ಮಾವಿನ ಎಲೆ: ಮಧುಮೇಹ, ಅಸ್ತಮಾ ರೋಗಕ್ಕೆ ರಾಮಬಾಣ

By: Arshad
Subscribe to Boldsky

ಹಣ್ಣುಗಳ ರಾಜನಾದ ಮಾವಿನ ಹಣ್ಣು ಒಂದು ಅತ್ಯುತ್ತಮವಾದ ಫಲವಾಗಿದ್ದು ಇದರ ರುಚಿಯನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ. ಕೇವಲ ರುಚಿ ಮಾತ್ರವಲ್ಲ, ಇದರಲ್ಲಿ ಹಲವು ಆರೋಗ್ಯಕರ ಗುಣಗಳೂ ಇವೆ.   ಒಂದೇ ತಿಂಗಳಿನಲ್ಲಿ ಮಧುಮೇಹ ನಿಯಂತ್ರಣ-ಚಾಲೆಂಜ್‌ಗೆ ರೆಡಿನಾ?

ಅಂತೆಯೇ ಮಾವಿನ ಎಲೆಗಳನ್ನು ಸಹಾ ತಳಿರು ತೋರಣದ ಹೊರತಾಗಿ ಕೆಲವು ಕಾಯಿಲೆಗಳಿಗೆ ಔಷಧಿಯ ರೂಪದಲ್ಲಿಯೂ ಬಳಸಬಹುದು. ಇದರಲ್ಲಿರುವ ಹಲವು ಪೋಷಕಾಂಶಗಳಲ್ಲಿ ಚಿಕಿತ್ಸಕ ಮತ್ತು ಔಷಧೀಯ ಗುಣಗಳಿವೆ. ಬನ್ನಿ ಈ ಗುಣಗಳು ಯಾವ ರೀತಿಯಲ್ಲಿ ನಮಗೆ ಉಪಯುಕ್ತವಾಗಿವೆ ಎಂಬುದನ್ನು ನೋಡೋಣ...  ಇಂತಹ ಸರಳ ಟಿಪ್ಸ್ ಅನುಸರಿಸಿ, ಅಸ್ತಮಾದಿಂದ ದೂರವಿರಿ! 

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಾವಿನ ಎಲೆಗಳಲ್ಲಿರುವ ಪೋಷಕಾಂಶಗಳು ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿರಿಸುವ ಕ್ಷಮತೆ ಹೊಂದಿರುವ ಕಾರಣ ಇದು ಮಧುಮೇಹಿಗಳಿಗೆ ಉತ್ತಮವಾದ ಔಷಧಿಯಾಗಿದೆ. ಮಧುಮೇಹವಿರುವ ಇಲಿಗಳ ಮೇಲೆ ಪ್ರಯೋಗಿಸಿ ನೋಡಿದಾಗ ಇದು ರಕ್ತದಲ್ಲಿ ಅಧಿಕ ಪ್ರಮಾಣದ ಸಕ್ಕರೆಯನ್ನು ಕಡಿಮೆಗೊಳಿಸಿರುವುದು ಸಂಶೋಧನೆಯಲ್ಲಿ ಕಂಡುಬಂದಿದೆ.

ಅಸ್ತಮಾ ರೋಗಕ್ಕೆ ಚಿಕಿತ್ಸೆ ನೀಡುತ್ತದೆ

ಅಸ್ತಮಾ ರೋಗಕ್ಕೆ ಚಿಕಿತ್ಸೆ ನೀಡುತ್ತದೆ

ಮಧುಮೇಹದಂತೆಯೇ ಅಸ್ತಮಾ ರೋಗಕ್ಕೂ ಮಾವಿನ ಎಲೆಗಳ ಪೋಷಕಾಂಶಳು ಉತ್ತಮವಾದ ಔಷಧಿಯಾಗಿದೆ. ಇದು ಬರೆಯ ಭಾರತದಲ್ಲಿ ಮಾತ್ರವಲ್ಲ, ಚೀನಾದಲ್ಲೂ ನೂರಾರು ವರ್ಷಗಳಿಂದ ಚಿಕಿತ್ಸಾರೂಪದಲ್ಲಿ ಮಾವಿನ ಎಲೆಗಳನ್ನು ಬಳಸಲಾಗುತ್ತಾ ಬರಲಾಗಿದೆ.

ಸೋಂಕಿನಿಂದ ರಕ್ಷಿಸುತ್ತದೆ

ಸೋಂಕಿನಿಂದ ರಕ್ಷಿಸುತ್ತದೆ

ಮಾವಿನ ಎಲೆಗಳಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಮತ್ತು ಔಷಧೀಯ ಗುಣಗಳು ಹಲವು ರೀತಿಯ ಬ್ಯಾಕ್ಟೀರಿಯಾಗಳ ಸೋಂಕಿನಿಂದ ರಕ್ಷಿಸುತ್ತದೆ. ವಿಶೇಷವಾಗಿ ಜೀರ್ಣಕ್ರಿಯೆಯಲ್ಲಿ ತೊಂದರೆ ಮತ್ತು ಗಡ್ಡೆಗಳಾಗದಂತೆ ರಕ್ಷಿಸುತ್ತದೆ.

ವೈರಸ್ಸುಗಳ ಸೋಂಕಿನಿಂದಲೂ ರಕ್ಷಣೆ ನೀಡುತ್ತದೆ

ವೈರಸ್ಸುಗಳ ಸೋಂಕಿನಿಂದಲೂ ರಕ್ಷಣೆ ನೀಡುತ್ತದೆ

ಮಾವಿನ ಎಲೆಗಳನ್ನು ಕೊಳೆಸಿದಾಗ ಇದರಲ್ಲಿ ಆಂಟಿಆಕ್ಸಿಡೆಂಟುಗಳು ಬಹಳಷ್ಟು ಹೆಚ್ಚುತ್ತವೆ. ಈ ದ್ರವ ಒಂದು ಉತ್ತಮ ಸೌಂದರ್ಯವರ್ಧಕವೂ ಹೌದು. ವೈರಸ್ಸಿನ ಸೋಂಕು ಇರುವಲ್ಲಿ ಈ ದ್ರವವನ್ನು ಬಳಸಿದಾಗ ದೇಹದ ರೋಗ ನಿರೋಧಕ ಶಕ್ತಿ ಈ ಸೋಂಕನ್ನು ಎದುರಿಸಲು ಹೆಚ್ಚು ಸಬಲಗೊಂಡಿರುವುದು ಸಂಶೋಧನೆಗಳಲ್ಲಿ ಕಂಡುಬಂದಿದೆ.

ಇದರ ಬಳಕೆ ಹೇಗೆ?

ಇದರ ಬಳಕೆ ಹೇಗೆ?

ಕೆಲವು ಎಳೆಯ ಮಾವಿನ ಎಲೆಗಳನ್ನು ಕೊಂಚ ಜಜ್ಜಿ ಮುಳುಗುವಷ್ಟು ನೀರಿನಲ್ಲಿ ಕುದಿಸಿ. ಬಳಿಕ ಈ ನೀರನ್ನು ಸೋಸಿ ತಣಿಸಿ ಸಂಗ್ರಹಿಸಿ. ಈ ನೀರನ್ನು ಸೋಂಕಿರುವ ಸಮಯದಲ್ಲಿ ಸೇವಿಸುತ್ತಾ ಬನ್ನಿ. ಇನ್ನೊಂದು ವಿಧಾನದಲ್ಲಿ ಎಳೆಯ ಮಾವಿನ ಎಲೆಗಳನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿಮಾಡಿ ಬಾಟಲಿಯಲ್ಲಿ ಸಂಗ್ರಹಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇದರ ಬಳಕೆ ಹೇಗೆ?

ಇದರ ಬಳಕೆ ಹೇಗೆ?

ಅನಾರೋಗ್ಯದ ಸಮಯದಲ್ಲಿ ಈ ಪುಡಿಯನ್ನು ಒಂದು ಲೋಟ ನೀರಿಗೆ ಒಂದು ಚಮಚದಷ್ಟು ಸೇರಿಸಿ ಕಲಕಿ ಕುಡಿಯಿರಿ. ಇನ್ನೂ ಉತ್ತಮ ವಿಧಾನವೆಂದರೆ ಎಳೆಯ ಎಲೆಗಳನ್ನು ಹಸಿಯಾಗಿ ಜಗಿದು, ಕೊಂಚ ಒಗರಾಗಿದ್ದರೂ ಸಹಿಸಿ ನುಂಗಿಬಿಡಿ.

English summary

Health benefits of mango leaves for diabetes, asthma

The king of fruits is here and you can't do without devouring the juicy, pulpy mangoes doing the rounds these days. The fruit definitely has many health benefits apart from having an amazing sweet-tangy taste. But its leaf seldom gets any importance, though it is also rich with therapeutic and medicinal properties. Here are a few benefits of mango leaves you should know.
Subscribe Newsletter