For Quick Alerts
ALLOW NOTIFICATIONS  
For Daily Alerts

ಮಧುಮೇಹದ ವಿಷಯದಲ್ಲಿ ಮಾತ್ರ ಉದಾಸೀನ ಬೇಡ

|

ಮಧುಮೇಹವು ಈಗ ಸಾಮಾನ್ಯ ಸಮಸ್ಯೆಯಾಗಿ ಹೋಗಿದೆ. ಯಾರು ದಪ್ಪಗೆ ಇರುತ್ತಾರೋ ಮತ್ತು ಮಧುಮೇಹ ಇರುವ ಕೌಟುಂಬಿಕ ಇತಿಹಾಸವನ್ನು ಹೊಂದಿರುತ್ತಾರೋ, ಅವರಲ್ಲಿ ಮದುಮೇಹವು ತಪ್ಪದೆ ಬರುತ್ತದೆ ಎಂಬಷ್ಟು ಮಧುಮೇಹಿಗಳು ಈಗ ನಮ್ಮ ನಡುವೆ ಇದ್ದಾರೆ. ಮಧುಮೇಹದಲ್ಲಿ ಎರಡು ವಿಧ ಒಂದು ಮೆಲ್ಲಿಟಸ್ ಟೈಪ್ 1 ಮತ್ತು ಎರಡನೆಯದು ಟೈಪ್ 2 ಮಧುಮೇಹ ಮೆಲ್ಲಿಟಸ್ ಮಧ್ಯ ವಯಸ್ಸಿನಲ್ಲಿ (ಅಂದರೆ 35 ವರ್ಷದ ನಂತರ ಕಾಣಿಸಿಕೊಳ್ಳುತ್ತದೆ).

ಟೈಪ್ 1 ಮಧುಮೇಹವು ಬಹುತೇಕ ಬಾರಿ ಬಾಲ್ಯದಲ್ಲಿಯೇ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಇಂತಹ ಸಮಸ್ಯೆಗಳಿಗೆ ವೇಗದ ನಡಿಗೆ ಮತ್ತು ನಿಮ್ಮ ಆಹಾರದಲ್ಲಿ ಪಥ್ಯವನ್ನು ಮಾಡುವ ಮೂಲಕ ಇದನ್ನು ನಿಭಾಯಿಸಬಹುದು. ಮಧುಮೇಹ ಬಂದಾಗ ರಕ್ತದಲ್ಲಿ ಅಧಿಕ ಪ್ರಮಾಣದ ಸಕ್ಕರೆ ಅಂಶ ಕಾಣಿಸಿಕೊಳ್ಳಲು ಹಾರ್ಮೋನ್‌ಗಳೇ ಕಾರಣ ಎಂದು ವೈದ್ಯರು ತಿಳಿಸುತ್ತಾರೆ. ಈ ಹಾರ್ಮೋನ್ ಮೇದೋಜ್ಜೀರಕ ಗ್ರಂಥಿಯಿಂದ ಸಕ್ಕರೆ ಅಂಶವನ್ನು ಹೆಚ್ಚಾಗಿ ಸಂಗ್ರಹಿಸಿಕೊಂಡು ಅದನ್ನು ಇಡೀ ದೇಹಕ್ಕೆ ವ್ಯಾಪಿಸುವಂತೆ ಮಾಡುತ್ತದೆ. ಕೆಲವೊಮ್ಮೆ ಇನ್ಸುಲಿನ್ ಉತ್ಪಾದನೆಯು ದೇಹದಲ್ಲಿ ಸಮರ್ಪಕವಾಗಿ ನಡೆಯುವುದಿಲ್ಲ (ಬಹುಶಃ ದೇಹದಲ್ಲಿ ಅದನ್ನು ಸ್ವೀಕರಿಸುವ ಅಂಗಗಳು ಅದನ್ನು ಗುರುತಿಸಲು ವಿಫಲವಾಗಬಹುದು). ಆಗ ಇದರಿಂದ ಇನ್ಸುಲಿನ್ ಇನ್‌ಸೆನ್ಸಿಟಿವಿಟಿ ಉಂಟಾಗುತ್ತದೆ. ಸಿಹಿ ಗೆಣಸು ಮಧುಮೇಹಿ ರೋಗಿಗಳ ಪಾಲಿಗೆ ಸಂಜೀವಿನಿ

ಮಧುಮೇಹವು ಹೆಚ್ಚಾದಂತೆಲ್ಲ, ಬಾಯಾರಿಕೆ, ಮೂತ್ರವಿಸರ್ಜನೆ, ಬಾಯಿ ಒಣಗುವಿಕೆ, ಗಾಯಗಳು ನಿಧಾನವಾಗಿ ಮಾಯುವುದು, ಅಧಿಕ ಬೆವರು, ಸುಸ್ತು, ಅಧಿಕ ಹೊಟ್ಟೆ ಹಸಿವು ಇತ್ಯಾದಿ ಕಾಣಿಸಿಕೊಳ್ಳುತ್ತದೆ. ಮಧುಮೇಹವು ಹೆಚ್ಚಾದಾಗ ಏನೆಲ್ಲ ಸಂಭವಿಸುತ್ತದೆ ಎಂಬುದರ ಕುರಿತು ಒಂದು ನೋಟ ಹರಿಸೋಣ ಬನ್ನಿ. ಅದನ್ನು ಉದಾಸೀನ ಮಾಡಿದರೆ ಏನೆಲ್ಲ ಸಂಭವಿಸುತ್ತದೆ ಎಂಬುದನ್ನು ನೋಡಿ.

ಮೂತ್ರ ಪಿಂಡಕ್ಕೆ ಹಾನಿಯುಂಟಾಗುತ್ತದೆ (ನೆಪ್ರೊಪತಿ). ಅನಿಯಂತ್ರಿತ ಮಧುಮೇಹವು ನಿಮ್ಮ ಮೂತ್ರಪಿಂಡಗಳಿಗೆ ಹಾನಿಯುಂಟು ಮಾಡಬಹುದು. ರಕ್ತದಲ್ಲಿನ ಅಧಿಕ ಸಕ್ಕರೆ ಅಂಶವು ದೇಹಕ್ಕೆ ವಿಷಕಾರಿಯಾಗಿ ಪರಿಣಮಿಸುತ್ತದೆ. ಅದು ಮೂತ್ರಪಿಂಡಗಳಲ್ಲಿರುವ ಸಣ್ಣ ರಕ್ತ ನಾಳಗಳನ್ನು ಹಾಳು ಮಾಡುತ್ತದೆ. ಇದರಿಂದ ಮೂತ್ರಪಿಂಡ ವೈಫಲ್ಯವು ಸಹ ಸಂಭವಿಸಬಹುದು...

ನರ ವೈಫಲ್ಯ (ನ್ಯೂರೋಪತಿ)

ನರ ವೈಫಲ್ಯ (ನ್ಯೂರೋಪತಿ)

ಅಧಿಕ ಸಕ್ಕರೆ ಅಂಶವು ರಕ್ತದಲ್ಲಿದ್ದಾಗ ಅದರಿಂದ ರಕ್ತ ನಾಳಗಳು ಸಹ ಹಾನಿಗೊಳಗಾಗುತ್ತವೆ. ಅದರಲ್ಲಿಯೂ ವಿಶೇಷವಾಗಿ ಕಾಲಿನ ಭಾಗಕ್ಕೆ ರಕ್ತವನ್ನು ವರ್ಗಾವಣೆ ಮಾಡುವ ನಾಳಗಳು ಇದರಿಂದ ಹೆಚ್ಚು ಹಾನಿಗೆ ಒಳಗಾಗುತ್ತವೆ.

ದೇಹದ ಕೆಳಭಾಗದಲ್ಲಿ ಸಂವೇಧನೆಯನ್ನು ಕಳೆದುಕೊಳ್ಳುವಿಕೆ

ದೇಹದ ಕೆಳಭಾಗದಲ್ಲಿ ಸಂವೇಧನೆಯನ್ನು ಕಳೆದುಕೊಳ್ಳುವಿಕೆ

ಮಧುಮೇಹವು ಅಧಿಕಗೊಂಡಾಗ ಅದು ಕಾಲುಗಳಿಗೆ ರಕ್ತ ಸಂಚಾರವನ್ನು ನಿಲ್ಲಿಸುತ್ತದೆ. ಇದರಿಂದ ದೇಹದ ಕೆಳಭಾಗದಲ್ಲಿ ಸಂವೇಧನೆಗಳು ಕಡಿಮೆಯಾಗುತ್ತವೆ. ಕಾಲಿನ ಬೆರಳು ಮತ್ತು ಹೆಬ್ಬೆರಳಿನ ಭಾಗದಲ್ಲಿ ಉರಿ,ನೋವು ಮತ್ತು ಕೆರೆತ ಕಾಣಿಸಿಕೊಳ್ಳಬಹುದು. ಮುಂದೆ ಅದು ಇಡೀ ದೇಹವನ್ನು ವ್ಯಾಪಿಸಲೂಬಹುದು.

ಜೀರ್ಣ ಕ್ರಿಯೆ ಸಮಸ್ಯೆಗಳು

ಜೀರ್ಣ ಕ್ರಿಯೆ ಸಮಸ್ಯೆಗಳು

ಜೀರ್ಣ ಕ್ರಿಯೆಗೆ ಸಂಬಂಧಿಸಿದ ನರಗಳು ಅಧಿಕ ಸಕ್ಕರೆ ಅಂಶದ ಕಾರಣವಾಗಿ ಹಾನಿಗೊಳಗಾಗುತ್ತವೆ. ಇದರಿಂದಾಗಿ ವಾಂತಿ, ನಾಸಿಯಾ, ಭೇದಿ ಮತ್ತು ಅಜೀರ್ಣ ಸಹ ಕಂಡು ಬರುತ್ತದೆ.

ಮಧುಮೇಹ ಪಾದಗಳಿಗೂ ವ್ಯಾಪಿಸಬಹುದು

ಮಧುಮೇಹ ಪಾದಗಳಿಗೂ ವ್ಯಾಪಿಸಬಹುದು

ಅಧಿಕ ಮಧುಮೇಹ ಕಂಡು ಬಂದಾಗ, ರಕ್ತ ಸಂಚಾರವು ಕಾಲುಗಳತ್ತ ಸರಿಯಾಗಿ ನಡೆಯುವುದಿಲ್ಲ. ಆಗ ಇದರಿಂದ ಗ್ಯಾಂಗ್ರೀನ್ ಸಹ ಸಂಭವಿಸಬಹುದು (ಕೋಶಗಳು ಸಾಯಬಹುದು) ಮತ್ತು ಗಂಭೀರವಾದ ಪಾದಗಳ ಇನ್‍ಫೆಕ್ಷನ್ ಆಗಬಹುದು. ಮಧುಮೇಹವು ನಿಧಾನವಾಗಿ ಗುಣಮುಖವಾಗುವುದರಿಂದಾಗಿ, ಇದು ಪಾದ, ಹೆಬ್ಬೆರಳು ಮತ್ತು ಇತರ ಬೆರಳುಗಳಿಗು ಸಹ ವ್ಯಾಪಿಸಬಹುದು.

ಕಣ್ಣಿಗೆ ಹಾನಿ (ರೆಟಿನೊಪಥಿ)

ಕಣ್ಣಿಗೆ ಹಾನಿ (ರೆಟಿನೊಪಥಿ)

ಅಧಿಕ ಮಧುಮೇಹವು ರೆಟಿನಾ ಭಾಗದಲ್ಲಿರುವ ನರಗಳನ್ನು ದುರ್ಬಲಗೊಳಿಸುತ್ತದೆ. ಇದನ್ನು ರೆಟಿನೊಪಥಿ ಎಂದು ಕರೆಯುತ್ತಾರೆ. ಇದನ್ನು ಸರಿಯಾಗಿ ಆರೈಕೆ ಮಾಡದಿದ್ದಲ್ಲಿ, ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಮದುಮೇಹವು ಕ್ಯಾಟರಾಕ್ಟ್ ಮತ್ತು ಗ್ಲೂಕೋಮಾ ಬರುವ ಅಪಾಯವನ್ನು ಹೆಚ್ಚಿಸುತ್ತದೆ.

ಕಿವುಡುತನ

ಕಿವುಡುತನ

ರಕ್ತದಲ್ಲಿನ ಅಧಿಕ ಗ್ಲೂಕೋಸ್ ಮಟ್ಟವು ಕಿವಿ ಕೇಳಿಸುವಿಕೆಯಲ್ಲಿ ಸಹ ದೋಷವನ್ನುಂಟು ಮಾಡುತ್ತದೆ. ಇದರಿಂದ ಶಾಶ್ವತ ಕಿವುಡುತನ ಕೂಡ ಬರಬಹುದು. ಆದ್ದರಿಂದ ಇದನ್ನು ಮೊದಲೇ ನೋಡಿಕೊಂಡು ಪರಿಹರಿಸಿಕೊಳ್ಳಿ.


English summary

What Happens If You Don't Pay Attention To Diabetes

Diabetes is a common problem these days. People who are obese and who have a family history of diabetes are at more risk. There are two types of diabetes mellitus type 1 and type 2. Type 2 diabetes mellitus afflicts in mature age (after the age of 35). Type 1 diabetes is mostly occurs in childhod.
Story first published: Friday, June 19, 2015, 20:06 [IST]
X
Desktop Bottom Promotion