For Quick Alerts
ALLOW NOTIFICATIONS  
For Daily Alerts

ಮಧುಮೇಹವನ್ನು ನಿಯಂತ್ರಿಸುವ ಹಿತ್ತಲ ಗಿಡದ ತರಕಾರಿ ಜ್ಯೂಸ್‌

|

ಜಗತ್ತಿನಾದ್ಯ೦ತ ದೊಡ್ಡ ಸ೦ಖ್ಯೆಗಳಲ್ಲಿ ಜನರನ್ನು ಕಾಡುವ ಅತ್ಯ೦ತ ಸಾಮಾನ್ಯವಾದ ಆರೋಗ್ಯಕಾರಿ ಸಮಸ್ಯೆಗಳ ಪೈಕಿ ಮಧುಮೇಹವೂ ಕೂಡಾ ಒ೦ದು. ಮಧುಮೇಹಕ್ಕೆ೦ದು ಶಿಫಾರಸು ಮಾಡಲಾಗುವ ಔಷಧಿಗಳು ಮೆಚ್ಚತಕ್ಕ ಫಲಿತಾ೦ಶಗಳನ್ನು೦ಟು ಮಾಡುತ್ತವೆಯಾದರೂ ಕೂಡ, ಪರಿಸ್ಥಿತಿಯು ಕಟ್ಟುನಿಟ್ಟಾದ ಆಹಾರಕ್ರಮವನ್ನೂ ಕೂಡ ಬೇಡುತ್ತದೆ.

ಇಂದಿನ ಒತ್ತಡಗಳ ಮಧ್ಯೆ ನಡೆಸುತ್ತಿರುವ ಜೀವನ ಶೈಲಿಯಲ್ಲಿ ನಮಗೆ ತಿಳಿಯದೆಯೇ ಮೌನವಾಗಿ ಹಲವು ರೋಗಗಳು ನಮನ್ನು ಆವರಿಸಿ ಬಿಡುತ್ತವೆ! ಮಧುಮೇಹ, ಅಧಿಕ ರಕ್ತದೊತ್ತಡ, ಹೀಗೆ ಅನೇಕ ರೀತಿಯ ಕಾಯಿಲೆಗಳು ಒಳಗೊಳಗೇ ನಿಧಾನವಾಗಿ ಉದ್ಭವಿಸಿ ನಿಮ್ಮನ್ನು ಕಾಡತೊಡಗಲು ಆರಂಭವಾಗಿ ನಿಮ್ಮ ಸಾಮಾನ್ಯ ಜೀವನಶೈಲಿಗೆ ಅಡ್ಡಬರುತ್ತವೆ.

Can ayurveda cure diabetes permanently?

ಮಧುಮೇಹವು ಆ ನಿರ್ಣಾಯಕ ರೋಗಗಳಲ್ಲೊಂದಾಗಿದ್ದು ನಿಮಗೆ ಇನ್ನಷ್ಟು ಆರೋಗ್ಯ ಸಮಸ್ಯೆಗಳು, ಉದಾಹರಣೆಗೆ ಹೃದಯರೋಗಗಳು, ಇವುಗಳನ್ನು ಸೃಷ್ಟಿಸುತ್ತದೆ. ಮಧುಮೇಹದಲ್ಲಿ ಎರಡು ವಿಧ ಒಂದು ಮೆಲ್ಲಿಟಸ್ ಟೈಪ್ 1 ಮತ್ತು ಎರಡನೆಯದು ಟೈಪ್ 2 ಮಧುಮೇಹ ಮೆಲ್ಲಿಟಸ್ ಮಧ್ಯ ವಯಸ್ಸಿನಲ್ಲಿ (ಅಂದರೆ 35 ವರ್ಷದ ನಂತರ ಕಾಣಿಸಿಕೊಳ್ಳುತ್ತದೆ).

ಹಾಗಾಗಿ ಇಂತಹ ಸಮಸ್ಯೆಗಳಿಗೆ ವೇಗದ ನಡಿಗೆ ಮತ್ತು ನಿಮ್ಮ ಆಹಾರದಲ್ಲಿ ಪಥ್ಯವನ್ನು ಮಾಡುವ ಮೂಲಕ ಇದನ್ನು ನಿಭಾಯಿಸಬಹುದು. ಮಧುಮೇಹ ಬಂದಾಗ ರಕ್ತದಲ್ಲಿ ಅಧಿಕ ಪ್ರಮಾಣದ ಸಕ್ಕರೆ ಅಂಶ ಕಾಣಿಸಿಕೊಳ್ಳಲು ಹಾರ್ಮೋನ್‌ಗಳೇ ಕಾರಣ ಎಂದು ವೈದ್ಯರು ತಿಳಿಸುತ್ತಾರೆ. ಮಧುಮೇಹದ ವಿಷಯದಲ್ಲಿ ಮಾತ್ರ ಉದಾಸೀನ ಬೇಡ

ಈ ಹಾರ್ಮೋನ್ ಮೇದೋಜ್ಜೀರಕ ಗ್ರಂಥಿಯಿಂದ ಸಕ್ಕರೆ ಅಂಶವನ್ನು ಹೆಚ್ಚಾಗಿ ಸಂಗ್ರಹಿಸಿಕೊಂಡು ಅದನ್ನು ಇಡೀ ದೇಹಕ್ಕೆ ವ್ಯಾಪಿಸುವಂತೆ ಮಾಡುತ್ತದೆ. ಕೆಲವೊಮ್ಮೆ ಇನ್ಸುಲಿನ್ ಉತ್ಪಾದನೆಯು ದೇಹದಲ್ಲಿ ಸಮರ್ಪಕವಾಗಿ ನಡೆಯುವುದಿಲ್ಲ (ಬಹುಶಃ ದೇಹದಲ್ಲಿ ಅದನ್ನು ಸ್ವೀಕರಿಸುವ ಅಂಗಗಳು ಅದನ್ನು ಗುರುತಿಸಲು ವಿಫಲವಾಗಬಹುದು). ಆಗ ಇದರಿಂದ ಇನ್ಸುಲಿನ್ ಇನ್‌ಸೆನ್ಸಿಟಿವಿಟಿ ಉಂಟಾಗುತ್ತದೆ. ಬನ್ನಿ ಕೆಲವೊಂದು ಗಿಡಮೂಲಿಕೆಗಳನ್ನು ಬಳಸಿಕೊಂಡು ಡಯಾಬಿಟಿಸ್‌ಗೆ ಅಥವಾ ಮಧುಮೇಹ ಮಾಡಬಹುದಾದ ಚಿಕಿತ್ಸೆಗಳ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳುವ.

ಕಹಿ ಸೋರೆಕಾಯಿ
ಮೂರರಿಂದ ನಾಲ್ಕು ಕಹಿ ಸೋರೆಕಾಯಿಯ ಬೀಜಗಳನ್ನು ತೆಗೆದು ಅದನ್ನು ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ದಿನಾಲೂ ಈ ಜ್ಯೂಸ್ ಅನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ಡಯಾಬಿಟಿಸ್‌ಗೆ ಆಯುರ್ವೇದದಲ್ಲಿರುವ ಸಾಮಾನ್ಯ ಔಷಧಿ.

ನೆನೆಸಿದ ಮೆಂತೆ
ರಾತ್ರಿ ವೇಳೆ ನಾಲ್ಕು ಚಮಚ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಇದನ್ನು ತೆಗೆದು ಹುಡಿ ಮಾಡಿ ಮಿಶ್ರಣವನ್ನು ಗಾಳಿಸಿ ತೆಗೆದು ನೀರನ್ನು ಕುಡಿಯಿರಿ. ಎರಡು ತಿಂಗಳುಗಳ ಕಾಲ ಹೀಗೆ ನೀರನ್ನು ಕುಡಿಯುತ್ತಾ ಇದ್ದರೆ ಅದರಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು. ಸಿಹಿ ಗೆಣಸು ಮಧುಮೇಹಿ ರೋಗಿಗಳ ಪಾಲಿಗೆ ಸಂಜೀವಿನಿ

ಹಿಪ್ಪನೇರಳೆ ಎಲೆಗಳು
ಹಿಪ್ಪನೇರಳೆ ಎಲೆಗಳನ್ನು ಬಳಸಿಕೊಂಡು ಆಯುರ್ವೇದದಲ್ಲಿ ಮಧುಮೇಹವನ್ನು ನಿಯಂತ್ರಿಸಲು ಹೇಗೆ ಸಾಧ್ಯ ಎಂದು ಅಚ್ಚರಿಯಾಗುತ್ತಿದೆಯಾ? ಆಯುರ್ವೇದದ ಪ್ರಕಾರ ಹಿಪ್ಪನೇರಳೆಯ ಎಲೆಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಪ್ರತೀ ದಿನ ಹಿಪ್ಪನೇರಳೆ ಎಲೆಗಳನ್ನು ಸೇವಿಸುತ್ತಾ ಇದ್ದರೆ ನಿಮ್ಮ ರಕ್ತದ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ. ಇದು ಡಯಾಬಿಟಿಸ್‌ನ ಇತರ ಅಡ್ಡಪರಿಣಾಮಗಳನ್ನು ನಿವಾರಿಸುತ್ತದೆ.

ಕಹಿಬೇವಿನ ಎಲೆಗಳು

ಮಧುಮೇಹಕ್ಕೆ ಕಹಿಬೇವಿನ ಎಲೆಗಳು ಅತೀ ಉತ್ತಮ ಆಯುರ್ವೇದಿಕ್ ಔಷಧಿ. ಖಾಲಿ ಹೊಟ್ಟೆಯಲ್ಲಿ ದಿನಾಲು 2-3 ಕಹಿಬೇವಿನ ಎಲೆಗಳನ್ನು ಸೇವನೆ ಮಾಡಿದರೆ ಆಗ ಇನ್ಸುಲಿನ್ ಉತ್ಪಾದನೆ ಹೆಚ್ಚಾಗುತ್ತದೆ. ಇದು ಆಯುರ್ವೇದಿಕ್ ನ ಅತ್ಯುತ್ತಮ ಚಿಕಿತ್ಸೆಗಳಲ್ಲಿ ಒಂದು. ಆರೋಗ್ಯಕರ ಜೀವನ ಶೈಲಿಯೇ ಮಧುಮೇಹಕ್ಕೆ ದಿವ್ಯ ಔಷಧ!

ದಾಲ್ಚಿನಿ ಹುಡಿ

ಈ ಚಿಕಿತ್ಸೆಯನ್ನು ಹೇಗೆ ಮಾಡಿಕೊಳ್ಳಬೇಕೆಂದರೆ ಒಂದು ಲೀಟರ್ ಕುದಿಯುವ ನೀರಿಗೆ ಮೂರು ಚಮಚ ದಾಲ್ಚಿನಿ ಹುಡಿಯನ್ನು ಹಾಕಿ. 20 ನಿಮಿಷ ಇದನ್ನು ಕುದಿಸಿ ಮತ್ತು ಮಿಶ್ರಣವನ್ನು ಗಾಳಿಸಿ ತೆಗೆಯಿರಿ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿಕೊಳ್ಳಲು ದಿನಾಲೂ ಹೀಗೆ ಮಾಡಿ ನೀರನ್ನು ಕುಡಿಯಿರಿ. ಚಿಕಿತ್ಸೆ ಪರಿಣಾಮಕಾರಿಯಾಗಬೇಕಾದರೆ ಆಯುರ್ವೇದವು ಆರೋಗ್ಯಕರ ಜೀವನಶೈಲಿಯನ್ನು ಬಯಸುತ್ತದೆ. ಈ ಗಿಡಮೂಲಿಕೆಗಳ ಔಷಧಿಯೊಂದಿಗೆ ಪ್ರತೀ ದಿನ ವ್ಯಾಯಾಮ ಮತ್ತು ಆಹಾರ ಕ್ರಮದಲ್ಲಿ ನಿಯಂತ್ರಣವಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
English summary

Can ayurveda cure diabetes permanently?

Diabetes is a lifestyle disease that can affect people from all walks of life! Many people prefer the normal conventional treatment methods, but only if it is practiced in the right way, ayurveda can do wonders in controlling this life threatening disease. But, does ayurvedic remedies help cure diabetes? Well, before going further on this, you should know what diabetes is. 
Story first published: Saturday, July 11, 2015, 17:17 [IST]
X
Desktop Bottom Promotion