For Quick Alerts
ALLOW NOTIFICATIONS  
For Daily Alerts

ಮಧುಮೇಹವನ್ನು ಹದ್ದು ಬಸ್ತಿನಲ್ಲಿಡುವ ಅದ್ಭುತ 'ಚಹಾ'!

By Manu
|

ದೇಹದಲ್ಲಿ ಮಧುಮೇಹ ಒಂದು ಸಲ ಕಾಣಿಸಿಕೊಂಡರೆ ಒಬ್ಬನ ಆಹಾರ ಕ್ರಮವೇ ಬದಲಾಗಿ ಹೋಗುತ್ತದೆ. ಕೆಲವೊಂದು ಆಹಾರಗಳನ್ನು ಹೆದರಿ ಹೆದರಿ ತಿನ್ನಬೇಕಾಗುತ್ತದೆ. ಇಷ್ಟವಾಗಿರುವಂತಹ ಕೆಲವು ತಿಂಡಿತಿನಿಸುಗಳನ್ನು ತಿನ್ನಲು ಸಾಧ್ಯವಾಗುವುದಿಲ್ಲ. ಮಧುಮೇಹ ಇರುವವರಿಗೆ ಚಹಾ ಕುಡಿಯಬಾರದು ಎಂದು ಹೇಳಿರುತ್ತಾರೆ. ಏನೇ ಹೇಳಿ ಮಧುಮೇಹ ನಿಯಂತ್ರಣಕ್ಕೆ ಮನೆಮದ್ದೇ ಸೂಕ್ತ

ಆದರೆ ಚಹಾ ಪ್ರಿಯರಾಗಿರುವ ಕಾರಣದಿಂದಾಗಿ ಸಕ್ಕರೆ ಹಾಕದೆ ಚಹಾ ಕುಡಿಯುತ್ತಾರೆ. ಇನ್ನು ಕೆಲವರು ಕದ್ದುಮುಚ್ಚಿ ಸ್ವಲ್ಪ ಸಕ್ಕರೆ ಹಾಕಿ ಚಹಾ ಸವಿಯುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ ಕೆಲವೊಂದು ಗಿಡಮೂಲಿಕೆಯ ಚಹಾವನ್ನು ಕುಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದಿಲ್ಲ ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಇದು ನೆರವಾಗುತ್ತದೆ...

ಶುಂಠಿ ಹಾಕಿದ ಚಹಾ

ಶುಂಠಿ ಹಾಕಿದ ಚಹಾ

ಶುಂಠಿ ಹಾಕಿದ ಚಹಾ ಕುಡಿದರೆ ಸಕ್ಕರೆ ಮಟ್ಟವು ಕಡಿಮೆಯಾಗುವುದು. ಕುದಿಯುತ್ತಿರುವ ಒಂದು ಲೋಟ ನೀರಿಗೆ ಜಜ್ಜಿದ ಶುಂಠಿಯನ್ನು ಹಾಕಿಕೊಳ್ಳಿ. ಹತ್ತು ನಿಮಿಷ ಕುದಿಯಲು ಬಿಟ್ಟು ಬಳಿಕ ಸೋಸಿಕೊಂಡು ಕುಡಿಯಿರಿ.ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ದಾಲ್ಚಿನ್ನಿ ಹಾಕಿದ ಚಹಾ

ದಾಲ್ಚಿನ್ನಿ ಹಾಕಿದ ಚಹಾ

ದಾಲ್ಚಿನ್ನಿ ಹಾಕಿದ ಚಹಾ ಕುಡಿಯುವುದರಿಂದ ಇನ್ಸುಲಿನ್ ಸೂಕ್ಷ್ಮತೆ ಸುಧಾರಣೆಯಾಗಿ ಸಕ್ಕರೆ ಮಟ್ಟವು ಕಡಿಮೆಯಾಗುವುದು. ಒಂದು ಕಪ್ ಬಿಸಿ ನೀರಿಗೆ ಎರಡು ಮೂರು ದಾಲ್ಚಿನಿ ಚಕ್ಕೆ ಹಾಕಿಕೊಳ್ಳಿ. ಕೆಲವು ನಿಮಿಷ ಇದು ಹಾಗೆ ಇರಲಿ. ಚಕ್ಕೆಯನ್ನು ತೆಗೆದು ಸೋಸಿ ಚಹಾ ಕುಡಿಯಿರಿ.

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀನಲ್ಲಿದೆ ಮಧುಮೇಹ ನಿಯಂತ್ರಿಸುವ ಶಕ್ತಿ

ಕ್ಯಾಮೊಮೈಲ್ (Chamomile) ಚಹಾ

ಕ್ಯಾಮೊಮೈಲ್ (Chamomile) ಚಹಾ

ಈ ಚಹಾದಲ್ಲಿ ಆ೦ಟಿ ಅಕ್ಸಿಡೆ೦ಟ್‌ಗಳು ಇದ್ದು, ಇವು ಮಧುಮೇಹಿಗಳು ಎದುರಿಸುತ್ತಿರಬಹುದಾದ ಅಥವಾ ಎದುರಿಸುವ ಸಾಧ್ಯತೆ ಇರುವ ದೃಷ್ಟಿ ನಷ್ಟ, ಮೂತ್ರಪಿ೦ಡಗಳ ತೊ೦ದರೆ ಇವೇ ಮೊದಲಾದ ಸ೦ಕೀರ್ಣತೆಗಳನ್ನು ತಗ್ಗಿಸುತ್ತವೆ. ಕ್ಯಾಮೊಮೈಲ್ ಟೀ ತಯಾರಿಸಿಕೊಳ್ಳುವ ಬಗೆ

ಒಂದು ಕಪ್ ನೀರನ್ನು ಚೆನ್ನಾಗಿ ಕುದಿಸಿಕೊಳ್ಳಿ. ಅದಕ್ಕೆ ಎರಡು-ಮೂರು ಟೀ ಸ್ಪೂನ್ ಕ್ಯಾಮೊಮೈಲ್ ಟೀ ಪುಡಿಯನ್ನು ಬೆರೆಸಿಕೊಳ್ಳಿ. ಇದು ಮೂರು ನಿಮಿಷ ಬೇಯಲಿ. ಈ ಟೀಯನ್ನು ಶೋಧಿಸಿಕೊಂಡು ಲೋಟಕ್ಕೆ ಸುರಿದುಕೊಳ್ಳಿ.

ಕಪ್ಪು ಚಹಾ ಅಥವಾ ಬ್ಲ್ಯಾಕ್ ಟೀ

ಕಪ್ಪು ಚಹಾ ಅಥವಾ ಬ್ಲ್ಯಾಕ್ ಟೀ

ಮಧುಮೇಹವನ್ನು ನಿಯ೦ತ್ರಿಸುವುದಕ್ಕಾಗಿ ಹಾಗೂ ಆರೈಕೆ ಮಾಡುವುದಕ್ಕಾಗಿ ಅವಶ್ಯಕವಾಗಿರುವ ಆರೋಗ್ಯಕರ ಫ್ಲವೊನಾಯ್ಡ್ ಗಳು ಕಪ್ಪು ಚಹಾದಲ್ಲಿ ಅತ್ಯುತ್ಕೃಷ್ಟ ಪ್ರಮಾಣದಲ್ಲಿವೆ. ಮಧುಮೇಹಕ್ಕೆ ಸ೦ಬ೦ಧಿಸಿದ ಹಾಗೇ ಕಪ್ಪು ಚಹಾವು ಅತ್ಯುತ್ತಮವಾಗಿದೆಯಾದ್ದರಿ೦ದ ಒ೦ದಿಷ್ಟು ಕಪ್ಪು ಚಹಾವನ್ನು ಕುಡಿಯಿರಿ.

English summary

Best Herbal Teas For Diabetic Patients

You might be asked to avoid tea if you are a diabetic. But if you are a tea lover it could be difficult for you to stay away from it. However, you can brew yourself these herbal teas recommended by health expert that won’t cause a spike in your blood sugar levels and also help you to manage the condition well.
X
Desktop Bottom Promotion