ಡಯಾಬಿಟಿಸ್ ಬಂದಾಗ ಕಾಣಿಸಿಕೊಳ್ಳುವ ಲಕ್ಷಣಗಳು

Posted By: Staff
Subscribe to Boldsky

ಮನುಷ್ಯನ ರಕ್ತದಲ್ಲಿ ಗ್ಲೂಕೋಸ್ ಅಂಶ ಮಿತಿಗಿಂತ ಹೆಚ್ಚಾದಾಗ ಕಂಡುಬರುವ ರೋಗವೇ ಡಯಾಬಿಟಿಸ್(ಸಕ್ಕರೆ ಕಾಯಿಲೆ). ಡಯಾಬಿಟಿಸ್ ಒಂದು ಸಲ ಬಂದರೆ ಮತ್ತೆ ಅದು ಜೀವಮಾನವಿಡಿ ಕಾಡುತ್ತಲೇ ಇರುತ್ತದೆ. ಇದರಿಂದ ಮುಕ್ತಿಯನ್ನು ಪಡೆಯುವುದು ಸಾಧ್ಯವೇ ಇಲ್ಲ. ಆದರೆ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಜೀವಕ್ಕೇನೂ ತೊಂದರೆಯಾಗದು.

ರೋಗಿಗಳ ನಿರ್ಲಕ್ಷ್ಯದಿಂದಾಗಿ ಡಯಾಬಿಟಿಸ್ ಹೆಚ್ಚಾಗಿ ಅದು ವಿಪರೀತ ಮಟ್ಟಕ್ಕೆ ತಿರುಗುವ ಸಾಧ್ಯತೆಯಿದೆ. ಈ ರೀತಿಯಾದರೆ ಅದನ್ನು ಮತ್ತೆ ನಿಯಂತ್ರಣಕ್ಕೆ ತರುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ಕೆಲವರು ಇದಕ್ಕೆ ಇನ್ಸುಲಿನ್ ತೆಗೆದುಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಇದು ತುಂಬಾ ಪ್ರಯಾಸದಾಯಕ ಹಾಗೂ ಖರ್ಚಿನ ಚಿಕಿತ್ಸೆ.

ಡಯಾಬಿಟಿಸ್ ಅನ್ನು ಮೊದಲೇ ಪತ್ತೆಹಚ್ಚಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಡಯಾಬಿಟಿಸ್  ಬಂದಿದೆ ಎಂದು  ಕೆಲವೊಂದು ಲಕ್ಷಣಗಳಿಂದ ನಾವೇ ಗುರುತಿಸಬಹುದು. ಆ ಲಕ್ಷಣಗಳಾವುವು ಎಂದು ತಿಳಿಯಲು ಮುಂದೆ ಓದಿ.

1. ಪದೇ ಪದೇ ಮೂತ್ರ ವಿಸರ್ಜನೆ

1. ಪದೇ ಪದೇ ಮೂತ್ರ ವಿಸರ್ಜನೆ

ನಿಮಗೆ ಸಾಮಾನ್ಯಕ್ಕಿಂತ ಹೆಚ್ಚಾಗಿ ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತಿದ್ದರೆ ಡಯಾಬಿಟಿಸ್ ಇರಬಹುದು. ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ಒಸ್ಮೊಲಿಟಿಯನ್ನು ಏರಿಸುತ್ತದೆ. ಇದು ರಕ್ತನಾಳಗಳಲ್ಲಿ ನೀರಿನ ಪ್ರಮಾಣ ಹೆಚ್ಚಿಸುತ್ತದೆ. ಇದು ಕಿಡ್ನಿ ಮೇಲೆ ಒತ್ತಡ ಹೇರುವುದರಿಂದ ಹೆಚ್ಚಿನ ಮೂತ್ರ ಉತ್ಪಾದನೆಯಾಗುತ್ತದೆ ಮತ್ತು ವ್ಯಕ್ತಿ ಪದೇ ಪದೇ ಮೂತ್ರವಿಸರ್ಜನೆ ಮಾಡಬೇಕಾಗುತ್ತದೆ.

2. ಅತಿಯಾದ ಬಾಯಾರಿಕೆ

2. ಅತಿಯಾದ ಬಾಯಾರಿಕೆ

ಡಯಾಬಿಟಿಸ್ ಇರುವ ವ್ಯಕ್ತಿಯ ದೇಹದಿಂದ ನೀರಿನಾಂಶ ಆಗಾಗ ಹೊರಹೋಗುವ ಕಾರಣ ಇದನ್ನು ತುಂಬಲು ಹೆಚ್ಚಿನ ನೀರಿನಾಂಶ ಬೇಕಾಗುತ್ತದೆ. ಹೀಗಾಗಿ ಆ ವ್ಯಕ್ತಿಗೆ ಹೆಚ್ಚಿನ ಬಾಯಾರಿಕೆಯಾಗುತ್ತದೆ. ಸಾಮಾನ್ಯವಾಗಿ ಅತಿಯಾದ ಬಾಯಾರಿಕೆ ಮತ್ತು ಪದೇ ಪದೇ ಮೂತ್ರ ವಿಸರ್ಜನೆ ಎರಡೂ ಕಂಡುಬಂದರೆ ಅದು ಡಯಾಬಿಟಿಸ್ ನ ಲಕ್ಷಣಗಳಲ್ಲಿ ಒಂದು.

3. ದೃಷ್ಟಿ ಮಬ್ಬಾಗುವುದು

3. ದೃಷ್ಟಿ ಮಬ್ಬಾಗುವುದು

ಡಯಾಬಿಟಿಸ್ ಇರುವ ವ್ಯಕ್ತಿಯ ದೇಹದಲ್ಲಿರುವ ಅತಿಯಾದ ಗ್ಲೂಕೋಸ್ ನಿಂದಾಗಿ ಕಣ್ಣಿನ ಸಹಿತ ರಕ್ತ ಮತ್ತು ಅಂಗಾಂಶಗಳಲ್ಲಿನ ನೀರಿನಾಂಶ ಬತ್ತಿಹೋಗುತ್ತದೆ. ಇದರಿಂದ ಕಣ್ಣಿನ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ. ಡಯಾಬಿಟಿಸ್ ಗೆ ಸರಿಯಾದ ಚಿಕಿತ್ಸೆ ನೀಡದೇ ಇದ್ದರೆ ಕಣ್ಣಿನ ದೃಷ್ಟಿ ಕಳಕೊಂಡು ಕುರುಡರಾಗಬೇಕಾಗುತ್ತದೆ.

4. ತೂಕ ಕಡಿಮೆಯಾಗುವುದು

4. ತೂಕ ಕಡಿಮೆಯಾಗುವುದು

ಡಯಾಬಿಟಿಸ್ ಒಂದನೇ ಹಂತದಲ್ಲಿ ಇದು ಸಾಮಾನ್ಯವಾಗಿ ಕಂಡುಬರುವ ಲಕ್ಷಣ. ಜೀವಕೋಶಗಳು ಸಾಕಷ್ಟು ಗ್ಲೂಕೋಸ್ ಅಂಶ ದೊರೆಯದ ಕಾರಣ ಶಕ್ತಿಗಾಗಿ ಕೊಬ್ಬಿನ ಅಂಗಾಂಶಗಳನ್ನು ವಿಭಜಿಸುವುದರಿಂದ ದೇಹದ ತೂಕ ನಷ್ಟವಾಗುತ್ತದೆ.

5. ಬಳಲಿಕೆ

5. ಬಳಲಿಕೆ

ದೇಹವು ಶಕ್ತಿಗಾಗಿ ಸಕ್ಕರೆ ಅಂಶ ಉಪಯೋಗಿಸಿಕೊಳ್ಳಲು ವಿಫಲವಾಗುವ ಕಾರಣ ಡಯಾಬಿಟಿಸ್ ಇರುವ ವ್ಯಕ್ತಿಯು ಬಳಲಿಕೆ ಮತ್ತು ನಿಶಕ್ತಿ ಉಂಟಾಗುತ್ತದೆ. ಜೀವಕೋಶಗಳಲ್ಲಿನ ಶಕ್ತಿ ಕುಂದುವಿಕೆಯಿಂದ ರಕ್ತನಾಳಗಳಲ್ಲಿರುವ ಗ್ಲೂಕೋಸ್ ನ್ನು ಹೀರಿಕೊಳ್ಳಲು ಇನ್ಸುಲಿನ್ ಇಲ್ಲದೆ ಸಾಧ್ಯವಾಗದು.

6. ಕೈ ಸ್ಪರ್ಶಜ್ಞಾನ ಕಳಕೊಳ್ಳುವುದು

6. ಕೈ ಸ್ಪರ್ಶಜ್ಞಾನ ಕಳಕೊಳ್ಳುವುದು

ರಕ್ತದಲ್ಲಿನ ಅಧಿಕ ಸಕ್ಕರೆ ಅಂಶದಿಂದ ನರಗಳಿಗೆ ತೊಂದರೆಯನ್ನುಂಟುಮಾಡುತ್ತದೆ. ಡಯಾಬಿಟಿಸ್ ನ್ನು ದೀರ್ಫ ಸಮಯದ ತನಕ ಪತ್ತೆಹಚ್ಚದಿದ್ದರೆ ಕೈಯಲ್ಲಿ ಜುಮ್ಮೆನ್ನುವ ಸಂವೇದನೆ ಅಥವಾ ಯಾವುದೇ ಸ್ಪರ್ಶಜ್ಞಾನವಾಗದಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು.

7. ಗಾಯ, ಕಡಿತ ನಿಧಾನವಾಗಿ ಗುಣಮುಖವಾಗುವುದು

7. ಗಾಯ, ಕಡಿತ ನಿಧಾನವಾಗಿ ಗುಣಮುಖವಾಗುವುದು

ಇದು ಡಯಾಬಿಟಿಸ್ ನ ಅತ್ಯಂತ ಸಾಮಾನ್ಯ ಲಕ್ಷಣ. ರಕ್ತದಲ್ಲಿನ ಅತಿಯಾದ ಸಕ್ಕರೆ ಅಂಶದಿಂದಾಗಿ ನಿರೋಧಕ ವ್ಯವಸ್ಥೆಯು ಸರಿಯಾದ ಕಾರ್ಯನಿರ್ವಹಿಸಲು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಜೀವಕೋಶಗಳಲ್ಲಿನ ನೀರಿನ ಮಟ್ಟದ ಅಸಮತೋಲನದಿಂದ ಗಾಯ ಮತ್ತು ಕಡಿತ ಗುಣವಾಗಲು ಹೆಚ್ಚಿನ ಸಮಯ ಬೇಕಾಗುತ್ತದೆ.

8. ಚರ್ಮ ಒಣಗುವುದು

8. ಚರ್ಮ ಒಣಗುವುದು

ಬಾಹ್ಯ ನರಗಳಲ್ಲಿ ರಕ್ತ ಪರಿಚಲನೆ ಮತ್ತು ಬೆವರು ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಚರ್ಮವು ಒಣ ಅಥವಾ ನವೆಯುತ್ತದೆ.

9. ಯಾವಾಗಲೂ ಹಸಿವಾಗುತ್ತಿರುತ್ತದೆ

9. ಯಾವಾಗಲೂ ಹಸಿವಾಗುತ್ತಿರುತ್ತದೆ

ನೀವು ಹೆಚ್ಚಾಗಿ ವ್ಯಾಯಾಮ ಮಾಡದೆ, ಕಡಿಮೆ ತಿನ್ನದಿದ್ದರೂ ತುಂಬಾ ಹಸಿವಾಗುತ್ತಿದ್ದರೆ ಇದು ಡಯಾಬಿಟಿಸ್ ನ ಲಕ್ಷಣಗಳು. ಡಯಾಬಿಟಿಸ್ ನಿಂದಾಗಿ ನಿಮ್ಮ ಜೀವಕೋಶಗಳಿಗೆ ಗ್ಲೂಕೋಸ್ ಹೋಗುವುದು ಕಡಿಮೆಯಾಗುವ ಕಾರಣ ದೇಹದೊಳಗೆ ಹೋದ ಆಹಾರವು ಶಕ್ತಿಯಾಗಿ ಪರಿವರ್ತನೆಯಾಗಲ್ಲ. ಇದರಿಂದ ಜೀವಕೋಶಗಳು ಅತಿಯಾದ ಹಸಿವಿನಿಂದ ಬಳಲುತ್ತದೆ.

10. ಒಸಡುಗಳು ಊದಿಕೊಳ್ಳುವುದು

10. ಒಸಡುಗಳು ಊದಿಕೊಳ್ಳುವುದು

ಡಯಾಬಿಟಿಸ್ ನಿಂದಾಗಿ ದೇಹದಲ್ಲಿ ಸೂಕ್ಷ್ಮಜೀವಾಣುಗಳ ಅದರಲ್ಲೂ ಬಾಯಿ ಮೂಲಕ ಪ್ರವೇಶಿಸುವ ವಿರುದ್ಧ ಹೋರಾಡುವ ಶಕ್ತಿ ಕಡಿಮೆಯಾಗುತ್ತದೆ. ಇದು ಬಾಯಿಯಲ್ಲಿ ಹಲವಾರು ರೀತಿಯ ಸಮಸ್ಯೆ ಉಂಟುಮಾಡಬಹುದು. ನೋವಿನಿಂದ ಊದಿಕೊಂಡ ಒಸಡುಗಳು, ದವಡೆಯ ಮೂಳೆ ಸವೆತ ಮತ್ತು ಸಮಯ ಕಳೆದಂತೆ ಹಲ್ಲುಗಳನ್ನು ಕಳಕೊಳ್ಳುವುದು. ಬಾಯಿಯಲ್ಲಿ ಹುಣ್ಣುಗಳಾಗುವ ಸಾಧ್ಯತೆಗಳಿವೆ. ಡಯಾಬಿಟಿಸ್ ಗೆ ಮೊದಲು ದಂತ ಸಮಸ್ಯೆಗಳಿದ್ದರೆ ಅದು ತೀವ್ರ ರೂಪಕ್ಕೇರುತ್ತದೆ.

English summary

Symptoms of Diabetes

Diabetes can last for the entire lifetime and may cause several other problems. The only way to treat diabetes is early detection and appropriate precautions. Read on to know more about the various symptoms of diabetes.
Subscribe Newsletter