ಬೆಂಡೆಕಾಯಿ ನೆನೆಸಿಟ್ಟ ನೀರು ಕುಡಿದರೆ ಹತ್ತಾರು ಲಾಭ

Written by: manu
Updated: Thursday, May 5, 2016, 10:50 [IST]
Subscribe to Boldsky
 
ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ
    ಇದನ್ನು ಹಂಚಿರಿ    ಇದನ್ನು ಟ್ವೀಟಿಸಿ    ಇದನ್ನು ಹಂಚಿರಿ ಕಾಮೆಂಟ್ಸ್   ಇ ಮೇಲ್

ನೋಡುವುದಕ್ಕೆ ಮಹಿಳೆಯರ ಬೆರಳಿನಂತೇನೂ ಇರದ ಬೆಂಡೇಕಾಯಿಗೆ Ladies Finger ಎಂಬ ಈ ಪಟ್ಟ ಹೇಗೋ ದೊರಕಿಬಿಟ್ಟಿದೆ. ಸಾಮಾನ್ಯವಾಗಿ ಇಡಿಯ ವರ್ಷ ಸಿಗುವ ಈ ತರಕಾರಿ ವಾಸ್ತವವಾಗಿ ವಿವಿಧ ವಿಟಮಿನ್ನುಗಳು, ಖನಿಜಗಳು ಮತ್ತು ಪೋಷಕಾಂಶಗಳ ಆಗರವಾಗಿದ್ದು ಅಗ್ಗವೂ ಆಗಿರುವುದರಿಂದ ಎಲ್ಲಾ ವರ್ಗದ ಜನರ ಮನೆಯ ಅಡುಗೆಯಲ್ಲಿ ಸಾಮಾನ್ಯವಾಗಿದೆ. ಅಲ್ಲದೇ ಇದರಲ್ಲಿರುವ ಕರಗದ ನಾರು ಮಲಬದ್ಧತೆಯಿಂದ ಕಾಪಾಡುತ್ತದೆ. ಮಧುಮೇಹಕ್ಕೆ ರಾಮಬಾಣ ಬೆಂಡೆಕಾಯಿ!

ಇಷ್ಟೆಲ್ಲಾ ಉಪಯೋಗವಿರುವ ಬೆಂಡೆಕಾಯಿಯನ್ನು ಪ್ರತಿದಿನ, 3-4 ಬೆಂಡೆಕಾಯಿಯನ್ನು ಕತ್ತರಿಸಿಕೊಂಡು ಅದನ್ನು ಒಂದ ಲೋಟ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅದರಿಂದ ಹಲವಾರು ರೀತಿಯ ಲಾಭಗಳಿವೆ. ಹೀಗೆ ಬೆಂಡೆಕಾಯಿಯಲ್ಲಿರುವ ಅನೇಕ ಗುಣಗಳನ್ನು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು. ಸರ್ವ ರೋಗಕ್ಕೂ ರಾಮಬಾಣವಾಗಿರುವ ಬೆಂಡೆಕಾಯಿಯ ಪ್ರಯೋಜನಗಳೇನು?

ಇದರಲ್ಲಿ ನಾರಿನಾಂಶ, ಸತು, ಕ್ಯಾಲ್ಸಿಯಂ, ರಿಬೊಫ್ಲೆವಿನ್, ಫಾಲಿಕ್ ಆ್ಯಸಿಡ್, ವಿಟಮಿನ್ ಸಿ, ವಿಟಮಿನ್ ಬಿ6, ಎ, ಥೈಮಿನ್, ಮ್ಯಾಗ್ನಿಶಿಯಂ ಮತ್ತು ಇನ್ನೂ ಹಲವಾರು ರೀತಿಯ ಪೋಷಕಾಂಶಗಳಿವೆ. ರಾತ್ರಿ ನೆನೆಸಿಟ್ಟ ಬೆಂಡೆಕಾಯಿಯ ನೀರನ್ನು ಕುಡಿದರೆ ಕಿಡ್ನಿ ಸಮಸ್ಯೆ, ಸಕ್ಕರೆ ಕಾಯಿಲೆ ಸಮಸ್ಯೆ, ಕೊಲೆಸ್ಟ್ರಾಲ್ ಸಮಸ್ಯೆ ಮತ್ತು ಅಸ್ತಮಾವನ್ನು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಂಡೆಕಾಯಿಯಿಂದ ಯಾವ ರೀತಿಯ ಆರೋಗ್ಯ ಲಾಭಗಳಿವೆ ಎನ್ನುವುದನ್ನು ನಾವು ತಿಳಿದುಕೊಳ್ಳುವ...

ಪ್ರಯೋಜನ#1

ಬೆಂಡೆಕಾಯಿಯಲ್ಲಿ ಇರುವಂತಹ ನಾರಿನಾಂಶವು ಗ್ಯಾಸಿನಿಂದ ಉಂಟಾಗುವ ಸಮಸ್ಯೆಯನ್ನು ನಿವಾರಿಸಬಲ್ಲದು. ಇದು ಗ್ಯಾಸ್, ಹೊಟ್ಟೆಯುಬ್ಬರ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.

ಪ್ರಯೋಜನ#2

ಬೆಂಡೆಕಾಯಿಯು ನಿಮ್ಮ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಉತ್ಪತ್ತಿ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಅಂಶವು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ಪ್ರಯೋಜನ #3

ಬೆಂಡೆಕಾಯಿಯನ್ನು ಬೇಯಿಸಿ ಅಥವಾ ಹಸಿಯಾಗಿಯೇ ತಿಂದರೆ ಅದರಲ್ಲಿರುವ ನಾರಿನಾಂಶವು ದೇಹದಲ್ಲಿನ ರಕ್ತದಂಶವನ್ನು ನಿಯಂತ್ರಣದಲ್ಲಿಡುತ್ತದೆ.

ಪ್ರಯೋಜನ #4

ಬೆಂಡೆಕಾಯಿಯಲ್ಲಿ ವಿಟಮಿನ್ ಎ, ಲುಟೈನ್, ಕ್ಸಂಟೈನ್ ಮತ್ತು ಬೆಟಾ ಕ್ಯಾರೋಟಿನ್ ಅಂಶಗಳಿವೆ. ಇದು ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆಯದು.

ಪ್ರಯೋಜನ #5

ಬೆಂಡೆಕಾಯಿಯು ತೂಕ ಕಳೆದುಕೊಳ್ಳಲು ಸಹಕಾರಿ. ಇದರಲ್ಲಿ ತುಂಬಾ ಕಡಿಮೆ ಮಟ್ಟದ ಕ್ಯಾಲೋರಿಗಳಿವೆ. ಇದರಲ್ಲಿ ಯಾವುದೇ ರೀತಿಯ ಸಂಸ್ಕರಿತ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲ.

ಪ್ರಯೋಜನ #4

ದೇಹದಲ್ಲಿರುವ ವಿಷಕಾರಿ ಅಂಶಗಳು ಹಾಗೂ ಕೊಲೆಸ್ಟ್ರಾಲ್ ನ್ನು ಬೆಂಡೆಕಾಯಿಯು ಹೊರಹಾಕುತ್ತದೆ. ನಿಮಗೆ ಬೆಂಡೆಕಾಯಿ ಇಷ್ಟವಿಲ್ಲದೆ ಇದ್ದರೆ ನೆನೆಸಿದ ಬೆಂಡೆಕಾಯಿಯ ನೀರನ್ನು ಕುಡಿಯಿರಿ.

ಪ್ರಯೋಜನ #5

ಪುರಾತನ ಕಾಲದಲ್ಲಿ ಭಾರತದಲ್ಲಿ ಐಬಿಎಸ್ ಮತ್ತು ಅಲ್ಸರ್ ಕಾಯಿಲೆ ಗುಣಪಡಿಸಲು ಬೆಂಡೆಕಾಯಿಯನ್ನು ಉಪಯೋಗಿಸುತ್ತಿದ್ದರು. ಇದನ್ನು ಔಷಧಿಯಾಗಿಯೂ ಉಪಯೋಗಿಸಿಕೊಳ್ಳಬಹುದು.

ಪ್ರಯೋಜನ #6

ದೇಹದಲ್ಲಿರುವ ವಿಷಕಾರಿ ಅಂಶಗಳು ಹಾಗೂ ಕೊಲೆಸ್ಟ್ರಾಲ್‌ನ್ನು ಬೆಂಡೆಕಾಯಿಯು ಹೊರಹಾಕುತ್ತದೆ. ನಿಮಗೆ ಬೆಂಡೆಕಾಯಿ ಇಷ್ಟವಿಲ್ಲದೆ ಇದ್ದರೆ ನೆನೆಸಿದ ಬೆಂಡೆಕಾಯಿಯ ನೀರನ್ನು ಕುಡಿಯಿರಿ.

ಪ್ರಯೋಜನ #7

ಪುರಾತನ ಕಾಲದಲ್ಲಿ ಭಾರತದಲ್ಲಿ ಐಬಿಎಸ್ ಮತ್ತು ಅಲ್ಸರ್ ಕಾಯಿಲೆ ಗುಣಪಡಿಸಲು ಬೆಂಡೆಕಾಯಿಯನ್ನು ಉಪಯೋಗಿಸುತ್ತಿದ್ದರು. ಇದನ್ನು ಔಷಧಿಯಾಗಿಯೂ ಉಪಯೋಗಿಸಿಕೊಳ್ಳಬಹುದು.

ಪ್ರಯೋಜನ #10

ಬೆಂಡೆಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಮತ್ತು ಹೆಚ್ಚಿನ ಪ್ರಮಾಣದ ಕರಗದ ನಾರು ಇದೆ. ಈ ನಾರನ್ನು ಕಗರಿಸುವ ಪ್ರಯತ್ನದಲ್ಲಿ ಕೊಂಚ ಪ್ರಮಾಣದ ಕೊಬ್ಬು ವ್ಯರ್ಥವಾಗಿ ಹೋಗುವುದರಿಂದ ತೂಕ ಸಹಜವಾಗಿ ಕಡಿಮೆಯಾಗುತ್ತದೆ.

ಪ್ರಯೋಜನ #11

ಬೆಂಡೆಯಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಇದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಬೆಂಡೆಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಹಲವು ವಿಧದ ಕಾಯಿಲೆಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ.

ಪ್ರಯೋಜನ #12

ಬೆಂಡೆಯಲ್ಲಿರುವ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ಚರ್ಮಕ್ಕೆ ಒಳಗಿನಿಂದ ನೀಡುವ ಪೋಷಣೆಯ ಪರಿಣಾಮವಾಗಿ ಚರ್ಮ ತನ್ನ ಸಹಜ ಸೌಂದರ್ಯ ಮತ್ತು ಕಾಂತಿಯನ್ನು ಹೊಂದುತ್ತದೆ. ಇದಕ್ಕಾಗಿ ಎಳೆಯ ಬೆಂಡೆಯನ್ನು ಆಗಾಗ ಹಸಿಯಾಗಿ ತಿಂದರೆ ಹೆಚ್ಚು ಪರಿಣಾಮಕಾರಿಯಾಗಿದೆ.

ಪ್ರಯೋಜನ #13

ಸಾಮಾನ್ಯವಾಗಿ ಕೆಲವು ಸಂದರ್ಭಗಳಲ್ಲಿ ನಮ್ಮ ಜೀವಕೋಶಗಳು ತಮ್ಮಿಂದ ತಾವೇ ಅನಗತ್ಯವಾಗಿ ಬೆಳೆದು ಕ್ಯಾನ್ಸರ್ ಗೆ ಕಾರಣವಾಗುತ್ತವೆ (mutation of cells), ಆದರೆ ಬೆಂಡೆ ಈ ಜೀವಕೋಶಗಳ ಬೆಳವಣಿಗೆಯನ್ನು ತಡೆಯಲು ಸಮರ್ಥವಾಗಿರುವುದರಿಂದ ನಿಮ್ಮ ನಿತ್ಯದ ಊಟದಲ್ಲಿ ಬೆಂಡೆಯನ್ನು ಅಗತ್ಯವಾಗಿ ಸೇರಿಸಲು ಮರೆಯದಿರಿ.

ಪ್ರಯೋಜನ #14

ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇರುವ ರೋಗಿಗಳಿಗೆ ವೈದ್ಯರು ಹೆಚ್ಚಿನ ಆಹಾರಗಳನ್ನು ಸೇವಿಸದಂತೆ ಸಲಹೆ ಮಾಡುತ್ತಾರೆ. ಆದರೆ ಈ ರೋಗಿಗಳು ಬೆಂಡೆಕಾಯಿಯನ್ನು ಮಾತ್ರ ಸುರಕ್ಷಿತವಾಗಿ ಸೇವಿಸಬಹುದು. ಏಕೆಂದರೆ ಬೆಂಡೆಯಲ್ಲಿ ಯಾವುದೇ ಕೊಲೆಸ್ಟ್ರಾಲ್ ಆಗಲೀ ಕೊಲೆಸ್ಟ್ರಾಲ್ ಉಂಟುಮಾಡುವ ಕಣಗಳಾಗಲೀ ಇಲ್ಲದೇ ಇರುವುದರಿಂದ ಕೊಲೆಸ್ಟ್ರಾಲ್ ರೋಗಿಗಳ ಪಾಲಿನ ಪಂಚಾಮೃತವಾಗಿದೆ.

ಸಲಹೆ

*ಬೆಂಡೆಯ ಸಾರು ಅಥವಾ ಪಲ್ಯ ಮಾಡುವ ಮೊದಲು ಕೊಂಚ ಎಣ್ಣೆಯಲ್ಲಿ ಹುರಿದುಕೊಂಡರೆ ಅದರ ಲೋಳೆ ಹೊರಬರದೇ ಸಾರು ಮತ್ತು ಪಲ್ಯಗಳು ಲೋಳೆರಹಿತವಾಗಿರುತ್ತವೆ. ಬೆಂಡೆ ಎಳೆಯದಿದ್ದಷ್ಟೂ ಉತ್ತಮ. ಇದನ್ನು ಪರೀಕ್ಷಿಸಲು ತುದಿಭಾಗವನ್ನು ಮುರಿದು ನೋಡಿ.
*ಇದು ಮುರಿದು ತುಂಡಾಗಿ ಹೋಗಬೇಕು. ಅಲ್ಲಿಯೇ ಬಗ್ಗಿ ಇದ್ದರೆ ಅದು ಬಲಿತಿದೆ ಎಂದರ್ಧ. ಪರ್ಯಾಯವಾಗಿ ಬೆಂಡೆಯ ಮಧ್ಯಭಾಗದಲ್ಲಿ ಒಂದು ಅಂಚನ್ನು ಹೆಬ್ಬೆರಳಿನಿಂದ ನಯವಾಗಿ ಒತ್ತಿ.

ಸಲಹೆ

*ಇದು ಸುಲಭವಾಗಿ ತುಂಡಾದ ಅನುಭವ ಬಂದರೆ ಮಾತ್ರ ಬೆಂಡೆ ಎಳೆಯದಾಗಿದೆ ಎಂದರ್ಥ. *ಬೆಂಡೆ ಫ್ರೈ ಮಾಡುವುದಾದರೆ ತೊಟ್ಟಿನ ಭಾಗವನ್ನು ನಿವಾರಿಸಬೇಡಿ. ಫ್ರೈ ಮಾಡಿದ ಬಳಿಕವೇ ಕತ್ತರಿಸಿ ನಿವಾರಿಸಿ, ಇದರಿಂದ ಬೆಂಡೆಯನ್ನು ಬುಡದವರೆಗೂ ಸೀಳಲು ಮತ್ತು ಮಸಾಲೆ ತುಂಬಿಸಲು ಸಾಧ್ಯವಾಗುತ್ತದೆ.ತೊಟ್ಟು ತೆಗೆದರೆ ಪೂರ್ಣವಾಗಿ ತುಂಬಿಸಲು ಸಾಧ್ಯವಿಲ್ಲ. ಆಗ ತೊಟ್ಟಿನ ಭಾಗ ಚಪ್ಪೆಯಾಗಿಯೂ ತಳಭಾಗ ರುಚಿಯಾಗಿಯೂ ಇರುತ್ತದೆ.

 

 

Story first published:  Friday, April 15, 2016, 13:35 [IST]
English summary

Can Okra really lower sugar and cholesterol?

Bhindi, has other names like lady finger and okra. Yes, it offers several health benefits. Okay, what's okra water? Cut 3-4 lady fingers and soak them in a glass of water for a night and drink the water after waking up in the morning. Does it prevent diabetes, cholesterol issues and kidney issues? Just try it out!
Write Comments

Subscribe Newsletter
Subscribe Newsletter