾಲರ್ ಹಣವನ್ನು ಸಂಶೋಧನೆಗಾಗಿ ವ್ಯಯಿಸಲಾಗುತ್ತಿದೆ. ಬೆಂಡೆಕಾಯಿ ನೆನೆಸಿಟ್ಟ ನೀರು ಕುಡಿದರೆ ಹತ್ತಾರು ಲಾಭ

ಇತ್ತೀಚೆಗೆ ಬೆಂಡೆಕಾಯಿ, ಜನಪ್ರಿಯವಾಗಿ ಲೇಡೀಸ್ ಫಿಂಗರ್ ಎಂದು ಕರೆಯಲಾಗುತ್ತದೆ ಇದರಲ್ಲಿ ಬೆಂಡೆಕಾಯಿ ಅನೇಕ ಆರೋಗ್ಯಕಾರಿ ಅಂಶವಿರುವಂತಹ ತರಕಾರಿ ಎಂದು ಪರಿಗಣಿಸಲಾಗಿದೆ. ಈ ತರಕಾರಿಯಲ್ಲಿ ಅನೇಕ ಬಗೆಯ ಉಪಯೋಗಗಳಿವೆ.ಬೆಂಡೆ ಕಾಯಿಯ ಬಗ್ಗೆ ನಮಗೆ ಗೊತ್ತಿಲ್ಲದೇ ಇರುವ ಆರೋಗ್ಯಕಾರಿ ಉಪಯುಕ್ತತೆಯ ಬಗ್ಗೆ ನಾವೀಗ ತಿಳಿಯೋಣ...

ಮಧುಮೇಹವನ್ನು ತಡೆಯಬಲ್ಲುದು

ಮಧುಮೇಹವನ್ನು ತಡೆಯಬಲ್ಲುದು

ಬೆಂಡೆಕಾಯಿಗೆ ರಕ್ತದಲ್ಲಿರುವ ಸಕ್ಕರೆಯ ಅಂಶದ ಮಟ್ಟವನ್ನು ಸಮತೋಲನದಲ್ಲಿರುವಂತೆ ಮಾಡಬಲ್ಲ ಗುಣಗಳಿವೆ. ಇನ್ಸುಲಿನ್ ನ ಉತ್ಪಾದನೆಯನ್ನು ದೇಹದಲ್ಲಿ ಹೆಚ್ಚಿಸುವುದರಿಂದ ಮಧುಮೇಹಿಗಳಲ್ಲಿ ಮಧುಮೇಹದ ಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗಿದೆ.

ಗರ್ಭಧಾರಣೆಗೆ ಉಪಯುಕ್ತ

ಗರ್ಭಧಾರಣೆಗೆ ಉಪಯುಕ್ತ

ಬೆಂಡೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಬಿ ಮತ್ತು ಪೋಲಟ್ ಅಂಶ ಹೇರಳವಾಗಿದೆ. ಈ ಪೋಷಕಾಂಶಗಳು ಗರ್ಭಾವಸ್ಠೆಯಲ್ಲಿರುವ ತಾಯಿಯ ಆರೋಗ್ಯಕ್ಕೆ ಉತ್ತಮವಾದುದು. ಅಷ್ಟೇ ಅಲ್ಲದೆ ಭ್ರೂಣದ ಬೆಳವಣಿಗೆಗೆ ಕೂಡ ಇದು ಉತ್ತಮವಾದುದು.

ಅಸ್ತಮಾವನ್ನು ತಡೆಗಟ್ಟುತ್ತದೆ

ಅಸ್ತಮಾವನ್ನು ತಡೆಗಟ್ಟುತ್ತದೆ

ಬೆಂಡೆ ಕಾಯಿಯಲ್ಲಿ ರೋಗನಿರೋಧಕ ಶಕ್ತಿ ಹೇರಳವಾಗಿರುತ್ತದೆ. ಇದು ಉರಿಯೂತದ ಲಕ್ಷಣ, ಆಸ್ತಮಾ ಮತ್ತು ಕೆಲವು ಇತರ ಉಸಿರಾಟದ ತೊಂದರೆಗಳನ್ನು ತಡೆಯಲು ಸಹಾಯ ಮಾಡಬಹುದು

ರಕ್ತಹೀನತೆಗೆ ಒಳ್ಳೆಯದು

ರಕ್ತಹೀನತೆಗೆ ಒಳ್ಳೆಯದು

ಬೆಂಡೆಕಾಯಿಯಲ್ಲಿ ಕಬ್ಬಿಣ, ಪೋಲೇಟ್ ಮತ್ತು ವಿಟಮಿನ್ ಸಿ ಮತ್ತು ಕೆ ಸಮೃದ್ಧವಾಗಿದೆ, ಈ ಸತ್ವಗಳು ರಕ್ತ ಕಣಗಳ ಉತ್ಪತ್ತಿಗೆ ಪ್ರಮುಖ ಕಾರಣವಾಗಿರುತ್ತದೆ ಇದರಿಂದ ಹಿಮೋಗ್ಲೊಬಿನ್ ಹೆಚ್ಚಿಸಲು ಸಹಾಯಕಾರಿಯಾಗಿರುತ್ತದೆ. ಆದುದರಿಂದ ಬೆಂಡೆಕಾಯಿ ರಕ್ತಹೀನತೆ ತಡೆಗಟ್ಟುವಲ್ಲಿ ಸಹಾಯಕವಾಗುತ್ತದೆ.

ಚರ್ಮವನ್ನು ಉತ್ತಮಗೊಳಿಸುತ್ತದೆ

ಚರ್ಮವನ್ನು ಉತ್ತಮಗೊಳಿಸುತ್ತದೆ

ಬೆಂಡೆಕಾಯಿಯಲ್ಲಿ ಉತ್ಕರ್ಷಣ (ಆಂಟೀ ಆಕ್ಸಿಡೆಂಟ್) ಮತ್ತು ವಿಟಮಿನ್ ಸಿ ಇರುವುದರಿಂದ ಈ ಎರಡು ಅಂಶಗಳು ಚರ್ಮದ ಕಾಂತಿಗೆ ಉತ್ತಮವಾದ ಪೋಷಕಾಂಶ ನೀಡುತ್ತದೆ. ಈ ತರಕಾರಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಚರ್ಮವು ಕಾಂತಿಯುತವಾಗಿ ಹೊಳೆಯಲು ಸಹಾಯಕಾರಿಯಾಗುತ್ತದೆ.

ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ

ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ

ಬೆಂಡೆಕಾಯಿಯಲ್ಲಿ ಕೊಬ್ಬಿನ ಅಂಶವಿರುವುದಿಲ್ಲವಾದುದರಿಂದ ಇದರ ಸೇವನೆಯಿಂದ ದೇಹಕ್ಕೆ ಕೊಬ್ಬಿನ ಅಂಶ ಸೇರುವುದಿಲ್ಲ. ಅಲ್ಲದೆ ಈ ತರಕಾರಿಯು ಕೊಬ್ಬಿನ ಅಂಶವನ್ನು ತಡೆಗಟ್ಟುವಲ್ಲಿ ಸಹಾಯಕಾರಿಯಾಗಿದೆ ಮತ್ತು ಕೊಬ್ಬಿನಾಂಶ ಉತ್ಪತ್ತಿಗೆ ಕಾರಣವಾಗುವ ಕಣಗಳನ್ನು ತಡೆಯುವಲ್ಲಿ ಸಹಾಯಕಾರಿಯಾಗಿದೆ.

English summary

One Vegetable To Treat Diabetes, Asthma And More

As kids, we were constantly advised by our parents to eat more vegetables. But, obviously, we never did that simply because we felt veggies were not as tasty as chips or chocolates. When we grew up, we've now realised how nutritious vegetables can be, so we're making an effort every day to make veggies a part of our daily diets. Recently, it has been found that okra, more popularly known as the lady's finger, is one such vegetable that comes with numerous health benefits. Read on to learn more about some of the lesser known health benefits of okra!
Story first published: Monday, May 23, 2016, 13:21 [IST]
X
Desktop Bottom Promotion